Makar Sankranti 2023: ಇಂದಿನ ಪುಣ್ಯಕಾಲವೇನು? ಈ ಅವಧಿಯಲ್ಲಿ ಏನು ಮಾಡಬೇಕು?

By Suvarna NewsFirst Published Jan 15, 2023, 9:24 AM IST
Highlights

ಮಕರ ಸಂಕ್ರಾಂತಿಯ ಪುಣ್ಯಕಾಲ ಮತ್ತು ಮಹಾಪುಣ್ಯ ಕಾಲಗಳು, ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವನ್ನು ಹೊಂದಿದೆ. ಈ ಅವಧಿಯಲ್ಲಿ ಸ್ನಾನ ಮತ್ತು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಇಂದು ಮಕರ ಸಂಕ್ರಾಂತಿಯ ತಿಥಿಯ ಸ್ನಾನ ಮತ್ತು ದಾನದ ಶುಭ ಮುಹೂರ್ತದಲ್ಲಿ ಇಲ್ಲಿ ತಿಳಿದುಕೊಳ್ಳಿ.

ಇಂದು ಭಾನುವಾರ ಮಕರ ಸಂಕ್ರಾಂತಿ ಹಬ್ಬ. ಭಾನುವಾರವೇ ಸೂರ್ಯನ ಹಬ್ಬ ಬಂದಿರುವುದರಿಂದ ಈ ಬಾರಿ ಹೆಚ್ಚು ವಿಶೇಷವಾಗಿದೆ. ಈ ತಿಥಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಸೂರ್ಯನು ಧನು ರಾಶಿಯಲ್ಲಿ ಸಂಕ್ರಮಣ ಮುಗಿಸಿ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಬರುತ್ತದೆ. ಈ ದಿನದಂದು ಧನುರ್ಮಾಸ ಕೊನೆಗೊಳ್ಳುತ್ತದೆ, ನಂತರ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಪುರಾಣಗಳ ಪ್ರಕಾರ, ಮಕರ ಸಂಕ್ರಾಂತಿಯಲ್ಲಿ ಸ್ನಾನ, ದಾನ, ಮಂತ್ರಗಳನ್ನು ಪಠಿಸುವುದು ಮತ್ತು ಸೂರ್ಯನ ಆರಾಧನೆಯಂಥ ಮಂಗಳಕರ ಕಾರ್ಯಗಳು ಹೆಚ್ಚು ಫಲಪ್ರದವಾಗಿದೆ. ಪುಣ್ಯಕಾಲ, ಮಹಾಪುಣ್ಯಕಾಲವನ್ನು ಮಕರ ಸಂಕ್ರಾಂತಿಯಲ್ಲಿ ನಿರ್ಣಯಿಸಲಾಗುತ್ತದೆ. ಈ ಅವಧಿಯಲ್ಲಿ ಸ್ನಾನ, ದಾನ ಮಾಡುವುದರಿಂದ ಬಹುಫಲ ನೀಡುತ್ತದೆ. ಈ ದಿನ ಏನು ಮಾಡುವುದು ಶುಭ ಎಂದು ತಿಳಿಯಿರಿ.

ಸೂರ್ಯನ ಮಕರ ರಾಶಿ ಪ್ರವೇಶ
ಜನವರಿ 14ರಂದು 8:43 PMಗೆ ಸೂರ್ಯನ ಮಕರ ರಾಶಿ ಪ್ರವೇಶವಾಗಲಿದೆ. ಆದರೆ ಸಂಕ್ರಾಂತಿಯನ್ನು ಇಂದು ಜನವರಿ 15ರಂದು ಉದಯ ತಿಥಿಯ ನಂತರ ಆಚರಿಸಲಾಗುತ್ತದೆ. ಸಂಕ್ರಾಂತಿಯ ಶುಭ ಅವಧಿಯು ಜನವರಿ 15ರ ಭಾನುವಾರ ಬೆಳಿಗ್ಗೆ 7:17ರಿಂದ ಸಂಜೆ 5:45ರವರೆಗೆ ಇರುತ್ತದೆ. ಸಂಕ್ರಾಂತಿಯ ಮಹಾಪುಣ್ಯಕಾಲ ಜನವರಿ 15, ಭಾನುವಾರ, ಬೆಳಿಗ್ಗೆ 7:17 ರಿಂದ ರಾತ್ರಿ 9:00ರವರೆಗೆ ಇರುವುದು.

ಸಂಕ್ರಾಂತಿ ಪುಣ್ಯಕಾಲ ಮತ್ತು ಮಹಾಪುಣ್ಯ ಕಾಲಕ್ಕೆ ವಿಶೇಷ ಹಿರಿಮೆಯಿದೆ. ಧಾರ್ಮಿಕ ಪರಿಕಲ್ಪನೆಗಳ ಪ್ರಕಾರ, ಈ ದಿನದಿಂದ ಸ್ವರ್ಗದ ಬಾಗಿಲು ತೆರೆಯುತ್ತದೆ. ಮಕರ ಸಂಕ್ರಾಂತಿಯಂದು ಗಂಗಾಸ್ನಾನ, ಸೂರ್ಯನ ಪೂಜೆ, ದಾನ, ಪುಣ್ಯ ಮತ್ತು ಮಹಾಪುಣ್ಯದ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದರಿಂದ ಜನ್ಮಜನ್ಮಗಳ ಪಾಪಗಳು ತೊಳೆದು ಹೋಗುತ್ತವೆ.

ಗಂಗಾ ಸ್ನಾನ
ಮಕರ ಸಂಕ್ರಾಂತಿಯಂದು ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಸ್ನಾನದ ನೀರಿನಲ್ಲಿ ಸ್ವಲ್ಪ ಗಂಗಾಜಲವನ್ನು ಬೆರೆಸಿ ಮನೆಯಲ್ಲಿ ಸ್ನಾನ ಮಾಡಿ. ಇದು ಪ್ರಯೋಜನಕಾರಿಯಾಗಿದೆ. 

Sankranti 2023 Wishes: ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಮಕರ ಸಂಕ್ರಾಂತಿಯಂದು ಸೂರ್ಯನ ಆರಾಧನೆ 
ಮಕರ ಸಂಕ್ರಾಂತಿ ತಿಥಿಯಂದು ಬೆಳಿಗ್ಗೆ ಸ್ನಾನದ ನಂತರ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಇದಕ್ಕಾಗಿ ಬೆಲ್ಲ, ಕೆಂಪು ಹೂವುಗಳು, ಕುಂಕುಮ, ಅಖಂಡ ಮತ್ತು ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಸೂರ್ಯನಿಗೆ ಅರ್ಪಿಸಿ. ಪರಿಣಾಮವಾಗಿ, ಸೂರ್ಯ ಬಲಶಾಲಿಯಾಗುತ್ತಾನೆ.

ಗಾಯತ್ರಿ ಮಂತ್ರ ಪಠಣ
ಸೂರ್ಯ ಪೂಜೆಯ ನಂತರ ಇಷ್ಟ ದೇವತೆಯ ಪೂಜೆಯನ್ನು ಮಾಡಿ. ಮಕರ ಸಂಕ್ರಾಂತಿಯಂದು ಗಾಯತ್ರಿ ಮಂತ್ರವನ್ನು ಪಠಿಸಿ. 

ಹಸುಗಳಿಗೆ ದಾನ 
ಈ ತಿಥಿಯಂದು ಪೂಜೆಯ ನಂತರ ಹಸುಗಳಿಗೆ ಬೆಲ್ಲ, ಹಸಿರು ಹುಲ್ಲು ಇತ್ಯಾದಿಗಳನ್ನು ತಿನ್ನಿಸಿ. ಈ ದಿನ ಹಸುವಿಗೆ ಖಿಚಡಿ ತಿನ್ನಿಸಿದರೆ ಶನಿಯ ಮಹಾದಶಾ ನಿವಾರಣೆಯಾಗುತ್ತದೆ.

ವಾರ ಭವಿಷ್ಯ: ಈ ರಾಶಿಯ ಬಾಳಲ್ಲಿ ತೆರೆಯಲಿದೆ ಹೊಸ ಅವಕಾಶಗಳ ಬಾಗಿಲು

ಪೂರ್ವಜರನ್ನು ಸ್ಮರಿಸಿ
ಮಕರ ಸಂಕ್ರಾಂತಿಯಂದು ನಿಮ್ಮ ಪೂರ್ವಜರಿಗೆ ನಮಸ್ಕರಿಸುವುದನ್ನು ಮರೆಯಬೇಡಿ. ಅವರಿಗೆ ಏನಾದರೂ ದಾನ ಮಾಡಿ. ಈ ದಿನದಂದು ಜನ್ಮ ನೀಡುವುದು ಕೂಡ ತುಂಬಾ ಮಂಗಳಕರ. ಇದರ ಫಲವಾಗಿ ಪೂರ್ವಜರ ಆಶೀರ್ವಾದ ಮಗುವಿಗೆ ದೊರೆಯುತ್ತದೆ. ಪೂರ್ವಜರಿಗೆ ಪ್ರಿಯವಾದ ವಸ್ತುಗಳನ್ನು ದಾನ ಮಾಡುವುದರಿಂದ ಅವರ ಆಶೀರ್ವಾದ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ದಾನ
ಮಕರ ಸಂಕ್ರಾಂತಿಯಂದು ಬಡವರಿಗೆ ಮತ್ತು ಅಸಹಾಯಕರಿಗೆ ಪಾದರಕ್ಷೆ, ಅನ್ನ, ಎಳ್ಳು, ಬೆಲ್ಲ, ಅಕ್ಕಿ, ಗೋಧಿ, ಬಟ್ಟೆ, ಹೊದಿಕೆಗಳನ್ನು ದಾನ ಮಾಡಿ. ಪರಿಣಾಮವಾಗಿ ನೀವು ಶನಿ ಮತ್ತು ಸೂರ್ಯನ ಆಶೀರ್ವಾದವನ್ನು ಪಡೆಯುತ್ತೀರಿ. ದೇಣಿಗೆಗಾಗಿ ಹೊಸ ವಸ್ತುಗಳನ್ನು ಬಳಸಿ. ಹಳೆಯ ಅಥವಾ ಬಳಸಿದ ವಸ್ತುಗಳನ್ನು ದಾನ ಮಾಡಬೇಡಿ.

click me!