ಬುಧ ಗೋಚಾರ; 3 ರಾಶಿಗಳಿಗೆ ಹಣದ ವಿಷಯದಲ್ಲಿ ಸವಾಲು, 3ಕ್ಕೆ ಲಾಭ

By Suvarna NewsFirst Published Aug 1, 2022, 10:48 AM IST
Highlights

ಆಗಸ್ಟ್ 1ರಂದು ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದೆ. ಇದರಿಂದ ಕೆಲ ರಾಶಿಚಕ್ರಗಳು ಹಣದ ವಿಷಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೆದರಬೇಕಿಲ್ಲ, ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೂ ಇಲ್ಲಿವೆ..  

ಆಗಸ್ಟ್ ಆರಂಭದ ದಿನವೇ ಬುಧ ಗೋಚಾರ ನಡೆಯುತ್ತಿದೆ. ಬುದ್ಧಿವಂತಿಕೆಯ ಕಾರಣಕ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಿದಾಗ ಅದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಇದು ಮೇಷ ರಾಶಿಯಿಂದ ಮೀನ ರಾಶಿಯವರಿಗೂ ಬಾಧಿಸುತ್ತದೆ. ವಿಶ್ವದಲ್ಲಿ ನಡೆಯುವ ಈ ಖಗೋಳ ಘಟನೆಯಿಂದ ದೇಶ ಮತ್ತು ಜಗತ್ತು ಸಹ ಪ್ರಭಾವಿತವಾಗುತ್ತವೆ. ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಬಹಳ ಮುಖ್ಯ ವಿಷಯವಾಗಲು ಇದೇ ಕಾರಣವಾಗಿದೆ.

ಬುಧ ಸಂಕ್ರಮಣ 2022 
ಬುಧವು ಕರ್ಕಾಟಕ ರಾಶಿಯಿಂದ ಸೋಮವಾರ, ಆಗಸ್ಟ್ 1, 2022ರಂದು 03:38 ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಆಗಸ್ಟ್ 21, 2022ರ ಭಾನುವಾರದವರೆಗೆ ಅಲ್ಲಿಯೇ ಇರುತ್ತದೆ, ಆ ಸಮಯದಲ್ಲಿ ಅದು ಕೆಳಗಿನ ಚಿಹ್ನೆಯಾದ ಕನ್ಯಾರಾಶಿಗೆ ಹೋಗುತ್ತದೆ. ಸೂರ್ಯನು ಸಿಂಹ ರಾಶಿಯ ಅಧಿಪತಿ, ಬುಧ ಗ್ರಹವು ಸೂರ್ಯನೊಂದಿಗೆ ಸ್ನೇಹವನ್ನು ಹೊಂದಿದೆ. ಮತ್ತೊಂದೆಡೆ, ಬುಧ ಗ್ರಹವು ಸೂರ್ಯನಿಗೆ ಹತ್ತಿರದಲ್ಲಿದೆ. ಜ್ಯೋತಿಷ್ಯದಲ್ಲಿ ವಿವರಿಸಲಾದ ಮಂಗಳಕರ ಯೋಗಗಳಲ್ಲಿ ಒಂದು ಬುಧಾದಿತ್ಯ ಯೋಗವೂ ಒಂದು. ಇದು ಸೂರ್ಯ ಮತ್ತು ಬುಧ ಸಂಯೋಗದಿಂದ ರೂಪುಗೊಳ್ಳುತ್ತದೆ. ಈಗ ಶ್ರಾವಣ ಸೋಮವಾರದ ದಿನ ಸಿಂಹರಾಶಿಯಲ್ಲಿ ಬುಧ ಸಂಕ್ರಮಣ ನಡೆದಿದ್ದು, ಇದೇ ತಿಂಗಳ 21ರಂದು ಬುಧ ಗ್ರಹ ಕನ್ಯಾ ರಾಶಿಗೆ ಹೋಗಲಿದೆ. ಅಲ್ಲಿಯವರೆಗೆ ಈ ಬುಧ ಪರಿವರ್ತನೆಯ ಪರಿಣಾಮ ಯಾವ ರಾಶಿಗಳ ಮೇಲೆ ಏನಾಗಲಿದೆ ನೋಡೋಣ.

ಬುಧ ಸರಕು ಮತ್ತು ವ್ಯಾಪಾರದ ಅಂಶ
ಬುಧವನ್ನು ಮಾತು, ಬರಹ, ಕಾನೂನು, ಚರ್ಮ ಮತ್ತು ಸರಕು ಮತ್ತು ವ್ಯಾಪಾರ(trade)ದ ಅಂಶವೆಂದು ಪರಿಗಣಿಸಲಾಗುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದವರಿಗೆ ಬುಧ ಸ್ಥಾನವು ಚೆನ್ನಾಗಿದ್ದರೆ, ತುಂಬಾ ಮಂಗಳಕರವಾಗಿರುತ್ತದೆ. ಬುಧವು ವ್ಯಾಪಾರಿಗಳ ರಕ್ಷಕ ಎಂದೂ ಹೇಳಲಾಗುತ್ತದೆ. 

ಬುಧ ಸಂಕ್ರಮಣ ಜಾತಕ
ಬುಧ ಗ್ರಹವು ಸಿಂಹ ರಾಶಿಯಲ್ಲಿ ಸಾಗುತ್ತಿದೆ. ಸಿಂಹ ರಾಶಿಯವರು ಈ ಅವಧಿಯಲ್ಲಿ ಹಣದ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಜನರು ನಿಮ್ಮನ್ನು ಹೊಗಳುವುದರ ಮೂಲಕ ನಿಮ್ಮಿಂದ ಹಣವನ್ನು ಪಡೆಯಲು ಪ್ರಯತ್ನಿಸಬಹುದು. ಅದಾಗ್ಯೂ ಸಿಂಹ ರಾಶಿಯವರಿಗೆ ಹಣ ಖರ್ಚಿನಿಂದ ಸಾಕಷ್ಟು ಸೌಕರ್ಯಗಳು ಸಿಗುವ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುವ ಸಂಭವಗಳೂ ಇವೆ. ಇದರೊಂದಿಗೆ, ವೃಷಭ(taurus), ಮಕರ(Capricorn) ಮತ್ತು ಧನು(Sagittarius) ರಾಶಿಯವರು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಗಸ್ಟ್ 21ರವರೆಗೆ ಸವಾಲುಗಳನ್ನು ಎದುರಿಸಬೇಕಾಗಬಹುದು. 
ಇದೇ ಬುಧ ಗೋಚಾರವು ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ವರದಾನವಾಗಬಹುದು. ಈ ರಾಶಿಗಳು ಬುಧ ಗೋಚಾರದ ಕಾರಣದಿಂದ ಸಾಕಷ್ಚು ಆದಾಯ, ಹಣಕಾಸಿನ ಲಾಭ ಪಡೆಯಲಿದ್ದಾರೆ. ವಾಕ್ಚಾತುರ್ಯ ಹೆಚ್ಚಲಿದೆ. 

ಬುಧಗ್ರಹದ ಪರಿಹಾರ(remedy)
ಬುಧ ಗ್ರಹವನ್ನು ಮಂಗಳಕರವಾಗಿಸಲು, ಗಣೇಶನನ್ನು ಪೂಜಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಬುಧ ಗ್ರಹವನ್ನು ಶಾಂತಗೊಳಿಸಲು ಬುಧವಾರ ಉತ್ತಮ ದಿನವೆಂದು ಪರಿಗಣಿಸಲಾಗಿದೆ. ಹಸಿರು ವಸ್ತುಗಳನ್ನು ದಾನ ಮಾಡುವುದರಿಂದ ಬುಧಗ್ರಹದ ಅಶುಭವೂ ದೂರವಾಗುತ್ತದೆ. ಹೀಗಾಗಿ ಬುಧವಾರದ ದಿನ ಗಣೇಶನನ್ನು ಪೂಜಿಸುವುದು, ಗಿಳಿಗೆ ಧಾನ್ಯಗಳನ್ನು ನೀಡುವುದು, ಹಸಿರು ವಸ್ತುಗಳ ದಾನ ಮಾಡುವುದು, ಹಸಿರು ಪದಾರ್ಥಗಳ ಸೇವನೆ ಮಾಡುವುದು ಉತ್ತಮವಾಗಿದೆ. ಇದು ಬುಧ ಗ್ರಹಗ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!