ಯಾವ ರಾಶಿಯವರಿಗೆ ಎಷ್ಟು ಮಕ್ಕಳ ಭಾಗ್ಯ?

By Suvarna NewsFirst Published Jun 23, 2022, 6:13 PM IST
Highlights

ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯದ ಬಗ್ಗೆ ಎಲ್ಲ ವಿಚಾರಗಳನ್ನು ತಿಳಿಯಬಹುದು, ಹಾಗೆಯೇ ಸಂತಾನ ಯೋಗದ ಬಗ್ಗೆಯೂ ಅರಿಯಬಹುದು. ರಾಶಿ ಚಕ್ರಗಳ ಆಧಾರದ ಮೇಲೆ ಯಾವ ರಾಶಿಯವರು ಎಷ್ಟು ಸಂತಾನ ಪಡೆಯುತ್ತಾರೆ ಹಾಗೂ ಅವರಿಗೆ ಎಷ್ಟು ಮಕ್ಕಳನ್ನು ನಿಭಾಯಿಸುವ ಶಕ್ತಿ ಇದೆ ಎಂಬುದರ ಬಗ್ಗೆ ಸಹ ತಿಳಿಯಬಹುದಾಗಿದೆ. ಹಾಗಾದರೆ ಯಾವ ರಾಶಿಯವರ ಎಷ್ಟು ಮಕ್ಕಳನ್ನು ಪಡೆಯುವ, ನಿಭಾಯಿಸುವ ಯೋಗವಿದೆ ಎಂಬುದನ್ನು ತಿಳಿಯೋಣ....

ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಹೆಚ್ಚಿನ ಮಹತ್ವ, ಸ್ಥಾನವನ್ನು ಕೊಡಲಾಗಿದೆ. ಇಲ್ಲಿ ಹಿಂದೆಲ್ಲಾ ಡಜನ್‌ಗಟ್ಟಲೇ ಮಕ್ಕಳಾಗುತ್ತಿದ್ದವು. ಆದರೆ, ಈಗ ಕಾಲ ಬದಲಾಗಿದೆ. ಫ್ಯಾಮಿಲಿ ಪ್ಲಾನಿಂಗ್ (Family Planing) ಬಂದಿದೆ, ಒಂದು ಮಗುವಿಗೇ (Child) ಸೀಮಿತವಾಗುತ್ತಿದೆ. ಆ ಮೂಲಕ ಚಿಕ್ಕ ಫ್ಯಾಮಿಲಿಯನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ, ಮಕ್ಕಳನ್ನು ಹೊಂದುವ ಹಾಗೂ ಆ ಜವಾಬ್ದಾರಿಯನ್ನು ನಿಭಾಯಿಸುವ ಭಾಗ್ಯದ ಬಗ್ಗೆ ಜಾತಕದ ಅನುಸಾರ ತಿಳಿದುಕೊಳ್ಳಬಹುದಾಗಿದ್ದು, ರಾಶಿಗಳಿಗನುಸಾರವಾಗಿ (Zodiac) ಯಾವ ರಾಶಿಯವರಿಗೆ ಎಷ್ಟು ಮಕ್ಕಳಾಗುವ (Child Birth) ಯೋಗವಿದೆ ಎಂಬುದನ್ನು ತಿಳಿಯಬಹುದಾಗಿದೆ. ಆದರೆ, ನಿರ್ಧಾರ ಅವರಿಗೇ ಬಿಟ್ಟಿದ್ದಾಗಿರುತ್ತದೆ. ಈಗ ರಾಶಿಗಳಿಗೆ ಅನುಸಾರವಾಗಿ ಅವರಿಗೆ ಕನಿಷ್ಠ ಎಷ್ಟು ಮಕ್ಕಳಾಗುವ ಯೋಗವಿದೆ ಎಂಬುದನ್ನು ತಿಳಿಯೋಣ... 

ಮೇಷ ರಾಶಿ (Aries)
ಈ ರಾಶಿಯ ವ್ಯಕ್ತಿಗಳಿಗೆ ಅನೇಕ ಮಕ್ಕಳನ್ನು ಹೊಂದುವ ಯೋಗವಿದೆ. ಈ ರಾಶಿಯವರು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬಹುದಾಗಿದ್ದು, ಅವರವರ ಆಯ್ಕೆಯ ಮೇಲೆ ಸೀಮಿತಗೊಳ್ಳುತ್ತದೆ. ಆದರೆ, ಈ ರಾಶಿಯವರು ಪೋಷಕರಾಗಿ (Parents) ಬಹಳ ಖುಷಿಯಲ್ಲಿರಲಿದ್ದು, ತಮ್ಮ ಮಗುವನ್ನು ಅತ್ಯಂತ ಜಾಗ್ರತೆಯಿಂದ ನೋಡಿಕೊಳ್ಳುವವರಾಗಿದ್ದಾರೆ. 

ವೃಷಭ ರಾಶಿ (Taurus)
ಈ ರಾಶಿಯ ಮಹಿಳೆಯರಿಗೆ ಇಬ್ಬರು ಮಕ್ಕಳನ್ನು ಹೊಂದುವ ಯೋಗವಿದೆ. ಇವರಿಗೆ ತಾಳ್ಮೆಯ (Patience) ಸ್ವಭಾವ ಬಹಳವೇ ಇರುವುದರಿಂದ ಮಗುವನ್ನು ಬಹಳ ಆರಾಮವಾಗಿ ಪೋಷಣೆ ಮಾಡುತ್ತಾರೆ. ಹೀಗಾಗಿ ಈ ರಾಶಿಯವ ಮಹಿಳೆಯರು ತಾಯ್ತನವನ್ನು ಬಹಳವೇ ಆನಂದಿಸುತ್ತಾರೆ. 

ಮಿಥುನ ರಾಶಿ (Gemini)
ಈ ರಾಶಿಯ ವ್ಯಕ್ತಿಗಳು ಯಾರೇ ಆಗಿರಲಿ (ಗಂಡು / ಹೆಣ್ಣು) ಅವಳಿ ಮಕ್ಕಳಾಗುವ (Twins) ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಹೀಗಾಗಿ ಇವರಿಗೆ ಒಂದೇ ಬಾರಿಗೆ ಎರಡು ಮಕ್ಕಳನ್ನು ಪಡೆಯುವ ಯೋಗವೂ ಇರುತ್ತದೆ. ಆದರೆ, ಇದಕ್ಕೆ ಗ್ರಹಗತಿಗಳ ಕೃಪೆಯೂ ಉತ್ತಮವಾಗಿರಬೇಕಾಗುತ್ತದೆ. 

ಕರ್ಕಾಟಕ ರಾಶಿ (Cancer)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಮಹಿಳೆಯರು ಇಬ್ಬರು ಮಕ್ಕಳನ್ನು ಹೊಂದಲಿದ್ದು, ಆ ಮಕ್ಕಳ ನಡುವೆ ದೀರ್ಘ ಅಂತರ (Gap) ಇರುತ್ತದೆ. ಇವರಲ್ಲಿ ಮಾತೃ ವಾತ್ಸಲ್ಯ ಬಹಳವೇ ಇರಲಿದೆ. ಈ ರಾಶಿಯ ಪುರುಷರು ಸಹ ಮಕ್ಕಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. 

ಸಿಂಹ ರಾಶಿ (Leo)
ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಅನುಸಾರ ಈ ರಾಶಿಯ ಮಹಿಳೆಯರಿಗೆ ಎರಡು ಅಥವಾ ನಾಲ್ಕು ಮಕ್ಕಳಾಗುವ ಯೋಗವಿದೆ. ಅಲ್ಲದೆ, ಈ ರಾಶಿಯ ಹೆಣ್ಣು ಮಕ್ಕಳು ಮಲ್ಟಿ ಟಾಸ್ಕಿಂಗ್‌ನಲ್ಲಿ (Multi-Tasking) ಪರಿಣಿತರಾಗಿರುವುದರಿಂದ ಅವರಿಗೆ ನಾಲ್ಕು ಮಕ್ಕಳನ್ನು ಸಹ ನಿಭಾಯಿಸುವ ಶಕ್ತಿ ಇದೆ. 

ಕನ್ಯಾ ರಾಶಿ (Virgo)
ಈ ರಾಶಿಯವರಿಗೆ ಒಂದು ಮಗು ಜನಿಸುವ ಭಾಗ್ಯವಿದೆ ಎಂದು ನಕ್ಷತ್ರ ಪ್ರಕಾರವು ಹೇಳುತ್ತದೆ. ಈ ರಾಶಿಯ ಹೆಣ್ಣ ಮಕ್ಕಳು ಎಲ್ಲ ದೃಷ್ಟಿಕೋನದಿಂದ ಚಿಂತಿಸುವುದರಿಂದ ತಮಗೆ ಒಂದೇ ಮಗು ಸಾಕು ಎಂಬ ನಿರ್ಧಾರಕ್ಕೆ ಇವರು ಬರುವುದೇ ಹೆಚ್ಚು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರದ (Astrology) ಲೆಕ್ಕಾಚಾರಗಳು. 

ತುಲಾ ರಾಶಿ (Libra)
ತುಲಾ ರಾಶಿಯ ಮಹಿಳೆಯರು ಜೀವನದಲ್ಲಿ ಸಮತೋಲನವನ್ನು (Balance) ಇಷ್ಟಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೀಗಾಗಿ ಇವರು ಹೊಂದು ಮಕ್ಕಳ ಸಂಖ್ಯೆಯೂ ಸಮವಾಗಿರುತ್ತದೆ. ಅಂದರೆ 2, 4 ಅಥವಾ 6 ಆಗಿರಬಹುದಾಗಿದೆ.

ನಿಮ್ಮ ಹಸ್ತ ರೇಖೆ ಪ್ರಕಾರ ಪೂಜಿಸಿ ಈ ದೇವರ, ಪಡೆಯಿರಿ ಅನುಗ್ರಹ!

ವೃಶ್ಚಿಕ ರಾಶಿ (Scorpio_
ಈ ರಾಶಿಯವರಿಗೆ ಮಕ್ಕಳ ಮೇಲೆ ಬಹಳ ಪ್ರೀತಿ. ಹೀಗಾಗಿ ಇವರು ಅನೇಕ ಮಕ್ಕಳಿಗೆ ಜನ್ಮ (Birth) ನೀಡುತ್ತಾರೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರು ಮಕ್ಕಳನ್ನು ಅತ್ಯುತ್ತಮವಾಗಿ ಸಲಹುತ್ತಾರೆ.

ಧನು ರಾಶಿ (Sagittarius)
ಈ ರಾಶಿಯವರು ಸ್ವಲ್ಪ ವಿಭಿನ್ನವಾಗಿದ್ದು, ಮಕ್ಕಳಾಗುವ ಯೋಗವನ್ನು ಹೊಂದಿದ್ದಾರೆ. ಆದರೆ, ಇವರು ಮಕ್ಕಳಿಲ್ಲದೆಯೋ ಸಂತೋಷವಾಗಿ ಇದ್ದುಬಿಡುವ ಗುಣವನ್ನು ಹೊಂದಿರುತ್ತಾರೆ. ಕಾರಣ, ಇವರು ರಾಶಿಚಕ್ರದನುಸಾರ ಸಾಹಸಿ (Adventurer) ಪ್ರವೃತ್ತಿಯವರಾಗಿದ್ದು, ಒಂದೇ ಸ್ಥಳದಲ್ಲಿ ಉಳಿಯುವುದು ಸ್ವಲ್ಪ ಕಷ್ಟ. ಹೀಗಾಗಿ ಇವರು ತಾಯಿಯ ಜವಾಬ್ದಾರಿಯನ್ನು ನಿರ್ವಹಿಸಲು ತುಸು ಹೆಚ್ಚೇ ಹೆಣಗಬೇಕಾಗತ್ತದೆ. 

ಮಕರ ರಾಶಿ (Capricorn)
ಮಕರ ರಾಶಿಯವರು ಯಾವುದಕ್ಕೂ ಜಗ್ಗದವರು. ಇವರು ಎಲ್ಲವನ್ನು ಸಹ ಸುಲಭವಾಗಿ ನಿರ್ವಹಿಸುವವರು. ಈ ರಾಶಿಯ ಮಹಿಳೆಯರು ಮೂರು ಮಕ್ಕಳನ್ನು ಪಡೆಯಲು ಯಾವುದೇ ಸಮಸ್ಯೆ ಇಲ್ಲ. 

ಕುಂಭ ರಾಶಿ (Aquarius)
ಕುಂಭ ರಾಶಿಯ ಮಹಿಳೆಯರು ಧನು ರಾಶಿಯವರಂತೆಯೇ ಇರುತ್ತಾರೆ. ಇವರದ್ದು ಸಹ ಸಾಹಸಿ ಪ್ರವೃತ್ತಿ. ಹೀಗಾಗಿ ತಾಯಿಯ (Mother) ಜವಾಬ್ದಾರಿಯನ್ನು ನಿರ್ವಹಿಸುವುದು ಸ್ವಲ್ಪ ಕಷ್ಟವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ಮಗುವು ಅವರಿಗೆ ಅತ್ಯುತ್ತಮವಾಗಿದೆ.

ಸಿಟ್ಟಿನ ನಿಯಂತ್ರಣಕ್ಕೆ ಜ್ಯೋತಿಷ್ಯ ಮಂತ್ರ

ಮೀನ ರಾಶಿ (Pisces)
ಮೀನ ರಾಶಿಯ ಹುಡುಗಿಯರು ಮಕ್ಕಳ ವಿಷಯದಲ್ಲಿ ಎಲ್ಲರನ್ನೂ ಹಿಂದಕ್ಕೆ ಹಾಕಬಹುದು. ಈ ರಾಶಿಯ ಮಹಿಳೆಯರು 5 ಮಕ್ಕಳನ್ನು ಹೊಂದಿದರೂ ಬಹಳ ಸಂತೋಷವಾಗಿರುತ್ತಾರೆ. ಇವರು ಭಾವುಕ (Emotional) ಜೀವಿಗಳಾಗಿದ್ದು, ಮಕ್ಕಳನ್ನು ಉತ್ತಮವಾಗಿ ಬೆಳೆಸುತ್ತಾರೆ.

click me!