ಸುಖ, ಸಮೃದ್ಧಿ, ಆರ್ಥಿಕ ವೃದ್ಧಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ವಾಸ್ತು ದೋಷದಿಂದ ಕೈಗೆ ಬಂದ ಹಣ ಪರ್ಸ್ ನಲ್ಲಿ ನಿಲ್ಲೋದಿಲ್ಲ. ಆರ್ಥಿಕ ವೃದ್ಧಿ ಜೊತೆ ಸುಖ ಸಂಸಾರ ಇರಬೇಕೆಂದ್ರೆ ಮನೆಯಲ್ಲಿ ದಾಸವಾಳದ ಗಿಡ ಬೆಳಸಿ.
ವಾಸ್ತು (Vastu ) ಶಾಸ್ತ್ರದಲ್ಲಿ ಮರ (Tree), ಗಿಡಕ್ಕೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ಅನೇಕ ಮರ, ಗಿಡಗಳನ್ನು ಬೆಳೆಸಿರ್ತಾರೆ. ವಿಶೇಷವಾಗಿ ಹೂವಿನ ಗಿಡಗಳು ಎಲ್ಲರ ಮನೆಯಲ್ಲೂ ಇರುತ್ತವೆ. ಗಿಡ, ಮರ, ಹೂವು ಮನೆಯಲ್ಲಿ ಸಂತೋಷ (Happiness), ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ. ಅನೇಕ ಹೂವು (Flower)ಗಳ ಬಗ್ಗೆ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಈ ಹೂವುಗಳು ಮತ್ತು ಸಸ್ಯಗಳು ನಮ್ಮ ಜೀವನ (Life) ದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತವೆ. ದಾಸವಾಳ (Hibiscus )ಸಸ್ಯ ಕೂಡ ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ದಾಸವಾಳದ ಗಿಡ ಬೆಳೆದಿದ್ದರೆ ಅದ್ರ ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳಿ.
ದಾಸವಾಳದ ಹೂವಿನಲ್ಲಿದೆ ಸಂತೋಷದ ಗುಟ್ಟು :
ಮಂಗಳ ದೋಷ (Mangal Dosha) ನಿವಾರಣೆಗೆ ದಾಸವಾಳ : ಕೆಂಪು (Red) ಬಣ್ಣವನ್ನು ಧೈರ್ಯ (Courage)ದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಂಪು ದಾಸವಾಳ ಮನೆ (Home) ಯಲ್ಲಿದ್ದರೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ (Positive Energy ) ವೃದ್ಧಿಯಾಗುತ್ತದೆ. ದಾಸವಾಳದ ಗಿಡವನ್ನು ಮನೆಯಲ್ಲಿ ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಸೂರ್ಯದೇವನ ಪ್ರಭಾವ ಇಲ್ಲದವರು ಈ ಗಿಡವನ್ನು ತಮ್ಮ ಮನೆಯಲ್ಲಿ ನೆಡಬೇಕು. ಇದಲ್ಲದೇ ನಿಮ್ಮ ಜಾತಕದಲ್ಲಿ ಮಂಗಳ ದೋಷವಿದ್ದರೂ ಮನೆಯಲ್ಲಿ ಈ ಗಿಡವನ್ನು ನೆಡಬೇಕು. ಮಂಗಳ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಂಪತಿ ಮಧ್ಯೆ ಕಲಹವಾಗ್ಬಹುದು. ಅಲ್ಲದೆ ಅಪಘಾತವಾಗುವ ಸಾಧ್ಯತೆಯೂ ಇದೆ. ಇದ್ರಿಂದ ದೋಷ ನಿವಾರಣೆಯಾಗಿ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ.
ಹಣದ ಸಮಸ್ಯೆಗೆ ಪರಿಹಾರ : ದಾಸವಾಳದ ಹೂವು ಹನುಮಂತ ಮತ್ತು ಎಲ್ಲ ದೇವತೆಗಳಿಗೆ ತುಂಬಾ ಪ್ರಿಯವೆಂದು ನಂಬಲಾಗಿದೆ. ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮಂಗಳವಾರ ಹನುಮಂತನಿಗೆ ದಾಸವಾಳದ ಹೂವನ್ನು ಅರ್ಪಿಸಬೇಕು. ಇದ್ರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ಇದನ್ನೂ ಓದಿ: Astrology News: ಸಪ್ತಗ್ರಹಗಳೂ ಸ್ವರಾಶಿಯಲ್ಲಿ ಚಲನೆ: ಏನು ಫಲ?
ಲಕ್ಷ್ಮಿ ಪೂಜೆಗೆ ದಾಸವಾಳ : ತಾಯಿ ಲಕ್ಷ್ಮಿಗೆ ದಾಸವಾಳ ಇಷ್ಟ. ಶುಕ್ರವಾರದಂದು ತಾಯಿ ವೈಭವ ಲಕ್ಷ್ಮಿ ವ್ರತದ ಪೂಜೆಯಲ್ಲಿ ನೀವು ಈ ಹೂವುಗಳನ್ನು ತಾಯಿಗೆ ಅರ್ಪಿಸಬೇಕು. ಇದರಿಂದ ನಿಮ್ಮ ಮನೆಗೆ ಹಣ ಬರುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ.
ಆರೋಗ್ಯದಲ್ಲಿ ಚೇತರಿಕೆ : ದಾಸವಾಳದ ಹೂವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹೂವು ಇಲ್ಲದೆ ಸೂರ್ಯ ದೇವರ ಆರಾಧನೆ ಅಪೂರ್ಣ ಎಂದು ನಂಬಲಾಗಿದೆ. ಸೂರ್ಯ ದೇವರಿಗೆ ಪ್ರತಿ ದಿನ ಜಲ ಅರ್ಪಣೆ ಮಾಡ್ಬೇಕು. ಅರ್ಘ್ಯ ನೀಡುವ ಜೊತೆಗೆ ದಾಸವಾಳದ ಹೂವನ್ನು ಅರ್ಪಿಸಬೇಕೆಂದು ನಂಬಲಾಗಿದೆ. ಸೂರ್ಯ ದೇವರಿಗೆ ದಾಸವಾಳ ಹೂ ಅರ್ಪಿಸಿದ್ರೆ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ ಶಕ್ತಿ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ: ಹತ್ತಿರದವರು ಕನಸಲ್ಲಿ ಬಂದ್ರೆ ಅಪಾಯ ಕಾದಿದೆ ಎಂದರ್ಥವೇ?
ವಿವಾದಕ್ಕೆ ಹೇಳಿ ಬ್ರೇಕ್ : ವಾಸ್ತು ಶಾಸ್ತ್ರದ ಪ್ರಕಾರ ಪ್ರತಿದಿನ ದಾಸವಾಳದ ಹೂವನ್ನು ಮನೆಯಲ್ಲಿಟ್ಟರೆ ವಿವಾದ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಆತ್ಮೀಯತೆಯ ಭಾವನೆಯೂ ಬರುತ್ತದೆ. ದಾಸವಾಳದ ಹೂವಿನಿಂದ ಮಾಡಿದ ಪುಷ್ಪಗುಚ್ಛವನ್ನು ನೀವು ಲೀವಿಂಗ್ ಕೋಣೆಯಲ್ಲಿ ಇಡಬೇಕು. ಇದರ ಹೊರತಾಗಿ, ಪತಿ ಮತ್ತು ಪತ್ನಿ ನಡುವಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ದಾಸವಾಳದ ಹೂವನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು.
ಯಶಸ್ಸಿಗೆ ಬೇಕು ದಾಸವಾಳ : ಪ್ರತಿದಿನ ತಾಯಿ ದುರ್ಗೆಗೆ ದಾಸವಾಳದ ಹೂವನ್ನು ಅರ್ಪಿಸಿ. ಇದರಿಂದ ನಿಮ್ಮ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇದಲ್ಲದೆ ನೀವು ಯಶಸ್ಸನ್ನು ಪಡೆಯುತ್ತೀರಿ. ಎದುರಾಳಿಗಳನ್ನು ಎದುರಿಸುವ ಶಕ್ತಿಯೂ ನಿಮ್ಮದಾಗುತ್ತದೆ.
ಅಧ್ಯಯನದಲ್ಲಿ ಏಕಾಗ್ರತೆ : ಮಕ್ಕಳು ಓದುವಾಗ ನಿತ್ಯವೂ ಕೆಂಪು ದಾಸವಾಳದ ಹೂವನ್ನು ಸ್ಟಡಿ ಟೇಬಲ್ ಮೇಲೆ ಇಟ್ಟರೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ.