Mangal Vakri 2022: ಮೂರು ರಾಶಿಗಳಿಗೆ ಮಹಾಪುರುಷ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ!

By Suvarna NewsFirst Published Oct 18, 2022, 2:37 PM IST
Highlights

ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಅಕ್ಟೋಬರ್ 30ರಂದು ಹಿಮ್ಮುಖವಾಗಲಿದೆ ಮತ್ತು ಇದರಿಂದ ಮಹಾ ಪುರುಷ ರಾಜಯೋಗ ಸೃಷ್ಟಿಸುತ್ತದೆ. ಈ ಯೋಗವು 3 ರಾಶಿಚಕ್ರ ಚಿಹ್ನೆಗಳಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ತರಲಿದೆ.

ವೈದಿಕ ಜ್ಯೋತಿಷ್ಯದ ಅಡಿಯಲ್ಲಿ ಮಂಗಳವನ್ನು ಕ್ರೂರ ಗ್ರಹಗಳ ವರ್ಗದಲ್ಲಿ ಇರಿಸಲಾಗಿದೆ. ಹಾಗಂಥ ಮಂಗಳವು ಕೇವಲ ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಅರ್ಥವಲ್ಲ, ಆದರೆ ನಿರ್ದಿಷ್ಟ ಜಾತಕಕ್ಕೆ ಅನುಗುಣವಾಗಿ ಮಂಗಳನ ಶುಭ  ಅಶುಭ ಪರಿಣಾಮಗಳು ನಿರ್ಧಾರವಾಗುತ್ತವೆ. ಗ್ರಹಗಳ ಸೈನ್ಯದಲ್ಲಿ, ಮಂಗಳವು ಕಮಾಂಡರ್ ಸ್ಥಾನಮಾನವನ್ನು ಹೊಂದಿದೆ. ಮುಖ್ಯವಾಗಿ ಮಂಗಳವು ನಮ್ಮ ಜೀವನದ ಶಕ್ತಿಯ ಅಂಶವಾಗಿದೆ, ಆದ್ದರಿಂದ ಮಂಗಳವು ವಕ್ರಿಯಾದರೆ, ವ್ಯಕ್ತಿಯು ಬಹಳ ಚಿಂತನಶೀಲವಾಗಿ ನಡೆಯಬೇಕು.

ಅಕ್ಟೋಬರ್ 30ರಂದು, ಮಂಗಳವು ಮಿಥುನ ರಾಶಿಯಲ್ಲಿ ವಕ್ರಿ(Mars Retrograde in Gemini)ಯಾಗಲಿದೆ. ಇದರಿಂದ ಮಹಾಪುರುಷ ರಾಜಯೋಗ(Rajyog) ಸೃಷ್ಟಿಯಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರಗಳು ಮಂಗಳದ ಈ ವಕ್ರಿ ನಡೆಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತವೆ. ಮಹಾಪುರುಷ ರಾಜ ಯೋಗದ ರಚನೆಯೊಂದಿಗೆ, 3 ರಾಶಿಯ ಜನರು ಉತ್ತಮ ಹಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಯಾವ ರಾಶಿಚಕ್ರ ಚಿಹ್ನೆಗಳು ಈ ಪ್ರಯೋಜನ ಪಡೆಯುತ್ತವೆ ಎಂಬುದನ್ನು ಪರಿಶೀಲಿಸೋಣ..

Latest Videos

ವೃಷಭ ರಾಶಿ(Taurus): ಶ್ರೇಷ್ಠ ವ್ಯಕ್ತಿಯಾಗುವ ಮೂಲಕ ಆರ್ಥಿಕವಾಗಿ ಲಾಭ ಪಡೆಯಬಹುದು. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಹಣವನ್ನು ಗಳಿಸಬಹುದು. ಇದರೊಂದಿಗೆ ವಿದೇಶ ಪ್ರವಾಸದ ಅವಕಾಶಗಳೂ ಈ ಸಮಯದಲ್ಲಿ ಸಿಗುತ್ತಿವೆ. ಈ ಸಮಯದಲ್ಲಿ ನೀವು ಸಾಮಾಜಿಕ ಮಟ್ಟದಲ್ಲಿ ಪ್ರತಿಷ್ಠೆಯನ್ನು ಪಡೆಯಬಹುದು. ರಾಜಕೀಯ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು. ವೃಷಭ ರಾಶಿಯ ಉದ್ಯಮಿಗಳು ಪೂರ್ವಿಕರ ವ್ಯವಹಾರದಿಂದ ಲಾಭ ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ನ್ಯಾಯಾಲಯ-ಕೋರ್ಟ್ ಪ್ರಕರಣಗಳಲ್ಲಿಯೂ ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ನೀವು ಓಪಲ್ ಸ್ಟೋನ್ ಅನ್ನು ಧರಿಸಬಹುದು, ಅದು ನಿಮಗೆ ಅದೃಷ್ಟ ಎಂದು ಸಾಬೀತುಪಡಿಸಬಹುದು.

Diwali 2022: 'ನೀರ್ ತುಂಬೋ ಹಬ್ಬ' ಏಕೆ, ಹೇಗೆ, ಯಾವಾಗ?

ಸಿಂಹ ರಾಶಿ(Leo): ರಾಜಯೋಗವು ನಿಮಗೆ ಮಂಗಳಕರವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಅಲ್ಲದೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೂ ಕೈಗೂಡುತ್ತದೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ, ಇದನ್ನು ಪ್ರಶಂಸಿಸಬಹುದು. ಈ ಸಮಯದಲ್ಲಿ, ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ, ಇದರಿಂದ ನೀವು ವೃತ್ತಿ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಮುಟ್ಟಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ಕುಟುಂಬದಲ್ಲಿ ಧಾರ್ಮಿಕ ಅಥವಾ ಮಂಗಳ ಕಾರ್ಯಕ್ರಮವಿರಬಹುದು. ಇದರಿಂದಾಗಿ ಮನೆಯ ಸದಸ್ಯರ ನಡುವೆ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ.

ಕನ್ಯಾ ರಾಶಿ(Virgo): ಮಹಾಪುರುಷ ರಾಜಯೋಗದ ಸೃಷ್ಟಿಯೊಂದಿಗೆ, ಇನ್ನು 13 ದಿನಗಳಲ್ಲಿ ನಿಮ್ಮ ಲಕ್ ತಿರುಗಲಿದೆ. ನೀವು ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಆಶಾದಾಯಕ ಯಶಸ್ಸನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಲು ಮನಸ್ಸು ಮಾಡಬಹುದು. ಅಲ್ಲದೆ, ನಿಮ್ಮ ವೃತ್ತಿಯು ಶಿಕ್ಷಣ ಮತ್ತು ಮಾರ್ಕೆಟಿಂಗ್‌ಗೆ ಸಂಬಂಧಿಸಿದ್ದರೆ, ಈ ಸಮಯವು ನಿಮಗೆ ಉತ್ತಮವಾಗಿದೆ ಎಂದು ಸಾಬೀತುಪಡಿಸಬಹುದು. ಈ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯವೂ ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಷೇರು ಮಾರುಕಟ್ಟೆ, ಊಹಾಪೋಹ ಮತ್ತು ಲಾಟರಿಗಳಲ್ಲಿ ಉತ್ತಮ ಹಣವನ್ನು ಗಳಿಸಬಹುದು. 

Silver Vastu Tips: ಬೆಳ್ಳಿಯಿಂದ ಬಾಳೇ ಬಂಗಾರವಾಗಿಸಿ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!