ಜಾತ್ರೆಗೆ ಆಗಮಿಸಿದ ಭಕ್ತಾಧಿಗಳು ದೇವಿಯ ದರ್ಶನ ಪಡೆಯಲು ಸಾಲಾಗಿ ನಿಂತು ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ನಂತರ ಅರ್ಚಕರು ಹಾಗೂ ಚೌಡಕಿ ಕಲಾವಿದರು ಸೇರಿ ಗ್ರಾಮದಲ್ಲಿರುವ ಎಲ್ಲ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಐಗಳಿ(ಡಿ.22): ಸಮೀಪದ ಕೊಕಟನೂರ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯು 3ನೇ ದಿನದಂದು ದ್ವಾದಶಿ ಮಹಾ ನೈವೇದ್ಯ ನಿಮಿತ್ತ ಲಕ್ಷಾಂತರ ಭಕ್ತರು ದೇವಿಗೆ ಕಡಬು ಹೋಳಿಗೆ ನೈವೇದ್ಯ ಅರ್ಪಿಸಿ ದರ್ಶನ ಪಡೆದು ಹರಕೆ ತೀರಿಸಿದರು. ಅರ್ಚಕ ಭೀಮಸೇನ್ ಪೂಜಾರಿ ದೇವಿಯ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು. ನಂತರ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳು ದೇವಿಯ ದರ್ಶನ ಪಡೆಯಲು ಸಾಲಾಗಿ ನಿಂತು ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ನಂತರ ಅರ್ಚಕರು ಹಾಗೂ ಚೌಡಕಿ ಕಲಾವಿದರು ಸೇರಿ ಗ್ರಾಮದಲ್ಲಿರುವ ಎಲ್ಲ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ವಿವಿಧ ಕಲಾವಿದರಿಂದ ಕಲಾಪ್ರದರ್ಶನ ಜರುಗಿತು. ದೇವಿಯ ಪಲ್ಲಕ್ಕಿ ಉತ್ಸವದಲ್ಲಿ ಸೇರಿದ ಭಕ್ತ ಸಮೂಹದ ಮಧ್ಯದಲ್ಲಿ ಸಕಲವಾಧ್ಯ ವೈಭವ, ಮುತ್ತೈದೆಯರ ಆರತಿ, ಮಂಗಲಮುಖಿಯರೊಂದಿಗೆ ದೇವಸ್ಥಾನದಿಂದ ಜಗದ ಮನೆ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಜರತಾರಿ ಸೀರೆಯನ್ನುಟ್ಟು ಮಂಗಲ ಮುಖಿಯರ ಕುಣಿತ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿತ್ತು. ಈ ವೇಳೆ ಪ್ರಲ್ಹಾದ ಪೂಜಾರಿ, ಪಾಂಡುರಂಗ ಚವ್ಹಾಣ, ಬಂಡು ಜಾಧವ, ಶಿವಾಜಿ ಚವ್ಹಾಣ, ಬಾಳಾಸಾಬ ಪೂಜಾರಿ, ಮಹಾದೇವ ಚವ್ಹಾಣ ಸೇರಿದಂತೆ ಅನೇಕರು ಇದ್ದರು.
ಯಾದಗಿರಿ: ಗುರಮಠಕಲ್‌ನಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ..!
ವಿಜೃಂಭಣೆಯ ಯಲ್ಲಮ್ಮದೇವಿಯ ಜಾತ್ರೆ
ಐಗಳಿ: ಸಮೀಪದ ಕೊಕಟನೂರ ಗ್ರಾಮದ ಶ್ರೀ ಯಲ್ಲಮ್ಮದೇವಿ ಜಾತ್ರೆಯು ಎರಡನೇ ದಿನವಾದ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
2500 ವರ್ಷಗಳ ಹಿಂದಿನ ಸಂಸ್ಕೃತದ ಒಗಟು ಬಿಡಿಸಿದ ಮುಂಬೈ ಯುವಕ!
ಗ್ರಾಮದ ಹಿರಿಯರು ಬೆಳಗ್ಗೆ ಝುಂಜರವಾಡ ಗ್ರಾಮದ ಕೃಷ್ಣಾ ನದಿಗೆ ಹೋಗಿ ಗಂಗಾ ಪೂಜೆ ನೆರವೇರಿಸಿದರು. ಅಲ್ಲಿಯ ಗಂಗಾ ಜಲವನ್ನು ತಂದು ದೇವಿಗೆ ಅರ್ಪಿಸಿ ನಂತರ ಅರ್ಚಕ ಭೀಮಸೇನ ಪೂಜಾರಿ ಅವರಿಂದ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ನೈವೇದ್ಯ ಅರ್ಪಿಸಿ ದರ್ಶನ ಪಡೆದು ಹರಕೆ ತೀರಿಸಿದರು. ಇದಕ್ಕೂ ಮೊದಲು ಜಾತ್ರೆಗೆ ಆಗಮಿಸಿದ ಭಕ್ತರೆಲ್ಲ ಗ್ರಾಮದ ಹೊರವಲಯದಲ್ಲಿರುವ ಜೋಗುಳಬಾವಿ ಸತ್ಯವ್ವನ ದೇವಸ್ಥಾನ ಹೋಗಿ ಅಲ್ಲಿಯ ಕೆರೆಯಲ್ಲಿ ಸ್ನಾನ ಮಾಡಿ ಹುಟ್ಟಿಗೆ ಉಟ್ಟು ಜೋಗುಳಬಾಯಿ ಪಾದಯಾತ್ರೆ ಮೂಲಕ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಆಗಮಿಸಿದರು.
ಚೌಡಕಿ ಕಲಾವಿದರಿಂದ ಚೌಡಕಿ ಪದಗಳು ಮತ್ತು ಶಹನಾಯಿ ವಾದನ ನಡೆಯಿತು. ಸಂಜೆ ಯಲ್ಲಮ್ಮದೇವಿಯ ಪಲ್ಲಕ್ಕಿ ಉತ್ಸವ ಜರುಗಿತು. ಈ ವೇಳೆ ದೇವಿ ಜಗವನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಪರುಶರಾಮ ತುಂಗಳಿ, ಶಂಕರ ಪಾಟಣಕರ, ಬಂಡು ಚವ್ಹಾಣ, ಪಾಂಡುರಂಗ ಚವ್ಹಾಣ, ರಾಮು ಟಿಂಗ್ರಿ, ಕೃಷ್ಣಾ ಮಾದರ, ಜಯವಂತ ಜಾಧವ, ಮಹಾದೇವ ನಾಯಿಕ, ಅಪ್ಪಾಸಾಬ ಚವ್ಹಾಣ ಸೇರಿದಂತೆ ಸಹಸ್ರಾರು ಭಕ್ತರು ಇದ್ದರು.