ಹಿಂಸೆ, ಮೋಸದ ಜೀವನ ಎಂದೂ ಮುಕ್ತಿ ನೀಡದು. ಪುಣ್ಯಗಳನ್ನು ಸಂಪಾದನೆ ಮಾಡಿ, ಯಶಸ್ಸು, ಸಾಧನೆಯ ಶಿಖರ ಏರಬೇಕು ಎಂದಲ್ಲಿ ಶಿವ ಪುರಾಣವನ್ನು ಓದುವುದು ಮಾತ್ರವಲ್ಲ ಅಲ್ಲಿನ ನಿಯಮಗಳನ್ನು ಪಾಲಿಸಬೇಕು.
ಹಿಂದೂ ಧರ್ಮದಲ್ಲಿರುವ ಹದಿನೆಂಟು ಅತ್ಯಂತ ಪ್ರಮುಖ ಪುರಾಣಗಳಲ್ಲಿ ಶಿವ ಮಹಾಪುರಾಣ ಕೂಡ ಒಂದು. ಶಿವ ಪುರಾಣದಲ್ಲಿ ಶಿವನ ಅಧ್ಬುತ ಮತ್ತು ಅನನ್ಯ ದೈವಿ ಕಲೆಗಳ ಬಗ್ಗೆ ಚರ್ಚಿಸಲಾಗಿದೆ. ಭಗವಂತ ಈಶ್ವರನ ಶಕ್ತಿಯ ಜೊತೆಗೆ ಅವನ ವಿವಿಧ ಅವತಾರ, ಜೋತಿರ್ಲಿಂಗ ಮತ್ತು ಶಿವನ ಸಂಪೂರ್ಣ ಜೀವನದ ಮೇಲೆ ಬೆಳಕು ಚೆಲ್ಲಲಾಗಿದೆ. ಒಟ್ಟಿನಲ್ಲಿ ಶಿವನ ಭಕ್ತಿ, ಶಕ್ತಿಯನ್ನು ನೀವು ಇಲ್ಲಿ ನೋಡಬಹುದು. ಶಿವಪುರಾಣ ಮೋಕ್ಷವನ್ನು ಒದಗಿಸುತ್ತದೆ ಎಂದು ನಂಬಲಾಗಿದೆ. ಶಿವ ಪುರಾಣವು 24 ಸಾವಿರ ಶ್ಲೋಕಗಳು ಮತ್ತು ಎಂಟು ಸಂಹಿತೆಗಳಿಂದ ಕೂಡಿದೆ. ಶಿವಪುರಾಣ ಬರೀ ಓದಿಗೆ ಸೀಮಿತವಾಗಿರಬಾರದು. ಶಿವ ಪುರಾಣದಲ್ಲಿ ಬರುವ ಅನೇಕ ವಿಷ್ಯಗಳು ನಮ್ಮ ಜೀವನಕ್ಕೆ ಹತ್ತಿರವಾಗಿದೆ. ಶಿವಪುರಾಣದಲ್ಲಿ ಹೇಳಿದ ಕೆಲ ವಿಷ್ಯಗಳನ್ನು ನಮ್ಮ ಜೀವನದಲ್ಲಿ ಪಾಲಿಸಿದ್ರೆ ನಾವು ಯಶಸ್ವಿಯಾಗಲು, ಸುಖಕರ ಜೀವನ ನಡೆಸಲು ಸಾಧ್ಯ. ಶಿವಪುರಾಣದಲ್ಲಿರುವ ಕೆಲ ಉಪಯುಕ್ತ ಮಾಹಿತಿ ಇಲ್ಲಿದೆ.
ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ: ಶಿವ (Shiva) ನು ಸಂಜೆಯ ಹೊತ್ತಲ್ಲಿ ತನ್ನ ಮೂರನೇ ಕಣ್ಣಿನಿಂದ ಲೋಕವನ್ನು ನೋಡುತ್ತ, ಗಣಗಳ ಜೊತೆ ಸಂಚರಿಸುತ್ತಾನೆ ಎಂದು ಶಿವ ಪುರಾಣ (Purana) ದಲ್ಲಿ ಹೇಳಲಾಗಿದೆ. ಹಾಗಾಗಿ ಈ ಸಮಯದಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ನೀವು ನಿದ್ರೆ ಮಾಡುವುದು, ಆಹಾರ ಸೇವನೆ ಮಾಡುವುದು, ಕೆಟ್ಟ ಮಾತುಗಳನ್ನು ಆಡುವುದು, ಕೆಟ್ಟ ಆಲೋಚನೆ ಮಾಡುವುದು, ಅನೈತಿಕ ಚಟುವಟಿಕೆಯಲ್ಲಿ ತೊಡಗುವುದು, ಪ್ರಯಾಣ ಸೇರಿದಂತೆ ಯಾವುದೇ ಪಾಪದ ಕೆಲಸವನ್ನು ಮಾಡಬಾರದು. ಇದ್ರಿಂದ ಶಿವ ಕೋಪಗೊಳ್ಳುತ್ತಾನೆ. ಶಿವನ ಆಶೀರ್ವಾದ (Blessings) ದಿಂದ ನೀವು ವಂಚಿತರಾಗುತ್ತೀರಿ.
undefined
ಈ ಬಣ್ಣದ ಬೆಕ್ಕು ಮನೆಗೆ ಬಂದರೆ ಅದೃಷ್ಟ.. ಸಂಪತ್ತು ವೃದ್ಧಿ
ನಿಮ್ಮ ಕೆಲಸಕ್ಕೆ ನೀವೇ ಹೊಣೆ : ನೀವು ಕೆಟ್ಟ ಕೆಲಸ ಮಾಡಿ ಇಲ್ಲ ಒಳ್ಳೆ ಕೆಲಸ ಮಾಡಿ, ನೀವು ಮಾಡ್ತಿರುವ ಪ್ರತಿಯೊಂದು ಕೆಲಸಕ್ಕೂ ನೀವೇ ಜವಾಬ್ದಾರರು. ನಿಮ್ಮಿಂದ ಬೇರೆಯವರು ಪಾಪದ ಕೆಲಸ ಮಾಡಿಸಿದ್ರೂ, ಯಾರಿಗೂ ತಿಳಿಯುವುದಿಲ್ಲ ಎನ್ನುವ ಭಾವನೆಯಲ್ಲಿ ನೀವೇ ಪಾಪ ಮಾಡಿದ್ರೂ ಅದರ ಪರಿಣಾಮದಿಂದ ಪಾರಾಗಲು ಸಾಧ್ಯವಿಲ್ಲ. ಪಾಪದ ಫಲವನ್ನು ನೀವೊಬ್ಬರೇ ಅನುಭವಿಸಬೇಕಾಗುತ್ತದೆ. ನಿಮ್ಮ ಮನಸ್ಸು, ಮಾತು ಮತ್ತು ಕ್ರಿಯೆ ಎಲ್ಲವೂ ಪಾಪದ ಕೆಲಸದಿಂದ ದೂರವಿರಬೇಕು ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.
ಶುಕ್ರ ಬದಲಾವಣೆ ಈ ರಾಶಿಯ ವೃತ್ತಿಜೀವನದಲ್ಲಿ ಸವಾಲು..ಜಾಬ್ ಪ್ರಾಬ್ಲಂ
ಮೋಹ ಬಿಡಿ : ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ವಸ್ತು, ಜಾಗ ಅಥವಾ ವ್ಯಕ್ತಿ ಮೇಲೆ ಅತಿಯಾದ ಮೋಹ ಇರುತ್ತದೆ. ಮೋಹ, ಕೆಟ್ಟ ಕೆಲಸಗಳನ್ನು ಮಾಡಲು ದಾರಿಯಾಗುತ್ತದೆ. ಇದೇ ದುಃಖಕ್ಕೂ ಕಾರಣವಾಗುತ್ತದೆ. ಇದ್ರಿಂದ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ವೈಫಲ್ಯಗಳನ್ನು ಕಾಣಬೇಕಾಗುತ್ತದೆ. ಈ ಮೋಹ, ಬಾಂಧವ್ಯ ಬಿಟ್ಟಾಗ ಯಶಸ್ಸು, ಸಂತೋಷ ಸಿಗಲು ಸಾಧ್ಯ.
ಪಶುತ್ವ ಬಿಟ್ಟು ಮನುಷ್ಯನಾಗಿ : ಮೋಹ, ದ್ವೇಷ, ಅಪಮಾನ, ಹಿಂಸೆ, ಕ್ರೌರ್ಯ ಎಲ್ಲವೂ ಪಶು ಪ್ರವೃತ್ತಿ. ಪ್ರತಿಯೊಬ್ಬರೂ ಇದನ್ನು ಬಿಟ್ಟು ಮನುಷ್ಯನಾಗಬೇಕು. ಧ್ಯಾನ, ಭಕ್ತಿ, ಸಾಧನೆ ಮಾರ್ಗ ಅನುಸರಿಸಬೇಕು. ಈ ಮಾರ್ಗಗಳು ಜೀವನಕ್ಕೆ ನೆಮ್ಮದಿ ನೀಡುವ ಜೊತೆಗೆ ನಿಮಗೆ ಸುಲಭವಾಗಿ ಮುಕ್ತಿ ಸಿಗುವಂತೆ ಮಾಡುತ್ತದೆ.
ಸಂಪತ್ತಿನ ಸಂಗ್ರಹ : ಸಂಪತ್ತಿನ ಸಂಗ್ರಹದ ವೇಳೆ ನೀವು ಯಾವ ಮಾರ್ಗ ಅನುಸರಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ. ನೀವು ಯಾವಾಗ್ಲೂ ಸರಿಯಾದ ಮಾರ್ಗದಲ್ಲಿ ಸಾಗಿ ಸಂಪತ್ತನ್ನು ಗಳಿಸಬೇಕು. ನೀವು ಸಂಪಾದನೆ ಮಾಡಿದ ಸಂಪತ್ತನ್ನು ಮೂರು ಭಾಗವಾಗಿ ವಿಂಗಡನೆ ಮಾಡಬೇಕು. ಒಂದು ಭಾಗ ನಿಮ್ಮ ಖರ್ಚಿಗೆ, ಇನ್ನೊಂದು ಭಾಗ ದಾನ – ಧರ್ಮಕ್ಕೆ ಹಾಗೂ ಮೂರನೇ ಭಾಗ ಭವಿಷ್ಯಕ್ಕಾಗಿ ಮೀಸಲಿಡಬೇಕು.