ಆಧುನಿಕತೆ ಸ್ಪರ್ಶ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುವುದು ಸಾಮಾನ್ಯ. ಆಧುನಿಕ ಭವ್ಯ ಭಾರತದಲ್ಲಿ ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಋಷಿ-ಮುನಿಗಳು, ಸಾಧು-ಸಂತರ ಭಾರತದ ರೂಢಿ-ಸಂಪ್ರದಾಯ, ಆಚಾರ-ವಿಚಾರಗಳು ಮರೆಯಾಗುತ್ತಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.31): ಆಧುನಿಕತೆ ಸ್ಪರ್ಶ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುವುದು ಸಾಮಾನ್ಯ. ಆಧುನಿಕ ಭವ್ಯ ಭಾರತದಲ್ಲಿ ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಋಷಿ-ಮುನಿಗಳು, ಸಾಧು-ಸಂತರ ಭಾರತದ ರೂಢಿ-ಸಂಪ್ರದಾಯ, ಆಚಾರ-ವಿಚಾರಗಳು ಮರೆಯಾಗುತ್ತಿದೆ. ಆದರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ 21 ತಲೆಮಾರು ಹಾಗೂ 500 ವರ್ಷಗಳಿಂದ ಅದೊಂದು ಸಂಪ್ರದಾಯ ಮಾತ್ರ ನಿಂತಿಲ್ಲ. ಆ ಸಂಭ್ರಮವೂ ಕಳೆದೋಗಿಲ್ಲ. ಆ ಗ್ರಾಮಕ್ಕೂ ಆಧುನಿಕತೆ ಆ ಕಾಲಿಟ್ಟಿದೆ. ಆದ್ರೆ, ಜನ ಮಾತ್ರ ಪದ್ಧತಿ-ರೂಢಿ-ಸಂಪ್ರದಾಯವನ್ನ ಬಿಟ್ಟಿಲ್ಲ.
ಸಾಮೂಹಿಕ ಗದ್ದೆಯ ನಾಟಿ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಕಳೆದ 21 ತಲೆಮಾರುಗಳಿಂದ ಅಂದ್ರೆ ಸುಮಾರು 500 ವರ್ಷಗಳಿಂದ ನಡೆದುಕೊಂಡು ಬಂದ ಗ್ರಾಮೀಣ ಭಾಗದ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಸಾಮೂಹಿಕ ಭತ್ತದ ಗದ್ದೆಯ ನಾಟಿ ಮಾಡುವ ಮೂಲಕ ಗ್ರಾಮೀಣ ಭಾಗದ ಸಂಪ್ರದಾಯ ಇನ್ನು ಜೀವಂತವಾಗಿದೆ ಎನ್ನುವುದು ಈ ಮೂಲಕ ಅನಾವರಣಗೊಂಡಿತು.
ಕರಾವಳಿಯಲ್ಲಿ ಸರಣಿ ಹತ್ಯೆಗಳ ಬೆನ್ನಲ್ಲೇ ಗನ್ ಮ್ಯಾನ್ ಕೇಳಿದ ಜೆಡಿಎಸ್ ಮುಖಂಡ
ಪ್ರತಿ ವರ್ಷ ಭತ್ತದ ಗದ್ದೆ ನಾಟಿ ಮಾಡುವ ಸಮಯದಲ್ಲಿ ಹೊರನಾಡು ಗ್ರಾಮದ ದೊಡ್ಡಮನೆ ರಾಜೇಂದ್ರ ಹೆಗ್ಗಡೆ ಎಂಬುವರ ಮನೆಯ ಗದ್ದೆ ನಾಟಿ ಮಾಡಿದ ಬಳಿಕವೇ ಊರಿನ ಉಳಿದ ಗದ್ದೆಗಳನ್ನ ನಾಟಿ ಮಾಡೋದು. ದೊಡ್ಡಮನೆ ಗದ್ದೆಯ ನಾಟಿ ಮಾಡುವ ದಿನ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬರು ಹೋಗಿ ನಾಟಿ ಮಾಡುವ ಸಂಪ್ರದಾಯಕ್ಕೆ ಐದು ಶತಮಾನಗಳ ಇತಿಹಾಸವಿದೆ. ಗದ್ದೆ ನಾಟಿ ಮಾಡುವ ದಿನವಾದ ಇಂದು ಗ್ರಾಮದಲ್ಲಿ ಇರುವ ಎಲ್ಲರೂ ನಾಟಿ ಮಾಡುತ್ತಾರೆ. ಮರು ದಿನದಿಂದ ಗ್ರಾಮದ ಬೇರೆ ಗದ್ದೆಗಳನ್ನ ನಾಟಿ ಮಾಡುವ ಪದ್ದತಿ ರೂಡಿಯಲ್ಲಿದೆ.
ಸಂಪ್ರದಾಯವೂ ನಿಂತಿಲ್ಲ-ಸಂಭ್ರಮವೂ ಕಳೆದೋಗಿಲ್ಲ: ಗದ್ದೆಯನ್ನು ನಾಟಿ ಮಾಡುವ ದಿನವಾದ ಇಂದು ಹಳ್ಳಿಗರು ಕಳಸದಲ್ಲಿ ರಾಸುಗಳನ್ನ ಪೂಜೆ ಮಾಡಿ ಮೆರೆವಣಿಗೆಯಲ್ಲಿ ಗದ್ದೆಗೆ ಕರೆ ತರುತ್ತಾರೆ .ತದ ನಂತರ ಗದ್ದೆಯ ಬದುವಿಗೆ ಪೂಜೆ ಮಾಡಿ ರೈತರು ನಾಟಿ ಮಾಡಲು ಸಿದ್ಧರಾಗಿತ್ತಾರೆ. ಇನ್ನು ಈ ದೊಡ್ಡ ಮನೆ ಹೆಗ್ಗಡೆಯವರನ್ನ ಅನಾದಿ ಕಾಲದಿಂದ ಗ್ರಾಮದ ಜನ ಗೌರವಿಸಿಕೊಂಡು ಬಂದಿದ್ದಾರೆ. ಇವರನ್ನ ಪಾಳೇಗಾರರು, ಗೌಡರು, ಪಟೇಲರು ಎಂಬ ಮುಂತಾದ ಹೆಸರಿನಿಂದಲೂ ಕರೆಯುತ್ತಾರೆ.
ಇಂದು ನಡೆದ ಈ ನಾಟಿ ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. ನಾನು ಕಳೆದ ವರ್ಷ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬಂದಿದ್ದೇನೆ. ಈ ದಿನ ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಏರ್ಪಟ್ಟಿರುತ್ತೆ. ಭೂಮಿಯ ಅಂತರ್ಜಲ ಹೆಚ್ಚಲು ಹೆಚ್ಚು ಗದ್ದೆಗಳನ್ನ ನಾಟಿ ಮಾಡಬೇಕು. ಇಂತಹ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಈ ದಿನ ನಾನು ಗದ್ದೆಗಿಳಿದು ನಾಟಿ ಮಾಡಿದ್ದೇನೆ ಎಂದು 21 ತಲೆಮಾರಿನ ಈ ಕಾರ್ಯಕ್ರಮವನ್ನ ಶ್ಲಾಘಿಸಿದ್ದಾರೆ. ಒಟ್ಟಾರೆ, ಈ ಸುದ್ದಿ ಇಡೀ ದೇಶಕ್ಕೆ ಮಾದರಿ ಅಂದ್ರು ತಪ್ಪಿಲ್ಲ.
Chikkamagaluru: ಕರಾವಳಿಯಲ್ಲಿ ಪ್ರವೀಣ್ ಹತ್ಯೆ ಪ್ರಕರಣ: ಇಸ್ಲಾಮಿಕ್ ರಾಷ್ಟ್ರ ಮಾಡಲು ಸಂಚು
ಯಾಕಂದ್ರೆ, ಸಾಧು-ಸಂತರು ಕಟ್ಟಿದ ಈ ಭವ್ಯ ಭಾರತದ ಮಣ್ಣಿಗೆ ತನ್ನದೇ ಆದ ಇತಿಹಾಸವಿದೆ. ಆದ್ರೆ, ಜಗತ್ತು ಆಧುನಿಕತೆಗೆ ಕಾಲಿಟ್ಟಂತೆಲ್ಲಾ ಭವ್ಯ ಭಾರತದ ಪುರಾತನ ಸಂಸ್ಕತಿ, ರೂಢಿ-ಸಂಪ್ರದಾಯ ಕಣ್ಮರೆಯಾಗುತ್ತಿದೆ. ಅಲ್ಲೊಂದು-ಇಲ್ಲೊಂದು ಹಳ್ಳಿಯಲ್ಲಿ ನಮ್ಮ ಪರಂಪರೆಯ ಹೆಜ್ಜೆ ಗುರುತುಗಳು ಉಳಿದಿವೆ. ಆದ್ರೆ, ಈ ರೀತಿ 500 ವರ್ಷಗಳಿಂದ ಹಳ್ಳಿಯೊಂದರಲ್ಲಿ ಒಂದು ಸಂಪ್ರದಾಯ ಆಧುನಿಕತೆಯ ಭರಾಟೆಯ ಮಧ್ಯೆ ಇಂದಿಗೂ ನಿರಂತರವಾಗಿರುವುದು ಕಳಸ ಗ್ರಾಮದಲ್ಲಿ ಮಾತ್ರ.