ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಮಹಾದಾಸೋಹ ಶನಿವಾರ ಸಂಪನ್ನವಾಗಿದ್ದು, ಕೊನೆಯ ದಿನವೂ ಜನಸಾಗರ ಹರಿದು ಬಂದಿತ್ತು.11 ಕೊಪ್ಪರಿಗೆ ಗೋದಿಹುಗ್ಗಿ, 100 ಕ್ವಿಂಟಲ್ ಅಕ್ಕಿ ಸೇರಿದಂತೆ ಅಪಾರ ಪ್ರಮಾಣದ ಆಹಾರ ಪದಾರ್ಥ ಬಳಕೆಯಾಗಿದೆ.
ಕೊಪ್ಪಳ (ಜ.22) : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಮಹಾದಾಸೋಹ ಶನಿವಾರ ಸಂಪನ್ನವಾಗಿದ್ದು, ಕೊನೆಯ ದಿನವೂ ಜನಸಾಗರ ಹರಿದು ಬಂದಿತ್ತು. ಒಂದು ಅಂದಾಜಿನಂತೆ ಸಂಜೆಯ ವರೆಗೆ ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸೇವಿಸಿದ್ದು, ಇನ್ನೂ ಮಧ್ಯ ರಾತ್ರಿಯ ವರೆಗೂ ಅನ್ನಪ್ರಸಾದ ಮುಂದುವರಿಯಲಿದೆ.
ಪ್ರತಿ ವರ್ಷ ಜಾತ್ರೆಯಲ್ಲಿ ರಥೋತ್ಸವಕ್ಕೂ ಮುನ್ನಾ ದಿನ ಪ್ರಾರಂಭವಾಗುವ ಮಹಾದಾಸೋಹ(Mahadasoha) ಅಮಾವಾಸ್ಯೆಯಂದು ಸಂಪನ್ನಗೊಳ್ಳುತ್ತದೆ. ಅಮಾವಾಸ್ಯೆಯಂದು ಜನಸಾಗರವೇ ಹರಿದು ಬಂದಿದ್ದರಿಂದ ಸುಮಾರು 11 ಕೊಪ್ಪರಿಗೆ ಗೋದಿಹುಗ್ಗಿ, 100 ಕ್ವಿಂಟಲ್ ಅಕ್ಕಿ ಸೇರಿದಂತೆ ಅಪಾರ ಪ್ರಮಾಣದ ಆಹಾರ ಪದಾರ್ಥ ಬಳಕೆಯಾಗಿದೆ. 300ಕ್ಕೂ ಹೆಚ್ಚು ಬಾಣಸಿಗರು ನಿನ್ನೆ ರಾತ್ರಿಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧ್ಯರಾತ್ರಿ ವರೆಗೂ ಪ್ರಸಾದ ವಿತರಣೆ ನಡೆಯುತ್ತಿರುತ್ತದೆ.
undefined
Koppal Gavisiddeshwara jatre: ಮಹಾದಾಸೋಹಕ್ಕೆ 6 ಕ್ವಿಂಟಲ್ ಬುಂದಿ, 4 ಕ್ವಿಂಟಲ್ ಕರದಂಟು ನೀಡಿದ ಭಕ್ತರು!
ನಗರ ನಿವಾಸಿಗಳು ಅಧಿಕ ಪ್ರಮಾಣದಲ್ಲಿ ದಾಸೋಹಕ್ಕೆ ಕೊನೆಯ ದಿನ ಬರುವ ಸಂಪ್ರದಾಯ ಇದೆ. ಮಹಾದಾಸೋಹದಲ್ಲಿ ಸಿದ್ಧ ಮಾಡಿರುವುದು ಅಲ್ಲದೆ ನಾನಾ ಭಕ್ತರು ನಾನಾ ರೀತಿಯ ತಿಂಡಿ, ತಿನಿಸುಗಳನ್ನು ತಂದು ಮಹಾದಾಸೋಹದಲ್ಲಿ ಹಂಚಿಕೆ ಮಾಡುವ ಸಂಪ್ರದಾಯ ಇದೆ.
ದಾಸೋಹ ನಿರಂತರ:
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾದಾಸೋಹ ಸಂಪನ್ನಗೊಂಡರೂ ಮಠದಲ್ಲಿ ದಾಸೋಹ ನಿರಂತರವಾಗಿ ನಡೆಯುತ್ತಿರುತ್ತದೆ. ನಿತ್ಯವೂ ಬೆಳಗ್ಗೆಯೇ ಪ್ರಾರಂಭವಾಗುವ ದಾಸೋಹ ರಾತ್ರಿ ವರೆಗೂ ನಡೆಯುತ್ತದೆ. ಅಮಾವಾಸ್ಯೆಯಂದು ದೊಡ್ಡ ಪ್ರಮಾಣದಲ್ಲಿ ದಾಸೋಹ ಇದ್ದೇ ಇರುತ್ತದೆ.ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: 5 ಲಕ್ಷ ಮಂದಿಗೆ ಪ್ರಸಾದ..!