ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣನ ವೇಶ ತೊಡಿಸಿ ಸಂಭ್ರಮಿಸುತ್ತಿದ್ದಾರೆ. ಯಾದಗಿರಿಯ ಚಿಣ್ಣರು ಕೃಷ್ಣನ ವೇಷ ಧರಿಸಿ ಮಡಿಕೆ ಒಡೆದು ಸಂಭ್ರಮಿಸಿದ್ದಾರೆ.
ವರದಿ: ಪರಶುರಾಮ ಐಕೂರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ ಆ.19) : ಮಕ್ಕಳಿಗೆ ಯಾವ ವೇಷ ಹಾಕಿದ್ರೂ ಮುದ್ದಾಗಿ ಕಾಣುತ್ತವೆ. ಹಬ್ಬ-ಹರಿ ದಿನಗಳು ಅಂದ್ರೆ ಸಾಕು ಪೋಷಕರು ಮಕ್ಕಳಿಗೆ ಚಂದ ಕಾಣುವಂತೆ ಸಿಂಗಾರ ಮಾಡುತ್ತಾರೆ. ಆದ್ರೆ ಇವತ್ತು ಕೃಷ್ಣ ಜನ್ಮಾಷ್ಟಾಮಿ ಇದೆ. ಮಕ್ಕಳಿಗೆ ಯಾದಗಿರಿ ಜಿಲ್ಲೆಯ ಪೋಷಕರು ಕೃಷ್ಣನ ಬೇರೆ ಬೇರೆ ವೇಷಗಳನ್ನು ಹಾಕುವುದರ ಮೂಲಕ ಸಕತ್ ಆಗಿ ರೆಡಿ ಮಾಡಿದ್ದಾರೆ. ಯಾದಗಿರಿ ನಗರದ ಶಾಂತಿ ಸದನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ದಾದ ಮಕ್ಕಳು ಕಳ್ಳ ಕೃಷ್ಣ ವೇಷದಲ್ಲಿ ಸಕತ್ ಆಗಿ ಮಿಂಚಿದ್ರು.
undefined
Panchanga: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಕೃಷ್ಣನ ಅವತಾರ ಹೇಗಾಯಿತು?
ಕೃಷ್ಣ-ರಾಧೆ ವೇಷ ತೊಟ್ಟು ಮುದ್ದು ಕಂದಮ್ಮ ಫುಲ್ ಖುಷಿ:
ಇವತ್ತು ದೇಶದಲ್ಲೇಡೆ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ(Krishna Janmashtamik)ಯ್ನ ಆಚರಿಸಲಾಗುತ್ತಿದೆ. ಅದೇ ತರಹ ಇವತ್ತು ಯಾದಗಿರಿ(Yadagiri) ನಗರದ ಶಾಂತಿ ಸದನ ಖಾಸಗಿ ಶಾಲೆಯಲ್ಲಿ ವಿಶೇಷ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನ ಆಚರಿಸಲಾಯ್ತು. ಶಾಲೆಯಲ್ಲಿನ ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳಿಂದ ಸಂಭ್ರಮ ಮನೆ ಮಾಡಿತ್ತು. ಹತ್ತಾರು ಮಂದಿ ಪುಟಾಣಿಗಳು ಕಳ್ಳ ಕೃಷ್ಣನ ವೇಷದಲ್ಲಿ ಮಿಂಚಿದ್ರೆ. ಪುಟಾಣಿ ಬಾಲಕಿಯರು ಸಹ ಕೃಷ್ಣನಿಗೆ ಸಾಥ್ ನೀಡಲು ರಾಧೆಯ ವೇಷದಲ್ಲಿ ಬಂದಿದ್ರು. ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮವನ್ನ ಮಾಡಬೇಕು ಅಂತ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ಮಕ್ಕಳ ಪೋಷಕರಿಗೆ ಸಹ ಮೊದಲೇ ಹೇಳಲಾಗಿತ್ತು. ಇವತ್ತು ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಯಾವ ರೀತಿ ಸಿಂಗಾರ ಮಾಡಿಕೊಂಡು ಬಂದಿದ್ರು ಅಂದ್ರೆ ನೋಡಿದವರ ದೃಷ್ಟಿ ತಾಗಿರಬಹುದು ಆ ರೀತಿಯಲ್ಲಿ ಸಿಂಗಾರಗೊಂಡು ಬಂದಿದ್ರು. ಶಾಲೆಯಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದ್ದ ಹಾಗೆ ಒಬ್ಬರೇ ಆಗಿ ಕೃಷ್ಣ ಮತ್ತು ರಾಧೆ ಜೋಡಿ ಜೋಡಿಯಾಗಿ ಬಂದು ನೃತ್ಯ ಮಾಡಿದ್ರು. ರಾಧೆ ಬೆಣ್ಣೆಯನ್ನ ತೆಗೆದುಕೊಂಡು ಬರುವಾಗ ದಾರಿ ಮದ್ಯೆದಲ್ಲಿ ಬಂದ ಕಳ್ಳ ಕೃಷ್ಣ ಬೆಣ್ಣೆಯನ್ನ ತಿನ್ನೋದ್ದಕ್ಕೆ ಹರಸಾಹಸ ಪಡುತ್ತಾನೆ. ಇನ್ನು ರಾಧೆ ಬೆಣ್ಣೆ ಬಿಟ್ಟು ಸ್ವಲ್ಪ ದೂರು ಹೋಗುತ್ತಿದ್ದ ಹಾಗೆ ಕೃಷ್ಣ ಮಡಿಕೆಯಿಂದ ಕದ್ದು ಬೆಣ್ಣೆಯನ್ನ ತಿನ್ನುತ್ತಾನೆ. ಕೃಷ್ಣ ವೇಷದಲ್ಲಿ ಮಕ್ಕಳು ಥೇಟ್ ಕೃಷ್ಣನೇ ಕಣ್ಣ ಮುಂದೆ ಬಂದಿರುವ ರೀತಿಯಲ್ಲಿ ನೃತ್ಯ ಮೂಲಕ ತೋರಿಸಿದ್ರು. ಇನ್ನು ಪುಟಾಣಿಗಳು ಕೃಷ್ಣ ರಾಧೆಯ ವೇಷದಲ್ಲಿ ಬಂದು ಮಿಂಚಿದ್ದನ್ನ ಕಂಡು ಪೋಷಕರ ದಿಲ್ ಖುಷ್ ಆಗಿದೆ.
ಮಡಿಕೆ ಹೊಡೆದು ಚಿಣ್ಣರ ಸಂಭ್ರಮ:
ಮಕ್ಕಳ ವೇಷ ಭೂಷಣ ಹೇಗಿತ್ತು ಅಂದ್ರೆ ಪುಟಾಣಿ ಹುಡುಗರು ಪಂಜೆ ಹಾಕಿ ತಲೆ ಮೇಲೆ ಗಿರಿಟವನ್ನ ಹಾಕಿಕೊಂಡಿದ್ರು. ಇನ್ನು ಕೈಯಲ್ಲಿ ಕೊಳಲು ಹಿಡಿದುಕೊಂಡು ಉದುತ್ತ ಕುಳಿತುಕೊಂಡಿದ್ರು. ಇನ್ನು ಕಂದಮ್ಮ ಬಾಲಕಿಯರು ಲಂಗ ದಾವಣಿ ಹಾಕಿಕೊಂಡು ಥೇಟ್ ರಾಧೆಯ ತರಹ ಮಿಂಚಿದ್ರು. ಮಕ್ಕಳ ವೇಷ ಭೂಷಣ ನೋಡಿ ದಂಗಾಗಿದ್ರು. ಇನ್ನು ಕೃಷ್ಣ ರಾಧೆಯ ವೇಷದಲ್ಲಿ ಬಂದ ಮಕ್ಕಳ ನೃತ್ಯ ಮುಗಿದ ಬಳಿಕ ಶಾಲೆಯ ಆವರಣದಲ್ಲಿ ಮೊಸರು ಮಡಕೆಯುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ಡ್ಯಾನ್ಸ್ ಮುಗಿಸಿಕೊಂಡು ಮೊಸರು ಮಡಕೆಯನ್ನ ಹೊಡೆಯೋದ್ದಕ್ಕೆ ಓಡೋಡಿ ಬಂದ್ರು. ಕೈಯಲ್ಲಿದ್ದ ಕೊಳಲನ್ನ ಹಿಡಿದುಕೊಂಡು ಮೊಸರು ಮಡಕೆಯನ್ನ ಹೊಡೆಯೋದ್ದಕ್ಕೆ ನಾ ಮುಂದೆ ತಾ ಮುಂದೆ ಪೈಪೋಟಿ ನಡೆಸಿದ್ರು. ಕೊನೆಗೆ ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಬಂದಿದ್ದ ಪುಟಾಣಿಗಳು ಸಾಮೂಹಿಕವಾಗಿ ಮೊಸರು ಮಡಕೆಯನ್ನ ಹೊಡೆಯುವ ಮೂಲಕ ಸಂಭ್ರಮಿಸಿದ್ರು. ಇನ್ನು ಪುಟಾಣಿಗಳು ಇರುವ ಕಾರಣಕ್ಕೆ ಮಡಕೆಯಲ್ಲಿ ಮೊಸರಿನ ಬದಲಿಗೆ ಚಾಕೊಲೇಟ್ ಹಾಕಲಾಗಿತ್ತು. ಹೀಗಾಗಿ ಮಡಕೆ ಹೊಡೆದ ಕೂಡ್ಲೆ ಪುಟಾಣಿಗಳು ಚಾಕೊಲೇಟ್ ಗಾಗಿ ಪೈಪೋಟಿ ನಡೆಸಿದ್ರು. ಇನ್ನು ಇವತ್ತು ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಇಡಿ ಶಾಲೆಯಲ್ಲಿ ಮಕ್ಕಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಮಕ್ಕಳನ್ನ ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಬಂದಿದ್ದಕ್ಕೆ ಶಾಲೆಯಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿತ್ತು.
ದಿನಭವಿಷ್ಯ: ಕೃಷ್ಣ ಜನ್ಮಾಷ್ಟಮಿಯ ಈ ದಿನ ನಿಮ್ಮ ಭವಿಷ್ಯ ಏನಿದೆ?
ಯಾದಗಿರಿಯಲ್ಲಿ ಕೃಷ್ಣಾ ಜನ್ಮಾಷ್ಟಮಿಯ ಸಂಭ್ರಮ:
ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದ್ರೆ ಯಾದಗಿರಿಯಲ್ಲಿ ಮಾತ್ರ ಮಕ್ಕಳ ಕೃಷ್ಣ ಮತ್ತು ರಾಧೆ ವೇಷದಲ್ಲಿ ಸಿಂಗಾರಗೊಂಡು ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದರಿಂದ ಥೇಟ್ ಕೃಷ್ಣ ರಾಧೆಯೇ ಕಣ್ಣೇದರು ಬಂದಂತಾಗಿದ್ದಂತು ಸುಳ್ಳಲ್ಲ.