ಚಾಮರಾಜನಗರ: ಗೋಪಿನಾಥಂನಲ್ಲಿ ಸಂಭ್ರಮದ ಮಾರಿಹಬ್ಬ, ಸರಳು ಚುಚ್ಚಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದ ಭಕ್ತರು..!

By Girish Goudar  |  First Published Aug 28, 2024, 11:07 PM IST

ಮೃತ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಕಟ್ಟಿಸಿದ ದೇಗುಲ ಇದಾಗಿದ್ದು, ಇಲ್ಲಿ ಪ್ರತಿವರ್ಷ ಮಾರಿಯಮ್ಮ ಹಬ್ಬ ನಡೆಯುತ್ತದೆ. ಈ ಬಾರಿಯೂ ಹೆಚ್ಚು ಜನರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ್ದಾರೆ. ವೀರಪ್ಪನ್​ನ ಊರಾದ ಗೋಪೀನಾಥಂನಲ್ಲಿ ಕಾಡುಗಳ್ಳನ ನೆನಪು ನೇಪಥ್ಯಕ್ಕೆ ಸರಿಯುತ್ತಿದ್ದರೇ ಅರಣ್ಯಾಧಿಕಾರಿ ಪಿ‌. ಶ್ರೀನಿವಾಸ್ ಅವರ ಸೇವಾ ಕಾರ್ಯವು ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. 

ಚಾಮರಾಜನಗರ(ಆ.28):  ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ವಿಜೃಂಭಣೆಯಿಂದ ಮಾರಿಹಬ್ಬ ನಡೆದಿದೆ. ಭಕ್ತರು ಸರಳು ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಹಲವರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರೇ ಮೂವರು ಬೆನ್ನಿಗೆ ಸರಳು ಚುಚ್ಚಿಕೊಂಡು ನೇತಾಡಿ ಗಿರಗಿಟ್ಲೆಯಂತೆ ಸುತ್ತಿ ಸೇರಿದ್ದ ಭಕ್ತರ ಮೈನವಿರೇಳುವಂತೆ ಮಾಡಿದ್ದಾರೆ. 

ಮೃತ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಕಟ್ಟಿಸಿದ ದೇಗುಲ ಇದಾಗಿದ್ದು, ಇಲ್ಲಿ ಪ್ರತಿವರ್ಷ ಮಾರಿಯಮ್ಮ ಹಬ್ಬ ನಡೆಯುತ್ತದೆ. ಈ ಬಾರಿಯೂ ಹೆಚ್ಚು ಜನರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ್ದಾರೆ. ವೀರಪ್ಪನ್​ನ ಊರಾದ ಗೋಪೀನಾಥಂನಲ್ಲಿ ಕಾಡುಗಳ್ಳನ ನೆನಪು ನೇಪಥ್ಯಕ್ಕೆ ಸರಿಯುತ್ತಿದ್ದರೇ ಅರಣ್ಯಾಧಿಕಾರಿ ಪಿ‌. ಶ್ರೀನಿವಾಸ್ ಅವರ ಸೇವಾ ಕಾರ್ಯವು ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. 

Tap to resize

Latest Videos

undefined

ಉಡುಪಿ ರಥಬೀದಿಯಲ್ಲಿ ಮೇಳೈಸಿದ ಕೃಷ್ಣ ಲೀಲೆ ಉತ್ಸವ..!

ಮಾರಿಯಮ್ಮ ಹಬ್ಬದ ಆಹ್ವಾನ ಪತ್ರಿಕೆಯಲ್ಲೂ ಶ್ರೀನಿವಾಸ್ ಅವರ ಫೋಟೋವನ್ನು ಗ್ರಾಮಸ್ಥರು ಅಚ್ಚು ಹಾಕಿಸುತ್ತಾರೆ. ಇನ್ನು, ಅರಣ್ಯಾಧಿಕಾರಿ ಕೆಲಸವನ್ನು ಮಾದರಿಯಾಗಿ ತೆಗೆದುಕೊಂಡಿರುವ ಗ್ರಾಮದ ಯುವಕರು ಗ್ರೀನ್ ವಾರಿಯರ್ಸ್ ಎಂಬ ತಂಡ ಕಟ್ಟಿಕೊಂಡು ಪಿ.ಶ್ರೀನಿವಾಸ್ ಕಾರ್ಯವನ್ನು‌ ಶಾಶ್ವತಗೊಳಿಸುತ್ತಿದ್ದಾರೆ.

click me!