
ಪ್ರತಿ ದಿನ ರಾಶಿ ಭವಿಷ್ಯವನ್ನು ನೋಡಿಕೊಂಡು ಅದರಂತೆ ನಡೆಯುವವರಿದ್ದಾರೆ. ಇನ್ನು ಕೆಲವರು ಶುಭ ದಿನವನ್ನು ನಂಬುತ್ತಾರೆ. ಮತ್ತೆ ಕೆಲವರು ಅದೃಷ್ಟ ಸಂಖ್ಯೆಯನ್ನು ನಂಬುತ್ತಾರೆ. ಅದೃಷ್ಟ ಸಂಖ್ಯೆಯ ದಿನಾಂಕದಂದು ಅಥವಾ ಅದೃಷ್ಟ ಸಂಖ್ಯೆಗೆ ತಕ್ಕಂತೆ ಕೆಲಸ ಮಾಡ್ತಾರೆ. ಈ ಅದೃಷ್ಟ ಸಂಖ್ಯೆಗಳು ನಿಮಗೆ ರಕ್ಷಕವಾಗಿ ಕೆಲಸ ಮಾಡುತ್ತದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲು ಅದೃಷ್ಟ ಸಂಖ್ಯೆಯನ್ನು ನಂಬಬೇಕೆಂದು ಸಂಖ್ಯಾಶಾಸ್ತ್ರಜ್ಞರು ಹೇಳ್ತಾರೆ. ಈ ಅದೃಷ್ಟ ಸಂಖ್ಯೆಗಳು ಧ್ಯಯನ, ಕೆಲಸ ಮತ್ತು ಪ್ರೀತಿ ಜೀವನದಲ್ಲಿ ಗೆಲುವು ಸಾಧಿಸಲು ಸಹಾಯ ಮಾಡುತ್ತದೆ. ಹೊಸ ವರ್ಷದಲ್ಲಿ ಯಾವ ರಾಶಿಗೆ ಯಾವ ಸಂಖ್ಯೆ ಅದೃಷ್ಟ ತರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರಜ್ಞರು ಹೇಳಿದ್ದಾರೆ.
ಮೇಷ ರಾಶಿ : ಮೇಷ ರಾಶಿಗೆ ಅದೃಷ್ಟ (Good Luck) ಸಂಖ್ಯೆ 7 ಮತ್ತು 9. ಬೆಸ ಸಂಖ್ಯೆಗಳು ಮೇಷ ರಾಶಿಯವರಿಗೆ ಅದೃಷ್ಟ ತರುತ್ತದೆ. ಸಮ (Even) ಸಂಖ್ಯೆಗಳು ಇವರಿಗೆ ಅದೃಷ್ಟ ತರುವುದಿಲ್ಲ. ಯಶಸ್ವಿಯಾಗಲು ಮತ್ತು ಬಲಶಾಲಿಯಾಗಲು ಮೇಷ ರಾಶಿಯವರು 7 ಮತ್ತು 9 ಸಂಖ್ಯೆ ಬಳಸಬೇಕು.
ವೃಷಭ ರಾಶಿ : ವೃಷಭ ರಾಶಿಯವರಿಗೆ ಅದೃಷ್ಟದ ಸಂಖ್ಯೆ 6. ಈ ಆರನೇ ಸಂಖ್ಯೆಯು ಚೀನೀ (Chinese) ಸಂಸ್ಕೃತಿಯಲ್ಲಿ ಇತರ ಮಂಗಳಕರ ಅರ್ಥಗಳನ್ನು ಹೊಂದಿದೆ. ಈ ಸಂಖ್ಯೆ, ಜನರ ತೃಪ್ತಿ ಮತ್ತು ನೆಮ್ಮದಿಗೆ ಕಾರಣವಾಗುತ್ತದೆ.
ಮಿಥುನ ರಾಶಿ : ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ 5. ಈ ಸಂಖ್ಯೆ ಗೌರವ, ಯಶಸ್ಸು, ಸಂಪತ್ತು ಮತ್ತು ಶಕ್ತಿಯೊಂದಿಗೆ ಸಂಬಂಧಿಸಿದೆ. ಮಿಥುನ ರಾಶಿಯವರಿಗೆ ಈ ಸಂಖ್ಯೆ ವೃತ್ತಿಜೀವನ (Career) ದಲ್ಲಿ ಮುನ್ನಡೆಯಲು, ಶಿಕ್ಷಣವನ್ನು ಪಡೆಯಲು ನೆರವಾಗುತ್ತದೆ.
ಕರ್ಕ ರಾಶಿ : ಕರ್ಕ ರಾಶಿಯವರ ಅದೃಷ್ಟ ಸಂಖ್ಯೆ 2 ಮತ್ತು 6. ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಸಿಂಹ ರಾಶಿ : 2023ರಲ್ಲಿ ಸಿಂಹ ರಾಶಿಯವರ ಅದೃಷ್ಟದ ಸಂಖ್ಯೆ 7 ಆಗಿರುತ್ತದೆ. ಸಿಂಹ ಬೆಂಕಿಯನ್ನು ಪ್ರತಿನಿಧಿಸುತ್ತದೆ. 2023 ರಲ್ಲಿ ಸಿಂಹ ರಾಶಿಯವರಿಗೆ ಸಂಖ್ಯೆ 7 ಹೆಚ್ಚು ಪ್ರಯೋಜನ ನೀಡಲಿದೆ. ಈ ರಾಶಿಯವರಿಗೆ ಚೈತನ್ಯ ನೀಡಲಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರ ಅದೃಷ್ಟ ಸಂಖ್ಯೆ 1, 6 ಮತ್ತು 7. ಈ ಸಂಖ್ಯೆ ಒಂದು ಶಾಂತ ಮತ್ತು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಕನ್ಯಾ ರಾಶಿಯವರಿಗೆ ಈ ಸಂಖ್ಯೆಗಳು ಹೊಸ ವರ್ಷ ಶುಭ ಫಲ ನೀಡಲಿದೆ.
ತುಲಾ ರಾಶಿ : ತುಲಾ ರಾಶಿಯವರ ಅದೃಷ್ಟ ಸಂಖ್ಯೆ 8 ಮತ್ತು 10. ಇದು ತುಲಾ ರಾಶಿಯವರ ಗೊಂದಲಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ನಿರ್ಧಾರ ತೆಗೆದುಕೊಳ್ಳುವ ವೇಗವನ್ನು ಹೆಚ್ಚಿಸುತ್ತದೆ. ಸಂಖ್ಯೆ 8 ಸಮತೋಲನ, ಸಂಪತ್ತು, ಯಶಸ್ಸು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ ಅದೃಷ್ಟ ಸಂಖ್ಯೆ 1 ಮತ್ತು 3. ಗ್ರಹದ ಅತ್ಯಂತ ಶಾಂತ ಚಿಹ್ನೆ ವೃಶ್ಚಿಕ ರಾಶಿಯಾಗಿದೆ. ಜೀವನದಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಧನು ರಾಶಿ : ಧನು ರಾಶಿಯವರ ಅದೃಷ್ಟ ಸಂಖ್ಯೆ 3. 2023ರಲ್ಲಿ ಧನು ರಾಶಿ ಶೌರ್ಯ, ಗಮನ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.
ಮಕರ ರಾಶಿ : ಮಕರ ರಾಶಿಯ ಅದೃಷ್ಟ ಸಂಖ್ಯೆಗಳು 3, 4 ಮತ್ತು 9. ಈ ಮೂರು ಸಂಖ್ಯೆಗಳು ಮಕರ ರಾಶಿಯವರಿಗೆ ಬಲ ನೀಡಲಿದೆ. ಸಂಖ್ಯೆ 3 ಬುದ್ಧಿವಂತಿಕೆ ಮತ್ತು ಶೌರ್ಯಕ್ಕೆ ಹೆಸರುವಾಸಿಯಾಗಿದೆ. 4 ಮತ್ತು 9 ಸಂಖ್ಯೆಗಳು ಸಾಮರಸ್ಯವನ್ನು ಪ್ರತಿನಿಧಿಸುತ್ತವೆ. ಸಂಖ್ಯೆ 9 ಸಹ ಶಾಶ್ವತತೆ, ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತದೆ.
ಕರ್ಪೂರವನ್ನು ಈ ರೀತಿ ಬಳಸಿದ್ರೆ, ಜೀವನ ಬದಲಾಗುತ್ತೆ ನೋಡಿ!
ಕುಂಭ ರಾಶಿ : ಕುಂಭ ರಾಶಿಯವರಿಗೆ 22 ಅದೃಷ್ಟ ಸಂಖ್ಯೆಯಾಗಿದೆ. ಎರಡು ಅಂಕಿಯ ಸಂಖ್ಯೆ ಕುಂಭ ರಾಶಿಯವರಿಗೆ ಅದೃಷ್ಟ ತರಲಿದೆ. ಈ ಸಂಖ್ಯೆಯು ಎರಡು ಪ್ರತ್ಯೇಕ ಜೀವನವನ್ನು ನಡೆಸಲು ನಿಮಗೆ ಸಲಹೆ ನೀಡುತ್ತದೆ. ಒಂದು ಸಮಾಜಕ್ಕಾಗಿ ಮತ್ತು ಇನ್ನೊಂದು ನಿಮ್ಮ ಕುಟುಂಬಕ್ಕೆ.
Astrology Tips: ಈ ರಾಶಿಯವರು ಅಪ್ಪಿತಪ್ಪಿಯೂ ಕೆಂಪು ತಿಲಕ ಹಚ್ಬೇಡಿ
ಮೀನ ರಾಶಿ : 2023ರಲ್ಲಿ ಮೀನ ರಾಶಿಯವರ ಅದೃಷ್ಟ ಸಂಖ್ಯೆ 0 ಮತ್ತು 9. ಈ ಸಂಖ್ಯೆಯನ್ನು ಮೀನ ರಾಶಿಯವರು ಹೆಚ್ಚು ಬಳಸಬೇಕು. ಈ ಅದೃಷ್ಟ ಸಂಖ್ಯೆಗಳು ಮೀನ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಸಂತೋಷದಿಂದ ಬದುಕಲು ಅನುವು ಮಾಡಿಕೊಡುತ್ತದೆ.