Maha Shivratri : ಝಣ ಝಣ ಕಾಂಚಾಣ ಹೆಚ್ಚಾಗಲು ಶಿವರಾತ್ರಿ ದಿನ ಹೀಗೆ ಮಾಡಿ

By Suvarna NewsFirst Published Feb 10, 2023, 6:07 PM IST
Highlights

ಹಣ ಯಾರಿಗೆ ಬೇಡ ಹೇಳಿ? ಆರೋಗ್ಯದ ಜೊತೆ ಐಶ್ವರ್ಯಕೊಡು ಎಂದು ಎಲ್ಲರೂ ದೇವರನ್ನು ಬೇಡ್ತಾರೆ. ನೀವೂ ಆರ್ಥಿಕ ವೃದ್ಧಿ ಬಯಸಿದ್ದರೆ ಶಿವರಾತ್ರಿ ದಿನ ಈ ಕೆಲಸವನ್ನು ತಪ್ಪದೆ ಮಾಡಿ. ಮನೆಯ ಖಜಾನೆ ತುಂಬುತ್ತೆ ನೋಡಿ.  
 

ಇನ್ನೇನು ಶಿವರಾತ್ರಿ ಹತ್ತಿರ ಬರುತ್ತಿದೆ. ಈ ವರ್ಷ ಫೆಬ್ರವರಿ 18ರಂದು ಮಹಾಶಿವರಾತ್ರಿ ಜರುಗಲಿದೆ. ಭಕ್ತಾದಿಗಳು ಶಿವನ ಪೂಜೆ ಮಾಡಿ ಕೃತಾರ್ಥರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಅನೇಕ ಭಕ್ತರು ಶಿವನ ದರ್ಶನಕ್ಕೆ ಯಾವ ಯಾವ ಸ್ಥಳಗಳಿಗೆ ಹೋಗುಬೇಕೆಂದು ಈಗಾಗಲೇ ತೀರ್ಮಾನಿಸಿದ್ದಾರೆ. ಇನ್ನು ಜಾಗರಣೆ ಮಾಡುವವರಂತೂ ಈಶ್ವರನನ್ನು ಪ್ರಸನ್ನಗೊಳಿಸಿ ಇಷ್ಟಾರ್ಥ ಸಿದ್ದಿಸಿಕೊಳ್ಳುವ ತವಕದಲ್ಲಿದ್ದಾರೆ.

ಶಿವರಾತ್ರಿ (Shivratri) ಕೂಡ ಎಲ್ಲ ಹಬ್ಬಗಳಂತೆಯೇ ವಿಜ್ರಂಭಣೆಯಿಂದ ನಡೆಯುತ್ತದೆ. ಶಿವ ಅಭಿಷೇಕ ಪ್ರಿಯನಾದ್ದರಿಂದ ಅವನಿಗೆ ಹಾಲು, ತುಪ್ಪ, ನೀರು, ಜೇನುತುಪ್ಪ (Honey)  ಮುಂತಾದವುಗಳಿಂದ ಅಭಿಷೇಕ ನಡೆಯುತ್ತದೆ. ಅಂದು ಎಲ್ಲ ಭಕ್ತರೂ ಮುಂಜಾನೆಯೇ ಎದ್ದು ಶುದ್ಧರಾಗಿ ಶಿವನಿಗೆ ಗಂಗೆ ಅಂದರೆ ನೀರಿನ ಅಭಿಷೇಕ ಮಾಡುತ್ತಾರೆ. ಎಲ್ಲ ಶಿವನ ದೇವಾಲಯಗಳಲ್ಲೂ ಜನರು ಸರತಿಸಾಲಿನಲ್ಲಿ ನಿಂತು ನೀಲಕಂಠನ ದರ್ಶನಕ್ಕೆ ಕಾತುಕರಾಗಿರುತ್ತಾರೆ.  ಆರ್ಥಿಕ (Financial)  ಸಮಸ್ಯೆ ದೂರವಾಗಬೇಕು ಎನ್ನುವವರು ಶಿವರಾತ್ರಿ ದಿನ ಕೆಲ ವಿಶೇಷ ಉಪಾಯ ಮಾಡ್ಬೇಕು.

Latest Videos

ಪ್ರಸನ್ನನಾಗ್ತಾನೆ ಕುಬೇರ (Kubera) : ಶಿವರಾತ್ರಿಯಂದು ಎಲ್ಲೆಡೆ ಶಿವನ ಪೂಜೆ ಮಾತ್ರ ನಡೆಯುತ್ತದೆ. ಶಿವನನ್ನು ಭಕ್ತಿಯಿಂದ ಪೂಜಿಸುವುದರಿಂದ ಶಿವನಿಂದ ವರ ಪಡೆದ ಕುಬೇರನೂ ಪ್ರಸನ್ನನಾಗುತ್ತಾನೆ. ದೇವತೆಗಳ ದೇವನಾದ ಶಿವನು ಕುಬೇರನನ್ನು ಧನದ ಅಧಿಪತಿ ಎಂದು ಘೋಷಿಸಿ, ಕುಬೇರನನ್ನು ಯಾರೂ ಪೂಜಿಸುತ್ತಾರೋ ಅವರಿಗೆ ಧನಲಾಭವಾಗುತ್ತೆ ಎಂದು ಹೇಳಿದ್ದಾನೆ. ಕುಬೇರ ಕೂಡ ಶಿವನ ಪರಮಭಕ್ತನೇ ಆಗಿದ್ದಾನೆ. ಹಾಗಾಗಿ ಶಿವನನ್ನು ಪೂಜಿಸಿದರೆ ಕುಬೇರ ಹಾಗೂ ಕುಬೇರನನ್ನು ಪೂಜಿಸಿದರೆ ಶಿವ ಪ್ರಸನ್ನರಾಗುತ್ತಾರೆ. ಶಿವರಾತ್ರಿಯಂದು ಶಿವನನ್ನು ಭಕ್ತಿಯಿಂದ ಪೂಜಿಸದರೆ ಕುಬೇರನ ಕೃಪೆಯೂ ನಮ್ಮ ಮೇಲಾಗುತ್ತದೆ. ಇದರಿಂದ ಸುಖ, ನೆಮ್ಮದಿ, ವೈಭವ ದೊರೆಯುತ್ತದೆ.

ಬಯಸಿದವರೊಂದಿಗೆ ವಿವಾಹಕ್ಕಾಗಿ MahaShivratri 2023ರಂದು ಈ ರೀತಿ ಮಾಡಿ..

ಕುಬೇರನ ವಾಸ ಯಾವ ಮನೆಯಲ್ಲಿ ಇರುತ್ತದೆಯೋ ಆ ಮನೆಯಲ್ಲಿ ಎಂದೂ ಹಣದ ಕೊರತೆಯಾಗುವುದಿಲ್ಲ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವ ಎಷ್ಟೋ ಮಂದಿ ಕುಬೇರನನ್ನು ಒಲಿಸುವುದಕ್ಕೋಸ್ಕರ ಜಾತಕದ ಪರಿಶೀಲನೆ ಮಾಡಿ ಅನೇಕ ರೀತಿಯ ತಂತ್ರ ಮಂತ್ರಗಳನ್ನು ಮಾಡುತ್ತಾರೆ. ಸಂಪತ್ತಿನ ಒಡೆಯ ಕುಬೇರನನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ ಈಶ್ವರನ ಆರಾಧನೆಯಾಗಿದೆ. ಹಾಗಾಗಿ ಮುಂಬರುವ ಶಿವರಾತ್ರಿಯಂದು ಶಿವನನ್ನು ಭಕ್ತಿಯಿಂದ ಪೂಜಿಸಿ ಕುಬೇರನ ಕೃಪೆಗೂ ಪಾತ್ರರಾಗಿ.

ಈ ವಿಧಾನ ಅನುಸರಿಸಿದರೆ ಆಗುತ್ತೆ ಧನಲಾಭ : 
• ಶಿವರಾತ್ರಿಯಂದು ಸೂರ್ಯೋದಕ್ಕೂ ಮುನ್ನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಬಿಳಿಯ ವಸ್ತ್ರವನ್ನು ಧರಿಸಿ.
• ಶಿವನ ದೇವಸ್ಥಾನದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಾಲ್ಕು ಮುಖದ ತುಪ್ಪದ ದೀಪವನ್ನು ಹಚ್ಚಿ.
• ಓಂ ಶ್ರೀಂ, ಓಂ ಹ್ರೀಂ ಶ್ರೀಂ, ಓಂ ಹ್ರೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ ಮಂತ್ರವನ್ನು 1008 ಬಾರಿ ಹೇಳಿ. ಮಂತ್ರದಲ್ಲಿ ಯಾವುದೇ ರೀತಿಯ ತಪ್ಪುಗಳು ಆಗದಂತೆ ಎಚ್ಚರವಹಿಸಿ.
• ಈಶ್ವರನಿಗೆ ಶ್ರೇಷ್ಠವಾದ ಬಿಲ್ವಪತ್ರೆಯ ಮರದ ಬಳಿ ಕುಳಿತು ಈ ಮಂತ್ರವನ್ನು ಜಪಿಸಿದರೆ ಹೆಚ್ಚಿನ ಪ್ರಭಾವ ಬೀರುತ್ತದೆ.
• ಈ ಮಂತ್ರವು ಮನೆಯಲ್ಲಿನ ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಿ ಧನಲಾಭವಾಗುವಂತೆ ಮಾಡುತ್ತದೆ.
• ಹಣ ಮತ್ತು ಆರೋಗ್ಯ ಸಮಸ್ಯೆ ಇರುವವರು 6 ಮುಖದ ರುದ್ರಾಕ್ಷಿಯನ್ನು ಧರಿಸಬೇಕು.

ನಿಮ್ಮ ಹೆಂಡತಿಗೆ ಡಾಮಿನೇಟ್ ಮಾಡೋ ಸ್ವಭಾವ ಇದ್ಯಾ? ಈ ರಾಶಿಯವರು ಹಾಗಿರುತ್ತಾರೆ!

ಶಿವರಾತ್ರಿಯ ಮಹತ್ವ :  ಮಹಾಶಿವರಾತ್ರಿ ಎನ್ನುವ ಪದದಲ್ಲಿ ಮಹಾ ಎಂದರೆ ಮಹಾನ್ ಎಂಬ ಅರ್ಥವನ್ನು ಕೊಡುತ್ತದೆ. ಶಿವರಾತ್ರಿ ಎಂದರೆ ಶಿವನ ರಾತ್ರಿ ಎಂದರ್ಥ. ಎರಡೂ ಸೇರಿನ ಶಿವನ ಮಹಾ ರಾತ್ರಿ ಎಂಬ ಅರ್ಥವನ್ನು ನೀಡುತ್ತದೆ. ಶಿವರಾತ್ರಿ ಎಂದರೆ ಬಹಳ ಶುಭ. ಈ ದಿನ ಶಂಭುವನ್ನು ಶುದ್ಧವಾದ ಮನಸ್ಸಿನಿಂದ ಪೂಜೆ ಮಾಡಿದರೆ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ವಾಸ್ತುದೋಷದ ಕೆಟ್ಟ ಪರಿಣಾಮಗಳೆಲ್ಲ ದೂರಾಗುತ್ತವೆ ಎಂಬ ನಂಬಿಕೆಯಿದೆ.
 

click me!