ಕರ್ನಾಟಕ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ರಾಜ್ಯದಲ್ಲಿ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ (ಆ.20): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆ ಆಗೊಲ್ಲ. ರಾಜ್ಯದ ಚುನಾವಣೆ ಪೂರ್ವವೇ ಪಕ್ಷಾಂತರ ಬಗ್ಗೆ ರಾಜಕೀಯ ಅಲ್ಲೋಲ, ಕಲ್ಲೋಲ ಆಗಲಿದೆ ಎಂದು ಹೇಳಿದ್ದೆನು. ಈಗ ಅಸ್ಥಿರತೆ ಉಂಟಾಗುತ್ತಿದೆ. ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಮುಖಗ್ಯಮಂತ್ರಿಯಾಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ ಎಂದು ಬೆಳಗಾವಿಯಲ್ಲಿ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿಡಿದ್ದಾರೆ.
ಬೆಳಗಾವಿ ಕೋಡಿಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ. ರಾಜಕಾರಣದ ಬಗ್ಗೆ ಏನೂ ಹೇಳಲ್ಲ, ಆದರೆ ಸರ್ಕಾರಕ್ಕೆ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ ಚುನಾವಣೆ ಪೂರ್ವವೇ ಹೇಳಿದ್ದೆ. ಈಗ ರಾಜಕೀಯ ಅಲ್ಲೋಲ, ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ ಈಗ ಅಸ್ಥಿರತೆ ಉಂಟಾಗುತ್ತಿದೆ ಎಂದರು.
undefined
ಚಂದ್ರಯಾನ-3 ಯಶಸ್ವಿ ಆಗಲಿದೆ, ದಕ್ಷಿಣ ಭಾರತ ಸಮೃದ್ಧಿಯಾಗಲಿದೆ: ಕೋಡಿಮಠ ಶ್ರೀಗಳಿಂದ ಭವಿಷ್ಯ
ಇನ್ನು ಮನುಷ್ಯ ಅತಿವೇಗದಲ್ಲಿ ಹಣ ಮಾಡಲು ಹೊರಟಿದ್ದಾನೆ, ಹೀಗಾಗಿ ಆಪತ್ತು ಹೆಚ್ಚಿವೆ. ಇದೆಲ್ಲದರ ನಿಯಂತ್ರಣಕ್ಕೆ ಭಗವಂತನಿದ್ದಾನೆ, ಆದರೆ ಮನುಷ್ಯ ಈತನನ್ನು ಮರೆತಿದ್ದಾನೆ. ದೈವ, ನಂಬಿಕೆ ಮೇಲೆ ಜೀವನ ಮಾಡಬೇಕು. ಇವುಗಳನ್ನು ಕಳೆದುಕೊಂಡ ಪರಿಣಾಮವೇ ಅನಾಹುತ ಆಗುತ್ತಿವೆ. ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಪ್ರಕೃತಿಯ ಹಣ್ಣಿಗೂ ಕೆಮಿಕಲ್ ಮಿಶ್ರಣ: ಪ್ರಾಕೃತಿಕ ದೋಷದಿಂದಲೇ ಸಾವುನೋವು ಹೆಚ್ಚುತ್ತಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಿದೆ. ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಮೊದಲು ಬೆಳೆಯಲಾಗುತ್ತಿತ್ತು. ಈಗ ಕೆಮಿಕಲ್ ಸಿಂಪಡಣೆ ಹೆಚ್ಚುತ್ತಿದೆ, ಹಣ್ಣಿಗೂ ಕೆಮಿಕಲ್ ಹಾಕಲಾಗುತ್ತಿದೆ. ವಿಷವನ್ನೆ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ಮೇ ಉಣ್ಣುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ. ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ ಹೆಚ್ಚಿತ್ತು, ಈಗ ಆಳವಾಗಿ ಬೋರವೆಲ್ ಕೊರೆಸಬೇಕು. ಹೀಗಾಗಿ ಪ್ರಳಯ ಜಾಸ್ತಿ ಆಗ್ತಿವೆ ಎಂದು ನುಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು: ಎಣ್ಣೆ ಮಾರಾಟದಲ್ಲಿ ಭಾರಿ ಇಳಿಮುಖ
ಜಾಗತಿಕವಾಗಿ ವಿಷಾನಿಲ ಬೀಸಲಿಗೆ: ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶವಾಗಲಿವೆ. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಪ್ರಕೃತಿ ನಿಯಮವದು ಎಂದು ಹೇಳಿದರು.