ವೃಷಭ ರಾಶಿಗೆ ಮಂಗಳನ ಪ್ರವೇಶ: ನಿಮ್ಮ ರಾಶಿಗೆ ಶುಭವಾ?

By Suvarna News  |  First Published Feb 25, 2021, 5:20 PM IST

ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿಯಾದ ಮಂಗಳನು ಫೆಬ್ರವರಿ 22ರ ಸೋಮವಾರ ಮೇಷದಿಂದ ಶುಕ್ರನ ಅಧಿಪತ್ಯದಲ್ಲಿರುವ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮಂಗಳನ ಪ್ರವೇಶದಿಂದ ಶುಭ ಲಾಭ ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.


ವೃಷಭ ರಾಶಿ

ಮಂಗಳನ ಚಲನೆ ನಿಮ್ಮ ಮನೆಗೇ ಆಗುತ್ತಿರುವುದರಿಂದ ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಜಗಳ, ಕದನ, ವೈಮನಸ್ಸುಗಳು ಕೊನೆಯಾಗುತ್ತವೆ. ಶತ್ರುಗಳ ತಂತ್ರಗಳನ್ನು ಸುಲಭವಾಗಿ ತೊಡೆದುಹಾಕುತ್ತೀರಿ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬಾಕಿ ಉಳಿದಿದ್ದ ಕೆಲಸಗಳನ್ನು ನೀವು ಪೂರೈಸುತ್ತೀರಿ. ಈ ಸಮಯದಲ್ಲಿ ನೀವು ಮಾಡುವ ಹೂಡಿಕೆಯು ಪ್ರಯೋಜನಕಾರಿಯಾಗಲಿದೆ. ವ್ಯವಹಾರಸ್ಥರು, ಉದ್ಯಮಿಗಳು ಲಾಭ ಗಳಿಸುತ್ತಾರೆ. ಆಸ್ತಿ ವಿಚಾರದಲ್ಲಿ ನಿಮಗೆ ಲಾಭವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ನಿಮಗೆ ಎದುರಾದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.

Tap to resize

Latest Videos

undefined

ಕಟಕ ರಾಶಿ

ವೃಷಭ ರಾಶಿಗೆ ಮಂಗಳನ ಪ್ರವೇಶದಿಂದಾಗಿ ನಿಮಗೆ ಉತ್ತಮ ಫಲಗಳು ಲಭ್ಯವಾಗುತ್ತವೆ. ನೀವು ಹಳೇ ಸಾಲಗಳಿಂದ ಮುಕ್ತಿ ಪಡೆಯುತ್ತೀರಿ. ಆದಾಯ ಹೆಚ್ಚಳವಾಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಂಬಂಧಗಳು ರೂಪುಗೊಳ್ಳುತ್ತವೆ. ಸಹೋದರರು ಮತ್ತು ಕುಟುಂಬದ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಗುರಿಗಳನ್ನು ಪೂರೈಸುತ್ತೀರಿ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಪ್ರೀತಿಯ ಜೀವನದಲ್ಲಿ ಹೊಸತನ ಇರುತ್ತದೆ. ಪ್ರಣಯಾಸಕ್ತಿಯು ಹೆಚ್ಚಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ. ಹಿರಿಯರ ಅಧಿಕಾರಿಗಳ ವ್ಯಕ್ತಿತ್ವ ಸುಧಾರಣೆಯಾಗುತ್ತದೆ.

ಸಿಂಹ ರಾಶಿ

ಮಂಗಳನ ಪ್ರವೇಶವು ನಿಮಗೆ ತುಂಬಾ ಅನುಕೂಲಕರವಾಗಲಿದೆ. ಈ ಸಮಯದಲ್ಲಿ ನೀವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತೀರಿ ಮತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತೀರಿ. ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸ ಮಾಡುವ ಕ್ಷೇತ್ರ ಮತ್ತು ಸಾಮಾಜಿಕ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹಳೆಯ ಹೂಡಿಕೆಗಳು ಸಹ ಲಾಭ ಪಡೆಯಲು ಪ್ರಾರಂಭಿಸುತ್ತವೆ. ಅದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ. ದಾನ ಧರ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಹಣ ಖರ್ಚು ಮಾಡುತ್ತೀರಿ. ನಿಷ್ಪ್ರಯೋಜಕ ಕಾರ್ಯಗಳಲ್ಲಿ ಸಮಯವನ್ನು ವ್ಯರ್ಥ ಮಾಡದಿರಿ. ಪ್ರಯೋಜನಕ್ಕೆ ಬರುವ ಕೆಲಸಗಳ ಕಡೆಗೆ ಮಾತ್ರ ನಿಮ್ಮ ಗಮನ ನೀಡಿ.

ತುಲಾ ರಾಶಿ

ಈ ಸಮಯದಲ್ಲಿ ನಿಮಗೆ ಹಠಾತ್ ಲಾಭದ ಸಾಧ್ಯತೆಗಳು ಇರುತ್ತವೆ ಮತ್ತು ಅದೃಷ್ಟ ಸಹ ಇರುತ್ತದೆ. ಕಾನೂನು ಸಮರಗಳಲ್ಲಿ ವಿಜಯವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸ್ವಭಾವದ ಸುಧಾರಣೆಯನ್ನೂ ಸಹ ನೀವು ನೋಡುತ್ತೀರಿ. ಕುಟುಂಬದ ವಾತಾವರಣವು ಶಾಂತಿಯುತವಾಗಿರುತ್ತದೆ ಮತ್ತು ಸದಸ್ಯರಲ್ಲಿ ಪ್ರೀತಿ ಮತ್ತು ಸಹಕಾರದ ಭಾವನೆ ಇರುತ್ತದೆ. ಆರ್ಥಿಕ ಜೀವನ ಮತ್ತು ಗೌರವ ಉನ್ನತಿಯಾಗುತ್ತದೆ. ಪ್ರಗತಿಯಾಗುತ್ತದೆ. ಸಣ್ಣ ವ್ಯಾಪಾರಿಗಳು ಲಾಭ ಪಡೆಯುತ್ತಾರೆ ಮತ್ತು ಹಳೆಯ ಸಾಲಗಳನ್ನು ತೀರಿಸುತ್ತಾರೆ. ನಿಮ್ಮ ಕೌಶಲ್ಯಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಅನುಭವಿಗಳ ಸಹಾಯದಿಂದ ಪ್ರಯೋಜನ ಉಂಟಾಗುತ್ತವೆ.

ನೆಮ್ಮದಿಯೇ ಇಲ್ಲ ಎಂದು ಕೊರಗುತ್ತಿದ್ದೀರಾ? ಶಿವನ ಈ ಮಂತ್ರವನ್ನು ಪಠಿಸಿದರೆ ಅನುಕೂಲವಾಗುವುದು ...

ಧನು ರಾಶಿ

ಮಂಗಳನ ಚಲನೆಯು ನಿಮಗೆ ಉತ್ತಮ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಯೋಜನೆಗಳಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮ ಅವಕಾಶಗಳನ್ನು ನೀಡುತ್ತದೆ. ಭವಿಷ್ಯದಲ್ಲಿ ನಿಮ್ಮಿಂದ ಲಾಭ ಪಡೆಯುವ ವ್ಯಕ್ತಿಯನ್ನು ನೀವು ಭೇಟಿಯಾಗುತ್ತೀರಿ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಪ್ರಯೋಜನಗಳನ್ನು ನೀಡುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ನೀವು ಮುಕ್ತರಾಗಿ ಉತ್ತಮ ಆರೋಗ್ಯವನ್ನು ಪಡೆಯುತ್ತೀರಿ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ನಿಮಗೆ ಅನುಕೂಲಕರವಾಗಿದೆ. ಹಣದ ಆಗಮನದಿಂದ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಒಳ್ಳೆಯ ಸಮಯ. ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. 

ಗರ್ಭಿಣಿ ಮಲಗೋ ಕೋಣೆ ಈ ದಿಕ್ಕಲ್ಲಿದ್ರೆ ಅಮ್ಮ-ಮಗು ಇಬ್ಬರಿಗೂ ಕಷ್ಟ ...

ಕುಂಭ ರಾಶಿ

ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವ ಸಮಯ. ಭೂಮಿಗೆ ಸಂಬಂಧಿತ ತಗಾದೆಗಳು ನಿಮಗೆ ಪ್ರಯೋಜನಕಾರಿಯಾಗಲಿವೆ. ಕಚೇರಿಯಲ್ಲಿ ಉತ್ಸಾಹ ಮತ್ತು ಶಕ್ತಿ ಹೆಚ್ಚಾಗುತ್ತದೆ. ಮನೆ ದುರಸ್ತಿ ಅಥವಾ ಅಲಂಕಾರ ಕಾರ್ಯಗಳನ್ನು ಪೂರೈಸುತ್ತೀರಿ. ಮನೆಗೆ ಹೊಸ ವಾಹನ ಮತ್ತು ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ಪ್ರಯಾಣ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಪ್ರೀತಿಯ ಜೀವನದಲ್ಲಿ ನಿಮ್ಮ ಸಂಬಂಧ ಹೆಚ್ಚು ಬಲವಾಗಿರುತ್ತದೆ. ನಿಮ್ಮ ಸಾಮಾಜಿಕ ಖ್ಯಾತಿ ಹೆಚ್ಚಾಗುತ್ತದೆ. ಉತ್ತಮ ಲಾಭ ಗಳಿಸಲು ಹಲವು ಅವಕಾಶಗಳಿರುತ್ತವೆ.

ಗರ್ಭಿಣಿ ಮಲಗೋ ಕೋಣೆ ಈ ದಿಕ್ಕಲ್ಲಿದ್ರೆ ಅಮ್ಮ-ಮಗು ಇಬ್ಬರಿಗೂ ಕಷ್ಟ ...

click me!