ಮಂಗಳ ರಾಶಿ ಪರಿವರ್ತನೆ - ಈ ನಾಲ್ಕು ರಾಶಿಯವರಿಗೆ ಮಂಗಳಕರ!

By Suvarna NewsFirst Published Jun 25, 2022, 5:07 PM IST
Highlights

ಕೆಲವು ರಾಶಿಯ ವ್ಯಕ್ತಿಗಳಿಗೆ ಬಹಳ ಶುಭ ಫಲ ತಂದರೆ, ಮತ್ತೆ ಕೆಲವು ರಾಶಿಗಳ ವ್ಯಕ್ತಿಗಳಿಗೆ ಅಶುಭ ಫಲವನ್ನುಂಟು ಮಾಡುತ್ತಿವೆ. ಇನ್ನು ಉಳಿದಂತೆ ಮಿಶ್ರ ಫಲ ಹೊಂದಿದ ರಾಶಿಗಳೂ ಇರುತ್ತವೆ. ಹೀಗಾಗಿ ಗ್ರಹಗತಿಳು ಬದಲಾದಂತೆ ವ್ಯಕ್ತಿಗಳ ಭವಿಷ್ಯವೂ ಬದಲಾಗುತ್ತಾ ಹೋಗುತ್ತದೆ. ಮಂಗಳ ಗ್ರಹದ ರಾಶಿ ಪರಿವರ್ತನೆ ಆಗಲಿದ್ದು, ಯಾವ ರಾಶಿಯವರಿಗೆ ಶುಭ ಫಲ ಎಂಬುದನ್ನು ನೋಡೋಣ...

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಶಿ ಚಕ್ರಗಳಿಗೆ ವಿಶೇಷ ಮನ್ನಣೆ ಇದೆ. ಇವುಗಳು ವ್ಯಕ್ತಿಗಳ ಭವಿಷ್ಯ (Future), ಸ್ವಭಾವ, ಗುಣ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಪ್ರಭಾವವನ್ನು ಬೀರುತ್ತದೆ. ಇನ್ನು ಗ್ರಹಗಳ ಸಂಚಾರವು (Planet Transit) ಸಹ ಆಗಾಗ್ಗೆ ಆಗುತ್ತಲೇ ಇರುತ್ತವೆ. ಈ ಗ್ರಹ ಸಂಚಾರದಿಂದ ಅನೇಕ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಪ್ರಭಾವಗಳು ಆಗುತ್ತವೆ. 

ಕೆಟ್ಟ ಸಮಯ ನಡೆಯುತ್ತಿದ್ದರೆ, ಇಂತಹ ವೇಳೆ ಒಳ್ಳೆಯ ಸಮಯವೂ ಆರಂಭವಾಗಬಹುದಾಗಿದೆ. ಇದೀಗ ಮಂಗಳ ಗ್ರಹದ ರಾಶಿ ಪರಿವರ್ತನೆ ಆಗಲಿದ್ದು, ಕೆಲವು ರಾಶಿಯವರ ಮೇಲೆ ಮಂಗಳ ಕೃಪಾ ಕಟಾಕ್ಷ ಬೀಳಲಿದೆ. ಮಂಗಳ ಗ್ರಹದ (Mars Planet) ಕೃಪಾಶೀರ್ವಾದವು ಸದಾ ಇದೆ ಎಂದಾದರೆ ಜೀವನದಲ್ಲಿ ಯಾವುದೇ ತೊಂದರೆಗಳು, ಕೊರತೆಗಳು ಇರಲಾರದು.

ಮಂಗಳ ಗ್ರಹವನ್ನು ಧೈರ್ಯ (Brave) ಮತ್ತು ಶೌರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಮಂಗಳ ಗ್ರಹವು ಇದೇ ಜೂನ್ 27ರಂದು ತನ್ನ ಸ್ವರಾಶಿಯಾಗಿರುವ ಮೇಷ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ. ಮಂಗಳನ ಈ ರಾಶಿಚಕ್ರ ಬದಲಾವಣೆಯು ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಪ್ರಭಾವ ಬೀರುತ್ತದೆ. ಆದರೆ, ಕೆಲವು ರಾಶಿಚಕ್ರದವರಿಗೆ ಮಂಗಳನ ಈ ಬದಲಾವಣೆಯ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ಜೂನ್ 27ಕ್ಕೆ ಮೇಷ ರಾಶಿಯನ್ನು ಪ್ರವೇಶಿಸುವ ಮಂಗಳನು ಆಗಸ್ಟ್ 10ರ ವರೆಗೆ ಅಲ್ಲೇ ಸ್ಥಿತವಾಗಿರಲಿದ್ದಾನೆ. ಮಂಗಳ ಗ್ರಹವು ಮೇಷ ಮತ್ತು ವೃಶ್ಚಿಕ ರಾಶಿಗಳಿಗೆ ಅಧಿಪತಿ ಗ್ರಹವಾಗಿದೆ. ಹೀಗಾಗಿ ಮಂಗಳನ ರಾಶಿ ಪರಿವರ್ತನೆಯಿಂದ ಯಾವ ಯಾವ ರಾಶಿಯವರಿಗೆ ಪ್ರಯೋಜನವಾಗಲಿದೆ (Benefits) ಎಂಬುದನ್ನು ನೋಡೋಣ...

ಮೇಷ ರಾಶಿ (Aries)
ಮೇಷ ರಾಶಿಯ ಅಧಿಪತಿ ಗ್ರಹ ಮಂಗಳ ಗ್ರಹವೇ ಆಗಿದ್ದರಿಂದ ಮಂಗಳ ಆಶೀರ್ವಾದ ಈ ರಾಶಿಯವರ ಮೇಲೆ ಸದಾ ಇರುತ್ತದೆ. ಈಗ ಮಂಗಳನ ರಾಶಿ ಪರಿವರ್ತನೆಯಲ್ಲಿ ಮೇಷ ರಾಶಿಯವರ ವೃತ್ತಿಜೀವನವು (Career) ಏರುಗತಿಯಲ್ಲಿ ಸಾಗಲಿದೆ. ಪ್ರೊಮೋಷನ್ (Promotion) ಪಡೆಯುವ ಸಾಧ್ಯತೆಗಳೂ ದಟ್ಟವಾಗಿವೆ. ಅಲ್ಲದೆ, ವ್ಯವಹಾರದಲ್ಲಿ ಶುಭ ಫಲಗಳನ್ನು ಪಡೆಯುತ್ತಾರೆ. ಇನ್ನು ಯಾವುದಾದರೂ ಉದ್ದಿಮೆಗಳನ್ನು ಹೊಂದಿದ್ದರೆ, ಅದರಲ್ಲಿ ಪಾಲುದಾರಿಕೆಯನ್ನು ಹೊಂದಿದ್ದರೆ ಆ ಕೆಲಸದಲ್ಲಿ ಯಶಸ್ಸನ್ನು (Success) ಪಡೆಯಬಹುದಾಗಿದೆ. ಜೊತೆಗೆ ಆದಾಯದಲ್ಲಿ ಹೆಚ್ಚಳವಾಗಲಿದ್ದು, ಕಾರ್ಯವೈಖರಿಯ ಶೈಲಿ ಸಹ ಸುಧಾರಿಸಲಿದೆ. ಇನ್ನು ಸಂಗಾತಿಯ ವಿಷಯಕ್ಕೆ ಬಂದರೆ ಅವರೊಂದಿಗೆ ರಸಮಯ ಕ್ಷಣವು ಇವರದ್ದಾಗಲಿದೆ. 

ಆದ್ರಾ ನಕ್ಷತ್ರಕ್ಕೆ ಸೂರ್ಯ ಪ್ರವೇಶ, ಈ 3 ರಾಶಿಯವರಿಗೆ ಸಖತ್ ಲಕ್

ಮಿಥುನ ರಾಶಿ (Gemini)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯ ವ್ಯಕ್ತಿಗಳಿಗೆ ಈ ವೇಳೆ ಮಂಗಳಕರವಾಗಿರಲಿದೆ. ಉದ್ಯೋಗದಲ್ಲಿ (Job) ಇವರಿಗೆ ಪ್ರಯೋಜನಗಳ ಲಭ್ಯವಾಗುವುದಲ್ಲದೆ, ಆದಾಯದ ಹೊಸ ಮಾರ್ಗಗಳು, ಮೂಲಗಳು ಇವರದ್ದಾಗಲಿದೆ. ಹೀಗಾಗಿ ಆರ್ಥಿಕವಾಗಿಯೂ ಪ್ರಗತಿಯನ್ನು ಸಾಧಿಸಬಹುದಾಗಿದೆ. ಇನ್ನು ಕಚೇರಿಯಲ್ಲಿ (Office) ಇವರ ಮೇಲೆ ಇರುವ ಭಾವನೆಗಳು ಸಹ ಸುಧಾರಿಸಿ, ಒಳ್ಳೆಯ ಇಮೇಜ್ ಇವರದ್ದಾಗುತ್ತದೆ. 

ಸಿಂಹ ರಾಶಿ (Leo)
ಸಿಂಹ ರಾಶಿಯವರು ಉದ್ಯೋಗ ಮತ್ತು ವ್ಯವಹಾರ (Business) ಎರಡರಲ್ಲೂ ಶುಭ ಫಲಗಳನ್ನು ಪಡೆಯಲಿದ್ದಾರೆ. ಅಲ್ಲದೆ, ಹೂಡಿಕೆ (Investment) ಮೇಲೆ ಆಸಕ್ತಿ ಇದ್ದರೆ ಇದು ಸಕಾಲವಾಗಿದೆ. ಅಧಿಕ ಲಾಭವನ್ನು ಇವರು ಪಡೆಯಬಹುದಾಗಿದೆ. ವಿವಾಹ ಆಗದವರಿಗೆ ಕಂಕಣ ಭಾಗ್ಯವು ಒದಗಿ ಬರಲಿದೆ. ಧನಾಗಮನವಾಗುವುದರ ಜೊತೆಗೆ ಉತ್ತಮ ಆರೋಗ್ಯವನ್ನು (Health) ಸಹ ಹೊಂದಬಹುದಾಗಿದೆ. 

ಯಾವ ರಾಶಿಯವರಿಗೆ ಎಷ್ಟು ಮಕ್ಕಳ ಭಾಗ್ಯ?

ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಈ ಸಮಯದಲ್ಲಿ ಉದ್ಯೋಗದಲ್ಲಿ ಬಡ್ತಿ ದೊರೆಯುವುದಲ್ಲದೆ, ವೃತ್ತಿ ಜೀವನದಲ್ಲಿ ಉತ್ತಮ ಹಂತವನ್ನು ತಲುಪಲಿದ್ದಾರೆ. ಉದ್ಯಮದಲ್ಲಿಯೂ ಸಹ ಧನ ಲಾಭವನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ. ವೈವಾಹಿಕ ಜೀವನವು (Marriage Life) ಆಹ್ಲಾದಕರವಾಗಿರುವುದಲ್ಲದೆ, ಮಗುವಿನಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. 

click me!