
ಮೇಷ ರಾಶಿ: ರವಿ, ಚಂದ್ರ, ಗರುಗಳ ವಿಶೇಷ ಅನುಕೂಲ ಮಾಸವಿದ್ದು, ವ್ಯಾಪಾರ ವ್ವಹಾರಗಳು ಧನಾದಯ ತರತ್ತದೆ. ಬಿಳಿ ಮತ್ತು ಕೆಂಪು ಹವಳ ಶ್ರೀನಿವಾಸ ದೇವರಿಗೆ ಅರ್ಪಿಸಿ, ಪ್ರಸಾದವಾಗಿ ಧರಿಸಿರಿ.
ವೃಷಭ ರಾಶಿ: ಗರು ಚಂದ್ರರ ಅನುಕೂಲ ಆರಂಭ ಮಾಸ, ಅನೇಕ ಶುಭ ಕಾರ್ಯ ಚಾಲನೆ, ವಿದ್ಯಾರ್ಥಿಗಳಿಗೆ ಚೈತನ್ಯಕರ, ಚಿನ್ನದಲ್ಲಿ ವಜ್ರಮಣಿ ಆಭರಣ ಶ್ರೀನಿವಾಸ ದೇವರಿಗೆ ಅರ್ಪಿಸಿ, ಧರಿಸಿರಿ.
ಮಿಥುನ ರಾಶಿ: ಬಧಾದಿತ್ಯರ ಅನುಕೂಲ. ಗುರು ಜನ್ಮಕ್ಕೆ ಬರುವುದು ವಿಶೇಷ ಮಾಸ, ಧನಾಗಮ, ಬಂಧು ಮಿತ್ರರ ಕೂಟ, ಪ್ರಯೋಗಗಳು ನಡೆಯವುದು. ಮಾತು ಸಂಂಧಗಳ ಬಗ್ಗೆ ಜಾಗ್ರತೆ. ಹಸಿರು ಮಣಿ ಆಭರಣ ಶ್ರೀನಿವಾಸ ದೇವರಿಗೆ ಅರ್ಪಿಸಿ ಧರಿಸಿ.
ಕರ್ಕ ರಾಶಿ: ಆರೋಗ್ಯ ಸುಧಾರಿಸುವುದು. ಕ್ರಯ ವಿಕ್ರಯ ವ್ಯವಹಾರಗಳಿಗೆ ಚಾಲನೆ. ಗುರು ವ್ಯಯಕ್ಕೆ ಬರುವುದು ಹಲವು ಚಟುವಟಿಕೆಗಳನ್ನ ತರುತ್ತದೆ. ಬಳಿ ಮತ್ತು ಕಂದು ಮುತ್ತುಗಳನ್ನು ಅಮ್ಮನವರಿಗೆ ಅಲಂಕಾರ ಅರ್ಪಿಸಿ , ಧರಿಸರಿ.
ಸಿಂಹ ರಾಶಿ: ರವಿ ಬುಧ ಗುರು ಅನುಕೂಲಕರ ತಿಂಗಳು, ಉದ್ಯೋಗ ಪ್ರಾಪ್ತಿ, ಸರ್ಕಾರ ಕೆಲಸಗಳು ವಿಳಂಬ. ಮಾಣಕ್ಯ ಚಿನ್ನಾಭರಣ ಶ್ರೀನಿವಾಸ ದೇವರಿಗೆ ಅರ್ಪಿಸಿ, ಧರಿಸಿ
ಕನ್ಯಾ ರಾಶಿಗೆ ಗುರು ಶುಕ್ರರ ಅನುಕೂಲ ಶುಭ ಯೋಗ, ಜನ ಸಂಪರ್ಕ, ಆದಾಯ ವೃದ್ದಿ, ಶುಭ ಕಾರ್ಯ ಚಾಲನೆ ಚಿನ್ನ ಬೆಳ್ಳಿ ಶ್ರೀನಿವಾಸ ದೇವರಿಗ ಅರ್ಪಿಸಿ ಧರಿಸಿ
ತುಲಾ ರಾಶಿ: ಗುರು ಬಲ ಬರುವ ವಿಶೇಷ ತಿಂಗಳು. ಇಷ್ಟಾರ್ಥಗಳು ನೆರವೇರುವ ಉತ್ಸಾಹ ಕಾಣುವಿರಿ. ವಜ್ರ, ನೀಲಿ ಚಿನ್ನದ ಆಭರಣ ಅಮ್ಮನವರಿಗೆ ಅರ್ಪಿಸಿ ಧರಿಸಿ
ವೃಶ್ಚಿಕ ರಾಶಿ: ಗುರು ಬಲ ಇರುವುದಿಲ್ಲ, ಹಲವು ಬದಲಾವಣೆಗಳ ಮಾಸ. ಸಂಚಾರ ಕೆಲಸ ಕಾರ್ಯಗಳ ಒತ್ತಡ, ಹೆಚ್ಚುವುದು ಆದಾಯ ಹವಳದ ಚಿನ್ನ ಬೆಳ್ಳಿಯ ಆಭರಣ ಧರಿಸಿ
ಧನು ರಾಶಿ: ಇಷ್ಟ ಗ್ರಹರಾದ ರವಿ, ಗುರುಗಳು ಬದಲಾಗುವ ಗೋಚರದ ಗುರು ಬಲದ ವರ್ಷವು ಆರಂಭದ ಮಾಸವು. ಭಡ್ತಿ, ವಾಸ ಬದಲು ಶುಭ ಕಾರ್ಯ
ಮಕರ ರಾಶಿ: ಶುಕ್ರ ಶನಿಯ ಅನುಕೂಲವಿದ್ದು, ನಾನಾ ವ್ಯವಹಾರ ತೆರೆಯುವುದು. ಸರ್ಕಾರಿ ಕೆಲಸಗಳು ಸುಗಮವಾದೀತು ವಜ್ರಾ ಆಭರಣ ಧರಿಸಿ.
ಕುಂಭ ರಾಶಿ: ಗುರುವಿನ ಪಂಚಮ ಬಲ ದೈವಯೋಗ, ಗುರು ವಾಸುಗ್ರಹ, ಆದಾಯ ಆತ್ಮ ಶಾಂತಿ, ಧನ್ಯತಾ ಭಾವ ಮೂಡುತ್ತೆ. ನೀಲ ಚಿನ್ನ ಆಭರಣ ಧರಿಸಿ
ಮೀನ ರಾಶಿ: ರವಿಗುರುಗಳ ಗೋಚರ ನವ ಚೈತನ್ಯ ತರುವುದು, ಗರು ಚತುರ್ಥ ಭಾವದ ಅನುಕೂಲದ ಮಾಸವೂ ಆಗಿದೆ. ಶ್ರೀ ರಂಗನಾಥ, ಪದ್ಮನಾಭ ಸ್ವಾಮಿ ಪುಷ್ಪಾಲಂಕಾರ ಸೇವೆ ಮಾಡಿ. ಮುತ್ತುಗಳ ಆಭರಣ ಧರಿಸಿ.
ಮೇ ತಿಂಗಳಲ್ಲಿ 6 ಗ್ರಹ ಬದಲಾವಣೆ, ವೃಷಭ ರಾಶಿ ಸೇರಿದಂತೆ 5 ರಾಶಿಗೆ ಕನಸೆಲ್ಲಾ ನನಸು