ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಹಳೇದಾಯಿತು. ಈಗ ಉಂಡು ಮಲಗಿದರೂ ಜಗಳ ಮಾತ್ರ ಮುಗಿಯುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಇದ್ದ ರೊಮ್ಯಾಂಟಿಕ್ ಲೈಫ್ ಈಗಿಲ್ಲ. ಸದಾ ಟೆನ್ಷನ್‌ನಲ್ಲಿರುವ ಗಂಡ ಇತ್ತ ತಿರುಗಿಯೂ ನೋಡಲ್ಲ ಎಂದಿದ್ದರೆ, ಮಹಿಳೆಯರು ಕೆಲವು ಇಂಥ ಟ್ರಿಕ್ ಗಳನ್ನು ಅನುಸರಿಸಬೇಕು. ಹೀಗೆ ಮಾಡಿದಲ್ಲಿ ಗಂಡ-ಹೆಂಡತಿಯ ರೊಮ್ಯಾನ್ಸ್ ಜೀವನ ಪುನಃ ಪ್ರಾರಂಭವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಪತಿ-ಪತ್ನಿ ಎಂದ ಮೇಲೆ ಸಾಮರಸ್ಯ, ರೊಮ್ಯಾಂಟಿಕ್ ಸಂಬಂಧ, ಪ್ರೀತಿ, ಪ್ರಣಯ ಹೀಗೆ ಎಲ್ಲವೂ ಇರಲೇಬೇಕು. ಆದರೆ, ದಿನ ಕಳೆದಂತೆ ಇವುಗಳು ಕ್ಷೀಣವಾಗಿ ಮಾತು ಮಾತಿಗೆ ಜಗಳ, ವೈಮನಸ್ಸು ಹೆಚ್ಚತೊಡಗಿದರೆ ಸಂಬಂಧ ಉಳಿಯುವುದಾದರೂ ಹೇಗೆ..? ಇನ್ನು ರೊಮ್ಯಾನ್ಸ್ ಕಥೆಯನ್ನು ಕೇಳಲೇಬೇಡಿ. ಆದರೆ, ಜ್ಯೋತಿಷ್ಯದ ಪ್ರಕಾರ ಕೆಲವು ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಬಳಸಿದಲ್ಲಿ ರೊಮ್ಯಾಂಟಿಕ್ ಜೀವನ ಮತ್ತೆ ಹಳಿಗೆ ಬರಲಿದೆ ಎಂದು ಹೇಳಲಾಗುತ್ತದೆ.
ಅಂದಹಾಗೆ, ಈ ಉಪಾಯ ಇರುವುದು ಮಹಿಳೆಯರಿಗೋಸ್ಕರ. ಇದನ್ನು ಖುದ್ದು ಮಹಿಳೆಯರೇ ಅನುಸರಿಸಬೇಕಿದ್ದು, ಹಳೇ ಬಾಂಧವ್ಯದಲ್ಲಿ ಅಂದರೆ ಮೊದಲಿನಂತೆ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಹಾಗಾದರೆ ಏನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ…
ಕರ್ಪೂರದ ಉಪಾಯ
ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗುವ ಮುಂಚೆ ಬೆಡ್ ರೂಂನಲ್ಲಿ ಕರ್ಪೂರವನ್ನು ಹಚ್ಚಿ ಇಡಬೇಕು. ಹೀಗೆ ಮಾಡುವುದರಿಂದ ಉದ್ವೇಗ ದೂರವಾಗುವುದಲ್ಲದೆ, ಸುಸ್ತು, ಜಗಳಗಳು ಕಡಿಮೆಯಾಗಿ ರೊಮ್ಯಾಂಟಿಕ್ ರಾತ್ರಿಗಳು ನಿಮ್ಮದಾಗುತ್ತವೆ. ಪತಿ-ಪತ್ನಿ ಸಂಬಂಧದಲ್ಲಿ ನಕಾರಾತ್ಮಕತೆ ಬಂದರೂ ಸಹ ಇದೇ ಇದಕ್ಕೆ ಪರಿಹಾರವಾಗಿದೆ.
ಇದನ್ನು ಓದಿ: ಗಣೇಶ ಚತುರ್ಥಿಯಲ್ಲಿ ಈ ರಾಶಿಯವರಿಗೆ ಇದೆ ಲಾಭ..!
ಮಲಗುವ ಮುಂಚೆ ಇವರ ಮುಖ ನೋಡಿ…
ಮಲಗುವ ಮುಂಚೆ ನಾವು ಯಾರ ಮುಖವನ್ನು ನೋಡಬೇಕು ಎಂಬುದು ಮುಖ್ಯವಾಗುತ್ತದೆ. ಅಂದರೆ, ಮಹಿಳೆಯರು ಮಲಗುವ ಮುಂಚೆ ಮನೆಯ ಹಿರಿಯರು ಯಾರು ಇರುತ್ತಾರೋ ಅವರ ಮುಖವನ್ನು ನೋಡಿದರೆ ಒಳ್ಳೆಯದಾಗುತ್ತದೆ. ಜೊತೆಗೆ ಸುಮಧುರ ದಾಂಪತ್ಯ ಜೀವನವನ್ನು ಪಡೆಯಬಹುದು. ಅಲ್ಲದೆ, ಮನೆಯಲ್ಲೂ ನೆಮ್ಮದಿ ನೆಲೆಸುತ್ತದೆ.
ಮಲಗುವ ಮುಂಚೆ ದೀಪ ಬೆಳಗಿಸಿ
ರಾತ್ರಿ ಮಲಗುವ ಮುಂಚೆ ನಿಮ್ಮ ಮನೆಯ ದಕ್ಷಿಣ ಇಲ್ಲವೇ ಪಶ್ಚಿಮ ಮೂಲೆಯಲ್ಲಿ ದೀಪವನ್ನು ಬೆಳಗಬೇಕು. ಇದು ಧನಾತ್ಮಕ ಅಂಶಗಳನ್ನು ಹೆಚ್ಚಿಸುವುದಲ್ಲದೆ, ಸಂಪನ್ನತೆಯು ನೆಲೆಯೂರಲು ಕಾರಣವಾಗುತ್ತದೆ. ಇದೆಲ್ಲದರ ಜೊತೆಗೆ ದಾಂಪತ್ಯದಲ್ಲಿ ಪ್ರಣಯ ಮೂಡಲೂ ಕಾರಣವಾಗುತ್ತದೆ.
ಇದನ್ನು ಓದಿ: ಮುದ್ದು ಮಗುವಿನ ಮೇಲೆ ಕೆಟ್ಟ ಕಣ್‌ದೃಷ್ಟಿ ತಾಕಿದರೆ ಹೀಗೆ ಮಾಡಿ ..
ಹಾಸಿಗೆಯ ಕೆಳಗೆ ಈ ವಸ್ತುವನ್ನಿಡಿ..!
ಇಲ್ಲಿ ನೀವು ನಿಮ್ಮ ಹಾಸಿಗೆಯ ಕೆಳಗೆ ಗುಟ್ಟಾಗಿ ಈ ವಸ್ತುವನ್ನಿಟ್ಟರೂ ರಾತ್ರಿ ಜೀವನ ರೊಮ್ಯಾಂಟಿಕ್ ಆಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಮಹಿಳೆಯರು ರಾತ್ರಿ ಯಾರಿಗೂ ತಿಳಿಯದಂತೆ ಹಾಸಿಗೆ ಅಡಿಯಲ್ಲಿ ಗಾಜಿನ ಬಾಟಲಿಯಲ್ಲಿ ಜೇನುತುಪ್ಪವನ್ನು ಇಡಬೇಕು. ಇದರಿಂದ ವೈವಾಹಿಕ ಜೀವನದಲ್ಲಿ ಯಾವಾಗಲೂ ಮಧುರತೆಯೇ ತುಂಬಿರುತ್ತದೆ. ಅದರ ಜೊತೆಗೆ ರಾತ್ರಿ ಮಲಗುವಾಗ ಕುಡಿಯುವ ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಇನ್ನೂ ಒಳ್ಳೆಯದು. ಅಲ್ಲದೆ, ಸುಗಂಧ ದ್ರವ್ಯದಲ್ಲಿ ಹತ್ತಿ ನೆನೆಸಿಟ್ಟರೂ ಒಳ್ಳೆಯದು.
ಅಡುಗೆ ಮನೆಯಲ್ಲಿ ಹೀಗೆ ಮಾಡಿ…
ರಾತ್ರಿ ಅಡುಗೆ ಮಾಡಿದ ಮೇಲೆ ಒಲೆಯನ್ನು ಆರಿಸುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕು. ಅಂದರೆ, ಹಾಲಿನ ಸಿಂಪಡಣೆ ಮಾಡುವ ಮೂಲಕ ಒಲೆಯನ್ನು ಆರಿಸಬೇಕು. ದಾಂಪತ್ಯ ಜೀವನದಲ್ಲಿ ನಕಾರಾತ್ಮಕತೆ ದೂರವಾಗುವುದಲ್ಲದೆ, ಕೆಟ್ಟ ದೃಷ್ಟಿ ತಾಕಿದ್ದರೂ ನಿವಾರಣೆಯಾಗುತ್ತದೆ. ಜೊತೆಗೆ ರೊಮ್ಯಾನ್ಸ್ ನಿಮ್ಮದಾಗುತ್ತದೆ.
ಇದನ್ನು ಓದಿ: ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಬಳಿದರೆ ಅದೃಷ್ಟ ಬರುತ್ತೆ…!
ಮಲಗುವ ಮುನ್ನ ಅಡುಗೆ ಮನೆ ಸ್ವಚ್ಛವಾಗಿರಲಿ...
ಊಟ ಮಾಡಿದ ನಂತರ ಮಲಗುವ ಮುಂಚೆ ಅಡುಗೆ ಮನೆಯನ್ನು ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಎಂಜಲು ಪಾತ್ರೆಗಳನ್ನು ಹಾಗೆಯೇ ಇಟ್ಟಿರಕೂಡದು. ಅವುಗಳನ್ನು ತೊಳೆದು ಒಪ್ಪವಾಗಿ ಇಡಬೇಕು. ಹೀಗೆ ಮಾಡದಿದ್ದರೆ ರಾಹುವಿನ ನಕಾರಾತ್ಮಕ ಪ್ರಭಾವ ನಮ್ಮ ಮೇಲೆ ಬೀಳುವುದಲ್ಲದೆ, ದಾಂಪತ್ಯ ಜೀವನದಲ್ಲಿ ಒಡಕು ಮೂಡಿ, ವಿರಸ ಏರ್ಪಡುತ್ತದೆ. ಜೊತೆಗೆ ಇಂತಹ ಮನೆಯಲ್ಲಿ ಲಕ್ಷ್ಮೀ ಸಹ ವಾಸ ಮಾಡಲು ಇಚ್ಛಿಸುವುದಿಲ್ಲ. ಹೀಗಾಗಿ ಎಂಜಲು ಪಾತ್ರೆಗಳನ್ನು ತೊಳೆಯುವುದನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿಕೊಳ್ಳಬೇಕು.