ಹಲ್ಲಿ ಹೆಸರು ಕೇಳ್ತಿದ್ದಂತೆ ಮೈ ಜುಮ್ ಎನ್ನುತ್ತೆ. ಅದು ಮೈಮೇಲೆ ಬಿದ್ರೆ ಹಾರ್ಟ್ ಫಾಸ್ಟ್ ಆಗಿ ಬಡಿದುಕೊಳ್ಳೋದು ಸಾಮಾನ್ಯ. ಈ ಹಲ್ಲಿ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಹಲ್ಲಿ ಮನೆಯ ಯಾವ ಜಾಗದಲ್ಲಿದ್ರೆ ಯಾವ ಸೂಚನೆ ಅನ್ನೋದನ್ನು ನಾವಿಂದು ಹೇಳ್ತೇವೆ.
ಹಲ್ಲಿ ಎಂದಾಕ್ಷಣ ಹೆದರುವವರೇ ಹೆಚ್ಚು. ಮನೆಯ ಗೋಡೆಯ ಮೇಲೆ, ಮೇಲ್ಛಾವಣಿಯ ಮೇಲೆ ಹಲ್ಲಿ ಇರುವುದು ಸರ್ವೇ ಸಾಮಾನ್ಯ. ಕೆಲವು ಕಡೆ ಇದನ್ನು ಗೋಡೆ ಬ್ರಾಹ್ಮಣ ಎಂದು ಕೂಡ ಕರೆಯುತ್ತಾರೆ. ಹಲ್ಲಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶಕುನ. ದೇಹದ ವಿವಿಧ ಭಾಗದಲ್ಲಿ ಹಲ್ಲಿ ಬಿದ್ದರೆ ಒಂದೊಂದು ರೀತಿಯ ಶಕುನಗಳನ್ನು ಹೇಳುತ್ತಾರೆ. ಹಲ್ಲಿ ಲೊಚಗುಟ್ಟಿದರೆ ಹಾಗೂ ಹಲ್ಲಿ ನೆಲದ ಮೇಲೆ ಬಿದ್ದರು ಕೂಡ ಅದಕ್ಕೆ ನಾನಾ ಅರ್ಥಗಳಿವೆ. ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಹಲ್ಲಿ (Lizard) ಕಾಣುವುದು ಹಲವು ವಿಷಯಗಳ ಸಂಕೇತ. ಒಂದೊಂದು ಸ್ಥಳದಲ್ಲಿ ಹಲ್ಲಿ ಕಾಣುವುದು ಒಂದೊಂದು ವಿಷಯದ ಮುನ್ಸೂಚನೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಮನೆ (House) ಯ ಒಳಗಡೆ ಹಲ್ಲಿ ಕಾಣಿಸಿಕೊಂಡರೆ ಕೆಲವರು ಹೆದರುತ್ತಾರೆ, ಇನ್ನೂ ಕೆಲವರು ಇದನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನ ಮಾಡುತ್ತಾರೆ.
ಕೆಲವರ ಪಾಲಿಗೆ ಹೆದರಿಕೆ, ಹೇಸಿಗೆಯಾಗಿರುವ ಈ ಹಲ್ಲಿ ಮನೆಯ ನಿಶ್ಚಿತ ಪ್ರದೇಶಗಳಲ್ಲಿ ಕಾಣಿಸಿಕೊಂಡರೆ ಶುಭವಾಗುತ್ತೆ. ಕೆಲವು ಮಂದಿ ಇದನ್ನು ಲಕ್ಷ್ಮಿ (Lakshmi) ಯ ರೂಪದಲ್ಲಿ ಕೂಡ ಕಾಣ್ತಾರೆ. ಮನೆಯ ಮುಖ್ಯಬಾಗಿಲಿನಲ್ಲಿ ಕಾಣಿಸಿಕೊಳ್ಳುವ ಹಲ್ಲಿ ಅನೇಕ ರೀತಿಯ ಸಂಕೇತಗಳನ್ನು ನೀಡುತ್ತದೆ. ಹಲ್ಲಿ ಹೀಗೆ ಮುಖ್ಯ ಬಾಗಿಲಿನಲ್ಲಿ ಕಾಣಿಸಿಕೊಳ್ಳುವುದು ಮುಂದಿನ ದಿನಗಳ ಶುಭ ಮತ್ತು ಅಶುಭದ ಮುನ್ಸೂಚನೆಯಾಗಿದೆ.
ಮನೆಯ ಮುಖ್ಯ ಬಾಗಿಲಿನಲ್ಲಿ ಹಲ್ಲಿ ನುಗ್ಗಿ ಬಂದರೆ ಏನಾಗುತ್ತೆ? : ಮನೆಯ ಮುಖ್ಯ ಬಾಗಿಲಿನಿಂದ ಹಲ್ಲಿ ಬರುವುದು ನಿಮ್ಮ ಕಣ್ಣಿಗೆ ಬಿದ್ರೆ ಸದ್ಯದಲ್ಲಿಯೇ ನಿಮಗೆ ಧನಲಾಭವಾಗುತ್ತದೆ. ಯಾರೋ ನಿಮಗೆ ಕೊಡಬೇಕಾಗಿದ್ದ ಹಣ ಇನ್ನೂ ಬಂದಿಲ್ಲವೆಂದಾದ್ರೆ ಶೀಘ್ರವೇ ಆ ಹಣ ನಿಮ್ಮ ಕೈಸೇರುತ್ತದೆ. ಹಲ್ಲಿ ಹೀಗೆ ಕಾಣಿಸುವುದರಿಂದ ಮನೆಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.
ಎರಡು ಹಲ್ಲಿಗಳು ಮನೆಯ ಮುಖ್ಯ ಬಾಗಿಲಲ್ಲಿ ಕಾಣಿಸಿಕೊಂಡ್ರೆ ಏನರ್ಥ ? : ನಿಮ್ಮ ಮನೆಯ ಬಾಗಿಲಲ್ಲಿ ಎರಡು ಹಲ್ಲಿಗಳು ಇರುವುದು ನಿಮಗೆ ಕಾಣಿಸಿದರೆ ಅದು ಕೂಡ ಶುಭ ಸಂಕೇತವಾಗಿದೆ. ಎರಡು ಹಲ್ಲಿಗಳು ಕಾಣಿಸುವುದು ಸುಖ ದಾಂಪತ್ಯದ ಮುನ್ಸೂಚನೆಯಾಗಿದೆ. ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೆ, ಅಂತಹ ಸಂಬಂಧಗಳು ಒಂದಾಗುತ್ತವೆ ಎಂಬುದು ಇದರ ಸೂಚನೆಯಾಗಿದೆ.
ಮನೆಯ ಬಾಗಿಲಲ್ಲಿ ಸತ್ತ ಹಲ್ಲಿ : ಮನೆಯ ಮುಖ್ಯ ಬಾಗಿಲಲ್ಲಿ ಹಲ್ಲಿ ಸಾಯುವುದು ಅಶುಭದ ಸಂಕೇತವಾಗಿದೆ. ಹೀಗೆ ಸತ್ತು ಬಿದ್ದ ಹಲ್ಲಿ ಕಾಣಿಸಿದರೆ ನಿಮ್ಮ ಮನೆಗೆ ಸದ್ಯದಲ್ಲಿಯೇ ಯಾವುದೋ ಕಷ್ಟ ಬರಲಿದೆ ಎಂದರ್ಥ. ನಿಮ್ಮ ಮನೆಯವರಿಗೆ ಅಥವಾ ನಿಮ್ಮ ಆಪ್ತರಿಗೆ ಅನಾರೋಗ್ಯ ಉಂಟಾಗುವ ಸೂಚನೆಯನ್ನು ಕೂಡ ಇದು ನೀಡುತ್ತದೆ. ಇಂಥಹ ಸಮಯದಲ್ಲಿ ಜಾಗರೂಕರಾಗಿರಿ.
Vastu Tips : ಸಾಲದ ಸಮಸ್ಯೆ ದೂರ ಮಾಡಲು ಕೆಂಪು ಗುಲಾಬಿಯನ್ನು ಈ ರೀತಿ ಬಳಸಿ!
ಹೊಸ ಮನೆಯನ್ನು ಪ್ರವೇಶಿಸುವಾಗ ಹಲ್ಲಿ ಕಾಣಿಸಿದ್ರೆ ? : ಮನೆ ಎಂದೂ ಸಮೃದ್ಧವಾಗಿರಲಿ ಎಂದು ಹೊಸ ಮನೆಯಲ್ಲಿ ಹಾಲನ್ನು ಉಕ್ಕಿಸುತ್ತೇವೆ. ಹೀಗೆ ಹೊಸ ಮನೆ ಪ್ರವೇಶಿಸುವಾಗ ಹಲ್ಲಿ ಕಂಡರೆ ಅದು ಒಳ್ಳೆಯ ಸಂಕೇತವಲ್ಲ. ಇದು ಹೊಸ ಮನೆಯಲ್ಲಿ ಏನೋ ಕೆಟ್ಟದಾಗುವುದರ ಮುನ್ಸೂಚನೆಯಾಗಿದೆ.
ಮುಖ್ಯಬಾಗಿಲಲ್ಲಿ ಬಾಲ ತುಂಡಾದ ಹಲ್ಲಿ : ಕೆಲವೊಮ್ಮೆ ಹಲ್ಲಿಗಳು ಶತ್ರುವಿನಿಂದ ಪಾರಾಗುವಾಗ ತಮ್ಮ ಬಾಲವನ್ನು ಕಳಚುವುದನ್ನು ನೀವು ನೋಡಿರಬಹುದು. ನಿಮ್ಮ ಮನೆಯ ಮೇನ್ ಡೋರ್ ನಲ್ಲಿ ಹೀಗೆ ಬಾಲ ಕಳಚಿದ ಹಲ್ಲಿ ಕಾಣಿಸಿದರೆ ಅದು ಒಳ್ಳೆಯ ಸೂಚನೆಯಲ್ಲ. ಇದು ನಿಮ್ಮ ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಎಂಬ ನಕಾರಾತ್ಮಕ ಸಂಕೇತವಾಗಿದೆ. ಇದರಿಂದ ನಿಮಗೆ ಧನಹಾನಿ ಕೂಡ ಆಗಬಹುದು.
ಈ ರಾಶಿಯವ್ರಿಗೆ ಉಳಿತಾಯ ಅಂದ್ರೇನು ಗೊತ್ತೇ ಇಲ್ಲ, ಗಳಿಸಿದ್ದನ್ನೆಲ್ಲ ವೆಚ್ಚ ಮಾಡಿದ್ರಷ್ಟೇ ಸಮಾಧಾನ!
ಯಾತ್ರೆಗೆ ಹೋಗುವಾಗ ಹಲ್ಲಿ ಕಂಡರೆ ? : ಯಾತ್ರೆಗೆ ಹೊರಡುವ ಸಮಯದಲ್ಲಿ ಎಲ್ಲರೂ ಶುಭವನ್ನೇ ಹಾರೈಸುತ್ತಾರೆ. ಅಂತಹ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ನೀವು ಭಯಪಡಬೇಕಾಗಿಲ್ಲ. ಏಕೆಂದರೆ, ಇದರಿಂದ ಯಾತ್ರೆ ಸುಗಮವಾಗುತ್ತದೆ. ಅದೇ ನೀವು ಯಾತ್ರೆಗೆ ಹೋಗುವಾಗ ಸತ್ತ ಹಲ್ಲಿಯನ್ನು ನೋಡಿದರೆ ಅದು ಅಶುಭವಾಗಿದೆ.