ನಿಮ್ಮ ಕನಸಿನಲ್ಲಿ ಹಾವು ಬರುತ್ತಿದೆಯಾ?: ಇದು ನಿಮ್ಮ ಅದೃಷ್ಟ ಬದಲಾಗುವ ಸಮಯ

By Sushma HegdeFirst Published Jun 1, 2023, 3:52 PM IST
Highlights

ಎಲ್ಲರೂ ಮಲಗುವಾಗ ಕನಸು ಕಾಣುತ್ತಾರೆ. ಹೆಚ್ಚಿನ ಕನಸುಗಳಿಗೆ ನಾವು ಗಮನ ಕೊಡುವುದಿಲ್ಲ. ಆದರೆ ನಾವು ಕನಸುಗಳ ವಿಜ್ಞಾನವನ್ನು ನಂಬಿದರೆ, ಈ ಕನಸುಗಳು ವಿಭಿನ್ನ ಅರ್ಥಗಳನ್ನು ನೀಡುತ್ತವೆ.ಒಬ್ಬ ವ್ಯಕ್ತಿಯು ಕನಸಿನಲ್ಲಿ ಪದೇ ಪದೇ ಹಾವು ಕಂಡರೆ, ಅದು ಸಾಮಾನ್ಯ ಕನಸಲ್ಲ ಆದರೆ ಅದರ ಹಿಂದೆ ವಿಶೇಷ ಸೂಚಕ ಅಡಗಿರುತ್ತದೆ. ಹಾವು ಮತ್ತೆ ಮತ್ತೆ ಕನಸಿನಲ್ಲಿ ಕಂಡರೆ ಏನೆಂದು ತಿಳಿದುಕೊಳ್ಳೋಣ?
 

ಅನೇಕ ಜನರು ನಿದ್ರೆಯಲ್ಲಿ ಕನಸು ಕಾಣುತ್ತಾರೆ. ಕೆಲವರು ತಮ್ಮ ಕನಸುಗಳನ್ನು ಮರೆತರೆ ಇನ್ನು ಕೆಲವರು ದಿನವಿಡೀ ಆ ಕನಸಿನ ಗುಂಗಿನಲ್ಲಿರುತ್ತಾರೆ.  ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಕಾಣುವ ಎಲ್ಲದರ ಹಿಂದೆ ವಿಶೇಷ ಅರ್ಥ ಇರುತ್ತದೆ. ಕೆಲವು ಕನಸುಗಳು ಬರಲಿರುವ ಕೆಟ್ಟ ದಿನಗಳನ್ನು ಸೂಚಿಸಿದರೆ ಇನ್ನು ಕೆಲವು ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದು ಸೂಚಿಸುತ್ತದೆ. ಮನುಷ್ಯನಿಗೆ ವಿವಿಧ ರೀತಿಯ ಕನಸುಗಳು ಬೀಳುತ್ತವೆ. ಅವುಗಳು ಬೇರೆ ಬೇರೆ ಸೂಚನೆಗಳನ್ನು ನೀಡುತ್ತವೆ. ಕೆಲವರ ಕನಸಿನಲ್ಲಿ ಪದೇ ಪದೇ ಹಾವುಗಳು ಕಂಡು ಬರುತ್ತವೆ. ಅವುಗಳು ಸಾಮಾನ್ಯ ಕನಸಲ್ಲ ಆದರೆ ಅದರ ಹಿಂದೆ ವಿಶೇಷ ಸೂಚನೆ ಅಡಗಿರುತ್ತದೆ. ಕನಸಿನಲ್ಲಿ ಹಾವು ಅಥವಾ ಹಾವಿನ ಕನಸು ಬಿದ್ದರೆ ಅದು ಶುಭ ಮತ್ತು ಅಶುಭ ಎರಡೂ ಸೂಚನೆಗಳನ್ನು ನೀಡುತ್ತದೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕಪ್ಪು ಹಾವನ್ನು ಕಾಣುವುದು

ಒಬ್ಬ ವ್ಯಕ್ತಿಯು ಕನಸಿನಲ್ಲಿ ಕಪ್ಪು ಹಾವ(black snake)ನ್ನು ಪದೇ ಪದೇ ನೋಡಿದರೆ, ಈ ಕನಸು ಕೆಟ್ಟ ಸೂಚಕ (Bad indication)ವಾಗಿದೆ. ಕನಸಿನ ವಿಜ್ಞಾನದ ಪ್ರಕಾರ, ಕಪ್ಪು ಹಾವಿನ ನೋಟವನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಹಣಕ್ಕೆ ಸಂಬಂಧಿಸಿದ ನಷ್ಟ (loss) ಉಂಟಾಗುತ್ತದೆ ಅಥವಾ ನೀವು ಕೆಲವು ಗಂಭೀರ ಕಾಯಿಲೆಗೆ ಒಳಗಾಗುವ ಸಾಧ್ಯತೆಯಿದೆ. ಹಾಗೇ ನಿಮ್ಮ  ದೊಡ್ಡ ಸಮಸ್ಯೆಗಳಾಗಲಿರುವ ತೋರಿಕೆಯಲ್ಲಿ ಸಣ್ಣ ಸಮಸ್ಯೆ (problem)ಗಳಿಗೆ ಗಮನ ಕೊಡುವಂತೆ ಎಚ್ಚರಿಸುವುದಾಗಿದೆ. 

2. ಸತ್ತ ಹಾವನ್ನು ನೋಡಿದರೆ

ಕನಸಿನ ವಿಜ್ಞಾನದ ಪ್ರಕಾರ ನಿಮ್ಮ ಕನಸಿನಲ್ಲಿ  ಸತ್ತ ಹಾವ (dead snake)ನ್ನು ನೋಡಿದರೆ, ಅದನ್ನು ಅತ್ಯಂತ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಹಾಗೇ ಇದು ಬರಲಿರುವ ಕೆಲವು ದೊಡ್ಡ ತೊಂದರೆಯ ಸಂಕೇತ ಎಂದು ಹೇಳಲಾಗಿದೆ. ಅದಲ್ಲದೆ ಸತ್ತ ಹಾವಿನ ಕನಸು ನಿಮ್ಮ ಜಾತಕ (Horoscope)ದಲ್ಲಿ ರಾಹು ದೋಷವನ್ನು ಸೂಚಿಸುತ್ತದೆ. ಈ ರಾಹು ದೋಷ (Rahu Dosha)ಗಳನ್ನು ಪರಿಹರಿಸಲು ಜ್ಯೋತಿಷಿಗಳ ಮಾರ್ಗದರ್ಶನದೊಂದಿಗೆ ಪರಿಹಾರಗಳನ್ನು ತೆಗೆದುಕೊಳ್ಳಬೇಕು.

ಪ್ರವಾಸದಲ್ಲಿ ಚಿಗುರುವ ಸ್ನೇಹ: ಈ ರಾಶಿಯವರಿಗೆ ಸ್ಕೂಬಾ ಡೈವಿಂಗ್'ನಲ್ಲಿ ಆಗುತ್ತೆ ಲವ್...

 

3. ದೊಡ್ಡ ಪ್ರಮಾಣದಲ್ಲಿ ಹಾವುಗಳ ರಾಶಿ

ಒಬ್ಬ ವ್ಯಕ್ತಿಯು ಕನಸಿನಲ್ಲಿ ಹಾವುಗಳ ಹಿಂಡು (swarm of snakes) ಅಥವಾ ಅನೇಕ ಹಾವುಗಳನ್ನು ಒಟ್ಟಿಗೆ ಕಂಡರೆ ಅದು ಅಶುಭಕರ (inauspicious) ಕನಸು. ಈ ಕನಸು  ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಬಿಕ್ಕಟ್ಟು ಸಂಭವಿಸಲಿದೆ ಎಂದು ಸೂಚಿಸುತ್ತಿದೆ. ನಿಮ್ಮ ಸುತ್ತಲೂ ಹಲವಾರು ವಂಚನೆ, ಸುಳ್ಳು, ಕೆಟ್ಟ ಉದ್ದೇಶ (Bad intention)ಗಳನ್ನು ಹೊಂದಿರುವ ವ್ಯಕ್ತಿಗಳು ಇದ್ದಾರೆ ಎಂದ ಅರ್ಥವಾಗಿದೆ.

4. ಹಾವುಗಳನ್ನು ಕೊಲ್ಲುವುದು 

ನಿಮ್ಮ ಕನಸಿನಲ್ಲಿ ಹಾವನ್ನು ಕೊಂದರೆ (Killing snake) ಅದು ಶುಭ ಸಂಕೇತವಾಗಿದೆ. ಈ ರೀತಿಯ ಕನಸನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  ನಿಮ್ಮ ಚಿಂತೆ ಮತ್ತು ಬೆದರಿಕೆಗಳನ್ನು ನೀವು ಜಯಿಸಿದ್ದೀರಿ. ಕನಸಿನ ವಿಜ್ಞಾನದ ಪ್ರಕಾರ, ಈ ಕನಸು  ನಿಮ್ಮ ಶತ್ರು(enemy) ವಿರುದ್ಧ ನೀವು ಗೆಲ್ಲುವ ಸೂಚನೆಯಾಗಿದೆ.

5. ಕನಸಿನಲ್ಲಿ ಬರುವ ಮಿಂಚುವ ಹಾವು

ಒಬ್ಬ ವ್ಯಕ್ತಿಯು ರಾತ್ರಿ ಮಲಗಿದಾಗ ಕನಸಿನ (dream)ಲ್ಲಿ ಹೊಳೆಯುವ ಹಾವು ಕಂಡು ಬರುತ್ತವೆ. ಬಿಳಿ ಅಥವಾ ಚಿನ್ನದ ಅಥವಾ ಹೊಳೆಯುವ ಹಾವು ಕಾಣಿಸಿಕೊಂಡರೆ ಅದು ಅದೃಷ್ಟ ತೆರೆಯುವ ಸಂಕೇತವಾಗಿದೆ ಎಂದು ನಂಬಲಾಗಿದೆ. ಇದು ನಮ್ಮ ಪೂರ್ವಿಕರ ಆಶೀರ್ವಾದ ಸೂಚಿಸುತ್ತದೆ ಎಂದು ನಂಬಲಾಗಿದೆ.

ಮೊದಲ ಭೇಟಿಯಲಿ 'ವಿಶೇಷ ಸೆಳೆತ' : ಇವರೇ ನಿಮ್ಮ ಆತ್ಮ ಸಂಗಾತಿ...

 

6. ಕನಸಿನಲ್ಲಿ ಪೊರೆ ಬಿಡುವ ಹಾವು

ಕೆಲವು ಮನುಷ್ಯರಿಗೆ ಹಾವೊಂದು ತನ್ನ ಪೊರೆಯನ್ನು ತೆಗೆಯುತ್ತಿರುವಂತೆ ಕನಸು ಬೀಳುತ್ತದೆ. ಇದು ಆಸ್ತಿ ಸಂಪಾದನೆಯ ಮೊತ್ತವಾಗಿದೆ ಎಂದು ಹೇಳಲಾಗಿದೆ. ಈ ಕನಸು ನೀವು ಶೀಘ್ರದಲ್ಲೇ ಸಂಪತ್ತ(Wealth)ನ್ನು ಪಡೆದುಕೊಳ್ಳುವಿರಿ ಎಂಬುದನ್ನು ಹೇಳುತ್ತದೆ.
 

click me!