ಬುಧ ಗೋಚಾರ 2022: ಈ ನಾಲ್ಕು ರಾಶಿಗಳಿಗೆ ತಪ್ಪದು ಕಂಟಕ

By Suvarna News  |  First Published Jul 2, 2022, 11:26 AM IST

ಬುಧ ಗ್ರಹವು ಜುಲೈ 2ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಿದೆ. ಇದರಿಂದ ನಾಲ್ಕು ರಾಶಿಗಳಿಗೆ ಕಂಟಕ ಎದುರಾಗಲಿದೆ. ಎಚ್ಚರವಾಗಿರಬೇಕಾದ ರಾಶಿಚಕ್ರಗಳಲ್ಲಿ ನಿಮ್ಮ ರಾಶಿ ಇದೆಯೇ ನೋಡಿಕೊಳ್ಳಿ. 


ಜುಲೈನಲ್ಲಿ ಸಾಕಷ್ಟು ಗ್ರಹಗಳು ರಾಶಿ ಪರಿವರ್ತನೆಗೆ ಸಜ್ಜಾಗಿವೆ. ಇದರ ಆರಂಭ ಜುಲೈ 2ರಂದು ಬುಧನ ಮಿಥುನ ರಾಶಿ ಪರಿವರ್ತನೆ( Mercury transit in Gemini)ಯಿಂದ ಆರಂಭವಾಗಲಿದೆ. ನಂತರದಲ್ಲಿ ಶನಿ ಗ್ರಹವು ಹಿಮ್ಮುಖ ಚಲನೆಯಲ್ಲೇ ಮಕರಕ್ಕೆ ಪ್ರವೇಶಿಸಲಿದ್ದಾನೆ. ಇದಾದ ಬಳಿಕ ಶುಕ್ರ ಗ್ರಹ ಕೂಡಾ ಮಿಥುನ ರಾಶಿಗೆ ಪ್ರವೇಶಿಸಲಿದೆ. ನಂತರ ಸೂರ್ಯ, ಬಳಿಕ ಗುರು ಕೂಡಾ ಈ ತಿಂಗಳಲ್ಲಿ ರಾಶಿ ಬದಲಾವಣೆಯ ಸಂಕ್ರಮಣ ನಡೆಸಲಿವೆ. ಈ ಎಲ್ಲ ಗ್ರಹಗಳ ಪರಿವರ್ತನೆ ವ್ಯಕ್ತಿಗಳ ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ. ಸಧ್ಯ ಬುಧ ಮಿಥುನಕ್ಕೆ ಕಾಲಿಟ್ಟಿರುವುದು ನಾಲ್ಕು ರಾಶಿಗಳ(zodiac signs) ಪಾಲಿಗೆ ಸಂಕಷ್ಟದ ದಿನಗಳನ್ನು ತರಲಿದೆ. 

ಬುಧ ಎಂದರೆ ಬುದ್ಧಿವಂತಿಕೆ, ಮಾತು, ತಾರ್ಕಿಕ ಸಾಮರ್ಥ್ಯಗಳ ಅದಿಪತಿ. ವಾಣಿಜ್ಯ ವಿಷಯಗಳು, ಕಾನೂನು, ಸಂವಹನ, ಹಾಸ್ಯಪ್ರಜ್ಞೆ(Sense of humor), ಬರವಣಿಗೆ ಇತ್ಯಾದಿಗಳಿಗೆ ಸಂಬಂಧಿಸಿದ್ದಾನೆ. ಆತ ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿ. ಹೀಗಾಗಿ, ಈಗ ಆತ ತನ್ನದೇ ರಾಶಿಯಾದ ಮಿಥುನಕ್ಕೆ ಪ್ರವೇಶಿಸಿದ್ದಾನೆ. ಇನ್ನು ದೇಹದ ವಿಷಯಕ್ಕೆ ಬಂದರೆ ಆತ ಚರ್ಮದ ಸಂಗತಿಗಳನ್ನು ನೋಡಿಕೊಳ್ಳುವವನು. ಬುಧ ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿಯು ಬದುಕಿನಲ್ಲಿ ಬಹಳಷ್ಟು ಯಶಸ್ಸು(Success) ಕಾಣುತ್ತಾನೆ. 

Tap to resize

Latest Videos

ಆದರೆ, ಬುಧನ ಈ ಬಾರಿಯ ಸಂಚಾರ ನಾಲ್ಕು ರಾಶಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅಂತ ರಾಶಿಚಕ್ರಗಳು ಯಾವೆಲ್ಲ ನೋಡೋಣ. 

ವೃಷಭ(Taurus)
ಕೋಪದ ಕ್ಷಣಗಳು ಹೆಚ್ಚಲಿವೆ. ಅತೃಪ್ತಿಯ ಭಾವನೆಗಳು ಆವರಿಸಲಿವೆ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳಬೇಕಾದೀತು. ತಂದೆಯ ಬೆಂಬಲ ದೊರೆಯಲಿದೆ. ಖರ್ಚು ಹೆಚ್ಚಾಗಲಿದೆ. ಆತ್ಮವಿಶ್ವಾಸ ಕಡಿಮೆಯಾಗಲಿದೆ. ಅಧಿಕಾರಿಗಳು ಕೆಲಸದಲ್ಲಿ ಬೆಂಬಲವನ್ನು ಪಡೆಯುತ್ತಾರೆ. ಆದರೆ, ವೈಫಲ್ಯದ ಭಯ ಹೆಚ್ಚಲಿದೆ. ಅಂದುಕೊಂಡಂತೆ ಯಾವ ಕಾರ್ಯವೂ ಆಗದೆ ಕಂಗಾಲಾಗಬಹುದು. ಕೆಲವು ವಿಶೇಷ ಉದ್ದೇಶಗಳಿಗಾಗಿ ವಿದೇಶಿ ವಲಸೆಯ ಸಾಧ್ಯತೆಗಳಿವೆ. 

ಮಿಥುನ ರಾಶಿಗೆ ಬುಧನ ಎಂಟ್ರಿ; ಈ ರಾಶಿಗಳಿಗಿನ್ನು 15 ದಿನ ಅದೃಷ್ಟದ ಬಲ

ಕಟಕ(Cancer)
ಬುಧ ಗ್ರಹವು ಈಗ ನಿಮ್ಮ ರಾಶಿಯ 12ನೇ ಮನೆಯಲ್ಲಿ ಚಲಿಸುತ್ತಿದೆ. ಇದರಿಂದ ನಷ್ಟ ಹೆಚ್ಚುತ್ತದೆ. ಕಳ್ಳತನದ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು. ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗುವ, ಕಳ್ಳತನವಾಗುವ ಅಥವಾ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆ ಬಗ್ಗೆ ಸದಾ ಕಾಳಜಿ ವಹಿಸಬೇಕು. ಮನೆಯಲ್ಲಿ ಯಾರದೋ ಅನಾರೋಗ್ಯ ಸಮಸ್ಯೆ ಸಾಕಷ್ಟು ಚಿಂತೆ ತರುವ ಜೊತೆಗೆ ಧನವ್ಯಯಕ್ಕೂ ಕಾರಣವಾಗುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳು ನಿಮ್ಮ ಬೆಂಬಲಕ್ಕೆ ಸಿಗಬಹುದು. ಸಣ್ಣ ಆರೋಗ್ಯ ಸಮಸ್ಯೆಗಳು ದೊಡ್ಡದಾಗಿ ಕಾಡಬಹುದು. 

​ವೃಶ್ಚಿಕ(Scorpio)
ವೃಶ್ಚಿಕ ರಾಶಿಯ 8ನೇ ಮನೆಯಲ್ಲಿ ಬುಧ ಸಾಗುತ್ತಿದ್ದಾನೆ. ಇದರಿಂದ ಈ ರಾಶಿಯವರು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಯಾಮ ಮತ್ತು ಆಹಾರದಲ್ಲಿ ಯಾವುದೇ ಹದ ತಪ್ಪದಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಆರೋಗ್ಯದ ಕಡೆ ಗಮನ ಹರಿಸಿ. ಕೆಲವೊಮ್ಮೆ ನೀವು ಕೈಗೊಳ್ಳುವ ಪ್ರಯಾಣಗಳು ಸಂಪೂರ್ಣ ಅನಗತ್ಯ ಎನಿಸುತ್ತವೆ. ಉದ್ಯೋಗದ ವಿಷಯದಲ್ಲಿ ಅಸ್ಥಿರತೆ ಹೆಚ್ಚಾಗಬಹುದು. ಅವಿವಾಹಿತರ ವಿವಾಹದ ವಿಚಾರಗಳು ದೊಡ್ಡ ಸಮಸ್ಯೆಯಾಗಿ ಕಾಡಬಹುದು. 

Vastu Tips : ಎಲ್ಲ ಸಮಸ್ಯೆಗೆ ದಾಸವಾಳದಲ್ಲಿದೆ ಪರಿಹಾರ

​ಧನು(Sagittarius)
ಧನು ರಾಶಿಯವರಿಗೆ ಬುಧದ ಈ ಸಂಚಾರ ತೊಂದರೆಗಳನ್ನುಂಟು ಮಾಡುತ್ತದೆ. ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಮಾತು ನಿಯಂತ್ರಣದಲ್ಲಿರಿಸಿ. ಇಲ್ಲದಿದ್ದರೆ, ಆಡಿದ ಮಾತಲ್ಲೆಲ್ಲ ತಪ್ಪುಗಳು ಇಣುಕಿ ಸಮಸ್ಯೆ ದೊಡ್ಡದಾಗಬಹುದು. ಉದ್ಯೋಗಸ್ಥರಿಗೆ ಕೆಲಸ ಹೆಚ್ಚಾಗಿ ಒತ್ತಡ ಎನಿಸಬಹುದು. ಔದ್ಯೋಗಿಕ ಸ್ಥಳದಲ್ಲಿ ಸಮಸ್ಯೆಗಳು ಹೆಚ್ಚಬಹುದು. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!