Mahashivratri : ಮಹಾಶಿವರಾತ್ರಿ ದಿನ ತಪ್ಪದೆ ಈ ವಸ್ತುವನ್ನು ಮನೆಗೆ ತನ್ನಿ

By Suvarna NewsFirst Published Feb 11, 2023, 2:48 PM IST
Highlights

ಮಹಾಶಿವರಾತ್ರಿ ಹತ್ತಿರ ಬರ್ತಿದೆ. ಭಕ್ತರ ಉತ್ಸಾಹ ಹೆಚ್ಚಾಗಿದೆ. ಜಾಗರಣೆಗೆ ತಯಾರಿ ಕೂಡ ಶುರುವಾಗಿದೆ. ಶಿವರಾತ್ರಿ ನಂತ್ರ ನಿಮ್ಮ ಮನೆ, ಮನಸ್ಸು, ಜೀವನ ಎಲ್ಲ ಚೆನ್ನಾಗಿರಬೇಕೆಂದ್ರೆ ಈ ಕೆಲಸ ಮಾಡಿ.
 

ಓಂ ನಮಃ ಶಿವಾಯ ಮಂತ್ರ ಜಪಿಸಿದ್ರೆ ಎಲ್ಲ ಕಷ್ಟಗಳು ದೂರವಾಗುತ್ವೆ. ಜೀವನದಲ್ಲಿ ಸುಖ, ಸಂತೋಷದ ಜೊತೆಗೆ ಆರ್ಥಿಕ ವೃದ್ಧಿಯಾಗುತ್ತೆ. ಪ್ರತಿ ದಿನ ಶಿವನ ಆರಾಧನೆ ಮಾಡುವವರಿದ್ದಾರೆ. ಈಶ್ವರ, ಭೋಲೇನಾಥ, ಪರಮೇಶ್ವರ, ಸ್ಮಶಾನವಾಸಿ ಎಂದೆಲ್ಲ ಕರೆಸಿಕೊಳ್ಳುವ ಶಿವ ಬೇಗ ಭಕ್ತರ ಭಕ್ತಿಗೆ ಕರಗ್ತಾನೆ ಎನ್ನುವ ಮಾತಿದೆ. ಯಾವುದೇ ಕಷ್ಟಬರಲಿ ಶಿವನ ಧ್ಯಾನ ಮಾಡಿದ್ರೆ ಅರೆ ಕ್ಷಣದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಶಿವ ಭಕ್ತರು ನಂಬುತ್ತಾರೆ. ಶಿವನ ಆರಾಧನೆಗೆಂದೇ ಶಿವರಾತ್ರಿ ಮೀಸಲಿದೆ. ಪ್ರತಿಯೊಬ್ಬರೂ ಅಂದು ಶಿವನಿಗೆ ಅಭಿಷೇಕ, ಪ್ರಾರ್ಥನೆ, ಉಪವಾಸ, ಧ್ಯಾನ ಮಾಡಿ ಆತನ ಆಶೀರ್ವಾದ ಪಡೆಯಲು ಮುಂದಾಗ್ತಾರೆ. 

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಶಿವನಿಗೆ ಕೆಲವೊಂದು ವಸ್ತುಗಳೆಂದ್ರೆ ಬಹಳ ಇಷ್ಟ. ಶಿವರಾತ್ರಿ (Shivratri)  ದಿನ ಆ ವಸ್ತುಗಳನ್ನು ಮನೆಗೆ ತಂದ್ರೆ ನಿಶ್ಚಿತವಾಗಿಯೂ ಈಶ್ವರನ ಕೃಪೆ ನಿಮ್ಮ ಮೇಲಿರುತ್ತದೆ. ಆತನ ಆಶೀರ್ವಾದದಿಂದ ಎಲ್ಲ ಕಷ್ಟಗಳು ದೂರವಾಗುತ್ತವೆ. ನಾವಿಂದು ಶಿವರಾತ್ರಿ ದಿನ ನೀವು ಯಾವ ವಸ್ತುಗಳನ್ನು ಮನೆಗೆ ತರಬೇಕು ಎಂದು ಹೇಳ್ತೇವೆ. 

Latest Videos

ಶಿವರಾತ್ರಿ ದಿನ ಈ ವಸ್ತು ಮನೆಗೆ ತನ್ನಿ :
ಬೆಳ್ಳಿ (Silver) ಯ ನಂದಿ :
ಶಿವನ ವಾಹನ ನಂದಿ. ಎಲ್ಲ ಶಿವ ಮಂದಿರದಲ್ಲೂ ನಂದಿಯ ವಿಗ್ರಹವನ್ನು ನಾವು ನೋಡ್ಬಹುದು. ಮಹಾಶಿವರಾತ್ರಿ ದಿನ ಶಿವನ ಜೊತೆ ನಂದಿಯ ಪೂಜೆ ಕೂಡ ನಡೆಯುತ್ತದೆ. ಕೈನಲ್ಲಿ ಹಣ ನಿಲ್ಲುತ್ತಿಲ್ಲ, ಸದಾ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗ್ತಿದೆ ಎನ್ನುವವರು ಮಹಾಶಿವರಾತ್ರಿ ದಿನ ಬೆಳ್ಳಿಯ ನಂದಿಯನ್ನು ಮನೆಗೆ ತಂದು ಪೂಜೆ ಮಾಡ್ಬೇಕು. ಪೂಜೆ ಮಾಡಿದ ನಂತ್ರ ನಂದಿಯನ್ನು ಹಣವಿಡುವ ಜಾಗದಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಶೀಘ್ರದಲ್ಲಿಯೇ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಶುರುವಾಗುತ್ತದೆ.

Maha Shivratri : ಝಣ ಝಣ ಕಾಂಚಾಣ ಹೆಚ್ಚಾಗಲು ಶಿವರಾತ್ರಿ ದಿನ ಹೀಗೆ ಮಾಡಿ

ಒಂದು ಮುಖದ ರುದ್ರಾಕ್ಷಿ (Rudrakshi) : ಒಂದು ಮುಖದ ರುದ್ರಾಕ್ಷಿಯನ್ನು ಶಿವನ ಪ್ರತಿರೂಪ ಎನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದನ್ನು ಶಾಂತಿ ಹಾಗೂ ಸಮೃದ್ಧಿಯ ಸಂಕೇತವೆಂದು ನಂಬಲಾಗಿದೆ. ಮಹಾಶಿವರಾತ್ರಿ ದಿನ ಮನೆಗೆ ಏನಾದ್ರೂ ತರಬೇಕೆಂದು ನೀವು ಬಯಸಿದ್ರೆ ರುದ್ರಾಕ್ಷಿಗಿಂತ ಅತ್ಯುತ್ತಮವಾದದ್ದು ಮತ್ತೊಂದಿಲ್ಲ. ಮಹಾಶಿವರಾತ್ರಿ ದಿನ ಒಂದು ಮುಖದ ರುದ್ರಾಕ್ಷಿಯನ್ನು ತಂದು ಭಗವಂತ ಶಿವನ ಮಂತ್ರವನ್ನು ಉಚ್ಚರಿಸಿ, ಅದನ್ನು ಶುದ್ಧಿ ಮಾಡ್ಕೊಂಡು ಧರಿಸಬೇಕು. ನೀವು ಇದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಕೂಡ ಮಾಡಬಹುದು. ಇದ್ರಿಂದ ಅನೇಕ ಕಷ್ಟಗಳು ದೂರವಾಗುವ ಜೊತೆಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.

ರತ್ನಗಳಿಂದ ಮಾಡಿದ ಶಿವಲಿಂಗ : ಶಿವಲಿಂಗಕ್ಕೆ ಜಲಾಭಿಷೇಕ ಮಾಡದೆ ಶಿವರಾತ್ರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಯಾರಿಗಾದ್ರೂ ಗ್ರಹದೋಷವಿದ್ರೆ ಮಹಾಶಿವರಾತ್ರಿ ದಿನ ಶಿವಲಿಂಗಕ್ಕೆ ಜಲಾಭಿಷೇಕ ಮಾಡ್ಬೇಕು. ರತ್ನದ ಶಿವಲಿಂಗವನ್ನು ತಂದು ಅದನ್ನು ದೇವರ ಮನೆಯಲ್ಲಿ ಸ್ಥಾಪನೆ ಮಾಡ್ಬೇಕು. ನಂತ್ರ ಪ್ರತಿ ದಿನ ಪೂಜೆ ಮಾಡಬೇಕು. ಇದ್ರಿಂದ ಗ್ರಹಕ್ಕೆ ಸಂಬಂಧಿಸಿದ ಎಲ್ಲ ದೋಷ ನಿವಾರಣೆಯಾಗುತ್ತದೆ.

ತಾಮ್ರದ ಕಳಶ : ಮಹಾಶಿವರಾತ್ರಿ ದಿನ ನೀವು ತಾಮ್ರದ ಕಳಶದ ನೀರನ್ನು ಶಿವಲಿಂಗಕ್ಕೆ ಅರ್ಪಿಸುವ ಮೂಲಕ ಶಿವನ ಆಶೀರ್ವಾದಪಡೆಯಬಹುದು. ಹಾಗಾಗಿ ಈ ದಿನ ನೀವು ಜಲಾಭಿಷೇಕಕ್ಕಾಗಿ ತಾಮ್ರದ ಕಳಶವನ್ನು ಖರೀದಿ ಮಾಡಿ. ಯಾರ ಮನೆಯಲ್ಲಿ ಯಾವಾಗ್ಲೂ ಗಲಾಟೆ, ಜಗಳವಾಗುತ್ತದೆಯೋ ಆ ಮನೆಯಲ್ಲಿ ತಾಮ್ರದ ಕಳಶವಿಟ್ಟರೆ ಎಲ್ಲ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಶಿವರಾತ್ರಿ ದಿನ ತಾಮ್ರದ ಕಳಶ ಖರೀದಿ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ. 

ಬಯಸಿದವರೊಂದಿಗೆ ವಿವಾಹಕ್ಕಾಗಿ MahaShivratri 2023ರಂದು ಈ ರೀತಿ ಮಾಡಿ..

ಮೃತ್ಯುಂಜಯ ಯಂತ್ರ : ಯಾರ ಮನೆಯಲ್ಲಿ ಮೃತ್ಯುಂಜಯ ಯಂತ್ರವಿರುತ್ತದೆಯೋ ಆ ಮನೆಯಲ್ಲಿ ಅನಾರೋಗ್ಯ, ಬೇಸರ, ಅಶಾಂತಿ ಕಾಡೋದಿಲ್ಲ. ನಿಮ್ಮ ಮನೆಯಲ್ಲಿ ಯಂತ್ರವಿಲ್ಲವೆಂದ್ರೆ ಮಹಾ ಶಿವರಾತ್ರಿ ದಿನ ಮೃತ್ಯುಂಜಯ ಯಂತ್ರವನ್ನು ತಂದು ಪೂಜೆ ಮಾಡಿ. 

click me!