Mahashivratri 2023: ಶಿವನು ನಂದಿಯನ್ನು ವಾಹನವಾಗಿ ಆರಿಸಿಕೊಂಡಿದ್ದೇಕೆ?

By Suvarna News  |  First Published Feb 18, 2023, 10:26 AM IST

ನಂದಿ ಭಗವಾನ್ ಭೋಲೆನಾಥನ ವಾಹನ. ನಂದಿಯನ್ನು ಶಿವನ ದ್ವಾರಪಾಲಕ ಎಂದೂ ಕರೆಯುತ್ತಾರೆ. ಶಿವನಿಗೆ ಅವನ ಗೌರವವನ್ನು ತಲುಪಿಸಲು ನಂದಿಯನ್ನು ಮೆಚ್ಚಿಸುವುದು ಅವಶ್ಯಕ. ನಂದಿ ಬುದ್ಧಿವಂತಿಕೆ ಮತ್ತು ಜ್ಞಾನದ ಸಂಕೇತ. ಶಿವ ಈತನನ್ನು ತನ್ನ ವಾಹನವಾಗಿ ಆರಿಸಿದ್ದೇಕೆ? 


ನಂದಿ ಶಿವನ ವಾಹನ. ಅಷ್ಟೇ ಅಲ್ಲ,  ಶಿವನ ದ್ವಾರಪಾಲಕ ಕೂಡಾ. ಶಿವನಿಗೆ ಅವನ ಗೌರವವನ್ನು ತಲುಪಿಸಲು, ನಮ್ಮ ಪ್ರಾರ್ಥನೆಗಳನ್ನು ಕೇಳಿಸಲು ನಂದಿಯನ್ನು ಮೆಚ್ಚಿಸುವುದು ಅವಶ್ಯಕ. ನಂದಿಯನ್ನು ಬುದ್ಧಿವಂತಿಕೆ ಮತ್ತು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ನಂದಿಯು ಯಾವಾಗಲೂ ಶಿವನ ದೇವಾಲಯದಲ್ಲಿ ಈಶ್ವರನಿಗೆ ಅಭಿಮುಖವಾಗಿ ಕುಳಿತಿರುತ್ತಾನೆ.  ಈ ನಂದಿಗೂ ಶಿವನಿಗೂ ಏನಿಂಥ ಸಂಬಂಧ?

ನಂದಿ, ಶಿವನ ಅತಿದೊಡ್ಡ ಭಕ್ತ- ಅಸುರರು ಮತ್ತು ದೇವತೆಗಳ ನಡುವಿನ ಸಾಗರದ ಮಂಥನದಲ್ಲಿ ಶಿವನು ಜಗತ್ತನ್ನು ರಕ್ಷಿಸಲು ಹಾಲಾಹಲದ ವಿಷವನ್ನು ಕುಡಿದನು. ಕುಡಿಯುವ ಸಮಯದಲ್ಲಿ, ಕೆಲವು ವಿಷದ ಹನಿಗಳು ನೆಲದ ಮೇಲೆ ಬಿದ್ದವು, ಅದನ್ನು ನಂದಿಯು ತನ್ನ ನಾಲಿಗೆಯಿಂದ ಸ್ವಚ್ಛಗೊಳಿಸಿದನು ಮತ್ತು ನಂದಿಯ ಈ ಸಮರ್ಪಣೆಯನ್ನು ಕಂಡು ಶಿವನು ಪ್ರಸನ್ನನಾಗಿ ನಂದಿಗೆ ತನ್ನ ಶ್ರೇಷ್ಠ ಭಕ್ತನೆಂಬ ಬಿರುದನ್ನು ನೀಡಿದನು. 

Tap to resize

Latest Videos

ಶಿವನು ನಂದಿಯನ್ನು ತನ್ನ ವಾಹನವಾಗಿ ಏಕೆ ಆರಿಸಿಕೊಂಡನು? 
ಶಿವನು ನಂದಿಯ ಮೇಲೆ ಸುತ್ತುತ್ತಾ ಮೂರು ಲೋಕಗಳ ಪ್ರದಕ್ಷಿಣೆ ಮಾಡುವುದಲ್ಲದೆ, ಅವನಿಲ್ಲದೆ ಆತ ಎಲ್ಲಿಗೂ ಹೋಗುವುದಿಲ್ಲ. ಇದಕ್ಕೆ ನಂದಿಯ ಭಕ್ತಿಯ ಶಕ್ತಿಯೇ ಕಾರಣ. 

ಒಮ್ಮೆ ಶಿಲಾದ ಎಂಬ ರೈತನು ಕಠಿಣ ತಪಸ್ಸನ್ನು ಮಾಡಿ ನಂದಿಯನ್ನು ಮಗನಾಗಿ ಪಡೆದನು. ಶಿಲಾದನು ಶಿವನಲ್ಲಿ ಆತನಿಗೆ ಅಮರತ್ವದ ವರ ಪಡೆದಿದ್ದನು.

Mahashivratri 2023 ಆಚರಣೆಗೆ ಹೆಸರಾಗಿರೋ ಬೆಂಗಳೂರಿನ ಪ್ರಮುಖ ಶಿವ ದೇವಾಲಯಗಳಿವು..

ನಂದಿಯು ಭಗವಾನ್ ಶಿವನ ಕಟ್ಟಾ ಭಕ್ತನಾಗಿದ್ದನು ಮತ್ತು ಭಗವಾನ್ ಶಿವನ ಸೇವೆ ಮಾಡಲು ಕೈಲಾಸಕ್ಕೆ ಹೋಗಲು ತನ್ನ ತಂದೆಯನ್ನು ಬೇಡಿಕೊಂಡನು. ತಂದೆ ಒಪ್ಪಿದರು ಮತ್ತು ಶೀಘ್ರದಲ್ಲೇ, ನಂದಿಯು ತನ್ನ ಭಕ್ತಿಯಿಂದ ಶಿವನ ಹೃದಯವನ್ನು ಗೆದ್ದಿದ್ದರಿಂದ ನಿಷ್ಠಾವಂತ ಸೇವಕನಾದನು.

ನಂದಿಯನ್ನು ಹೊರತುಪಡಿಸಿ, ಧ್ಯಾನ ಮಾಡುವಾಗ ಶಿವನನ್ನು ತೊಂದರೆಗೊಳಿಸಲು ಯಾರೂ ಧೈರ್ಯ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ಭಕ್ತರು ನಂದಿಯ ಕಿವಿಯಲ್ಲಿ ತಮ್ಮ ಪ್ರಾರ್ಥನೆ ಹೇಳಬೇಕು. ಶಿವನು ತಪಸ್ಸಿನಿಂದೆದ್ದಾಗ ನಂದಿಯು ವಿಷಯವನ್ನು ಅವನಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ. ಮಹಾದೇವನ ಪರಮ ಪೂಜ್ಯ ಮತ್ತು ಶ್ರೇಷ್ಠ ಭಕ್ತ ನಂದಿಯ ಆಶೀರ್ವಾದವಿಲ್ಲದೆ ಯಾರೂ ಮಹಾದೇವನನ್ನು ತಲುಪಲು ಸಾಧ್ಯವಿಲ್ಲ.

 ಇಡೀ ಬ್ರಹ್ಮಾಂಡವು ಭಗವಾನ್ ಶಿವನ ನಿಯಂತ್ರಣದಲ್ಲಿದ್ದರೂ ಶಿವನು ನಂದಿಯ ಭಕ್ತಿಗೆ, ಸೇವೆಗೆ ಮನಸೋತಿದ್ದನು. ಆತ ನಂದಿಗೆ ತನ್ನನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗಬಹುದು, ಏಕೆಂದರೆ ನೀನು ನನ್ನ ಪ್ರೀತಿಯ ಭಕ್ತನೆಂದು ಹೇಳಿದ್ದಾನೆ. ಇದರಿಂದಾಗಿ ನಂದಿಯು ಮಾತ್ರ ಅಗಾಧ ಶಕ್ತಿಶಾಲಿ ಭಗವಾನ್ ಶಿವನನ್ನು ಹೊತ್ತೊಯ್ಯಬಲ್ಲನು. 

ಶಿವಪುರಾಣದ ಪ್ರಕಾರ, ನಂದಿಯು ಗೂಳಿಯ ಮುಖ ಮತ್ತು ಮಾನವ ದೇಹವನ್ನು ಹೊಂದಿದ್ದಾನೆ ಮತ್ತು ಅವನ ಇಚ್ಛೆಯಂತೆ ಎತ್ತು ಅಥವಾ ಯಾವುದೇ ಮಾನವ ರೂಪವನ್ನು ತೆಗೆದುಕೊಳ್ಳಬಹುದು. ಅದಕ್ಕಾಗಿಯೇ ಮೂರು ಕಣ್ಣುಗಳು ಮತ್ತು ಮೂರು ಕೊಂಬುಗಳನ್ನು ಹೊಂದಿರುವ ಎತ್ತನ್ನು ನಂದಿಯ ಅವತಾರವೆಂದು ಪೂಜಿಸಲಾಗುತ್ತದೆ. 

ಸರ್ವರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ಶಿವನು ನಂದಿಯನ್ನು ಕೈಲಾಶ ಪರ್ವತದ ದ್ವಾರಪಾಲಕನೆಂದು ಮಾತ್ರವಲ್ಲ, ತನ್ನ ಆತ್ಮೀಯ ಸ್ನೇಹಿತ ಮತ್ತು ಗಣಗಳ ಮುಖ್ಯಸ್ಥನಾಗಿಯೂ ಸಹ ಪರಿಗಣಿಸುತ್ತಾನೆ.

ಭಾರತದ ಎರಡು ಅತಿ ದೊಡ್ಡ ನಂದಿ ಪ್ರತಿಮೆಗಳು ಕರ್ನಾಟಕದಲ್ಲಿಯೇ ಇವೆ ಎಂಬುದು ಹೆಮ್ಮೆಯ ವಿಷಯ. ಒಂದು ಹಳೇಬೀಡಿನಲ್ಲಿದ್ದರೆ, ಮತ್ತೊಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!