Past Life: ಹಿಂದಿನ ಜನ್ಮದಲ್ಲಿ ನೀವೇನಾಗಿದ್ದಿರಿ ಅಂತ ತಿಳ್ಕೋಬೇಕಾ?

By Suvarna News  |  First Published Jan 10, 2022, 11:35 AM IST

ಪುನರ್ಜನ್ಮ ವಿಷಯವೇ ಕುತೂಹಲಕಾರಿ. ನಾವು ಹಿಂದಿನ ಜನ್ಮದಲ್ಲಿ ಏನಾಗಿದ್ದಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?


ನಮ್ಮ ಧಾರ್ಮಿಕ ನಂಬಿಕೆಯಲ್ಲಿ ಪುನರ್ಜನ್ಮ(Reincarnation) ಎಂಬುದಿದೆ. ನಮ್ಮ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿಯೇ ಈ ಜನ್ಮದಲ್ಲಿ ಈಗೇನಾಗಿದ್ದೀವೋ ಅದಾಗಲು ಸಾಧ್ಯವಾಗಿದೆ. ನಮ್ಮ ಇಂದಿನ ಹಣೆಬರಹಕ್ಕೆಲ್ಲ ಹಿಂದಿನ ಜನ್ಮದ ಕರ್ಮವೇ ಕಾರಣ ಎನ್ನಲಾಗುತ್ತದೆ. 

ಹಾಗಾದರೆ ಹಿಂದಿನ ಜನ್ಮದಲ್ಲಿ ನೀವೇನಾಗಿದ್ದಿರಿ ಎಂಬ ಕುತೂಹಲ ಇದೆಯೇ? ಆದ್ರೆ ಹಿಪ್ನೋಸಿ‌ಸ್(hypnosis) ಎಲ್ಲ ಮಾಡುಸ್ಕೊಳೋಕೆ ಧೈರ್ಯನೂ ಇಲ್ಲ, ದುಡ್ಡೂ ಇಲ್ಲ ಅಲ್ವಾ? ಹೋಗ್ಲಿ ಬಿಡಿ, ರಾಶಿ ಆಧಾರದ ಮೇಲೆ ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ದಿರಿ ಎಂಬುದನ್ನು ನಾವು ಹೇಳುತ್ತೇವೆ. 

Tap to resize

Latest Videos

undefined

ಮೇಷ(Aries): ಹಿಂದಿನ ಜನ್ಮದಲ್ಲಿ ನೀವು ಆಧ್ಯಾತ್ಮದಲ್ಲಿ ಒಲವು ಹೊಂದಿದವರಾಗಿದ್ದಿರಿ. ಜೊತೆಗೆ ಕೊಂಚ ನಿಗೂಢ ವ್ಯಕ್ತಿತ್ವ ಹೊಂದಿದ್ದಿರಿ. ಕವಿಯಂತೆ ಪ್ರಕೃತಿ ಪ್ರೇಮ ಹೊಂದಿದ್ದಿರಿ. ಹೆಚ್ಚು ಪ್ರೀತಿ ಹಂಚುವವರಾಗಿದ್ದಿರಿ. 

ವೃಷಭ(Taurus): ನೀವು ಒಳ್ಳೆಯ ಹೋರಾಟಗಾರರಾಗಿದ್ದಿರಿ. ಯಾವುದಕ್ಕೂ ಹೆದರದ ಕೊಂಚ ಮುಂಗೋಪದ ವ್ಯಕ್ತಿತ್ವ ನಿಮ್ಮದಾಗಿತ್ತು. ನಾಯಕತ್ವ ಗುಣಗಳನ್ನು ಹೊಂದಿದ್ದಿರಿ. ಎಷ್ಟೇ ಕಷ್ಟ ಇರಲಿ, ಏನೇ ಫಲಿತಾಂಶ ಇರಲಿ, ಯಾವುದು ಸರಿಯೋ ಅದಕ್ಕಾಗಿ ಹೋರಾಡುವ ಮನೋಭಾವ ನಿಮ್ಮದಾಗಿತ್ತು. 

ಮಿಥುನ(Gemini): ನೀವು ಉದ್ಯಮಿಯಾಗಿದ್ದು, ಪೂರ್ತಿ ಲಾಭದ ಕಡೆಗೇ ಗಮನ ಉಳ್ಳವರಾಗಿದ್ದಿರಿ. ಹಣಕ್ಕಾಗಿ ಸಣ್ಣಪುಟ್ಟ ಮೋಸಗಳನ್ನು ಮಾಡುತ್ತಿದ್ದಿರಿ. ನಿಮ್ಮ ಕಂಫರ್ಟ್ ಹಾಗೂ ಸುಖದ ಕಡೆ ಸಂಪೂರ್ಣ ಗಮನ  ಹರಿಸಿದ್ದಿರಿ. 

ಕಟಕ(Cancer): ನೀವು ಹೆಚ್ಚು ಬುದ್ಧಿವಂತರಾಗಿದ್ದಿರಿ. ನಿಮ್ಮ ಕುತೂಹಲದ ಕಾರಣದಿಂದಾಗಿ ಹೆಚ್ಚು ಕಲಿಯುತ್ತಲೇ ಸಾಗಿದ್ದಿರಿ. ಬರವಣಿಗೆ ನಿಮಗೆ ಒಲಿದಿತ್ತು. 

ಸಿಂಹ(Leo): ನಿಮ್ಮದು ಮಾತೃಹೃದಯವಾಗಿತ್ತು. ಎಲ್ಲರನ್ನೂ ತುಂಬಾ ಕಾಳಜಿ, ಪ್ರೀತಿಯಿಂದ ನೋಡುತ್ತಿದ್ದ ನೀವು ಹೆಚ್ಚಿನ ಪಕ್ಷ ದಾದಿ ವೃತ್ತಿ ಮಾಡುತ್ತಿದ್ದಿರಿ. 

ಕನ್ಯಾ(Virgo): ಸ್ವಾಭಿಮಾನವು ಯಾವಾಗಲೂ ನಿಮ್ಮದೇ ಸ್ವತ್ತು. ಹಿಂದಿನ ಜನ್ಮದಲ್ಲೂ ಇದೇನು ಕಡಿಮೆ ಇರಲಿಲ್ಲ. ಆದರೂ, ನಿಮ್ಮ ರಾಜನಂತ ವ್ಯಕ್ತಿತ್ವದ ಕಾರಣಕ್ಕೆ ಜನ ನಿಮ್ಮನ್ನು ಮೆಚ್ಚುತ್ತಿದ್ದರು. ಒಮ್ಮೊಮ್ಮೆ ದುರಭಿಮಾನ ಎನಿಸಿಕೊಂಡರೂ ಅದರಿಂದ ನಿಮಗೆ ಖಾಸಗಿಯಾಗಿ ಅಂಥದ್ದೇನೂ ತೊಂದರೆಯಾಗಿಲ್ಲ.

Saturn Effect: ನಿಮ್ಮ ರಾಶಿಗೆ ಶನಿ ಎಂಟ್ರಿ ಕೊಟ್ರೆ ಏನಾಗತ್ತೆ?

ತುಲಾ(Libra): ಖಂಡಿತವಾಗಿ ನೀವು ಮತ್ತೊಬ್ಬರ ನೋವು, ಅನಾರೋಗ್ಯಗಳನ್ನು ಶಮನ ಮಾಡುವವರಾಗಿದ್ದಿರಿ. ಬಹುಷಃ ಆಯುರ್ವೇದ(Ayurveda) ಔಷಧ ತಜ್ಞರಾಗಿದ್ದಿರಿ. ನಿಮ್ಮದು ತ್ಯಾಗಮಯಿ ಸ್ವಭಾವವಾಗಿದ್ದು, ಹಲವರು ನಿಮ್ಮಿಂದ ಪ್ರಯೋಜನ ಪಡೆದುಕೊಂಡಿದ್ದರು. 

ವೃಶ್ಚಿಕ(Scorpio): ಈಗಿನ ಬದುಕಿಗೂ ಹಿಂದಿನದಕ್ಕೂ ಸ್ವಲ್ಪವೂ ಸಂಬಂಧವಿಲ್ಲ ಎಂಬ ಸ್ಥಿತಿ ನಿಮ್ಮದು. ಹೆಚ್ಚಿನ ಪಕ್ಷ ನೀವು ಕಲಾವಿದರಾಗಿದ್ದಿರಿ. ಕಲೆ, ಪರಿಸರ, ಸೌಂದರ್ಯಗಳು ನಿಮ್ಮನ್ನು ಹೆಚ್ಚಾಗಿ ಸೆಳೆಯುತ್ತಿದ್ದವು. ನಿಮ್ಮ ಕಲೆಗೆ ವೈಯಕ್ತಿಕ ವಲಯದಲ್ಲಿ ಒಳ್ಳೆಯ ಮೆಚ್ಚುಗೆ ಇತ್ತು. 

ಧನುಸ್ಸು(Sagittarius): ನಿಮ್ಮ ಕುತೂಹಲ ಹಾಗೂ ಲಾಜಿಕಲ್ ಮೈಂಡ್ ಬಹುಷಃ ನಿಮ್ಮನ್ನು ವಿಜ್ಞಾನಿಯಾಗಿಸಿರುತ್ತದೆ. ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾತರತೆ ನಿಮ್ಮದಾಗಿತ್ತು. ಸಣ್ಣ ಸಣ್ಣ ವಿಷಯಗಳನ್ನೂ ಭೂತಗನ್ನಡಿ ಇಟ್ಟು ವಿಚಾರ ಮಾಡುವವರಾಗಿದ್ದಿರಿ.

Relationship and Zodiacs: ಪುರುಷನಿಗೆ ಸಂಬಂಧದಲ್ಲಿ ಅತಿ ಮುಖ್ಯವೆನಿಸೋದು ಏನು?

ಮಕರ(Capricorn): ಸ್ವತಂತ್ರ ಪ್ರಿಯರಾಗಿದ್ದಿರಿ, ನಿಮ್ಮ ಸಂತೋಷ ಎಲ್ಲಿತ್ತು ಎಂಬುದು ನಿಮಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ನೀವು ಚೆನ್ನಾಗಿ ತಿರುಗಾಟ ಮಾಡಿಕೊಂಡಿದ್ದಿರಿ. ಹಲವು ಧಾರ್ಮಿಕ ಕ್ಷೇತ್ರಗಳನ್ನು ನೋಡಿ ಬಂದಿದ್ದಿರಿ.

ಕುಂಭ(Aquarius): ನೀವು ಹೆಸರಾಂತ ರಾಜಕಾರಣಿ(Politician)ಯಾಗಿದ್ದಿರಿ. ನಿಮ್ಮ ಆಸೆಗಳು, ಕನಸುಗಳು ಎಲ್ಲವೂ ಹೆಚ್ಚಿದ್ದವು. ಅದಕ್ಕೆ ಸರಿಯಾದ ಕ್ಷೇತ್ರದಲ್ಲಿ ಮುನ್ನಡೆದಿದ್ದಿರಿ. ಬೆಂಬಲಿಗರು ಎಷ್ಟು ಮಂದಿ ಇದ್ದರೋ, ದ್ವೇಷಿಸುವವರೂ ಅಷ್ಟೇ ಮಂದಿ ಇದ್ದರು. 

ಮೀನ(Pisces): ಈಗಿನಂತೆ ಆಗಲೂ ಕ್ರಾಂತಿಕಾರಿಯೇ. ನಿಮ್ಮನ್ನು ತಡೆಯುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದಿರಿ, ಧಾರ್ಮಿಕ ವಿಚಾರಗಳನ್ನು ಪ್ರಶ್ನಿಸುತ್ತಿದ್ದಿರಿ. 

click me!