krishna janmashtami: ಕೃಷ್ಣಮಠದಲ್ಲಿ ಈ ಬಾರಿ ಶೀರೂರು ಹುಲಿವೇಷ ವಿಶೇಷ

By Ravi JanekalFirst Published Sep 4, 2023, 3:40 PM IST
Highlights

ಈ ಬಾರಿಯ ಕೃಷ್ಣಜನ್ಮಾಷ್ಟಮಿಯ ವಿಟ್ಲಪಿಂಡಿ ಮಹೋತ್ಸವದಂದು ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುವುದು ಎಂದು ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು ತಿಳಿಸಿದ್ದಾರೆ.

ಉಡುಪಿ (ಸೆ.4): ಈ ಬಾರಿಯ ಕೃಷ್ಣಜನ್ಮಾಷ್ಟಮಿಯ ವಿಟ್ಲಪಿಂಡಿ ಮಹೋತ್ಸವದಂದು ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುವುದು ಎಂದು ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು ತಿಳಿಸಿದ್ದಾರೆ.

ಉಡುಪಿಯ ರಥಬೀದಿಯಲ್ಲಿರುವ ಶಿರೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ವಿವರಿಸಿದರು. 
ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ಈ ಹಿಂದೆ ವಿಜೃಂಭಣೆಯಿಂದ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದರು. ಅವರಂತೆಯೇ ಸಂಭ್ರಮ, ಸಡಗರದಿಂದ ಅಷ್ಟಮಿಯನ್ನು ಆಚರಿಸಲಾಗುತ್ತದೆ ಎಂದರು. ಸೆ.7 ರಂದು ಸಂಜೆ 4 ರಿಂದ 8 ಗಂಟೆಯವರೆಗೆ ರಥಬೀದಿಯ ತೆಂಕು ಸುತ್ತಿನಲ್ಲಿ ಹಾಕಿರುವ ರಥದ ಗುತ್ತಿನ ಅನ್ನ ವಿಠಲ ವೇದಿಕೆಯಲ್ಲಿ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿರೂರು ಮಠದ ಕಚೇರಿಯನ್ನು ಸಂಪರ್ಕಿಸಬಹುದು ಎಂದರು. 

ಮುಂದೆ ಪಾಣಾರನಾಗಿ ಹುಟ್ಟಿ ದೈವದ ಚಾಕರಿ ಮಾಡೋ ಆಸೆ: ರಿಷಬ್‌ ಶೆಟ್ಟಿ

ಶೀರೂರು ಮಠ ಮತ್ತು ಹುಲಿವೇಷ ವಿಶೇಷ

ಉಡುಪಿ ಅಂದರೆ ಕೃಷ್ಣಮಠ, ಕೃಷ್ಣಮಠವೆಂದರೆ ಅಷ್ಟಮಿ, ಅಷ್ಟಮಿ ಅಂದರೆ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು. ಹೀಗೊಂದು ಭಾವನೆ ಮೂಡುವುದಕ್ಕೆ ಕಾರಣವೂ ಇದೆ, ವಿಟ್ಲಪಿಂಡಿ ಆಚರಣೆಗೆ ಹೊಸ ಆಯಾಮ ಕೊಟ್ಟವರು ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮಿವರ ತೀರ್ಥ ಸ್ಚಾಮಿಗಳು. ಅಷ್ಟಮಿಯ ದಿನ ಆರ್ಘ್ಯ ಪ್ರದಾನ ಮುಗಿದ ನಂತರ, ಶ್ರೀ ಕೃಷ್ಣ ಲೀಲೋತ್ಸವದ ಸಂಭ್ರಮ ರಥ ಬೀದಿಯನ್ನು ಆವರಿಸಿಬಿಡುತ್ತದೆ. ಅನೇಕ ಮಂದಿ ಉಪವಾಸ, ಪೂಜೆ ಪುನಸ್ಕಾರಗಳ ಮೂಲಕ ಕೃಷ್ಣ ನ ಆರಾಧನೆ ಮಾಡಿದರೆ, ಕಲಾರಾಧನೆಯ ಮೂಲಕ ಕೃಷ್ಣನ ಪೂಜೆ ಮಾಡುವವರು ಸಾವಿರಾರು ಮಂದಿ. ಹರಕೆ ಹೊತ್ತು ವೇಷ ಧರಿಸಿ ಕೃಷ್ಣ ನ ಸೇವೆ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ.

ಅಷ್ಟಮಿಯ ಹುಲಿ ವೇಷಗಳೆಂದರೆ, ಉಡುಪಿಯ ಹಬ್ಬಕ್ಕೆ ಹೊಸ ಆಯಾಮ ಕೊಟ್ಟ ಕಲಾಪ್ರಕಾರವಾಗಿದೆ. ಹುಲಿವೇಷ ಕುಣಿತಕ್ಕೆ ಮಠದ ಅಂಗಳದಲ್ಲಿ ಅಧಿಕೃತ ಮಾನ್ಯತೆ ಕೊಟ್ಟ ಯತಿಗಳೆಂದರೆ ಶ್ರೀ ಲಕ್ಷ್ಮಿ ವರ ತೀರ್ಥರು, ಶಾಸ್ತ್ರೀಯ ಕಲೆಗಳ ಜೊತೆ ಭೇದ ಭಾವ ಮಾಡದೆ ಈ ಜನಪದ ಸಂಸ್ಕೃತಿಯನ್ನು ಹಾಡಿ ಹೊಗಳಿದವರು, ಶ್ರೀ ಲಕ್ಷ್ಮಿ ವರತೀರ್ಥ ಸ್ವಾಮೀಜಿ. 

ತಾನೇ ಸ್ವತಹ ಕೀಬೋರ್ಡ್, ಡ್ರಮ್ಸ್ ನುಡಿಸಿ, ವೇಷಗಳನ್ನು ಕುಣಿಸಿ ತಾನು ಮುಗ್ದ ಮಗುವಿನಂತೆ ಸಂಭ್ರಮಿಸುತ್ತಿದ್ದವರು ಶ್ರೀ ಲಕ್ಷ್ಮೀವರ ತೀರ್ಥರು. ಅವರ ಕಾಲಾನಂತರ ಶಿರೂರು ಶ್ರೀಗಳಿಲ್ಲದ ಅಷ್ಟಮಿಯಲ್ಲಿ ಜನ ಸಂಕಟ ಪಟ್ಟದ್ದೂ ಇದೆ. 
ಹುಲಿ ವೇಷ ಸಂಸ್ಕೃತಿಗೆ ಯಾವ ರೀತಿ ಪೋಷಣೆ ನೀಡಬೇಕು ಎಂದು ಅವರು ದಾರಿ ತೋರಿದ್ದಾರೆ. ಅವರು ತೋರಿದ ದಾರಿಯಲ್ಲಿ ಅಷ್ಟಮಿಗೆ ಹೊಸ ಜೀವ ನೀಡುವ ಪ್ರಯತ್ನವನ್ನು ಶಿರೂರು ಮಠ ಮಾಡುತ್ತಿದೆ. ಶ್ರೀ ವೇದವರ್ಧನ ತೀರ್ಥರ ಮಾರ್ಗದರ್ಶನದಲ್ಲಿ, ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದು ಮತ್ತೆ ಹುಲಿವೇಷಕ್ಕೆ ವೇದಿಕೆ ಸಿದ್ಧವಾಗಿದೆ.

ಸನಾತನಧರ್ಮ ಎಂಬುದು ಸದಾಕಾಲ ಇರುವಂತದ್ದು; ಪೇಜಾವರಶ್ರೀ

ಶ್ರೀ ಲಕ್ಷ್ಮಿವರ ತೀರ್ಥರು ಮಾಡಿದಂತೆ ನೋಟಿನ ಮಾಲೆಗಳನ್ನು ಮಾಡಿ, ಕಲಾವಿದರನ್ನು ಕಲಾತಂಡಗಳನ್ನು ಪೋಷಿಸಲು ಮಠ ಮುಂದಾಗಿದೆ. ಈ ಮೂಲಕ ಲಕ್ಷ್ಮಿ ಪ್ರಸಾದವನ್ನು ಕಲಾವಿದರಿಗೆ ಕೊಟ್ಟು ಪ್ರತಿಯೊಬ್ಬ ಬಡ ಕಲಾವಿದನ ಆರ್ಥಿಕ ಸ್ಥಿತಿ ಏಳಿಗೆ ಕಾಣಬೇಕು ಅನ್ನೋದು ಮಠದ ಆಶಯ.

ಪತ್ರಿಕಾಗೋಷ್ಠಿ ಮಠದ ದಿವಾನ ಉದಯ್ ಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.

click me!