
ಬೆಂಗಳೂರು (ಏ.30): ನಮ್ಮ ದೇಶದಲ್ಲಿ ಎಂದಿಗೂ, ಯಾವುದೇ ಕಾರಣಕ್ಕೂ ಮಾನವೀಯ ಮೌಲ್ಯಗಳನ್ನು ಬಲಿ ಕೊಡಬಾರದು. ರಾಷ್ಟ್ರಪ್ರೇಮ, ದೇಶಪ್ರೇಮ, ಧನಪ್ರೇಮ ಇವು ಮಾನವೀಯ ಮೌಲ್ಯಗಳ ಪೈಕಿ ಅತೀ ಮುಖ್ಯವಾದವು. ಇಂತಹ ಮೌಲ್ಯಗಳಿಗೆ ಮತಕೊಟ್ಟಿದ್ದರಿಂದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ, ಸರ್ಕಾರಗಳು ಮಾನವೀಯತೆಗೆ ವಿರುದ್ಧವಾಗಬಾರದು. ಸರ್ಕಾರದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಮಸ್ತ ಭಾರತೀಯರು ಒಪ್ಪಿಗೆಯನ್ನೇ ಕೊಡಬೇಕು ಎಂದು ಕೋಡಿಮಠದ ಶ್ರೀಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜರು ಮಹಾರಾಜರ ಕಾಲದಿಂದಲೂ ಅವರ ಪಕ್ಕದಲ್ಲಿ ಗುರುಗಳು ಇದ್ದರು. ಆ ಗುರುಗಳು ದೇಶದ ಒಳ್ಳೆಯದಕ್ಕಾಗಿ ಸಲಹೆ ನೀಡುತ್ತಿದ್ದರು. ರಾಜರು ತಮ್ಮ ನಡವಳಿಕೆಯಲ್ಲಿ ಗುರುಗಳ ಸಲಹೆಗಳನ್ನು ಪಾಲಿಸುತ್ತಿದ್ದರು. ಈ ಮೂಲಕ ದೇಶದಲ್ಲಿ ಶಿಸ್ತಿನ ಆಡಳಿತ, ಶಾಂತಿ ಮತ್ತು ಸಮೃದ್ಧಿ ಇತ್ತು. ಈ ಆಚರಣೆ ಇಲ್ಲದಿರುವುದೇ ಇಂದಿನ ರಾಜಕೀಯದ ಅಸ್ತವ್ಯಸ್ತತೆಗೆ ಕಾರಣವಾಗಿದೆ. ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಗುರುಗಳ ಅಭಿಪ್ರಾಯಗಳನ್ನು ಕೇಳುವುದು ಉತ್ತಮವಾಗಿದೆ ಎಂದರು.
ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಮನುಕುಲದ ಹಿತದೃಷ್ಟಿ: ಯುದ್ಧದ ವಿಚಾರದಲ್ಲಿ ಶ್ರೀಗಳು ಶಾಂತಿಯ ಪರವಾಗಿದ್ದಾರೆ. 'ನಾವು ಮನುಕುಲಕ್ಕೆ ಲೇಸನ್ನು ಬಯಸ್ತೀವಿ' ಎಂದರು. ನಾವೆಲ್ಲರೂ ಭಾರತದಲ್ಲಿ ವಾಸಿಸುತ್ತಿರುವ ಕಾರಣ, ಈ ನೆಲದ ಮೌಲ್ಯಗಳನ್ನು ಗೌರವಿಸಬೇಕು. ಭಾರತಕ್ಕೆ ಒಳ್ಳೆಯದಾಗಲೆಂದು ಹಾರೈಸಿದರು.
ಜಗತ್ತಿನ ಹಿತಕ್ಕಾಗಿ ಧ್ಯಾನ, ಪೂಜೆ, ಪುಣಸ್ಕಾರ:
ಸಮಾಜದಲ್ಲಿ ಹೆಚ್ಚುತ್ತಿರುವ ಮತಾಂಧತೆಯನ್ನು ದುರಂತವಾಗಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜಗತ್ತಿನ ಹಿತಕ್ಕಾಗಿ ಧ್ಯಾನ, ಪೂಜೆ, ಪುಣಸ್ಕಾರಗಳನ್ನು ಮಾಡುವುದಾಗಿ ಹೇಳಿದ್ದಾರೆ. ಮಾನವ ಸಮಾಜದಲ್ಲಿ ಶಾಂತಿ ಇಲ್ಲದಿದ್ದರೆ, ಸುನಾಮಿ, ಮಳೆ, ಗಾಳಿ ಇತ್ಯಾದಿ ಪ್ರಕೃತಿಕೋಪಗಳು ಹೆಚ್ಚಾಗುತ್ತವೆ. ಇದರಿಂದ ಜನರಿಗೆ ತೊಂದರೆ ಆಗುವುದು ಖಚಿತ. ಪ್ರಧಾನಿ ಅಥವಾ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅವರು ನೇರವಾಗಿ ಪ್ರತಿಕ್ರಿಯೆ ನೀಡದೆ, 'ಮೋದಿ ಬದಲಾವಣೆಯ ಬಗ್ಗೆ ನನ್ನತ್ರ ಉತ್ತರ ಇಲ್ಲ' ಎಂದು ಹೇಳಿದರು. ಈ ಮೂಲಕ ಪ್ರಧಾನಿ ಮೋದಿ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಮುಂದಿನ ಸಂಕ್ರಾಂತಿವರೆಗೆ ಆಗುವುಇದಿಲ್ಲ. ಸಂಕ್ರಾಂತಿಯ ನಂತರ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಬಹುದು. ಆದರೆ, 'ಇವರಿಲ್ಲ ಅಂತಂದ್ರೆ ಮತ್ತೊಬ್ಬರು ಬರ್ತಾರೆ' ಎಂಬ ಮಾತಿನಲ್ಲಿ ನಿರಂತರ ಚಕ್ರವ್ಯೂಹದ ಸ್ವೀಕಾರವಿದೆ.
ವೈಯಕ್ತಿಕ ಸಮಸ್ಯೆಗಳ ಕುರಿತು ಸ್ಪಷ್ಟನೆ:
ಹುಡುಗರಿಗೆ ಮದುವೆ ತಡವಾಗುತ್ತಿರುವ ವಿಷಯದ ಬಗ್ಗೆ ಅವರು ಸರ್ಕಾರವೇ ಉತ್ತರ ಕೊಡಬೇಕು ಎಂದಿದ್ದಾರೆ. ಧರ್ಮಸಂಸ್ಥೆಗಳ ಪಾತ್ರ ಆಶೀರ್ವಾದ ನೀಡುವುದಷ್ಟೆ ಎಂಬುದಾಗಿ ಅವರು ತಿಳಿಸಿದ್ದಾರೆ. ಇದರೊಂದಿಗೆ, ಎಲ್ಲರಿಗೂ ಒಳ್ಳೆಯದಾಗಲೆಂದು ಆಶೀರ್ವಾದಿಸಿದ್ದಾರೆ. ಈ ವರ್ಷ ಮಳೆ ಮತ್ತು ಬೆಳೆ ಉತ್ತಮವಾಗಿದೆ. ಆದರೆ ಅಕಾಲ ಮಳೆಯ ಪರಿಣಾಮವಾಗಿ ಸಕಾಲದ ಮರಳು ಅಥವಾ ಮಿತಿಯ ಮಳೆಯ ಸಾಧ್ಯತೆ ಇದೆ. ಆದರೆ ಜನರು ಯೋಚನೆ ಮಾಡದೆ ಭಯವಿಲ್ಲದೆ ಮುಂದುವರೆಯಬೇಕು ಎಂಬ ಸಂದೇಶ ನೀಡಿದರು.
ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಭಾರತ ಚಿಂತನೆ:
ಭಾರತದ ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಉಗ್ರರು ದಾಳಿ ಮಾಡಿ 26 ಜನರ ಮಾರಣಹೋಮ ಮಾಡಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಇದೀಗ ಸನ್ನದ್ಧವಾಗಿದೆ. ಆದರೆ, ಈ ಬಗ್ಗೆ ಪಾಕಿಸ್ತಾನ ಸರ್ಕಾರ ಖಂಡನೆ ಮಾಡದೇ, ಭಾರತ ಯಾವುದೇ ದಾಳಿ ಮಾಡಿದರೂ ನಾಔಉ ಯುದ್ಧಕ್ಕೆ ಸಿದ್ಧರಾಗಿದ್ದೇವೆ. ಪರಮಾಣು ಬಾಂಬ್ ಕೂಡ ಹಾಕುತ್ತೇವೆ ಎಂದು ಪಾಕಿಸ್ತಾನ ಹೇಳಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ಕರೆದು ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮಾಡಲು ಫ್ರೀ ಹ್ಯಾಂಡ್ ಕೂಡ ನೀಡಿದ್ದಾರೆ.