ಮಂತ್ರಾಲಯದಲ್ಲಿ ರಾಯರ 428ನೇ ವರ್ಧಂತ್ಯುತ್ಸವ: ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ

By Kannadaprabha News  |  First Published Feb 27, 2023, 10:40 AM IST

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ಕೊನೆ ದಿನ ರಾಯರ ವರ್ಧಂತೋತ್ಸವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನು​ವಾರ ಅದ್ಧೂರಿ​ಯಾಗಿ ನಡೆ​ದವು. 


ರಾಯಚೂರು (ಫೆ.27): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ಕೊನೆ ದಿನ ರಾಯರ ವರ್ಧಂತೋತ್ಸವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನು​ವಾರ ಅದ್ಧೂರಿ​ಯಾಗಿ ನಡೆ​ದವು. ಕಲಿಯುಗ ಕಲ್ಪತರು ಶ್ರೀಗುರುರಾಯರ 428ನೇ ವರ್ಧಂತಿ ನಿಮಿತ್ತ ನಸುಕಿಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ ಸೇವೆ, ವಿದ್ವಾಂಸದಿಂದ ಪ್ರವಚನ, ಶ್ರೀಗುರುರಾಯರ ಮೂಲ ಬೃಂದಾವನಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಪಂಚಾಮೃತ ಅಭಿಷೇಕ ನೆರವೇರಿಸಿದರು. ಇದೇ ವೇಳೆ ತಿರುಮಲ ತಿರುಪತಿ ದೇವಸ್ಥಾನದಿಂದ ತರ​ಲಾ​ಗಿ​ದ್ದ ಶೇಷವಸ್ತ್ರವನ್ನು ಮಠದ ಮುಖ್ಯದ್ವಾರದಿಂದ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಮೊದಲಿಗೆ ಗ್ರಾಮದೇವತೆ ಮಂಚಾಲಮ್ಮದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಮಠದ ಪ್ರಾಕಾರದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಹರಿನಾಥ ಶೇಷವಸ್ತ್ರಗಳನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ನಂತರ ವೆಂಕಟೇಶ್ವರ ದೇವರ ಶೇಷ ವಸ್ತ್ರವನ್ನು ತಲೆ ಮೇಲೆ ಇರಿಸಿಕೊಂಡು ಪ್ರದಕ್ಷಣೆ ಹಾಕಿ ಶ್ರೀಗು​ರು​ರಾ​ಯರ ಮೂಲ ಬೃಂದಾನದ ಮುಂದೆಯಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಭಕ್ತ​ರ​ನ್ನು​ದ್ದೇ​ಶಿಸಿ ಅನು​ಗ್ರಹ ಸಂದೇಶ ನೀಡಿದ ಶ್ರೀಗಳು, ಮ​ಠದಲ್ಲಿ ನಡೆ​ಯುವ ರಾಯರ ಆರಾ​ಧ​ನೆ,​ ವ​ರ್ಧಂತೋ​ತ್ಸವ ಸೇರಿ ವಿಶೇಷ ದಿನ​ಗ​ಳಲ್ಲಿ ತಿರು​ಮಲ ತಿರು​ಪತಿ ದೇವ​ಸ್ಥಾ​ನ​ದಿಂದ ಶ್ರೀವೆಂಕ​ಟೇ​ಶ್ವರ ದೇವರ ಆಶೀ​ರ್ವಾ​ದದ ರೂಪ​ದಲ್ಲಿ ಶೇಷ​ವ​ಸ್ತ್ರ​ ಪ್ರ​ಸಾ​ದ ಬರು​ತ್ತಿದೆ. ಈ ವೇಳೆ ಭಕ್ತ​ರು ರಾಯರ ದರ್ಶನ ಪಡೆ​ಯು​ವು​ದರ ಜೊತೆಗೆ ವೆಂಕ​ಟೇ​ಶ್ವರ ದೇವ​ರ ಆಶೀ​ರ್ವಾ​ದ​ವನ್ನು ಪಡೆ​ಯ​ಬ​ಹು​ದಾ​ಗಿದೆ ಎಂ​ದ​ರು.

Latest Videos

undefined

ನಮ್ಮ ತಂದೆಗೆ ವಯಸ್ಸಾಗಿಲ್ಲ, ಇನ್ನು 25ರ ಚಿರಯುವಕನಂತೆ ಕೆಲಸ ಮಾಡುತ್ತಾರೆ: ಬಿಎಸ್‌ವೈ ಪುತ್ರಿ ಅರುಣಾದೇವಿ

ವರ್ಧಂತೋತ್ಸವ ಹಿನ್ನೆಲೆಯಲ್ಲಿ ಶ್ರೀಗಳು ಮೂಲ ರಾಮದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಿದರು. ಬಳಿಕ ಶ್ರೀಮಠದ ಪ್ರಾಕಾರದಲ್ಲಿ ನವರತ್ನ ಖಚಿತ ರಥದಲ್ಲಿ ರಾಯರ ರಜತ ಪ್ರತೀಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಯರ ವರ್ಧಂತಿ ದಿನ ನಡೆಯುವ ನಾದಹಾರ ಕಾರ್ಯಕ್ರಮ ವಿಶೇಷವಾಗಿದ್ದು, ಇದಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರ ಟ್ರಸ್ಟ್‌ನ 350 ಕಲಾವಿದರು ಏಕಕಾಲದಲ್ಲಿ ಗಾಯನ, ವಿವಿಧ ವಾದ್ಯಗಳನ್ನು ನುಡಿಸುವುದರ ಮೂಲಕ ರಾಯರ ಸ್ಮರಣೆಯನ್ನು ಮಾಡಿ ರಾಯರಿಗೆ ಸಂಗೀತ ಸೇವೆಯನ್ನು ಸಮರ್ಪಿಸಿದರು. ಈ ಸಂದ​ರ್ಭ​ದಲ್ಲಿ ಶ್ರೀಮ​ಠದ ಪಂಡಿತ ಕೇಸರಿ ರಾಜಾ ಎಸ್‌.ಗಿರಿರಾಜಾ ಆಚಾರ್‌, ಕಾರ್ಯನಿರ್ವಾಹಕ ಅಧಿಕಾರಿ ಹರಿನಾಥ, ಧರ್ಮಾ​ರೆ​ಡ್ಡಿ,​ ಸು​ಬ್ಬಾ​ರೆ​ಡ್ಡಿ, ವ್ಯವಸ್ಥಾಪಕ ಎಸ್‌.ಕೆ ಶ್ರೀನಿವಾಸರಾವ್‌ ಸೇರಿದಂತೆ ಪಂಡಿ​ತ​ರು, ​ವಿ​ದ್ವಾಂಸ​ರು, ​ಆಡ​ಳಿ​ತಾ​ಧಿ​ಕಾ​ರಿ​ಗಳು, ಸಿಬ್ಬಂದಿ, ಭ​ಕ್ತ ಸಮು​ದಾ​ಯವು ಭಾಗ​ವ​ಹಿ​ಸಿತ್ತು.

ಮೋದಿ, ಶಾ ಬಂದಾಗಲೆಲ್ಲಾ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ಉದ್ಘಾಟನೆ: ಸಿಎಂ ಬೊಮ್ಮಾಯಿ

ಧ​ರ್ಮ​ದಲ್ಲಿ ರಾಜ​ಕೀಯ ಬೇಡ: ರಾಜ​ಕೀ​ಯ​ದಲ್ಲಿ ಧರ್ಮ ಬರ​ಬೇಕು. ಆದ​ರೆ, ಧರ್ಮ​ದಲ್ಲಿ ರಾಜ​ಕೀಯ ಬರ​ಬಾ​ರ​ದು ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದರು. ಶ್ರೀಮ​ಠ​ದಲ್ಲಿ ಭಾನು​ವಾರ ಮಾತ​ನಾಡಿ, ರಾಜ​ಕೀ​ಯಕ್ಕೆ ಇಂಥ​ವರೇ ಬರ​ಬೇಕು, ಇಂಥ​ವರು ಬರ​ಬಾ​ರದು ಎಂಬು​ವು​ದಿಲ್ಲ, ಜನ​ಪರ ಕಾಳಜಿ, ಸಮಾಜ ಸೇವೆಯ ಮನೋ​ಭಾ​ವ​ನೆ​ ಹೊಂದಿ​ರು​ವ​ವರು ಯಾರೇ ಇರಲಿ ಅವ​ರು ರಾಜ​ಕೀ​ಯಕ್ಕೆ ಬರ​ಬ​ಹುದು ಎಂದ​ರು. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮವಿದ್ದರೆ ಅದು ಉತ್ತಮವಾದ ಗುಣಮಟ್ಟದ ಆಡಳಿತ ವ್ಯವಸ್ಥೆ ನೀಡಲು ಸಹಕಾರಿಯಾಗುತ್ತದೆ. ಉತ್ತರ ಪ್ರದೇಶದಂತೆ ಕರ್ನಾ​ಟಕ ರಾಜ್ಯದಲ್ಲೂ ಬಿಜೆಪಿಯಿಂದ ಸಂತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತ ವಿಷಯಕ್ಕೆ ಸಂಬಂಧಿ​ಸಿದಂತೆ ಶ್ರೀಗಳು ಈ ರೀತಿ​ಯಾ​ಗಿ ಪ್ರತಿಕ್ರಿಯೆ ನೀಡಿ​ದರು.

click me!