
Chanaka Niti: ಆರ್ಥಿಕ ತಜ್ಞರಾಗಿರುವ ಆಚಾರ್ಯ ಚಾಣಕ್ಯರು ಮನುಷ್ಯ ಜೀವನದ ಕುರಿತು ಹೇಳಿದ ಮಾತುಗಳನ್ನು ಇಂದು ಚಾಣಕ್ಯ ನೀತಿ ಎಂದು ಕರೆಯಲಾಗುತ್ತದೆ. ಈ ಹಿಂದೆ ಅಚಾರ್ಯ ಚಾಣಕ್ಯರು ಹೇಳಿರುವ ಇಂದಿಗೂ ಅನ್ವಯವಾಗುತ್ತವೆ. ಆರ್ಥಿಕ ವಿಚಾರಗಳೊಂದಿಗೆ ಮಾನವ ವಿಕಸನಕ್ಕೆ ಸಂಬಂಧಿಸಿದ ಗುಣಗಳ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯರು ಹೇಳಿದ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಫಲತೆ ಸಿಗುತ್ತೆ ಎಂದು ಹೇಳಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಚಾಣಕ್ಯರ ನೀತಿ ಶಾಸ್ತ್ರದಲ್ಲಿ ಪುರುಷರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳ ಬಗ್ಗೆ ಹೇಳಲಾಗಿದೆ. ಪುರುಷರ ಈ ಐದು ಗುಣಗಳು, ಸಂಗಾತಿಯನ್ನು ಸಂತೃಪ್ತಿಪಡಿಸಲು ಸಹಾಯ ಮಾಡುತ್ತವೆ. ಮೊದಲ ಪ್ರಯತ್ನದಲ್ಲಿಯೇ ನಿಮಗೆ ಸಂಪೂರ್ಣ ಫಲಿತಾಂಶ ಸಿಗಲಿದೆ.
ಒಂದು ವೇಳೆ ಒಂಟೆಯ ಐದು ಗುಣಗಳನ್ನು ಪುರುಷರು ರೂಢಿಸಿಕೊಂಡ್ರೆ ಆತನ ಸಂಗಾತಿ ಅಥವಾ ಪತ್ನಿ ಯಾವಾಗಲೂ ಸಂತಷ್ಟಳಾಗಿರುತ್ತಾಳೆ. ಇಂತಹ ಗುಣಗಳನ್ನು ಹೊಂದಿರುವ ಪುರುಷರನ್ನ ಮಹಿಳೆಯರು ಇಷ್ಟಪಡುತ್ತಾರೆ. ಈ ಗುಣಗಳನ್ನು ಹೊಂದಿರುವ ಪುರುಷನ ಸಂಸಾರ/ಕುಟುಂಬ ಸದಾ ಸಂತೋಷವಾಗಿರುತ್ತದೆ. ಹಾಗಾದ್ರೆ ಒಂಟೆಯಲ್ಲಿರುವ ಆ ಐದು ಗುಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ. ಈ ಗುಣಗಳು ಪುರುಷನ ಜೀವನವನ್ನೇ ಬದಲಾಯಿಸುತ್ತವೆ ಎಂದು ಹೇಳಲಾಗುತ್ತದೆ.
1.ಆಚಾರ್ಯ ಚಾಣಕ್ಯರ ಪ್ರಕಾರ ಪುರುಷನು ಸಾಧ್ಯವಾದಷ್ಟು ಶ್ರಮವಹಿಸಿ ಕೆಲಸ ಮಾಡಬೇಕು. ಶ್ರಮಕ್ಕೆ ತಕ್ಕಂತೆಯೇ ಪ್ರತಿಫಲ ಸಿಗುತ್ತದೆ. ಶ್ರಮದ ಪ್ರತಿಫಲ ಹಣ ಆಗಿರುತ್ತದೆ. ಆರ್ಥಿಕವಾಗಿ ಸದೃಢವಾದ್ರೆ ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಶ್ರಮದ ಗುಣ ಹೊಂದಿರುವ ಪುರುಷ ಜೀವನದಲ್ಲಿ ಯಶಸ್ಸು ಕಾಣುತ್ತಾನೆ.
2.ಆಚಾರ್ಯ ಚಾಣಕ್ಯ ನೀತಿ ಪ್ರಕಾರ, ಒಂಟೆ ಗಾಢ ನಿದ್ದಯಲ್ಲಿದ್ರೂ ಸದಾ ಅಲರ್ಟ್ ಆಗಿರುತ್ತದೆ. ಅದೇ ರೀತಿ ಪುರುಷನು ಸದಾ ಕುಟುಂಬ ಮತ್ತು ಕರ್ತವ್ಯದ ಬಗ್ಗೆ ಜಾಗೃತನಾಗಿರಬೇಕು. ಪುರುಷನ ಮೇಲೆ ಕುಟುಂಬದ ರಕ್ಷಣೆಯ ಜವಾಬ್ದಾರಿ ಇರುತ್ತದೆ. ಹಾಗಾಗಿ ಕುಟುಂಬ ಸದಸ್ಯರ ಕಾಳಜಿಯನ್ನು ತೆಗೆದುಕೊಳ್ಳುವ ಪುರುಷನ ಈ ಗುಣಕ್ಕೆ ಸಂಗಾತಿ ಖುಷಿಯಾಗುತ್ತಾಳೆ.
3.ಒಂಟೆಯ ನಿಷ್ಠೆಯನ್ನು ಅನುಮಾನಿಸಬಾರದು ಎಂಬ ಮಾತಿದೆ. ಒಂಟೆ ತನ್ನ ಮಾಲೀಕನಿಗೆ ಸದಾ ಪ್ರಾಮಾಣಿಕವಾಗಿರುತ್ತದೆ. ಇದೇ ರೀತಿ ಪುರುಷನು ತನ್ನ ಪತ್ನಿಗೆ ಪ್ರಾಮಾಣಿಕನಾಗಿರಬೇಕು. ಅನ್ಯ ಮಹಿಳೆಯರ ಜೊತೆ ಯಾವುದೇ ಅನೈತಿಕ ಸಂಬಂಧವನ್ನು ಇರಿಸ್ಕೊಂಡು ಪತ್ನಿಗೆ ಮೋಸ ಮಾಡಬಾರದು. ಪ್ರಾಮಾಣಿಕ ಪತಿಯಿಂದ ಸಂಗಾತಿ ಸಂತೃಪ್ತಿ ಹೊಂದಿರುತ್ತಾಳೆ.
ವೇಶ್ಯೆಯರು ಇವರನ್ನು ಶತ್ರುಗಳಂತೆ ಕಾಣ್ತಾರೆ; ಯಾಕೆ ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ವಿವರ
4.ಒಂಟೆ ಧೈರ್ಯಶಾಲಿ ಪ್ರಾಣಿ. ಅದೇ ರೀತಿ ಪುರುಷರು ಧೈರ್ಯಶಾಲಿಯಾಗಿ ಜೀವನದಲ್ಲಿ ಬರೋ ಸವಾಲುಗಳನ್ನು ಎದುರಿಸುವ ಗುಣ ಹೊಂದಿರಬೇಕು. ಪತ್ನಿ ಹಾಗೂ ಮಕ್ಕಳನ್ನು ರಕ್ಷಣೆ ಮಾಡುವ ವೀರ ಗುಣವನ್ನು ಪುರುಷ ಹೊಂದಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
5.ಚಾಣಕ್ಯ ನೀತಿ ಪ್ರಕಾರ, ಪುರುಷನು ತನ್ನ ಪತ್ನಿಯನ್ನು ಎಲ್ಲಾ ವಿಧದಿಂದಲೂ ಖುಷಿಯಾಗಿರಿಸಲು ಪ್ರಯತ್ನಿಸಬೇಕು. ಹೆಣ್ಣು ತನ್ನ ಸಂಗಾತಿಯಿಂದ ದೈಹಿಕ ಮತ್ತು ಮಾನಸಿಕವಾಗಿ ತೃಪ್ತಿ ಹೊಂದಲು ಬಯಸುತ್ತಾಳೆ. ಹಾಗಾಗಿ ಸಂಗಾತಿಯನ್ನು ಹೊಂದಿರುವ ಪುರುಷನ ಮೊದಲ ಜವಾಬ್ದಾರಿ ಇದಾಗಿರುತ್ತದೆ. ಪುರುಷ ಪತ್ನಿಗಾಗಿ ಸಮಯ ಮೀಸಲಿಡುವ ಗುಣ ಹೊಂದರಬೇಕು. ಹೀಗಾದ್ರೆ ಸಂಗಾತಿ ಖುಷಿಯಾಗಿರುತ್ತಾಳೆ.
ವೀರ್ಯ ಹೆಚ್ಚಳಕ್ಕೆ ಏನು ತಿನ್ನಬೇಕು ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ಔಷಧ