Bible Lesson: ಜೀವನದಲ್ಲಿ ಯಶಸ್ಸು ಸಾಧಿಸಲು ಬೈಬಲ್ ಈ ನಿಯಮ ಪಾಲಿಸಿ

By Suvarna NewsFirst Published Feb 16, 2023, 5:22 PM IST
Highlights

ದ್ವೇಷ, ಅಸೂಯೆ ಜೀವನದ ದಾರಿ ತಪ್ಪಿಸುತ್ತದೆ. ಪುಣ್ಯ ಪ್ರಾಪ್ತಿಯಾಗ್ಬೇಕೆಂದ್ರೆ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಪ್ರಪಂಚದ ಎಲ್ಲ ಧರ್ಮಗಳು ಇದನ್ನೇ ಹೇಳಿವೆ. ಸನ್ಮಾರ್ಗದಲ್ಲಿ ನಡೆಯುವುದು ಹೇಗೆ ಎಂಬುದನ್ನು ವಿವರಿಸಿವೆ.  
 

ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ. ಪ್ರತಿಯೊಂದು ಧರ್ಮವೂ ಒಬ್ಬ ವ್ಯಕ್ತಿಗೆ ಸತ್ಯ, ಅಹಿಂಸೆ ಮತ್ತು ಸದ್ಗುಣದ ಮಾರ್ಗದಲ್ಲಿ ನಡೆಯುವಂತೆ ಬೋಧಿಸುತ್ತದೆ.  ಭಗವದ್ಗೀತೆ ಇರಬಹುದು, ಕುರಾನ್ ಇರಬಹುದು ಇಲ್ಲವೆ ಕ್ರಿಶ್ಚಿಯನ್ ಧರ್ಮದ ಪವಿತ್ರ ಗ್ರಂಥ  ಬೈಬಲ್ ಆಗಿರಬಹುದು. ಇವೆಲ್ಲದರಲ್ಲೂ ಯಶಸ್ವಿಯಾಗಲು ಮನುಷ್ಯ ಏನು ಮಾಡ್ಬೇಕು ಎನ್ನುವ ಬಗ್ಗೆ ವಿವರವಿದೆ.  

ನಿಮಗೆಲ್ಲ ತಿಳಿದಿರುವಂತೆ ಸುಮಾರು 2000 ವರ್ಷಗಳ ಹಿಂದೆ ಯೇಸು (Jesus) ಕ್ರಿಸ್ತ, ಮಾನವ ಕಲ್ಯಾಣಕ್ಕಾಗಿ ಮಹತ್ವದ ವಿಷ್ಯಗಳನ್ನು ಬೋಧಿಸಿದ್ದರು. ಅದರ ಸಂಗ್ರಹ ಬೈಬಲ್ (Bible). ನಾವಿಂದು ಬೈಬಲ್ ನಲ್ಲಿ ಮನುಷ್ಯನಿಗೆ ಸ್ಫೂರ್ತಿ (Inspiration) ನೀಡುವ ಯಾವ ವಿಷ್ಯವಿದೆ ಎಂಬುದನ್ನು ಹೇಳ್ತೆವೆ.  

Latest Videos

ಬೈಬಲ್ ನಲ್ಲಿ ಹೇಳಿರುವ ಮಹತ್ವದ ಅಂಶಗಳು :

• ಯಾರು ದೇವರ ಮೇಲೆ ಭರವಸೆ ಹೊಂದಿರುತ್ತಾರೋ ಅವರು ಎಂದೂ ಕುಗ್ಗಲು ಸಾಧ್ಯವಿಲ್ಲ. ದೇವರು ನಮ್ಮೊಂದಿಗಿದ್ದರೆ ನಮ್ಮ ವಿರುದ್ಧ ನಿಲ್ಲಲು ಯಾರಿಗೂ ಸಾಧ್ಯವಿಲ್ಲ.

• ಆತ್ಮ ಮತ್ತು ದೇಹ ಭಗವಂತನಿಂದ ರಕ್ಷಿಸಲ್ಪಟ್ಟಿದೆ ಎಂದಾದ್ರೆ ಉಳಿದವುಗಳನ್ನು ಅವನ ಇಚ್ಛೆಗೆ ಬಿಟ್ಟುಬಿಡಿ ಎಂದು ಬೈಬಲ್ ಹೇಳುತ್ತದೆ. ದುಃಖ ಮತ್ತು ಕಷ್ಟದ ಸಮಯದಲ್ಲಿ ಭಗವಂತ ನಿಮ್ಮನ್ನು ಎಂದಿಗೂ ಬಿಡುವುದಿಲ್ಲ ಎಂದು ಬೈಬಲ್ ನಲ್ಲಿ ಹೇಳಲಾಗಿದೆ.

MAHASHIVRATRI 2023: ಸುಳ್ಳು ಹೇಳಿದ ಕೇತಕಿ, ಚಂಪಾ ಪುಷ್ಪಗಳಿಗೆ ಶಿವಪೂಜೆಯಲ್ಲಿ ಸ್ಥಾನವಿಲ್ಲ!

• ಉಪವಾಸ ಮಾಡಿದ್ರೂ ಮುಖದಲ್ಲಿ ದುಃಖವಿರಬಾರದು. ಬೇರೆಯವರಿಗೆ ನಿಮ್ಮ ಉಪವಾಸ ತಿಳಿಯಬಾರದು. ಅಂದ್ರೆ ಧಾರ್ಮಿಕ ಕಾರ್ಯ, ಕೆಲಸಗಳ ಬಗ್ಗೆ ಎಂದಿಗೂ ಹೊಗಳಿಕೆ ಇರಬಾರದು. ಹೇಳಿ ಮಾಡಿದ ದಾನದಿಂದ ಸಿಗುವ ಪರಿಣಾಮ ಕಡಿಮೆ ಎನ್ನುತ್ತದೆ ಬೈಬಲ್.

• ಪರಮಾತ್ಮನ ಕೆಲಸದಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ, ನಿಮ್ಮ ಶ್ರಮ ಇಲ್ಲಿ ವ್ಯರ್ಥವಾಗುವುದಿಲ್ಲ ಎನ್ನುತ್ತದೆ ಬೈಬಲ್. 

• ಮನುಷ್ಯನಿಗೆ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಭಗವಂತನ ಕೃಪೆಯಿಂದ ಸಿಗುತ್ತದೆ. ಭಗವಂತ ಎಲ್ಲವನ್ನೂ ತಿಳಿದಿದ್ದಾನೆ. ನೀವು ಹೇಳುವ ಮುನ್ನವೇ ನಿಮಗೆ ಏನು ಅಗತ್ಯವಿದೆ ಎಂಬುದನ್ನು ಭಗವಂತ ತಿಳಿಯುತ್ತಾನೆಂದು ಬೈಬಲ್ ನಲ್ಲಿ ಬೋಧಿಸಲಾಗಿದೆ.

• ನಿಮ್ಮ ದೃಷ್ಟಿಕೋನ ಚೆನ್ನಾಗಿದ್ರೆ ನಿಮ್ಮ ಜೀವನ ಉಜ್ವಲವಾಗಲು ಸಾಧ್ಯ. ವ್ಯಕ್ತಿಯ ಮಾತು, ನಡವಳಿಕೆ, ಆಲೋಚನೆ ಮನುಷ್ಯನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. 

• ಅಪರಿಚಿತ ಮಹಿಳೆಯ ಮೇಲೆ ಕಣ್ಣು ಹಾಕುವುದು ಕೂಡ ದೈಹಿಕ ವ್ಯಭಿಚಾರ ಮಾಡಿದಕ್ಕೆ ಸಮವೆಂದು ಬೈಬಲ್ ನಲ್ಲಿ ಹೇಳಲಾಗಿದೆ. 

• ಇಂದಿನ ದುಃಖ ಇಂದಿಗೆ ಸಾಕು. ನಾಳೆಯ ಚಿಂತೆ ಮಾಡುವುದು ವ್ಯರ್ಥ. ಚಿಂತೆ ಮಾಡುವುದ್ರಿಂದ ನಮ್ಮ ಅದೃಷ್ಟ ಬದಲಾಗುವುದಿಲ್ಲ. ಅದೇ ದೇವರ ಮೇಲೆ ನಂಬಿಕೆಯಿಟ್ರೆ ಅದೃಷ್ಟ ಬದಲಾಗುತ್ತದೆ.

• ಭಗವಂತನ ಮುಂದೆ ಯಾವುದೇ ಬೇಡಿಕೆ ಇಡುವ ಮೊದಲು ಅಥವಾ ಪ್ರಾರ್ಥನೆ ಸಲ್ಲಿಸುವ ಮೊದಲು ನಿಮ್ಮ ಕುಟುಂಬವನ್ನು ಪ್ರೀತಿಸಿ. ನಿಮಗೆ ಬೇರೆಯವರ ಬಗ್ಗೆ ದುರುದ್ದೇಶವಿದ್ರೆ ನೀವು ದೇವರಲ್ಲಿ ಎಷ್ಟೇ ಪ್ರಾರ್ಥನೆ ಮಾಡಿದ್ರೂ ಅದು ಫಲ ನೀಡುವುದಿಲ್ಲ. ಪರರ ಬಗ್ಗೆ ಇರುವ ಕೆಟ್ಟ ಭಾವನೆ ಹೋಗಲಾಡಿಸಿ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಬೇಕು.

• ಮನುಷ್ಯನ ಒಳ್ಳೆಯದ ಹಾಗೂ ಕೆಟ್ಟದ್ದು ಭಗವಂತನ ಕೈನಲ್ಲಿದೆ. ನಿಮ್ಮ ತಲೆಯ ಮೇಲೆ ಕೈ ಇಟ್ಟು ಆಣೆ ಮಾಡ್ಬೇಡಿ. ಯಾಕೆಂದ್ರೆ ನಿಮ್ಮ ತಲೆಯ ಒಂದು ಕೂದಲನ್ನು ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಮನಸ್ಸಿನ ತೃಪ್ತಿಗಾಗಿ ನೀವು ಆಣೆ, ಪ್ರತಿಜ್ಞೆ ಮಾಡಿದ್ರೆ ಅದು ಭ್ರಮೆಯಲ್ಲಿ ಬದುಕಿದಂತೆ.

• ನೀವು ಬೇರೆಯವರ ತಪ್ಪನ್ನು ಕ್ಷಮಿಸಿದ್ರೆ ಭಗವಂತ ನಿಮ್ಮ ತಪ್ಪನ್ನು ಲೆಕ್ಕ ಹಾಕುವುದಿಲ್ಲ. ಬೇರೆಯವರ ಮುಂದೆ ಕ್ಷಮೆ ಕೇಳುವ ಹಾಗೂ ಬೇರೆಯವರನ್ನು ಕ್ಷಮಿಸುವ ವ್ಯಕ್ತಿ ಯಾವಾಗ್ಲೂ ಒತ್ತಡವನ್ನು ಎದುರಿಸಲು ಸಾಧ್ಯವಿಲ್ಲ. ಒಂದು ಕ್ಷಮೆ ಎಲ್ಲವನ್ನೂ ಸರಿಪಡಿಸುತ್ತದೆ. 

ಎಷ್ಟೇ ಒಳ್ಳೆ ಅಮ್ಮನಾಗಿರಲಿ, ಅತ್ತೆಯಾಗಿ ಮಾತ್ರ ಈ ರಾಶಿಗಳವರು ನೀಚರು!

• ನಿಮ್ಮನ್ನು ದ್ವೇಷಿಸುವವರನ್ನೂ ನೀವು ಪ್ರೀತಿ ಮಾಡಿ. ಸೂರ್ಯ ಧರ್ಮ ಪಾಲಿಸುವವರಿಗೆ ಹಾಗೂ ಅಧರ್ಮಿಗಳಿಗೆ ಇಬ್ಬರಿಗೂ ಬೆಳಕು ನೀಡ್ತಾನೆ ಎಂದು ಬೈಬಲ್ ನಲ್ಲಿ ಹೇಳಲಾಗಿದೆ. 
 

click me!