ನಪುಂಸಕನಾಗೆಂದು ಅರ್ಜುನನಿಗೆ ಶಪಿಸಿದ ಅಪ್ಸರೆ! ಶಾಪವೇ ವರವಾಗಿದ್ದು ಹೇಗೆ?

By Suvarna NewsFirst Published Feb 7, 2023, 4:30 PM IST
Highlights

ಸ್ವರ್ಗದಿಂದ ಬಂದ ಅಪ್ಸರೆಯು ಅರ್ಜುನನಿಗೆ ಶಕ್ತಿಹೀನನಾಗಲು ಶಪಿಸಿದಳು. ಈ ಶಾಪ ಅರ್ಜುನನಿಗೆ ವನವಾಸದ ಸಮಯದಲ್ಲಿ ವರವೇ ಆಯಿತು. ಆ ಅಪ್ಸರಾ ಯಾರು ಮತ್ತು ಆಕೆ ಯಾಕೆ ಇಂತಹ ಶಾಪ ಕೊಟ್ಟಿದ್ದಾಳೆ ಗೊತ್ತಾ?

ಮಹಾಭಾರತದ ಕಥೆ ಎಷ್ಟು ನಿಗೂಢವೋ ಅಷ್ಟೇ ಕುತೂಹಲಕಾರಿಯಾಗಿದೆ. ಅದರಲ್ಲಿ ಅಗೆದಷ್ಟೂ ಮುಗಿಯದ ಉಪ ಕತೆಗಳಿವೆ. ಮಹಾಭಾರತದ ಪ್ರಮುಖ ಪಾತ್ರಧಾರಿ ಅರ್ಜುನ ಕೆಲ ಕಾಲ ನಪುಂಸಕನಾಗಿ ಬಾಳಬೇಕಿತ್ತು ಎಂಬುದು ಎಲ್ಲರಿಗೂ ಗೊತ್ತು, ಆದರೆ ಅರ್ಜುನ ನಪುಂಸಕನಾದದ್ದು ಹೇಗೆ, ಆತನಿಗೆ ನಪುಂಸಕನಾಗಲು ಶಾಪ ನೀಡಿದವರು ಯಾರು ಮತ್ತು ಅದಕ್ಕೆ ಕಾರಣವೇನು? ಇದು ನಿಮಗೆ ಗೊತ್ತೇ? ವಾಸ್ತವವಾಗಿ ಈ ಶಾಪವು ಅರ್ಜುನನಿಗೆ ವರದಾನವೇ ಆಯಿತು. ಇಂದು ನಾವು ಅರ್ಜುನನಿಗೆ ಸಂಬಂಧಿಸಿದ ಈ ಕುತೂಹಲಕಾರಿ ಸಂಚಿಕೆಯನ್ನು ಹೇಳುತ್ತಿದ್ದೇವೆ.. 

ಅರ್ಜುನ ಸ್ವರ್ಗಕ್ಕೆ ಹೋದದ್ದೇಕೆ?
ಜೂಜಿನಲ್ಲಿ ಕೌರವರ ಎದುರು ಸೋತ ನಂತರ ಪಾಂಡವರು 12 ವರ್ಷಗಳ ವನವಾಸ ಮತ್ತು 1 ವರ್ಷದ ಅಜ್ಞಾತ ವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ, ಶ್ರೀ ಕೃಷ್ಣನು ಅರ್ಜುನನಿಗೆ ವನವಾಸದ ನಂತರ ನೀವು ಕೌರವರೊಡನೆ ಯುದ್ಧ ಮಾಡಬೇಕಾಗಬಹುದು, ಆದ್ದರಿಂದ ನೀವು ದೈವಿಕ ಆಯುಧಗಳಿಗಾಗಿ ಶಿವನಿಗೆ ತಪಸ್ಸು ಮಾಡಬೇಕು ಎಂದು ವಿವರಿಸಿದನು. ಅರ್ಜುನನು ಕೃಷ್ಣನ ಮಾತಿನಂತೆ ಹಾಗೆಯೇ ಮಾಡಿದನು ಮತ್ತು ಭಗವಾನ್ ಶಿವನ ಕೃಪೆಯಿಂದ, ಅವನು ಆಕಾಶ ಆಯುಧವನ್ನು ಪಡೆಯಲು ಸ್ವರ್ಗಕ್ಕೆ ಬಂದನು.

ಅರ್ಜುನ ಇಲ್ಲಿ ನೃತ್ಯ ಪಾಠ ಕಲಿತ..
ಸ್ವರ್ಗಕ್ಕೆ ಬಂದ ನಂತರ ಅನೇಕ ದೈವಿಕ ಆಯುಧಗಳನ್ನು ಪಡೆದ ಅರ್ಜುನ.  ಈ ಸಂದರ್ಭದಲ್ಲಿ ಇಂದ್ರನು ಅರ್ಜುನನಿಗೆ ನೃತ್ಯ- ಸಂಗೀತ ಪಾಠಗಳನ್ನು ತೆಗೆದುಕೊಳ್ಳುವಂತೆ ಹೇಳಿದನು. ನೃತ್ಯ ಮತ್ತು ಸಂಗೀತದ ಜ್ಞಾನವು ಆಕಾಶ ಆಯುಧಕ್ಕಿಂತ ಕಡಿಮೆಯಿಲ್ಲ, ಹಾಗಾಗಿ ಅವುಗಳನ್ನು ಕಲಿತಿರುವುದು ಒಳ್ಳೆಯದು ಎಂದು ಇಂದ್ರನು ಅರ್ಜುನನಿಗೆ ವಿವರಿಸಿದನು. ದೇವರಾಜನ ಆಜ್ಞೆಯ ಮೇರೆಗೆ ಅರ್ಜುನನು ಗಂಧರ್ವದೇವರಿಂದ ನೃತ್ಯ ಮತ್ತು ಸಂಗೀತ ಪಾಠಗಳನ್ನು ಕಲಿಯಲು ಪ್ರಾರಂಭಿಸಿದನು.

Hindu Tradition: ಈ ಆಚರಣೆ ಪೂರ್ಣವಾಗದೆ, ವಧು ಪತ್ನಿಯಾಗೋಲ್ಲ!

ಊರ್ವಶಿ ಆಕರ್ಷಿತಳಾದಳು..
ಸ್ವರ್ಗದ ಅಪ್ಸರೆಯಾದ ಊರ್ವಶಿಯು ಅರ್ಜುನನ ಸುಂದರ ಮತ್ತು ಆಕರ್ಷಕ ರೂಪದಿಂದ ಆಕರ್ಷಿತಳಾದಳು. ಒಂದು ದಿನ, ಅವಕಾಶ ಸಿಕ್ಕಿತು, ಊರ್ವಶಿ ಅರ್ಜುನನ ಮುಂದೆ ಪ್ರೀತಿಯ ಪ್ರಸ್ತಾಪವನ್ನು ಮಾಡಿದಳು, ಆದರೆ ಅರ್ಜುನ ಅವಳನ್ನು ತಾಯಿಯಂತೆ ಕರೆದನು. ಅರ್ಜುನನ ಬಾಯಿಂದ ಇಂಥದ್ದೊಂದು ಮಾತು ಕೇಳಿದ ಊರ್ವಶಿ, ‘ನೀನು ಶಕ್ತಿಹೀನನಂತೆ ಮಾತನಾಡುತ್ತಿದ್ದೀಯಾ, ಹಾಗಾಗಿ ಜೀವನ ಪೂರ್ತಿ ನಪುಂಸಕನಾಗಿಯೇ ಕಳೆಯುವೆ’ ಎಂದಳು.

ಅರ್ಜುನ ಊರ್ವಶಿಯನ್ನು ಅಮ್ಮ ಎಂದು ಕರೆದಿದ್ದು ಯಾಕೆ?
ತನ್ನ ಪೂರ್ವಜರಾದ ಪುರೂರವ ಮತ್ತು ಊರ್ವಶಿ ಕೆಲವು ಷರತ್ತುಗಳೊಂದಿಗೆ ಪತಿ-ಪತ್ನಿಯಾಗಿ ಬದುಕುತ್ತಿದ್ದ ಕಾರಣ ಅರ್ಜುನ ಊರ್ವಶಿಯನ್ನು ತಾಯಿ ಎಂದು ಕರೆದಿದ್ದನು. ಇಬ್ಬರಿಗೂ ಅನೇಕ ಗಂಡು ಮಕ್ಕಳಿದ್ದರು. ಅವರಲ್ಲಿ ಆಯು ಕೂಡ ಒಬ್ಬನಾಗಿದ್ದ. ಆಯುವಿನ ಮಗ ನಹುಷ, ನಹುಷನ ಮಗ ಯಯಾತಿ. ಯಯಾತಿಗೆ ಯದು, ತುರ್ವಸು, ದ್ರುಹು, ಅನು ಮತ್ತು ಪುರು ಇದ್ದರು. ಯದು ಯಾದವನಾದನು ಮತ್ತು ಪುರು ಪೌರವನಾದನು. ನಂತರ ಪುರು ವಂಶದಲ್ಲಿ ಕುರುಗಳು ಮತ್ತು ಕುರುವಿನಿಂದ ಕೌರವರು ಜನಿಸಿದ್ದರು. ಅದಕ್ಕಾಗಿಯೇ ಅರ್ಜುನ ಊರ್ವಶಿಯನ್ನು ತಾಯಿ ಎಂದು ಕರೆದಿದ್ದನು.

ಅಯ್ಯಬ್ಬಾ! ಈ ದೇವಾಲಯದಲ್ಲಿ ದೇವರಿಗೆ ಜೀವಂತ ಚೇಳುಗಳ ನೈವೇದ್ಯ

ಈ ಶಾಪ ಅರ್ಜುನನಿಗೆ ಹೇಗೆ ವರವಾಯಿತು?
ಮಹಾಭಾರತದ ಪ್ರಕಾರ, ದೇವರಾಜ ಇಂದ್ರನು ಊರ್ವಶಿ ಅರ್ಜುನನನ್ನು ಶಪಿಸುತ್ತಿರುವುದನ್ನು ತಿಳಿದಾಗ, ಅವನು ತುಂಬಾ ಕೋಪಗೊಂಡನು. ಇಂದ್ರನ ಆಜ್ಞೆಯ ಮೇರೆಗೆ ಊರ್ವಶಿ ತನ್ನ ಶಾಪದ ಅವಧಿಯನ್ನು ಕೇವಲ ಒಂದು ವರ್ಷಕ್ಕೆ ಇಳಿಸಿದಳು. ಅರ್ಜುನನು ಭೂಮಿಗೆ ಬಂದಾಗ ಈ ಶಾಪವು ವರವಾಗಿ ಪರಿಣಮಿಸಿತು. ಏಕೆಂದರೆ ವಿರಾಟನಗರದಲ್ಲಿ ವಾಸವಾಗಿರುವಾಗಲೇ ಅರ್ಜುನನು ಅಜ್ಞಾತವಾಸವನ್ನು ನಪುಂಸಕನ ರೂಪದಲ್ಲಿ ಕಳೆದನು. ಹಾಗಾಗಿ ಯಾರೂ ಆತನ ಗುರುತು ಹಿಡಿಯದೆ ಹೋದರು.

click me!