Chess World Cup 2023 ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಚೆಸ್ ಪಂದ್ಯಾವಳಿಯಲ್ಲಿ ದಾಖಲೆ ಬರೆದಿದ್ದು, ಮಗನ ಸಾಧನೆ ಕಂಡು ತಾಯಿ ಮೂಖ ವಿಸ್ಮಯಳಾಗಿ ನಿಂತು ತನ್ನ ಕಂದನನ್ನು ನೋಡಿದ್ದಾಳೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಅಷ್ಟಕ್ಕೂ ಆರ್. ಪ್ರಜ್ಞಾನಂದ ಯಾರು ಎಂಬ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
Chess World Cup 2023 ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಚೆಸ್ ಪಂದ್ಯಾವಳಿಯಲ್ಲಿ ದಾಖಲೆ ಬರೆದಿದ್ದು, ಮಗನ ಸಾಧನೆ ಕಂಡು ತಾಯಿ ಮೂಖ ವಿಸ್ಮಯಳಾಗಿ ನಿಂತು ತನ್ನ ಕಂದನನ್ನು ನೋಡಿದ್ದಾಳೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಅಷ್ಟಕ್ಕೂ ಆರ್. ಪ್ರಜ್ಞಾನಂದ ಯಾರು ಎಂಬ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಅವರನ್ನು ಹೊರತುಪಡಿಸಿ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆರ್. ಪ್ರಜ್ಞಾನಂದ ಆಗಿದ್ದಾರೆ. ಇದೇ ವೇಳೆ ಮಗನ ಸಾಧನೆಗೆ ತಾಯಿಯ ಕಣ್ಣಂಚು ತೇವಗೊಂಡಿದ್ದು ಆ ಫೋಟೋ ಫುಲ್ ವೈರಲ್ ಆಗಿದೆ. ಇದಕ್ಕಿಂತ ಒಬ್ಬ ತಾಯಿಗೆ ಇನ್ನೇನು ಬೇಕು ಎಂತಿದ್ದಾರೆ ನೆಟ್ಟಿಗರು. ಹಾಗೂ ಅವರ ಜಾತಕದ ಪ್ರಕಾರ ಮುಂದೆ ಉತ್ತಮ ಇನ್ನು ದಿನಗಳು ಆರಂಭವಾಗಲಿದ್ದು, ಅವರು ಇನ್ನು ಹೆಚ್ಚು ಸಾಧಿಸುತ್ತಾರೆ ಎನ್ನುತ್ತಾರೆ ಜ್ಯೋತಿಷಿಗಳು.
ಫಿಡೆ ಚೆಸ್ ವಿಶ್ವಕಪ್‌ನಲ್ಲಿ 2 ದಶಕಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಯುವ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಪಾತ್ರರಾಗಿದ್ದಾರೆ. 2002ರಲ್ಲಿ ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್ ಆಗಿದ್ದರು. 21 ವರ್ಷಗಳ ಬಳಿಕ 18ರ ಪ್ರಜ್ಞಾನಂದಗೆ ಆ ಅವಕಾಶ ಸಿಕ್ಕಿದೆ. ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಜ್ಞಾನಂದ ಆಗಿದ್ದಾರೆ.
ಮಗನ ಸಾಧನೆಗೆ ತಾಯಿ ಮೂಕವಿಸ್ಮಿತ
ತಮ್ಮ ಮಗನ ಸಾಧನೆ ಕಂಡು ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮಿ ತುಂಬಾ ಭಾವುಕರಾಗಿ ಮಗನನ್ನೇ ದಿಟ್ಟಿಸಿದ್ದಾರೆ. ಮತ್ತು ಕಂದನನ್ನು ನೋಡುತ್ತಾ ಆನಂದಭಾಷ್ಪ ಸುರಿಸುತ್ತಿದ್ದಾರೆ.
ಸ್ಪರ್ಧೆ ನಡೆಯುತ್ತಿದ್ದಾಗ ಈ ಭಾವನಾತ್ಮಕ ಕ್ಷಣಗಳು ಫೋಟೋದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ತಾಯಿಯ ನೋಟಕ್ಕೆ ನೆಟ್ಟಿಗರು ಕೂಡ ಭಾವುಕ ನುಡುಗಳೊಂದಿಗೆ ಅದನ್ನು ಶೇರ್ ಮಾಡುತ್ತಿದ್ದಾರೆ.
ಯಾರು ಈ ಆರ್. ಪ್ರಜ್ಞಾನಂದ..?
ಆರ್ ಪ್ರಜ್ಞಾನಂದ ಅವರಿಗೆ ಕೇವಲ 18 ವರ್ಷ. ಅವರು ಚೆನ್ನೈ ಮೂಲದವರು. ಪ್ರಜ್ಞಾನಂದ ಅವರು 2013ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಅಂಡರ್-8ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು, ಅವರು 7 ನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಗಳಿಸಿದ್ದಾರೆ. ಬಳಿಕ ಅಂತರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರು ಆನ್‌ಲೈನ್ ಏರ್‌ಥಿಂಗ್ಸ್ ಮಾಸ್ಟರ್ಸ್ ರ್ಯಾಪಿಡ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಗೆದ್ದ ಮೂರನೇ ಭಾರತೀಯ ಆಟಗಾರರು ಕೂಡ ಹೌದು.