ನಮ್ಮ ಜೀವನ ಅನೇಕ ಸಂಗತಿಗಳ ಮೇಲೆ ನಿಂತಿದೆ. ಅದೃಷ್ಟ ಹಾಗೂ ದುರಾದೃಷ್ಟ ನಾವು ಧರಿಸುವ ಬಟ್ಟೆ, ಬಳಸುವ ಬಣ್ಣವನ್ನೂ ಅವಲಂಭಿಸಿರುತ್ತದೆ. ಹೊಸ ವರ್ಷ ಸದಾ ಹೊಸತಾಗಿರಬೇಕು, ಗುರಿಯ ಮೆಟ್ಟಿಲೇರಬೇಕು ಎನ್ನುವವರು ಜ್ಯೋತಿಷ್ಯ ಶಾಸ್ತ್ರದ ಈ ಬಣ್ಣದ ಟಿಪ್ಸ್ ಫಾಲೋ ಮಾಡ್ಬೇಕು.
ಬಣ್ಣಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಬಣ್ಣಗಳು ನಮ್ಮ ಮನೋವಿಜ್ಞಾನ, ಮನಸ್ಥಿತಿ ಮತ್ತು ಆಲೋಚನೆಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಬಣ್ಣವಿಲ್ಲದ ಜಗತ್ತು ಇಷ್ಟು ಆಸಕ್ತಿದಾಯಕ ಮತ್ತು ಆಕರ್ಷಕವಾಗಿ ತೋರುತ್ತಿರಲಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಗೆ ಅನುಗುಣವಾಗಿ ಬಣ್ಣವನ್ನು ಬಳಸುವುದು ಒಳ್ಳೆಯದು. ಇದ್ರಿಂದ ಶಕ್ತಿ ಹೆಚ್ಚಾಗುವ ಜೊತೆಗೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 2023 ರಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರಲಿದೆ ಎಂಬುದನ್ನು ನಾವಿಂದು ಹೇಳ್ತೆವೆ.
ಮೇಷ (Aeries) ರಾಶಿ : ಮೇಷ ರಾಶಿಯವರಿಗೆ ಕೆಂಪು (Red) ಬಣ್ಣ (Color) ತುಂಬಾ ಮಂಗಳಕರ. ಕೆಂಪು, ಚೈತನ್ಯ, ಉಗ್ರತೆ ಮತ್ತು ಶುದ್ಧತೆಯ ಸಂಕೇತವಾಗಿದೆ. ಕೆಂಪು ಬಣ್ಣವಲ್ಲದೆ ಮೇಷ ರಾಶಿಯವರು ಬಿಳಿ ಮತ್ತು ಹಳದಿ ಬಣ್ಣವನ್ನು ಸಹ ಬಳಸಬಹುದು. ಮೇಷ ರಾಶಿಯವರು ನೀಲಿ, ಕಪ್ಪು ಮತ್ತು ಹಸಿರು (Green) ಬಣ್ಣದಿಂದ ದೂರವಿರಬೇಕು.
ವೃಷಭ (Taurus) ರಾಶಿ : ಶುಕ್ರ ಗ್ರಹವು ವೃಷಭ ರಾಶಿಯ ರಾಜ. ಈ ರಾಶಿಯವರ ಮೆಚ್ಚಿನ ಬಣ್ಣ ಗುಲಾಬಿ ಮತ್ತು ಬಿಳಿ. ಹಸಿರು ಬಣ್ಣ ಕೂಡ ವೃಷಭ ರಾಶಿಯವರಿಗೆ ಶಕ್ತಿ ನೀಡುತ್ತದೆ. ಹೊಸ ವರ್ಷ (New Year ) ದಲ್ಲಿ ಪ್ರೀತಿ ಮತ್ತು ಹಣ ಬಯಸಿದ್ರೆ ವರ್ಷದ ಆರಂಭದಲ್ಲಿ ಈ ಬಣ್ಣದ ವಸ್ತುಗಳನ್ನು ಖರೀದಿಸಬಹುದು. ಈ ರಾಶಿಯವರು ಬಿಳಿ ಮತ್ತು ಗುಲಾಬಿ ಬಣ್ಣದ ಉಡುಗೆ ಧರಿಸಬೇಕು. ಹಳದಿ ಮತ್ತು ಕೆಂಪು ಬಣ್ಣ ವೃಷಭ ರಾಶಿಯವರ ಕೋಪ ಹೆಚ್ಚಿಸುತ್ತದೆ. ಹಿಂಸೆಗೆ ಪ್ರಚೋದಿಸುತ್ತದೆ. ಆದ್ದರಿಂದ ಈ ಬಣ್ಣದಿಂದ ದೂರವಿರುವುದು ಒಳಿತು.
ಮಿಥುನ (Gemini) ರಾಶಿ : ಮಿಥುನ ರಾಶಿಯವರು ಹೊಸ ವರ್ಷ ಹಳದಿ ಮತ್ತು ಹಸಿರು ಬಣ್ಣಗಳನ್ನು ಬಳಸಿದ್ರೆ ಯಶಸ್ಸು ಕಾಣುತ್ತಾರೆ. ಗುಲಾಬಿ ಮತ್ತು ಬಿಳಿ ಬಣ್ಣಗಳನ್ನು ಕೂಡ ಬಳಕೆ ಮಾಡಬಹುದು. ಈ ರಾಶಿಯವರು ಹಸಿರು ಬಟ್ಟೆ ಧರಿಸಬಹುದು.
ಕರ್ಕ (Cancer) ರಾಶಿ : ಬಿಳಿ, ಕೆಂಪು, ಬಂಗಾರ ಮತ್ತು ನಿಂಬೆ ಬಣ್ಣಗಳು ಕರ್ಕ ರಾಶಿಗೆ ಅತ್ಯಂತ ಅದೃಷ್ಟವನ್ನು ನೀಡುತ್ತದೆ. ಕರ್ಕ ರಾಶಿಯಲ್ಲಿ ಜನಿಸಿದವರು ತುಂಬಾ ಗಾಢವಾದ ಅಥವಾ ತುಂಬಾ ತಿಳಿ ಬಣ್ಣ ಬಳಸಬೇಡಿ.
ಸಿಂಹ (Leo) ರಾಶಿ : ಹೊಸ ವರ್ಷ ಸಿಂಹ ರಾಶಿಯವರು ಕಿತ್ತಳೆ, ಹಳದಿ ಮತ್ತು ಕೆಂಪು ಬಣ್ಣಗಳನ್ನು ಬಳಸಬೇಕು. ಇದ್ರಿಂದ ಆತ್ಮವಿಶ್ವಾಸ ಹೆಚ್ಚಾಗುವ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ಸಿಂಹ ರಾಶಿಯ ಜನರು ಹೊಸ ವರ್ಷ ಕಪ್ಪು ಅಥವಾ ಕಂದು ಬಣ್ಣದಿಂದ ದೂರವಿರಬೇಕು.
Leo Men: ರಾಯಲ್ ಅಷ್ಟೇ ಅಲ್ಲ, ಲಾಯಲ್ ಕೂಡಾ ಹೌದು ಸಿಂಹ ರಾಶಿಯ ಪುರುಷ
ಕನ್ಯಾ (Virgo) ರಾಶಿ : ಹೊಸ ವರ್ಷ ಕನ್ಯಾ ರಾಶಿಯವರಿಗೆ ನೀಲಿ, ಹಸಿರು ಮತ್ತು ತಿಳಿ ಹಳದಿ ಬಣ್ಣಗಳು ಮಂಗಳಕರವಾಗಲಿವೆ. ಇದ್ರಿಂದ ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಈ ರಾಶಿಯ ಜನರು ಕೆಂಪು ಬಣ್ಣದಿಂದ ದೂರವಿರುವುದು ಒಳ್ಳೆಯದು.
ತುಲಾ (Libra) ರಾಶಿ : ತುಲಾ ರಾಶಿಯವರಿಗೆ 2023 ರಲ್ಲಿ ಕಿತ್ತಳೆ ಮತ್ತು ಬಿಳಿ ಬಣ್ಣಗಳು ಶುಭ ಫಲ ನೀಡಲಿವೆ. ಗಾಢ ಬಣ್ಣಗಳು ತುಲಾ ರಾಶಿಗೆ ಆದ್ಯತೆಯ ಆಯ್ಕೆಯಾಗಿದೆ. ತಿಳಿ ನೀಲಿ ಬಣ್ಣವೂ ಸೂಕ್ತವಾಗಿದೆ.
ವೃಶ್ಚಿಕ (Scorpio) ರಾಶಿ : ವೃಶ್ಚಿಕ ರಾಶಿಯ ಜನರಿಗೆ ಬಿಳಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳು ಅತ್ಯಂತ ಅದೃಷ್ಟದ ಬಣ್ಣವಾಗಲಿದೆ. ಜೀವನದಲ್ಲಿ ಸ್ಥಿರತೆ ಕಂಡುಕೊಳ್ಳಲು ಇದು ಸಹಾಯವಾಗಲಿದೆ.
ಧನು (Sagittarius) ರಾಶಿ : ಈ ರಾಶಿಯವರು ಗಾಢ ಹಳದಿ ಅಥವಾ ಕಿತ್ತಳೆ ಹಳದಿ ಬಣ್ಣವನ್ನು ಆರಿಸಿಕೊಳ್ಳಬೇಕು. ಹಸಿರು ಬಣ್ಣ ಇವರಿಗೆ ಆಶಾದಾಯಕವಾಗಲಿದೆ. ತಪ್ಪು ವಿಷ್ಯವನ್ನು ಇವರು ಹೆಚ್ಚಾಗಿ ನಂಬುವುದ್ರಿಂದ ವಿವೇಕವನ್ನು ಕಾಪಾಡಿಕೊಳ್ಳಲು ಅದೃಷ್ಟದ ಬಣ್ಣವನ್ನು ಆರಿಸಿಕೊಳ್ಳಬೇಕು, ಅದು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುತ್ತದೆ.
ಮಕರ (Acquarius) ರಾಶಿ : ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಈ ರಾಶಿಯವರು ಕಪ್ಪು ಮತ್ತು ನೇರಳೆ ಬಣ್ಣವನ್ನು ಆಯ್ಕೆ ಮಾಡಬೇಕು. ಹೆಚ್ಚು ತಾಳ್ಮೆಯಿಂದಿರಲು ಸಹಾಯ ಮಾಡುತ್ತದೆ. ಹಳದಿ ಮತ್ತು ಕೆಂಪು ಬಣ್ಣದಿಂದ ದೂರವಿರಬೇಕು.
ಕುಂಭ ರಾಶಿ (Capriocorn): ತಿಳಿ ನೀಲಿ ಮತ್ತು ನೇರಳೆ ಬಣ್ಣ ಕುಂಭ ರಾಶಿಯವರಿಗೆ ಹೆಚ್ಚು ಅದೃಷ್ಟ ತರುತ್ತದೆ. ಜೀವನ ಮತ್ತು ವೃತ್ತಿಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ರಾಶಿಯವರು ನೀಲಿ ಬಣ್ಣದಿಂದ ದೂರವಿರಬೇಕು.
ಕನಸಿನಲ್ಲಿ ಕೋತಿ: ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ?
ಮೀನ ರಾಶಿ : ಮೀನ ರಾಶಿಯವರಿಗೆ ಕಿತ್ತಳೆ ಮತ್ತು ಹಳದಿ ಬಣ್ಣಗಳು ಅದೃಷ್ಟದ ಬಣ್ಣಗಳಾಗಿವೆ. ಗುಲಾಬಿ ಬಣ್ಣ ಕೂಡ ಪ್ರಯೋನಕಾರಿ. ಗುಲಾಬಿ ಬಣ್ಣವನ್ನು ಹೆಚ್ಚಾಗಿ ಬಳಸಿದ್ರೆ ಯಶಸ್ಸು ನಿಮ್ಮದಾಗುತ್ತದೆ.