Astrology Tips: ಕಣ್ಣಿಗೆ ಕಾಡಿಗೆ ಹಚ್ಚಿದ್ರೆ ಈ ದೋಷ ಕಡಿಮೆಯಾಗುತ್ತೆ

By Suvarna NewsFirst Published Nov 29, 2022, 5:53 PM IST
Highlights

ಹೆಣ್ಣಿನ ಕಣ್ಣಿಗೆ ಕಾಡಿಗೆ ಚೆಂದ. ಅಂದದ ಕಣ್ಣನ್ನು ಇನ್ನಷ್ಟು ಆಕರ್ಷಕಗೊಳಿಸುವ ಶಕ್ತಿ ಕಾಡಿಗೆಗಿದೆ. ಆದ್ರೆ ಇದು ಬರೀ ಸೌಂದರ್ಯ ಹೆಚ್ಚಿಸೋದಿಲ್ಲ. ಅನೇಕ ಸಮಸ್ಯೆಗೆ ಪರಿಹಾರ ನೀಡುವ ಶಕ್ತಿ ಹೊಂದಿದೆ.
 

ಕಣ್ಣಿಗೆ ಕಾಡಿಗೆ ಇಲ್ಲವೆಂದ್ರೆ ಮುಖದ ಸೌಂದರ್ಯ ಮಾಸಿದಂತೆ. ಕಾಜಲ್, ಕಣ್ಣಿನ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ. ಕಣ್ಣಿಗೆ ಕಾಡಿಗೆ ಹಚ್ಚದೆ ಮನೆಯಿಂದ ಹೊರ ಬೀಳದ ಹೆಣ್ಣು ಮಕ್ಕಳಿದ್ದಾರೆ. ಸಿಂಪಲ್ ಮೇಕಪ್ ಎನ್ನುವವರು ಕೂಡ ಕಣ್ಣಿಗೆ ಕಾಡಿಗೆ ಹಚ್ಚೋದನ್ನು ಮರೆಯೋದಿಲ್ಲ. ಚಿಕ್ಕ ಮಕ್ಕಳಿಗೆ ಕೂಡ ಕಾಡಿಗೆ ಹಚ್ಚಲಾಗುತ್ತದೆ. ಕಾಡಿಗೆಯನ್ನು ಬರೀ ಸೌಂದರ್ಯ ವರ್ಧಕವಾಗಿ ಬಳಕೆ ಮಾಡಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲೂ ಕಾಡಿಗೆಗೆ ಮಹತ್ವದ ಸ್ಥಾನವಿದೆ. 

ದೃಷ್ಟಿ (Vision) ಬೀಳದಿರಲಿ ಎನ್ನುವ ಕಾರಣಕ್ಕೆ ಕಾಡಿಗೆ (Kajal) ಯನ್ನು ಮಕ್ಕಳಿಗೆ ಹಚ್ಚುತ್ತಾರೆ. ಇದು ಬಹುತೇಕರಿಗೆ ತಿಳಿದ ವಿಷ್ಯ. ಕೆಲವು ಸಂದರ್ಭದಲ್ಲಿ ಸುಂದರವಾಗಿ ಕಾಣುವ ಹುಡುಗಿ ಗಲ್ಲದ ಕೆಳಗೆ ಕಾಡಿಗೆ ಹಚ್ಚೋದನ್ನು ನಾವು ನೋಡಿದ್ದೇವೆ. ಮದುವೆ (Marriage) ಸಂದರ್ಭದಲ್ಲಿ ದೃಷ್ಟಿ ತಾಗದಿರಲಿ ಎಂದು ವರನಿಗೂ ಕಾಡಿಗೆ ಹಚ್ಚುತ್ತಾರೆ. ಕಾಡಿಗೆಯನ್ನು ಹಚ್ಚುವುದ್ರಿಂದ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆಯೇ ಕಾಡಿಗೆ ದಾನ ಮಾಡುವುದ್ರಿಂದ ಕೂಡ ದೊಡ್ಡ ಲಾಭವಿದೆ. ನಾವಿಂದು ಕಾಡಿಗೆ ಹಚ್ಚುವುದ್ರಿಂದ ಏನೆಲ್ಲ ಲಾಭವಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ. 

ಕಾಡಿಗೆಯಲ್ಲಿದೆ ಇಷ್ಟೊಂದು ಲಾಭ :

ಗ್ರಹ ದೋಷ ಪರಿಹಾರ : ಮೂರು ಅಶುಭ ಗ್ರಹಗಳಾದ ಶನಿ, ರಾಹು ಮತ್ತು ಕೇತುಗಳ ದೋಷಗಳನ್ನು ತಪ್ಪಿಸಲು ಕಾಡಿಗೆ ಬಳಕೆ ಮಾಡಲಾಗುತ್ತದೆ. ಕಾಡಿಗೆ ಹಚ್ಚುವುದ್ರಿಂದ ವ್ಯಕ್ತಿಗೆ ಬಹಳ ಈ ಗ್ರಹಗಳ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ಪರಿಗಣಿಸಲಾಗಿದೆ. ಕಾಡಿಗೆ ಹಚ್ಚುವುದ್ರಿಂದ ಈ ಮೂರು ಗ್ರಹಗಳ ನಕಾರಾತ್ಮಕ ಪರಿಣಾಮ ಕಡಿಮೆಯಾಗುತ್ತದೆ. 

Vastu Tips For Success: ಯಶಸ್ಸಿನ ಹಾದಿಗೆ ಇಲ್ಲಿದೆ ಸಿಂಪಲ್‌ ವಾಸ್ತು ಟಿಪ್ಸ್‌

ದೃಷ್ಟಿ ತಾಗದಂತೆ ಇಲ್ಲಿ ಕಾಡಿಗೆ ಹಚ್ಚಿ : ಮೊದಲೇ ಹೇಳಿದಂತೆ ಬೇರೆಯವರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಮಕ್ಕಳಿಗೆ ಕಾಡಿಗೆ ಹಚ್ಚಲಾಗುತ್ತದೆ. ಬಹುತೇಕರು ಮಕ್ಕಳ ಹಣೆಗೆ ಕಾಡಿಗೆ ಹಚ್ತಾರೆ. ಮತ್ತೆ ಕೆಲವರು ಕಣ್ಣಿಗೆ ಹಚ್ಚುತ್ತಾರೆ. ಆದ್ರೆ ಇವೆರಡೂ ಸರಿಯಾದ ವಿಧಾನವಲ್ಲ. ಮಕ್ಕಳಿಗೆ ದೃಷ್ಟಿ ತಾಗಬಾರದು ಎಂದಾದ್ರೆ ಅವರ ಕಿವಿಯ ಹಿಂದೆ ಕಾಡಿಗೆ ಹಚ್ಚಬೇಕು ಎನ್ನುತ್ತದೆ ಶಾಸ್ತ್ರ. 

ಕಾಡಿಗೆಯನ್ನು ಇಲ್ಲಿ ಹಾಕಿ : ಶನಿ, ರಾಹು ಮತ್ತು ಕೇತು ದೋಷದಿಂದ ಬಳಲುತ್ತಿರುವ ವ್ಯಕ್ತಿ ಇನ್ನೊಂದು ಪರಿಹಾರ ಮಾಡಬಹುದು. ಕಾಡಿಗೆಯನ್ನು ನಿರ್ಜನ ಪ್ರದೇಶದಲ್ಲಿ ಹೂಳಬೇಕು. ಇದ್ರಿಂದ ಗ್ರಹ ದೋಷದ ಅಶುಭ ಪರಿಣಾಮ ಕಡಿಮೆಯಾಗುತ್ತದೆ. ಜೀವನದಲ್ಲಿ ಚೇತರಿಕೆ ಕಾಣಬಹುದಾಗಿದೆ. 

ಕೆಲಸದ ಸಮಸ್ಯೆಗೆ ಕಾಡಿಗೆಯಲ್ಲಿ ಪರಿಹಾರ : ಕೆಲಸ ಸಿಗ್ತಿಲ್ಲ ಅಥವಾ ಕೆಲಸದಲ್ಲಿ ಸಮಸ್ಯೆಯಾಗ್ತಿದೆ, ಆದಾಯ ಹೆಚ್ಚಾಗ್ತಿಲ್ಲ ಎನ್ನುವವರು ಕಾಡಿಗೆಯ ದೊಡ್ಡ ಉಂಡೆಯನ್ನು ತೆಗೆದುಕೊಂಡು ಅದನ್ನು ನಿರ್ಜನ ಪ್ರದೇಶದಲ್ಲಿ ಹಾಕಬೇಕು. ಶನಿವಾರದಂದು ನಿರ್ಜನ ಪ್ರದೇಶದಲ್ಲಿ ಕಾಡಿಗೆ ಉಂಡೆ ಹಾಕೋದ್ರಿಂದ ಹೆಚ್ಚಿನ ಲಾಭವನ್ನು ನೀವು ಪಡೆಯಬಹುದು. ಕೆಲಸದಲ್ಲಿ ಪ್ರಗತಿಯನ್ನು ಕಾಣಬಹುದು.

ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ : ಕುಟುಂಬದ ಸದಸ್ಯರ ನಡುವೆ ಸಂಬಂಧ ಹಾಳಾಗ್ತಿದೆ ಎನ್ನುವವರು ತೆಂಗಿನಕಾಯಿಯನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಕಾಡಿಗೆಯಿಂದ 21 ಚುಕ್ಕೆ ಮಾಡಬೇಕು. ನಂತ್ರ ಅದನ್ನು ಶನಿವಾರದಂದು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಇದ್ರಿಂದ ನಕಾರಾತ್ಮಕ ಶಕ್ತಿ ದೂರವಾಗಿ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ದೇವಸ್ಥಾನಕ್ಕೆ ಕಾಡಿಗೆ ಅರ್ಪಿಸಿ : ಜಾತಕದಲ್ಲಿ ಶನಿ ದೋಷವಿದೆ ಎನ್ನುವವರು ಶನಿವಾರದಂದು ಶನಿ ದೇವಸ್ಥಾನಕ್ಕೆ ಹೋಗಿ ಕಾಡಿಗೆಯನ್ನು ದಾನ ಮಾಡಬೇಕು. ಇದ್ರಿಂದ ದೋಷ ಕಡಿಮೆಯಾಗುತ್ತದೆ.

ಕಾಡಿಗೆ ದಾನ ಮಾಡಿ : ರಾಹು ಗ್ರಹವನ್ನು ಶಾಂತಗೊಳಿಸಲು ನೀವು ಹೆಚ್ಚಿನ ಪ್ರಮಾಣದಲ್ಲಿ ಕಾಡಿಗೆಯನ್ನು ದಾನ ಮಾಡಬೇಕು. ಹೀಗೆ ಮಾಡಿದ್ರೆ ರಾಹು ಶಾಂತನಾಗ್ತಾನೆ ಎಂದು ನಂಬಲಾಗಿದೆ.

ಕರ್ಪೂರವನ್ನು ಈ ರೀತಿ ಬಳಸಿದ್ರೆ, ಜೀವನ ಬದಲಾಗುತ್ತೆ ನೋಡಿ!

ಮಂಗಳ ದೋಷ : ಜಾತಕದಲ್ಲಿ ಮಂಗಳ ದೋಷವಿದೆ ಎನ್ನುವವರು ಕಪ್ಪು ಕಾಡಿಗೆಯನ್ನು ಕಣ್ಣಿಗೆ ಹಚ್ಚುವ ಬದಲು ಬಿಳಿ ಆಂಟಿಮೊನಿಯನ್ನು ಹಚ್ಚಬೇಕು. 

click me!