Vijayanagara: ಸಂಭ್ರಮ ಸಡಗರಿಂದ ಜರುಗಿದ ಕೊಟ್ಟೂರು ಗುರುಬಸವೇಶ್ವರ ಜಾತ್ರಾ ಮಹೋತ್ಸವ

By Suvarna News  |  First Published Feb 16, 2023, 9:37 PM IST

ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ಮಧ್ಯ ಕರ್ನಾಟಕದ ಆರಾಧ್ಯ ದೈವ ಕೊಟ್ಟೂರೇಶ್ವರನ ಜಾತ್ರೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು. 


ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ (ಫೆ.16): ಆ ಜಾತ್ರೆಗೆ ಜನರು ವಾಹನದಲ್ಲಿ ಅಲ್ಲ ಕಿಲೋಮೀಟರ್ ಗಟ್ಟಲೇ ತಮ್ಮ ಊರಿಂದ  ನಡೆದು ಕೊಂಡು ಬರೋದೇ ಒಂದು ವಿಶೇಷ. ಅದು ರಾಜ್ಯದ ಎತ್ತರದ ತೇರು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಲ್ಲದಕ್ಕೂ ಮಿಗಿಲಾಗಿ ಮೂಲಾ ನಕ್ಷತ್ರ ಅಂದ್ರೆ ಅನಿಷ್ಠ ಅಂತಾರೆ. ಆದ್ರೇ ಆ ರಥೋತ್ಸವ ಮಾತ್ರ ಮೂಲಾ ನಕ್ಷತ್ರದಲ್ಲೇ ನಡೆಯುತ್ತದೆ. ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ಮಧ್ಯ ಕರ್ನಾಟಕದ ಆರಾಧ್ಯ ದೈವ ಕೊಟ್ಟೂರೇಶ್ವರನ ಜಾತ್ರೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು.

Tap to resize

Latest Videos

undefined

ಕೊಟ್ಟೂರಿಗೆ ಹರದು ಬಂದ ಜನಸಾಗರ:
ಎಲ್ಲಿ ನೋಡಿದ್ರು ಜನವೋ ಜನ. ಬಸ್ ನಿಲ್ದಾಣದ ಮೇಲೆ, ಮನೆ ಮಾಳಿಗೆ ಮೇಲೆ, ಬಿಲ್ಡಿಂಗ್, ಆಸ್ಪತ್ರೆ ಹೀಗೆ ಎತ್ತ ನೋಡಿದ್ರು ಅತ್ತ ಜನಸಾಗರ. ಕೊಟ್ಟೂರೇಶ್ವರನ ರಥೋತ್ಸವ ನೋಡಲು ತೇರು ಬೀದಿಯಲ್ಲಿ  ಸಾಗರೋಪಾದಿಯಲ್ಲಿ ಸೇರಿದ ಭಕ್ತ ಸಮೂಹ ಸೇರಿತ್ತು.    ವಿಜಯನಗರ ಜಿಲ್ಲೆಯ ಕೂಟ್ಟೂರಿನ ಗುರುಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬಂದಿದ್ರು.

ಕೂಟ್ಟೂರಿನ ಗುರಬಸವೇಶ್ವರ ಜಾತ್ರೆ ಅಂದ್ರೇ ಮಧ್ಯೆ ಕರ್ನಾಟಕದಲ್ಲೇ ಅತಿ ದೊಡ್ಡ ಜಾತ್ರೆ. ಪ್ರತಿ ವರ್ಷ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಜರುಗುವ ಜಾತ್ರೆಯಲ್ಲಿ ಈ ಬಾರಿಯೂ ಲಕ್ಷಾಂತರ ಭಕ್ತರು ಭಾಗಿಯಾಗಿದ್ರು. ಇನ್ನೂ ಈ ಜಾತ್ರೆಯ ವಿಶೇಷವೆಂದ್ರೇ ಈ ಜಾತ್ರೆಗೆ ಬರೋ‌ ಬಹುತೇಕ ಸಾವಿರಾರು ಜನರು ಭಕ್ತರು ಪಾದಾಯಾತ್ರೆ ಮೂಲಕ ಬರುತ್ತಾರೆ.

ಫೆ.18ಕ್ಕೆ ನಮನ ಅಕಾಡೆಮಿಯಿಂದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮ

ಹರಕೆ ಹೊತ್ತು ಬರೋ‌ ಭಕ್ತರು
ಮಾಘ ಮಾಸದ ಬಹುಳ ದಶಮಿಯ ಮೂಲ ನಕ್ಷತ್ರ ಕೂಡುವ ವೇಳೆ ಕೂಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ರು. ಅದೇ ಮಹೂರ್ತದಲ್ಲಿಯೇ ಪ್ರತಿ ವರ್ಷವೂ ಗುರುಬಸವೇಶ್ವರರ ರಥೋತ್ಸವವೂ ಜರುಗುತ್ತದೆ. ಕೂಟ್ಟೂರಿನ ರಥವೂ ಸಹ ಹಲವು ವೈಶಿಷ್ಟಗಳಿಂದ ಕೂಡಿದ್ದು 85 ಅಡಿ ಎತ್ತರವಿದೆ. ಇಷ್ಟೊಂದು ದೊಡ್ಡ ರಥವನ್ನ ಲಕ್ಷಾಂತರ ಭಕ್ತರು ಎಳೆದು ಗುರುಬಸವೇಶ್ವರ ಭಕ್ತಿಗೆ ಪಾತ್ರರಾಗುತ್ತಾರೆ. ಈ ಬಾರಿ ಎರಡೂವರೆ ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಪರಾಕಾಷ್ಠೆ ಮೆರೆದರು. ಕೂಟ್ಟೂರಿನ ಗುರುಬಸವೇಶ್ವರ ಜಾತ್ರೆಯ ವೇಳೆ ಯಾವುದೇ ಹರಿಕೆ ಹೊತ್ತರೂ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ. ಹೀಗಾಗಿ ಭಕ್ತರು ಪ್ರತಿ ವರ್ಷ ತಪ್ಪದೇ ರಥೋತ್ಸವದಲ್ಲಿ ಭಾಗಿಯಾಗಿ ಗುರುಬಸವೇಶ್ವರರ ಜಾತ್ರೆಯನ್ನ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

ಇದೇ ಮೊದಲ ಬಾರಿ ಶಿವರಾತ್ರಿ ಉಪವಾಸ ಮಾಡ್ತಿದ್ದರೆ ಇವೆಲ್ಲ ಗೊತ್ತಿರಲಿ

ಪವಾಡಗಳನ್ನು ಮಾಡೋ ಕೊಟ್ಟೂರೇಶ್ವರ
ಮೂಲಾ ನಕ್ಷತ್ರ ಕೆಟ್ಟದ್ದು ಎಂದು ಸಾಕಷ್ಟು ಜನರು ಮೂಗು ಮುರಿಯುತ್ತಾರೆ. ಆದ್ರೇ ಮೂಲಾ ನಕ್ಷತ್ರದಲ್ಲೇ ಶ್ರೀ ಗುರುಬಸವೇಶ್ವರರ ರಥೋತ್ಸವವೂ ಜರುಗುವುದು ವಿಶೇಷವಾಗಿದೆ. ಅಲ್ಲದೇ ಹರಿಜನ ಸಮುದಾಯದ ಮುತ್ತೈದೆಯರು ಶ್ರೀಸ್ವಾಮಿಗೆ ಕಳಸದಾರತಿ ಬೆಳಗಿದ ನಂತರ ರಥೋತ್ಸವ ನಡೆಯುವುದು ಕೂಟ್ಟೂರು ಜಾತ್ರೆಯ ಮತ್ತೊಂದು ವಿಶೇಷವಾಗಿದೆ. ಅದ್ರಲ್ಲೂ ಈ ವರ್ಷ ಭಕ್ತರ ಪರಾಕಾಷ್ಠೆ ಮಧ್ಯೆ ಕೂಟ್ಟುರೇಶ್ವರನ ಜಾತ್ರೆ ಸಂಭ್ರಮ ಸಡಗರರಿಂದ ಜರುಗಿದ್ದು ಕೂಟ್ಟೂರೇಶ್ವರನ ಪವಾಡಕ್ಕೆ ಸಾಕ್ಷಿಯಾಗಿದ್ದು ಮಾತ್ರ ಸುಳ್ಳಲ್ಲ.

click me!