ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..!

By Suvarna News  |  First Published Nov 20, 2020, 6:01 PM IST

ಜ್ಯೋತಿಷಿಗಳು ಭವಿಷ್ಯವನ್ನು ಹಲವಾರು ರೀತಿಯಾಗಿ ನೋಡುತ್ತಾರೆ. ಜಾತಕಗಳ ಮೂಲಕ ಗ್ರಹಗತಿಗಳನ್ನು ಲೆಕ್ಕಹಾಕಿ ಹೇಳಬಹುದು, ಇಲ್ಲವೇ ಹಸ್ತ ಭವಿಷ್ಯವನ್ನೂ ಹೇಳಬಹುದಾಗಿದೆ. ನಿಮ್ಮ ಹಸ್ತರೇಖೆಯು ಯಾವ ರೀತಿ ಇರುತ್ತದೆ ಎಂಬುದರ ಮೇಲೆ ಸಹ ನಿಮ್ಮ ಭವಿಷ್ಯಗಳು ನಿರ್ಧರಿತವಾಗಿರುತ್ತವೆ. ಇದೇ ಹಸ್ತರೇಖೆಯಿಂದ ವೈವಾಹಿಕ ಜೀವನವು ಯಾವ ರೀತಿ ಇರುತ್ತದೆ? ಸುಖೀ ಸಂಸಾರವೇ? ಪ್ರಣಯದ ಜೀವನವೋ? ಗೋಳಿನ ಚಿಂತೆಯೋ? ಸಂಗಾತಿಗೆ ಸಿಟ್ಟು ಇರುತ್ತದೋ? ಸುಖ-ಸಂತೋಷದ ಜೊತೆ ಜೊತೆಗೆ ಹೆಜ್ಜೆ ಹಾಕುತ್ತೀರೋ..? ಹೀಗೆ ಎಲ್ಲ ಅಂಶಗಳು ಇದರಲ್ಲಿ ತಿಳಿದುಕೊಳ್ಳಬಹುದು. ಅದು ಏನು..? ಎತ್ತ...? ಎಂಬುದನ್ನು ನೋಡೋಣ ಬನ್ನಿ…


ಹಸ್ತ ಸಾಮುದ್ರಿಕಾ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ಹಸ್ತರೇಖೆಯಿಂದ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ವಿಚಾರಗಳ ಬಗ್ಗೆ ತಿಳಿಯಬಹುದು. ಅಷ್ಟೇ ಅಲ್ಲದೆ ಜೀವನದಲ್ಲಿ ಘಟಿಸಬಹುದಾದ ವಿಷಯಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಜೀವನದ ಮುಖ್ಯ ಘಟ್ಟವಾದ ವಿವಾಹದ ವಿಷಯದಲ್ಲಿ ಎಲ್ಲರಿಗೂ ಆತಂಕವಿರುತ್ತದೆ. ಹಸ್ತ ರೇಖೆಗಳಿಂದ ಈ ಆತಂಕಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ವೈವಾಹಿಕ ಬದುಕಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಹಸ್ತರೇಖೆಯಿಂದ ತಿಳಿಯಬಹುದಾಗಿದೆ.
ಹಸ್ತದಲ್ಲಿ ವಿವಾಹ ರೇಖೆ ಎಲ್ಲಿರುತ್ತದೆ?
ಹಸ್ತ ರೇಖೆಯು ಕಿರು ಬೆರಳಿನ ಕೆಳಗೆ, ಹೃದಯ ರೇಖೆಯ ಮೇಲ್ಭಾಗದಲ್ಲಿ, ಹಾಗೆಯೇ ಬುಧ ಪರ್ವತದಲ್ಲಿ ಹಸ್ತದ ಹೊರಬದಿಯಿಂದ ಬರುವ ರೇಖೆಯನ್ನು ವಿವಾಹ ರೇಖೆ ಎಂದು ಕರೆಯುತ್ತಾರೆ.        

ಇದನ್ನು ಓದಿ: ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? 

ವಿವಾಹವಾಗುವ ವಯಸ್ಸು
ಹಸ್ತ ರೇಖೆಯಿಂದ ಯಾವ ವಯಸ್ಸಿನಲ್ಲಿ ವಿವಾಹ ಯೋಗವಿದೆ ಎಂಬುದನ್ನು ತಿಳಿಯಬಹುದಾಗಿದೆ. ಕಿರುಬೆರಳಿನ ಕೆಳಗಿರುವ ರೇಖೆ ಮತ್ತು ಹೃದಯ ರೇಖೆಯ ನಡುವೆ ಇರುವ ಅಂತರವನ್ನು ಪರೀಕ್ಷಿಸಿ ವ್ಯಕ್ತಿಯ ವಿವಾಹದ ವಯಸ್ಸನ್ನು ಕಂಡುಹಿಡಿಯಲಾಗುತ್ತದೆ. ಈ ಎರಡು ರೇಖೆಗಳ ಅಂತರ ಸುಮಾರು 50 ವರ್ಷಗಳಷ್ಟು ಎಂದು ಹೇಳಲಾಗುತ್ತದೆ.

1. ವಿವಾಹ ರೇಖೆಯು ಕಿರುಬೆರಳಿನ ಕೆಳಗಿರುವ ರೇಖೆ ಮತ್ತು ಹೃದಯ ರೇಖೆಯ ಮಧ್ಯದಲ್ಲಿ ಇದ್ದರೆ ಅಂಥವರು ಸುಮಾರು 25 ವರ್ಷದ ಆಸುಪಾಸಿನಲ್ಲಿ ಮದುವೆ ಆಗುತ್ತಾರೆಂದು ಹೇಳಲಾಗುತ್ತದೆ. 

Tap to resize

Latest Videos

undefined

2. ಅದೇ ವಿವಾಹ ರೇಖೆಯು ಹೃದಯ ರೇಖೆಯ ಹತ್ತಿರದಲ್ಲಿದ್ದರೆ ಅಂಥ ವ್ಯಕ್ತಿಗಳಿಗೆ  25 ವರ್ಷದ ಮೊದಲೇ ವಿವಾಹವಾಗುವ ಸಂಭವವಿರುತ್ತದೆ. ಇದಕ್ಕೆ ಕಡಿಮೆ ವಯಸ್ಸಿನಲ್ಲಿ ವಿವಾಹವಾಗುವ ಯೋಗವೆಂದು ಸಹ ಹೇಳಲಾಗುತ್ತದೆ.  

ಇದನ್ನು ಓದಿ: ಸ್ನೇಹ ಬೆಳೆಸಬಹುದಾದ ಯೋಗ್ಯ ರಾಶಿಗೆ ಸೇರಿದವರಾ ನೀವು? 

ಹಸ್ತರೇಖೆಯಲ್ಲಿ ವೈವಾಹಿಕ ಜೀವನದ ರಹಸ್ಯಗಳು
- ವಿವಾಹ ರೇಖೆಯು ದಪ್ಪ ಮತ್ತು ಸ್ಪಷ್ಟವಾಗಿರಬೇಕು ಮತ್ತು ಮಧ್ಯದಲ್ಲಿ ಎಲ್ಲೂ ತುಂಡಾಗಿರದೇ ಇದ್ದಲ್ಲಿ, ಅಷ್ಟೇ ಅಲ್ಲದೇ ರೇಖೆಯಲ್ಲಿ ದ್ವೀಪದಂತಹ ಚಿಹ್ನೆ ಇದ್ದರೆ ಅಂಥ ವ್ಯಕ್ತಿಯ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ.


- ವಿವಾಹ ರೇಖೆಯ ಅಕ್ಕ-ಪಕ್ಕದಲ್ಲಿ ಚಿಕ್ಕ ಚಿಕ್ಕ ಸಣ್ಣ ರೇಖೆಗಳಿದ್ದರೆ ಅದು ವೈವಾಹಿಕ ಜೀವನದ ಪ್ರೀತಿ ಮತ್ತು ಪ್ರಣಯವನ್ನು ಸೂಚಿಸುತ್ತದೆ.

- ವಿವಾಹ ರೇಖೆಯು ಕವಲೊಡೆದು ಎರಡು ರೇಖೆಯಾಗಿದ್ದರೆ ಅದು ವಿವಾಹವು ವಿಳಂಬವಾಗುವ ಸಾಧ್ಯತೆಯನ್ನು ಸೂಚಿಸುವುದಲ್ಲದೇ, ಜೀವನದಲ್ಲಿ ನಿರಾಶೆಯನ್ನು ಹೊಂದಬಹುದಾದ ಸಂಭವವಿದೆ ಎಂಬುದರ ಸಂಕೇತ ಸಹ ಆಗಿದೆ.

- ವಿವಾಹ ರೇಖೆಯು ಕೊನೆಯಲ್ಲಿ ಕವಲೊಡೆದು ಎರಡು ರೇಖೆಯಾದರೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿ ದಂಪತಿ ಬೇರೆಯಾಗುವ ಸಂಕೇತವನ್ನು ಸೂಚಿಸುತ್ತದೆ.

- ವಿವಾಹ ರೇಖೆಯು ಶುಕ್ರ ಕವಚವನ್ನು ದಾಟಿ ಹೋದರೆ ಅದು ಸಂಗಾತಿಯು ಸಿಟ್ಟಿನ ಸ್ವಭಾವವನ್ನು ಹೊಂದಿರುತ್ತಾರೆ ಎಂಬುದನ್ನು ತೋರಿಸುತ್ತದೆ.

ಇದನ್ನು ಓದಿ: ರಾಶಿಯನುಸಾರ ನಿಮ್ಮ ಸ್ನೇಹಿತರು-ಶತ್ರುಗಳ್ಯಾರೆಂದು ತಿಳಿಯಿರಿ..! 

ಹಸ್ತದಲ್ಲಿ ನಾಲ್ಕು ಜಾಗಗಳಲ್ಲಿ ವಿವಾಹ ರೇಖೆಯನ್ನು ನೋಡಲಾಗುತ್ತದೆ.
- ಬುಧ ಪರ್ವತದಲ್ಲಿ ವಿವಾಹ ರೇಖೆಯು ಉದ್ದ ಮತ್ತು ಸ್ಪಷ್ಟವಾಗಿದ್ದು, ಸುಲಭವಾಗಿ ಕಾಣುವಂತಿರಬೇಕು. ಅಲ್ಲಿರುವ ಸಣ್ಣ ಸಣ್ಣ ರೇಖೆಗಳು ಸಂಬಂಧದ ಮೇಲಾಗುವ ಕಾಮಾಸಕ್ತ ವಿಚಾರಗಳಲ್ಲಿ ಪ್ರಭಾವವನ್ನು ಬೀರುತ್ತವೆ. ಈ ವಿವಾಹ ರೇಖೆಗಳು ಹೃದಯ ರೇಖೆಯ ಸರಿ ಸಮನಾಗಿರುತ್ತವೆ. ಇವುಗಳಿಗೆ ಸಂಘ ರೇಖೆ ಎಂದು ಕರೆಯಲಾಗುತ್ತದೆ. ಈ ವಿವಾಹ ರೇಖೆಯನ್ನು ಹೆಚ್ಚಾಗಿ ನೋಡಲಾಗುತ್ತದೆ. 

- ಈ ರೇಖೆಗಳು ಜೀವನ ರೇಖೆಯಲ್ಲಿ ಹುಟ್ಟುತ್ತವೆ. ಶುಕ್ರ ಪರ್ವತದಿಂದ ಹಾದು ಹೋಗುತ್ತವೆ. ಚಂದ್ರ ಪರ್ವತದಿಂದ ಬರುವ ರೇಖೆ ಮತ್ತು ಭಾಗ್ಯ ರೇಖೆಯನ್ನು ಸ್ಪರ್ಶಿಸುವ ರೇಖೆಯು ಒಂದನ್ನೊಂದು ತುಂಡರಿಸಬಾರದು.

- ಹಸ್ತದಲ್ಲಿರುವ ಹೆಚ್ಚಿನ ಸ್ಪಷ್ಟ ರೇಖೆಗಳು ಶುಕ್ರ ಪರ್ವತದಿಂದ ಬೇರೆ ಬೇರೆ ದಿಕ್ಕಿನಲ್ಲಿ ಹೋಗಿದ್ದರೆ ಅಂಥ ವ್ಯಕ್ತಿಯು ಪ್ರೀತಿಯ ವಿಷಯದಲ್ಲಿ ಸ್ವಲ್ಪ ಭಿನ್ನವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳಿಗೆ ಪ್ರೀತಿಯಲ್ಲಿ ಮೋಸವಾಗುವ ಸಾಧ್ಯತೆಯು ಇರುತ್ತದೆ. 

click me!