ದುಬೈನಲ್ಲಿ ನಿರ್ಮಾಣವಾಯ್ತು 16 ಹಿಂದೂ ದೇವರನ್ನೊಳಗೊಂಡ ಬೃಹತ್ ದೇವಾಲಯ

By Suvarna News  |  First Published Oct 6, 2022, 1:01 PM IST

ದಸರಾದ ಶುಭ ದಿನದಂದು ದುಬೈನಲ್ಲಿ ಬೃಹತ್ ಗಾತ್ರದ, 16 ದೇವರನ್ನೊಳಗೊಂಡ ಹಿಂದೂ ದೇವಾಲಯವನ್ನು ಉದ್ಘಾಟಿಸಲಾಗಿದೆ. ಭಾರತೀಯ ಮತ್ತು ಅರೇಬಿಕ್ ವಾಸ್ತುವಿನ್ಯಾಸವನ್ನು ಮಿಶ್ರಗೊಳಿಸಿ ಈ ದೇವಾಲಯ ನಿರ್ಮಿಸಲಾಗಿದೆ. ಇದರ ವೈಶಿಷ್ಠ್ಯಗಳು ಇಲ್ಲಿವೆ..

Majestic Hindu temple opens in Dubai skr

ವಿಜಯದಶಮಿಯ ದಿನ ದುಬೈನಲ್ಲಿ ಭವ್ಯವಾದ ಹಿಂದೂ ದೇವಾಲಯವೊಂದು ಭಕ್ತರಿಗೆ ತೆರೆದುಕೊಂಡಿದೆ. ಆರಾಧನಾ ಗ್ರಾಮ ಎಂದೇ ಕರೆಸಿಕೊಂಡಿರುವ ಜೆಬೆಲ್ ಅಲಿಯಲ್ಲಿರುವ ಗುರುನಾನಕ್ ದರ್ಬಾರ್‌ನ ಪಕ್ಕದಲ್ಲಿ 70,000-ಚದರ-ಅಡಿಯಲ್ಲಿ ಈ ಬೃಹತ್ ದೇವಾಲಯವನ್ನು ನಿರ್ಮಿಸಲಾಗಿದೆ. ಇದವ್ವು ಬುರ್ ದುಬೈನ ಸೌಕ್ ಬನಿಯಾಸ್‌ನಲ್ಲಿರುವ, ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆ ಎಂದು ಪರಿಗಣಿಸಲಾಗುತ್ತಿದೆ. 

ಇಂಡೋ ಅರೇಬಿಕ್ ಶೈಲಿ
ಈ ದೇವಾಲಯವು 16 ಹಿಂದೂ ದೇವತೆಗಳಿಗೆ(Hindu deities) ನೆಲೆಯಾಗಿದೆ. ಜೊತೆಗೆ ಸಿಖ್ ಧರ್ಮದ ಗುರು ಗ್ರಂಥ ಸಾಹಿಬ್ ಕೂಡಾ ಇಲ್ಲಿದೆ. ಈ ದೇವಾಲಯವು ವಿವರವಾದ ಕೈ ಕೆತ್ತನೆಗಳು, ಅಲಂಕೃತ ಕಂಬಗಳು, ಹಿತ್ತಾಳೆಯ ಗೋಪುರಗಳು ಮತ್ತು ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪವನ್ನು ಸಂಯೋಜಿಸುವ ಲ್ಯಾಟಿಸ್ ಪರದೆಗಳನ್ನು ಒಳಗೊಂಡಿದೆ.

Tap to resize

Latest Videos

ದೇವಾಲಯದ ಒಳಭಾಗ ಮತ್ತು ಮುಂಭಾಗದಲ್ಲಿರುವ ಅದರ ಅಂಕಣಗಳು ಭಾರತದ ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯದ ಸಾಂಪ್ರದಾಯಿಕ ಅಂಕಣಗಳಿಂದ ಸ್ಫೂರ್ತಿ ಪಡೆದಿವೆ. ಮುಖ್ಯ ಗುಮ್ಮಟವು ಉತ್ತರ ಭಾರತದಲ್ಲಿ ಪ್ರಧಾನವಾಗಿ ಕಂಡುಬರುವ ಹಿಂದೂ ದೇವಾಲಯದ ವಾಸ್ತುಶಿಲ್ಪದ ನಾಗರಾ ಶೈಲಿಯಿಂದ ಪ್ರೇರಿತವಾಗಿದೆ. ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟವಾದ ಅರೇಬಿಯನ್ ನೋಟವನ್ನು ಹೊಂದಿದೆ. ದೇವಾಲಯದ ಸಂಕೀರ್ಣದಲ್ಲಿರುವ ಬೋಧನಾ ಕೊಠಡಿಯು ಗೀತಾ ತರಗತಿಗಳು, ಭರತನಾಟ್ಯ ತರಗತಿಗಳು ಮತ್ತು ಇನ್ನೂ ಹಲವು ಸೌಲಭ್ಯವನ್ನು ಹೊಂದಿದೆ. ದೇವಾಲಯದ ರಚನೆಯು ಎರಡು ಅಂತಸ್ತಿನದಾಗಿದ್ದು, ಒಂದು ಬಾರಿಗೆ ಸಾವಿರ ಜನರಿಗೆ ಅವಕಾಶ ಕಲ್ಪಿಸಬಹುದಾಗಿದೆ.

ದೇವಾಲಯದ ಅಡಿಪಾಯವನ್ನು ಫೆಬ್ರವರಿ 2020 ರಲ್ಲಿ ಹಾಕಲಾಯಿತು. ದೇವಾಲಯವು ಭೇಟಿಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದೆ.

Venus Transit 2022: ಈ ರಾಶಿಗಳಿಗೆ ಕೈ ಇಟ್ಟಿದ್ದೆಲ್ಲ ಚಿನ್ನ, ಧನಲಾಭ

ವೆಚ್ಚವೆಷ್ಟು?
ಈ ದೇವಾಲಯವನ್ನು ಸುಮಾರು 60 ಮಿಲಿಯನ್ ದಿರ್ಹಮ್ಸ್  ಅಂದರೆ 16 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. 1960ರಲ್ಲಿ ದುಬೈಗೆ ತೆರಳು ದೊಡ್ಡ ಉದ್ಯಮಿಯಾಗಿ ಬೆಳೆದ ವಾಸು ಶ್ರಾಫ್ ಅವರು ಈ ದೇವಾಲಯವನ್ನು ಕಟ್ಟಿಸಿದ್ದಾರೆ. ಜೆಬೆಲ್ ಅಲಿ(Jebil Ali) ಪ್ರದೇಶದಲ್ಲಿರುವ ದುಬೈ ಹಿಂದೂ ದೇವಾಲಯವು ಭಾರತೀಯ ಸಮುದಾಯದ ಉದ್ಯಮಿಗಳ ಶ್ರಮ, ಪ್ರಾರ್ಥನೆ ಮತ್ತು ಕೊಡುಗೆಗಳ ಸ್ಮಾರಕವಾಗಿದೆ ಎಂದು ದೇವಸ್ಥಾನದ ಟ್ರಸ್ಟಿ ವಾಸು ಅವರ ಪುತ್ರ ರಾಜು ಹೇಳುತ್ತಾರೆ. 

ಯುನೈಟೆಡ್ ಅರಬ್ ಎಮಿರೇಟ್ಸ್‌(UAE)ನಲ್ಲಿ ಭಾರತೀಯರು ಅತಿದೊಡ್ಡ ವಲಸಿಗ ಸಮುದಾಯವಾಗಿದ್ದು, 10 ಮಿಲಿಯನ್ ಜನಸಂಖ್ಯೆಯ ಸುಮಾರು 35 ಪ್ರತಿಶತವನ್ನು ಹೊಂದಿದ್ದಾರೆ. ಈ ಹೊಸ ಹಿಂದೂ ದೇವಾಲಯವು ದೇಶದ ದೊಡ್ಡ ಭಾರತೀಯ ಸಮುದಾಯಕ್ಕೆ ಪೂಜಾ ಸ್ಥಳ ಮತ್ತು ಬೆಂಬಲ ಕೇಂದ್ರವನ್ನು ಒದಗಿಸುತ್ತದೆ. 16 ದೇವರನ್ನು ಹೊಂದಿರುವ ಈ ದೇವಾಲಯವು ಎಲ್ಲ ಧರ್ಮದ ಜನರಿಗೆ ಪ್ರವೇಶವನ್ನು ಅನುಮತಿಸುತ್ತದೆ. 

ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ರಾಜತಾಂತ್ರಿಕ ಮಿಷನ್‌ಗಳ ಮುಖ್ಯಸ್ಥರು, ಅನೇಕ ಧರ್ಮಗಳ ಧಾರ್ಮಿಕ ಮುಖಂಡರು, ವ್ಯಾಪಾರ ಮಾಲೀಕರು ಮತ್ತು ಭಾರತೀಯ ಸಮುದಾಯದ ಸದಸ್ಯರು ಸೇರಿದಂತೆ 200 ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು.

ನವಶಕ್ತಿ ವೈಭವ: ಅಮ್ಮನವರಾಗಿ ಕಣ್ತುಂಬಿದ ಪುಟ್ಟ ಗೌರಿಯರು!

ಜೆಬೆಲ್ ಅಲಿಯಲ್ಲಿರುವ 'ಆರಾಧನಾ ಗ್ರಾಮ' ಈಗ ಒಂಬತ್ತು ಧಾರ್ಮಿಕ ದೇವಾಲಯಗಳನ್ನು ಹೊಂದಿದೆ, ಇದರಲ್ಲಿ ಏಳು ಚರ್ಚುಗಳು, ಗುರು ನಾನಕ್ ದರ್ಬಾರ್ ಸಿಖ್ ಗುರುದ್ವಾರ ಮತ್ತು ಹೊಸ ಹಿಂದೂ ಪೂಜಾ ಮಂದಿರಗಳು ಸೇರಿವೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

vuukle one pixel image
click me!
vuukle one pixel image vuukle one pixel image