ವಿಷ್ಣುವಿನ ಅವತಾರಗಳು ಹೇಳಿ ಕೊಡೋ ಮೂರು Management Lessons

By Suvarna NewsFirst Published Jan 10, 2022, 1:06 PM IST
Highlights

ವಿಷ್ಣು ತಾಳಿದ ಎಲ್ಲ ಅವತಾರಗಳಲ್ಲೂ ಸಾಕಷ್ಟು ಮ್ಯಾನೇಜ್‌ಮೆಂಟ್ ಪಾಠಗಳಿವೆ. ಅವು ಇಂದಿಗೂ ಪ್ರಸ್ತುತವಾಗಿವೆ. 

ಕೃಷ್ಣ, ರಾಮ ಸೇರಿದಂತೆ ವಿಷ್ಣುವಿನ ಪ್ರತಿ ಅವತಾರದಲ್ಲೂ ಇಂದಿನ ಜಗತ್ತಿಗೆ ಸಾಕಷ್ಟು ರೀತಿಯ ಪಾಠಗಳು ದೊರೆಯುತ್ತವೆ. ಕೇವಲ ಉದ್ಯಮದ ವಿಷಯಕ್ಕೆ ಬಂದರೆ ಮಾರ್ಕೆಟಿಂಗ್, ಲೀಡರ್‌ಶಿಪ್ ಸೇರಿದಂತೆ ಹಲವಾರು ರೀತಿಯ ಮ್ಯಾನೇಜ್‌ಮೆಂಟ್ ಪಾಠಗಳನ್ನು ವಿಷ್ಣು(Lord Vishnu)ವಿನ ಜೀವನದಿಂದ ಕಲಿಯಬಹುದು. ಇವು ಆಧುನಿಕ ಎಕ್ಸಿಕ್ಯೂಟಿವ್‌ನ ಹಲವು ಧರ್ಮಸಂಕಟಗಳನ್ನು ನಿವಾರಿಸುತ್ತದೆ. ಅಂಥದರಲ್ಲಿ ಆಯ್ದ ಮೂರು ಪಾಠಗಳನ್ನು ಪುರಾಣಗಳಿಂದ ಎಳೆದು ಬಿಸ್ನೆಸ್‌ಗೆ ತರಲಾಗಿದೆ. ಅವುಗಳತ್ತ ಕಣ್ಣು ಹಾಯಿಸಿ. ನಿಮ್ಮ ಉದ್ಯಮಕ್ಕೆ ಖಂಡಿತಾ ನೆರವಿಗೆ ಬರುತ್ತವೆ. 

ಧರ್ಮಕ್ಕಾಗಿ ನಿಯಮ ಮುರಿಯುವುದು
ನಾರದರ ಬಳಿ ಟೈಂ ಮೆಶಿನ್ ಇರುತ್ತದೆ. ಅವರು ಒಂದೇ ಕಾಲಕ್ಕೆ ಬೇರೆ ಬೇರೆ ಯುಗಕ್ಕೆ ಹೋಗಿ ಬರಬಲ್ಲರು. ಒಮ್ಮೆ ಅವರು ಎಲ್ಲ ನಿಯಮಗಳನ್ನು ಅನುಸರಿಸುವ ರಾಮನಗರಿ ಅಯೋಧ್ಯೆ(Ayodhye)ಗೂ, ನಿಯಮಗಳನ್ನು ಮುರಿಯುತ್ತಲೇ ಪ್ರಜೆಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ದ್ವಾಪರ ಯುಗದ ಕೃಷ್ಣನಗರಿ ಮಥುರಾ(Mathura)ಕ್ಕೂ ಭೇಟಿ ನೀಡಿದರು. ಅಯೋಧ್ಯೆಯ ಜನರಿಗೆ ನಿಯಮ ಫಾಲೋ ಮಾಡದ ಕೃಷ್ಣ ರಾಜನಾಗಿ ಇಷ್ಟವಾಗಲಿಲ್ಲ. ಮಥುರಾ ಜನರಿಗೆ ಅತಿಯಾಗಿ ನಿಯಮಪಾಲನೆ ಮಾಡಲು ಹೇಳುವ ರಾಮನ ಆಡಳಿತ ಇಷ್ಟವಾಗಲಿಲ್ಲ. ನಾರದರು ಈಗ ಆಂಜನೇಯನ ಬಳಿ ಈ ಬಗ್ಗೆ ಪ್ರಶ್ನಿಸಿದರು. ಅದಕ್ಕವನೆಂದ- ನನಗೆ ರಾಮ ಹಾಗೂ ಕೃಷ್ಣ ಇಬ್ಬರಲ್ಲೂ ವಿಷ್ಣುವೇ ಕಾಣುತ್ತಾನೆ. ಹಾಗಾಗಿ ಇಬ್ಬರೂ ಸರಿಯೇ. 
ಕೃಷ್ಣ ನಿಯಮ ಮುರಿದರೂ ಸಮಾಜದ ಸ್ವಾಸ್ಥ್ಯ ಹದಗೆಡಲು ಬಿಡುವುದಿಲ್ಲ. ಧರ್ಮವನ್ನು ಎತ್ತಿ ಹಿಡಿಯುತ್ತಲೇ ತುಂಟತನದಿಂದ ಪ್ರಜೆಗಳನ್ನು ನಡೆಸಿಕೊಂಡು ಹೋಗುವವ ಆತ. ಹಾಗಾಗಿ, ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಕೂಡಾ ಹಾಗೆ, ರಾಮ ಆದರೂ ಸರಿ, ಕೃಷ್ಣ ಆದರೂ ಸರಿ, ಯಾಕಾಗಿ ನಿಯಮ(rules) ಎತ್ತಿ ಹಿಡಿಯಬೇಕು, ಯಾತಕ್ಕಾಗಿ ಮುರಿಯಬೇಕು ಎಂಬ ಪ್ರಜ್ಞೆ ಇರಬೇಕು. ಒಟ್ಟಿನಲ್ಲಿ ಕಂಪನಿಯ ಸ್ವಾಸ್ಥ್ಯ ಕಾಪಾಡಬೇಕು ಅಷ್ಟೇ. 

Past Life: ಹಿಂದಿನ ಜನ್ಮದಲ್ಲಿ ನೀವೇನಾಗಿದ್ದಿರಿ ಅಂತ ತಿಳ್ಕೋಬೇಕಾ?

ರುಕ್ಮಿಣಿಯ ಕತೆ
ಒಮ್ಮೆ ನಾರದರು ತೂಕದ ಸ್ಕೇಲ್‌ನಲ್ಲಿ ಒಂದು ಕಡೆ ಕೃಷ್ಣನನ್ನು ಕೂರಿಸಿದರು. ಮತ್ತೊಂದು ಕಡೆ ಅವನಿಗಿಂತ ಹೆಚ್ಚು ಭಾರವಾದುದನ್ನು, ಅಂದರೆ ಮೌಲ್ಯಯುತ(valuable)ವಾದುದನ್ನು ಹಾಕಲು ಆತನ ಪತ್ನಿಯರಿಗೆ ಹೇಳಿದರು. ಸತ್ಯಭಾಮ ಬಂಗಾರ, ವಜ್ರದ ಒಡವೆಗಳನ್ನು ಹಾಕಿದಳು. ಆದರೆ, ತೂಕ(weight) ಹೆಚ್ಚಲಿಲ್ಲ, ರುಕ್ಮಿಣಿ ತುಳಸಿ ಎಲೆಯೊಂದನ್ನು ಹಾಕಿದಳು. ಆಗ ಕೃಷ್ಣ ಮೇಲೆ ಹೋದ. ತುಳಸಿ ಎಲೆ ಇರುವ ಕಡೆ ಸ್ಕೇಲ್ ಕೆಳಗೆ ಬಂತು. ಅಂದರೆ, ರುಕ್ಮಿಣಿಯ ಪ್ರೀತಿ ಹೆಚ್ಚು ಮೌಲ್ಯಯುತದ್ದಾಗಿದ್ದಿತು. 
ಇದರಲ್ಲಿ ಮಾರ್ಕೆಟಿಂಗ್ ಪಾಠವಿದೆ. ವಸ್ತುವಿನ ಬೆಲೆಯು ಬ್ರ್ಯಾಂಡ್(brand) ಆಧಾರದ ಮೇಲೆ ಮೌಲ್ಯ ಪಡೆದುಕೊಳ್ಳುತ್ತದೆ. ವಸ್ತುವನ್ನು ಬ್ರ್ಯಾಂಡ್ ಆಗಿ ಬದಲಿಸಿದರೆ ಅದರ ಮೌಲ್ಯ ಸಾಕಷ್ಟು ಪಟ್ಟು ಹೆಚ್ಚುತ್ತದೆ. ಆದರೆ, ಅದರ ಮೌಲ್ಯ ಗೊತ್ತಿರುವವರ ಸಂಖ್ಯೆ ಹೆಚ್ಚಿಸುವ ಕೆಲಸ ಮಾರ್ಕೆಟಿಂಗ್(Marketing) ಕ್ಷೇತ್ರದಲ್ಲಿರುವವರು ಮಾಡಬೇಕು. ಜನರ ಯೋಚನೆಗಳನ್ನೇ ವಸ್ತುವಾಗಿಸಿ, ಅದಕ್ಕೆ ಮೌಲ್ಯ ಕೊಡುವ ಗುಣ ಅವರು ಪಡೆದುಕೊಳ್ಳಬೇಕು.

Vastu For Career: ವೃತ್ತಿಯಲ್ಲಿ ಹಿಂದೆಂದೂ ಕಂಡಿರದ ಏಳ್ಗೆ ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ..

ಧರ್ಮಸಂಕಟ
ಕೃಷ್ಣನು ತನ್ನ ಬಾಲ್ಯವನ್ನು ವೃಂದಾವನದಲ್ಲಿ ಕಳೆಯುತ್ತಾನೆ. ನಂತರ ಹರೆಯದಲ್ಲಿ ಮಥುರಾಕ್ಕೆ ಹೋಗುತ್ತಾನೆ. ಈ ಸಂದರ್ಭದಲ್ಲಿ ಹಾಲು ಮಾರುವವರು, ಗೋಪಾಲಕರು, ಯಶೋಧೆ, ರಾಧೆ ಸೇರಿದಂತೆ ಎಲ್ಲ ಹಳೆಯ ಬಾಂದವ್ಯಗಳನ್ನು ಸಂಪೂರ್ಣ ಕಳಚಿಕೊಂಡು ಹೋಗುತ್ತಾನೆ. ಅದು ಅವನ ಯೌವನದ ಆರಂಭ. ಸಾಮಾನ್ಯವಾಗಿ ಕುಟುಂಬದ ವ್ಯವಹಾರ ಮುಂದುವರಿಸಿಕೊಂಡು ಹೋಗುವ ಯುವಕರಿಗೆ ಧರ್ಮಸಂಕಟವೊಂದು ಎದುರಾಗುತ್ತದೆ. ಕಂಪನಿಯಲ್ಲಿರುವ ಎಲ್ಲರೂ ತಂದೆಯ ಸ್ನೇಹಿತರು, ಅವರು ನೀವು ಬೆಳೆಯುವದನ್ನು ನೋಡಿಕೊಂಡು ಬಂದಿರುತ್ತಾರೆ. ಅವರನ್ನು ಕ್ರೂರವಾಗಿ ನಡೆಸಿಕೊಂಡು ಹೊರ ಹಾಕಲು ಸಾಧ್ಯವಾಗುವುದಿಲ್ಲ, ನಿಮ್ಮ ಹೊಸ ಯೋಚನೆಗಳು(thoughts) ಹಳಬರಿಗೆ ಸರಿಯಾಗಿ ಅರ್ಥವಾಗುವುದಿಲ್ಲ. ಈಗ ಹೊಸ ಸಾಹಸಕ್ಕಾಗಿ ಕೃಷ್ಣನಂತೆ ಹಳಬರಿಂದ ಸಂಪೂರ್ಣ ಸಂಬಂಧ ಕಳಚಿಕೊಳ್ಳಬೇಕು. ಹಾಗೆಂದು ಅವರ ಮನಸ್ಸಿಗೆ ನೋವು ಮಾಡಬೇಕಂತಿಲ್ಲ. ನೀವು ನಿಮ್ಮ ವೃತ್ತಿ ಜೀವನದ ಸೂರ್ಯೋದಯದಲ್ಲಿದ್ದರೆ, ಅವರೆಲ್ಲ ಸೂರ್ಯಾಸ್ತದ ಸಂದರ್ಭದಲ್ಲಿದ್ದಾರೆ. ಅವರನ್ನು ಚೆನ್ನಾಗಿ ನಡೆಸಿಕೊಂಡೇ ಗುಡ್‌ಬೈ ಹೇಳಿ. ನಿಮ್ಮ ಹೊಸ ದಾರಿಗಳು ಅವರೆಲ್ಲರ ಯೋಚನೆಗಳಿಗಿಂತ ಭಿನ್ನವಾಗಿವೆ ಎಂಬುದನ್ನು ನಿರೂಪಿಸಿ. 

click me!