ಮನಸ್ಸಿನಿಂದ ಲಕ್ಷ್ಮೀದೇವಿಯನ್ನು ಆರಾಧಿಸಿ ಪೂಜೆ ಮಾಡಿದಲ್ಲಿ ಸಕಲ ಇಷ್ಟಾರ್ಥಗಳು ಫಲಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿ ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೊ ಇದ್ದೇ ಇರುತ್ತದೆ. ಆದರೆ ಲಕ್ಷ್ಮೀಯ ಎಲ್ಲ ಪೋಟೊಗಳು ಸಂಪತ್ತು ತಂದುಕೊಡುವಂಥದ್ದಲ್ಲ, ಲಕ್ಷ್ಮೀ ದೇವಿಯ ಕೆಲವು ಫೋಟೊಗಳು ಕಷ್ಟಕ್ಕೂ ಕಾರಣವಾಗುತ್ತವೆ. ಹಾಗಾದರೆ ಯಾವ ಫೋಟೊದಿಂದ ಯಾವ ಫಲ? ತಿಳಿಯೋಣ.
ಲಕ್ಷ್ಮೀದೇವಿಯ ಕೃಪೆ ಎಲ್ಲರಿಗೂ ಬೇಕು. ಧನ-ಧಾನ್ಯಗಳ ಅಧಿದೇವತೆ ಲಕ್ಷ್ಮೀಯೇ ಆಗಿದ್ದು, ಸಮಸ್ತ ಜಗತ್ತಿಗೂ ಯಶಸ್ಸು, ವೈಭವ ಮತ್ತು ಕೀರ್ತಿಯನ್ನು ದಯಪಾಲಿಸುವ ದೇವತೆಯಾಗಿದ್ದಾಳೆ. ಲಕ್ಷ್ಮೀಯ ಕೃಪೆಯುಳ್ಳವರಿಗೆ ಯಾವುದೇ ಆತಂಕವಿರುವುದಿಲ್ಲ, ಅಂಥ ಮನೆಯಲ್ಲಿ ಧನ-ಧಾನ್ಯ ಮತ್ತು ಸಮೃದ್ಧಿಯು ಅಪಾರವಾಗಿರುತ್ತದೆ. ಪುರಾಣಗಳಲ್ಲಿ ಮಹಾಲಕ್ಷ್ಮೀಯ ಕೃಪೆ ಪಡೆಯುವ ಬಗೆ ಹೇಗೆ ಎಂಬ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಲಾಗಿದೆ.
ಸುಖ-ಸಮೃದ್ಧಿ ಮತ್ತು ಸಂಪತ್ತನ್ನು ಕರುಣಿಸುವ ದೇವತೆ ಮಹಾಲಕ್ಷ್ಮೀ. ಹಾಗಂತ ಲಕ್ಷ್ಮೀ ದೇವಿಯ ಎಲ್ಲ ಪೋಟೊಗಳು ಸಂಪತ್ತು ತಂದುಕೊಡುವಂಥದ್ದಲ್ಲ, ಲಕ್ಷ್ಮೀ ದೇವಿಯ ಕೆಲವು ಫೋಟೊಗಳು ಕಷ್ಟಕ್ಕೂ ಕಾರಣವಾಗುತ್ತವೆ. ಹಾಗಾದರೆ ಯಾವ ಫೋಟೊದಿಂದ ಯಾವ ಫಲ? ತಿಳಿಯೋಣ….
ಇದನ್ನು ಓದಿ: ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ!...
ಗೂಬೆಯನ್ನು ವಾಹನವನ್ನಾಗಿಸಿಕೊಂಡ ಫೋಟೊ
ಲಕ್ಷ್ಮೀ ದೇವಿಯ ವಾಹನ ಗೂಬೆ ಎಂದು ಹೇಳಲಾಗುತ್ತದೆ. ಹಾಗಂತ ಮನೆಯಲ್ಲಿ ಲಕ್ಷ್ಮೀ ದೇವಿಯು ಗೂಬೆಯ ಮೇಲೆ ಕುಳಿತಿರುವ ಅಥವಾ ಜೊತೆಗಿರುವ ಫೋಟೊಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಈ ಫೋಟೊವು ದೇವಿಯ ಸಂಚಾರದ ಪ್ರತೀಕವಾದ್ದರಿಂದ, ಮನೆಯಿಂದ ಲಕ್ಷ್ಮೀಯು ಸಂಚಾರ ಹೊರಡುತ್ತಾಳೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಲಕ್ಷ್ಮೀಯು ಸದಾ ಮನೆಯಲ್ಲೆ ನೆಲೆಸಿದ್ದರೆ ಸಂಪತ್ತು ಹೆಚ್ಚುತ್ತದೆ ಮತ್ತು ಸಮೃದ್ಧಿ ಉಂಟಾಗುತ್ತದೆ.
ಈ ಫೋಟೊದಿಂದ ಲಕ್ಷ್ಮೀ ಕೃಪೆ ಲಭಿಸುತ್ತದೆ
undefined
ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು, ಮನೆಯಲ್ಲಿ ಲಕ್ಷ್ಮೀ ದೇವಿಯ ಈ ಫೋಟೊವನ್ನು ಇಟ್ಟುಕೊಂಡರೆ ಒಳ್ಳೆಯದು. ಲಕ್ಷ್ಮೀ ದೇವಿಯು ಶ್ರೀ ವಿಷ್ಣುವಿನ ಜೊತೆಗೂಡಿ ಗರುಡ ದೇವನಮೇಲೆ ಕುಳಿತಿರುವಂಥ ಫೋಟೊ ಮನೆಯಲ್ಲಿದ್ದರೆ ಒಳಿತಾಗುತ್ತದೆಂದು ಹೇಳಲಾಗುತ್ತದೆ. ಇದರಿಂದ ವಿಷ್ಣು – ಲಕ್ಷ್ಮೀ ಜೊತೆಗೆ ಗರುಡ ದೇವನ ಕೃಪೆಯು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಈ ಫೋಟೊವನ್ನು ಆರಾಧಿಸುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
ಕುಬೇರ ದೇವ ಮತ್ತು ಲಕ್ಷ್ಮೀ
ಲಕ್ಷ್ಮೀಯು ಚಂಚಲ ಸ್ವಭಾವವನ್ನು ಹೊಂದಿರುವ ದೇವಿ ಎಂದು ಹೇಳಲಾಗುತ್ತದೆ. ಕುಬೇರ ದೇವನು ಸಕಲ ಸಂಪತ್ತಿಗೆ ಒಡೆಯನಾಗಿದ್ದಾನೆ. ಹಾಗಾಗಿ ಮನೆಯಲ್ಲಿ ಲಕ್ಷ್ಮೀ ದೇವಿಯ ಜೊತೆ ಕುಬೇರ ದೇವರು ಇರುವ ಫೋಟೊವನ್ನು ಇಟ್ಟುಕೊಳ್ಳುವುದು ಉತ್ತಮ. ಇದರಿಂದ ಲಕ್ಷ್ಮೀಯು ಮನೆಯಲ್ಲಿಯೆ ವಾಸವಾಗಿರುವುದಲ್ಲದೆ, ಕುಬೇರ ದೇವರ ಕೃಪೆ ಸಹ ಪ್ರಾಪ್ತವಾಗುತ್ತದೆ. ಮನೆಯಲ್ಲಿ ಧನ-ಧಾನ್ಯಗಳು ವೃದ್ಧಿಸುತ್ತವೆ.
ಇದನ್ನು ಓದಿ:
ಶ್ರೀಹರಿಯ ಚರಣ ಸ್ಪರ್ಶಿಸುತ್ತಿರುವ ದೇವಿ
ಲಕ್ಷ್ಮೀದೇವಿಯು ಶ್ರೀಹರಿಯ ಚರಣವನ್ನು ಸ್ಪರ್ಶಿಸುತ್ತಿರುವ ಫೋಟೊವು ಮನೆಯಲ್ಲಿ ಅವಶ್ಯವಾಗಿ ಇರಬೇಕೆಂದು ಹೇಳಲಾಗುತ್ತದೆ. ಇದರಿಂದ ಶ್ರೀಹರಿ ಮತ್ತು ಲಕ್ಷ್ಮೀದೇವಿಯ ಕೃಪೆ ಲಭಿಸುತ್ತದೆ. ಈ ರೀತಿಯ ಫೋಟೊದಿಂದ ಮನೆಯಲ್ಲಿ ಸುಖ- ಶಾಂತಿ ಮತ್ತು ನೆಮ್ಮದಿ ಸದಾ ನೆಲೆಸಿರುತ್ತದೆ.
ಲಕ್ಷ್ಮೀಕೃಪೆ ಪಡೆಯಲು ಹೀಗೆಮಾಡಿ..
ಲಕ್ಷ್ಮೀ ಕೃಪೆ ಸಿಗುವಂಥ ಫೋಟೋವನ್ನಿಟ್ಟು ಆರಾಧಿಸುವುದಲ್ಲದೆ, ಲಕ್ಷ್ಮೀಯ ವಾಸ ಮನೆಯಲ್ಲಿ ಆಗಬೇಕೆಂದರೆ ಹೀಗೆ ಮಾಡಬೇಕು.
- ಲಕ್ಷ್ಮೀಯು ನಿಮ್ಮ ಮನೆಯಲ್ಲಿ ವಾಸ ಮಾಡಬೇಕೆಂದರೆ ಮನೆಯನ್ನು ಶುಚಿಯಾಗಿಟ್ಟಿರಬೇಕು.
- ತುಳಸಿ ಗಿಡದಲ್ಲಿ ಲಕ್ಷ್ಮೀ ವಾಸವಿರುತ್ತಾಳೆ ಎಂಬ ನಂಬಿಕೆ ಇದೆ. ತುಳಸಿ ಗಿಡದ ಸುತ್ತ ಮುತ್ತ ಸಾರಿಸಿ, ರಂಗವಲ್ಲಿಯನ್ನು ಹಾಕಿ, ನಂತರ ಶುಚಿಯಾಗಿ ತುಳಸಿ ದೇವಿಗೆ ನೀರೆರೆದು, ದೀಪ ಬೆಳಗಿಸಬೇಕು. ಆನಂತರ ಮನಸ್ಸಿನ ಇಚ್ಛೆಯನ್ನು ಕೇಳಿಕೊಂಡರೆ, ಆ ಪ್ರಾರ್ಥನೆಯನ್ನು ಆಲಿಸಿ ಲಕ್ಷ್ಮೀದೇವಿಯು ಬೇಡಿಕೊಂಡಿದ್ದನ್ನು ಈಡೇರಿಸುತ್ತಾಳೆ.
ಇದನ್ನು ಓದಿ: ನೀವು-ನಿಮ್ಮವರು ಜನವರಿಯಲ್ಲಿ ಹುಟ್ಟಿದ್ದರೆ, ಅವರ ಗುಣ ಸ್ವಭಾವ ಹೀಗಿರುತ್ತೆ..!
- ದೇವರ ಮನೆಯಲ್ಲಿ ಲಕ್ಷ್ಮೀ ಮತ್ತು ಗಣೇಶನ ಬೆಳ್ಳಿಯ ವಿಗ್ರಹವನ್ನು ಇಟ್ಟು ದಿನವೂ ಪೂಜಿಸುವುದರಿಂದ ಒಳಿತಾಗುತ್ತದೆ.
- ಲಕ್ಷ್ಮೀಯನ್ನು ದಿನವೂ ಪೂಜಿಸುವುದರ ಜೊತೆಗೆ ದೇವಿಯ 108 ನಾಮಗಳನ್ನು ಜಪಿಸಿ, ಆಕೆಯ ಸ್ತುತಿ ಮಾಡಿದಲ್ಲಿ ಕೃಪೆ ಲಭಿಸುವುದು ಖಂಡಿತ.
- ಲಕ್ಷ್ಮೀಯನ್ನು ಆರಾಧಿಸಲು ಹಲವಾರು ಸ್ತೋತ್ರಗಳಿವೆ, ಕೆಲವು ಪ್ರಸಿದ್ಧ ಸ್ತುತಿಗಳೆಂದರೆ ಶ್ರೀ ಮಹಾಲಕ್ಷ್ಮೀ ಅಷ್ಟಕಮ್, ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಮ್, ಶ್ರೀ ಸ್ತುತಿ, ಶ್ರೀ ಚಟುಶ್ಲೋಕಿ, ಶ್ರೀ ಕನಕಧಾರಾ ಸ್ತುತಿ, ಶ್ರೀ ಲಕ್ಷ್ಮೀ ಶ್ಲೋಕ, ಶ್ರೀ ಸೂಕ್ತ ಮುಂತಾದ ದೇವಿ ಸ್ತುತಿಗಳನ್ನು ಪಠಿಸಿದರೆ ದೇವಿಯು ಪ್ರಸನ್ನಳಾಗುತ್ತಾಳೆ ಎಂಬ ಉಲ್ಲೇಖವಿದೆ.