ಸದ್ಗುರು ಜಗ್ಗಿ ವಾಸುದೇವ್‌ ಅವರ ಪೂರ್ವಜನ್ಮಗಳ ಕತೆ ಹೀಗಿದೆ!

By Suvarna News  |  First Published Feb 14, 2024, 5:43 PM IST

ʼMore than a life- Sadhguruʼ ಎಂಬ ಹೆಸರಿನಲ್ಲಿ ಅರುಂಧತಿ ಸುಬ್ರಮಣ್ಯಂ ಅವರು ಬರೆದಿರುವ ಸದ್ಗುರು ಜೀವನಚರಿತ್ರೆಯಲ್ಲಿ ಈ ಕತೆಯಿದೆ. ಸದ್ಗುರು ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನ ತಮ್ಮ ಜನ್ಮವನ್ನು ನೆನಪಿಸಿಕೊಂಡಿದ್ದಾರೆ.


ಇತರ ಹಲವಾರು ಸಂತರಂತೆ ಸದ್ಗುರು ಜಗ್ಗಿ ವಾಸುದೇವ್ ಅವರೂ ತಮ್ಮ ಹಿಂದಿನ ಜನ್ಮಗಳ ಅರಿವು ಹೊಂದಿದ್ದಾರೆ; ಒಂದು ಕಡೆ ಅದರ ವಿವರಣೆಯನ್ನೂ ನೀಡಿದ್ದಾರೆ. ʼMore than a life- Sadhguruʼ ಎಂಬ ಹೆಸರಿನಲ್ಲಿ ಅರುಂಧತಿ ಸುಬ್ರಮಣ್ಯಂ ಅವರು ಬರೆದಿರುವ ಸದ್ಗುರು ಜೀವನಚರಿತ್ರೆಯಲ್ಲಿ ಈ ಕತೆಯಿದೆ.

ಸದ್ಗುರು ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನ ತಮ್ಮ ಜನ್ಮವನ್ನು ನೆನಪಿಸಿಕೊಂಡಿದ್ದಾರೆ. ಅದರಲ್ಲಿ ಮಧ್ಯಪ್ರದೇಶದ ರಾಯಗಡ್ ಜಿಲ್ಲೆಯಲ್ಲಿನ ಬುಡಕಟ್ಟು ಸಮುದಾಯದ ಬಿಲ್ವ ಎಂಬ ಯುವಕನಾಗಿದ್ದರಂತೆ. ಆತ ಹಾವಾಡಿಗರ ಸಮುದಾಯದವನಾಗಿದ್ದ. ಶಿವಭಕ್ತರಾಗಿದ್ದ. ಆತ ಶಾಂಭವಿ ಎಂಬ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸಿದ. ಆದರೆ ಅದು ಆ ಕಾಲದ ಸಮಾಜದಲ್ಲಿ ನಿಷೇಧಿತ ಕೃತ್ಯವಾಗಿತ್ತು. ಹೀಗಾಗಿ ಅವನನ್ನು ಮರಕ್ಕೆ ಕಟ್ಟಿಹಾಕಿ ವಿಷದ ಹಾವನ್ನು ಅವನ ಮೈಮೇಲೆ ಬಿಟ್ಟರಂತೆ. ಅದು ಅವನನ್ನು ಕಚ್ಚಿತು. ಹಾವಿನ ವಿಷ ಯುವಕನ ರಕ್ತನಾಳಗಳ ಮೂಲಕ ಹಾದುಹೋಗುತ್ತಿದ್ದಂತೆ ಅವನು ತನ್ನ ಉಸಿರಾಟವನ್ನು ಗಮನಿಸಲಾರಂಭಿಸಿದ. ಸಂಪೂರ್ಣ ಪ್ರಜ್ಞೆ ಇರುವಾಗಲೇ ದೇಹವನ್ನು ತ್ಯಜಿಸಿದ. ಆದ್ದರಿಂದ ಅವನ ಬದುಕಿನ ಕ್ರೂರ ಅಂತ್ಯವು ವರದಾಯಕವಾದ ನಿರ್ಗಮನವಾಯಿತು.

Latest Videos

undefined

ಸೂರ್ಯ , ಬುಧ ನಿಂದ ಬುಧಾದಿತ್ಯ ರಾಜಯೋಗ ಈ 5 ರಾಶಿಗೆ ಜಾಬ್‌ ನಲ್ಲಿ ಸಕ್ಸಸ್‌..ಡಬಲ್ ಲಾಭ...

ಮರಣದ ಸಮಯದಲ್ಲಿ ಹೊಂದಿದ್ದ ಸಂಪೂರ್ಣ ಅರಿವಿನಿಂದಾಗಿ ಸದ್ಗುರು ತಮ್ಮ ಮುಂದಿನ ಜನ್ಮದಲ್ಲಿ ಆಧ್ಯಾತ್ಮಿಕ (spiritual)  ಮಹತ್ವಾಕಾಂಕ್ಷಿಯಾಗಿ ಜನಿಸಿದರು. ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಶಿವಯೋಗಿ ಎಂದು ಹೆಸರಿತ್ತು. ಆ ಜೀವನದಲ್ಲಿ ಅಲೆದಾಡುವ ಸಾಧು ಆಗಿದ್ದರು. ತೀವ್ರವಾದ ಹಸಿವು ಮತ್ತು ಕಷ್ಟಗಳ ಜೀವನ ನಡೆಸಿದರು. ಯೋಗದ ಉನ್ನತ ಮಟ್ಟವನ್ನು ತಲುಪಿದರು. ಅನೇಕ ಅತೀಂದ್ರಿಯ ಶಕ್ತಿಗಳ ಮಾಸ್ಟರ್ (master) ಆಗಿದ್ದರು. ಆಗ ಸದ್ಗುರುವಿನ ಗುರು ಪಳನಿ ಸ್ವಾಮಿಗಳು ಆದಿಯೋಗಿ ಶಿವನಂತೆ ಅವರ ಮುಂದೆ ಕಾಣಿಸಿಕೊಂಡರು. ಪಳನಿ ಸ್ವಾಮಿಯು ತನ್ನ ಕೋಲನ್ನು ಎತ್ತಿ ಸಾಧಕನ ಹಣೆಯ ಮೇಲೆ ಇಟ್ಟ. ಆ ಕ್ಷಣದಲ್ಲಿ ಶಿವಯೋಗಿಗೆ ಜ್ಞಾನೋದಯವಾಯಿತು.

ನಂತರ ಶಿವಯೋಗಿಯು ಧ್ಯಾನಲಿಂಗದ ಆವಿಷ್ಕಾರಕ್ಕೆ ತೊಡಗಿದರು. ಧ್ಯಾನಲಿಂಗವು ಯೋಗದ ಒಂದು ಮಹಾನ್‌ ಸಾಧನ. ಆದರೆ ಆ ಜೀವನದಲ್ಲಿ ಶಿವಯೋಗಿಗಳ ಧ್ಯೇಯವನ್ನು ಪೂರ್ಣಗೊಳಿಸಲಾಗಲಿಲ್ಲ. ಶಿವಯೋಗಿಯು ಐವತ್ತೇಳನೇ ವಯಸ್ಸಿನಲ್ಲಿ ನಿಧನರಾದರು.

ನಂತರ 20ನೇ ಶತಮಾನದ ಆರಂಭದಲ್ಲಿ ಸದ್ಗುರು ಶ್ರೀ ಬ್ರಹ್ಮ ಎಂಬ ಹೆಸರಿನಲ್ಲಿ ಮರಳಿ ಜನಿಸಿದರು. ಧ್ಯಾನಲಿಂಗವನ್ನು ಸ್ಥಾಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಮತ್ತೆ ವಿಫಲರಾದರು. ಈ ಆಧ್ಯಾತ್ಮಿಕ ಪ್ರಕ್ರಿಯೆಗೆ ಸಾಮಾಜಿಕ ವಿರೋಧ ಇತ್ತು. ಈ ವಿಲಕ್ಷಣವಾದ ಯೋಗಾಭ್ಯಾಸಕ್ಕೆ ಪುರುಷರು ಮತ್ತು ಮಹಿಳೆಯರಿಬ್ಬರ ಸಾಂಗತ್ಯವೂ ಬೇಕಿತ್ತು. ಇದು ಸಾಂಪ್ರದಾಯಿಕ ಸಮಾಜವನ್ನು ಕೆರಳಿಸಿತು. ಸದ್ಗುರು ಶ್ರೀ ಬ್ರಹ್ಮರನ್ನು ಕೊಯಮತ್ತೂರಿನಿಂದ ಓಡಿಸಲಾಯಿತು. ಅವರು ತಮ್ಮ ನಲವತ್ತೆರಡನೇ ವಯಸ್ಸಿನಲ್ಲಿ ವೆಲ್ಲಿಯಂಗಿರಿ ಪರ್ವತಗಳ ಏಳನೇ ಬೆಟ್ಟದ ಮೇಲೆ ಎಲ್ಲಾ ಏಳು ಚಕ್ರಗಳ ಮೂಲಕ ತಮ್ಮ ದೇಹವನ್ನು ತೊರೆದರು. ಅಪರೂಪದ ಸಾಧನೆಯ ಯೋಗಿಗಳು ಮಾತ್ರ ಹೀಗೆ ಮಾಡುತ್ತಾರೆ. ಆದರೆ ನಿರ್ಗಮನದ ಮೊದಲು, ಸದ್ಗುರು ಶ್ರೀ ಬ್ರಹ್ಮರು 'ನಾನು ಹಿಂತಿರುಗುತ್ತೇನೆʼ ಎಂದು ಘೋಷಣೆ ಮಾಡಿದರು.

ಪ್ರೇಮಿಗಳ ದಿನ ಸೆಲಬ್ರೇಟ್ ಮಾಡೋಕೆ ಕಡಿಮೆ ಬಜೆಟ್‌ನಲ್ಲಿ ಈ ದೇಶಗಳಿಗೆ ಹೋಗ್ಬೋದು

ಅದೇ ಸದ್ಗುರು ಶ್ರೀ ಬ್ರಹ್ಮರು ಇದೀಗ ಸದ್ಗುರು ಜಗ್ಗಿ ವಾಸುದೇವ್ ಎಂದು ಪ್ರಸಿದ್ಧರಾಗಿದ್ದಾರೆ. ಹೀಗಾಗಿ ಅವರ ಆಧ್ಯಾತ್ಮಿಕ ಸಾಧನೆಯು ಶಿವಯೋಗಿ, ಧ್ಯಾನಲಿಂಗ, ಶಾಂಭವಿ ದೀಕ್ಷೆ ಎಲ್ಲವನ್ನೂ ಹೊಂದಿದೆ. 

click me!