ಸಾಡೇಸಾತಿ ಎಂದರೆ ಎಲ್ಲರ ಮನಸ್ಸಲ್ಲಿ ಭಯ ಮೂಡುತ್ತದೆ. ಶನಿ ಯಾವೆಲ್ಲಾ ರೀತಿಯಾಗಿ ಸಮಸ್ಯೆ ಉಂಟುಮಾಡಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ಒಂದೊಂದು ರಾಶಿಗೆ ಈ ಶನಿಯ ಕಾಟ ವಿಭಿನ್ನವಾಗಿರುತ್ತದೆ. ಹಾಗೂ ಇದು ಬೇರೆ ಬೇರೆ ರೀತಿಯಾಗಿ ಪರಿಣಾಮ ಬೀರುತ್ತದೆ. ಜನರ ಶಿಕ್ಷಣದ ಮೇಲೆ ಶನಿ ಸಾಡೇ ಸಾತಿಯ ಶುಭ-ಅಶುಭ ಪರಿಣಾಮಗಳ ಮಾಹಿತಿ ಇಲ್ಲಿದೆ.
ಸಾಡೇಸಾತಿ ಎಂದರೆ ಎಲ್ಲರ ಮನಸ್ಸಲ್ಲಿ ಭಯ ಮೂಡುತ್ತದೆ. ಶನಿ ಯಾವೆಲ್ಲಾ ರೀತಿಯಾಗಿ ಸಮಸ್ಯೆ ಉಂಟುಮಾಡಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ಒಂದೊಂದು ರಾಶಿಗೆ ಈ ಶನಿಯ ಕಾಟ ವಿಭಿನ್ನವಾಗಿರುತ್ತದೆ. ಹಾಗೂ ಇದು ಬೇರೆ ಬೇರೆ ರೀತಿಯಾಗಿ ಪರಿಣಾಮ ಬೀರುತ್ತದೆ. ಜನರ ಶಿಕ್ಷಣ (Education) ದ ಮೇಲೆ ಶನಿ ಸಾಡೇ ಸಾತಿಯ ಶುಭ-ಅಶುಭ ಪರಿಣಾಮಗಳ ಮಾಹಿತಿ ಇಲ್ಲಿದೆ.
ಭಾರತೀಯ ಜ್ಯೋತಿಷ್ಯ (Astrology) ದಲ್ಲಿ ಶನಿಗೆ ವಿಶೇಷ ಸ್ಥಾನ ನೀಡಲಾಗಿದೆ. ಶನಿಯನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ, ಶನಿ ದೇವರು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿಯ ಪ್ರಭಾವದಿಂದ ಉಂಟಾಗುವ ಸಾಡೇ ಸಾತಿ, ಅಷ್ಟಮ ಶನಿ, ಪಂಚಮ ಶನಿಯು ಅತ್ಯಂತ ಕಠಿಣದ ಸಮಯ (Hard times) ವನ್ನು ನೀಡುತ್ತವೆ. ಸಾಡೇ ಸಾತ್ ಅಥವಾ ಸಾಡೇ ಸಾತಿ ಎಂದು ಕರೆಯಲಾಗುವ ಶನಿಯ ಪ್ರಭಾವವು ಏಳು ವರ್ಷಗಳ ಕಾಲ ಇರುತ್ತದೆ. ಶನಿಯ ಪ್ರಭಾವಕ್ಕೆ ಒಳಗಾಗುವ ಈ ಸಮಯದಲ್ಲಿ ವ್ಯಕ್ತಿಯು ಜೀವನದಲ್ಲಿ ಗಮನಾರ್ಹ ಬದಲಾವಣೆ (change) ಹಾಗೂ ಪಾಠವನ್ನು ಕಲಿಯುವನು ಎಂದು ಹೇಳಲಾಗುತ್ತದೆ.
undefined
ಶಿಕ್ಷಣದ ಮೇಲೆ ಸಾಡೇಸಾತಿ ಪರಿಣಾಮ
ಶನಿ ಸಾಡೇ ಸಾತಿಯು ಜನರ ದೈಹಿಕ (physical) , ಮಾನಸಿಕ ಮತ್ತು ಆರ್ಥಿಕ ಸ್ಥಿತಿ (Financial status) ಯ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಸಾಮಾನ್ಯವಾಗಿ ಮಂಗಳಕರ ಘಟನೆ ಎಂದು ಪರಿಗಣಿಸಲಾಗುವುದಿಲ್ಲ. ಯಾವ ರಾಶಿಗಳಲ್ಲಿ ಶನಿ ಸಾಡೇ ಸಾತಿ ನಡೆಯುತ್ತಿದೆಯೋ ಅಂತವರ ಬದುಕು ತುಂಬಾ ನೋವಿನಿಂದ ಕೂಡಿರುತ್ತದೆ. ಈ ವಿದ್ಯಾಮಾನವು ಜನರ ಶಿಕ್ಷಣ ಮತ್ತು ವೃತ್ತಿಜೀವನ (Career) ದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಶಿಕ್ಷಣದ ಮೇಲೆ ಅದರ ಪರಿಣಾಮ ಏನೆಂದು ತಿಳಿಯೋಣ.
ಜೀವನವೇ ಹಿಂಸೆ ಅನಿಸ್ತಿದೆಯಾ? ಚಿಂತಿಸಬೇಡಿ... ಆಗಸ್ಟ್ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ..!
ಅಧ್ಯಯನದ ಕಡೆಗೆ ಹೆಚ್ಚು ಗಮನ
ಶನಿಯ ಸಾಡೇ ಸಾತಿ ಸಮಯದಲ್ಲಿ, ಜನರು ತಮ್ಮ ಅಧ್ಯಯನದ ಕಡೆಗೆ ಹೆಚ್ಚು ಗಮನ ಮತ್ತು ನಿರ್ಣಯ (resolution) ವನ್ನು ಅನುಭವಿಸುತ್ತಾರೆ. ಶನಿಯ ಪ್ರಭಾವು ಜನರು ಶಿಕ್ಷಣವನ್ನು ಹೆಚ್ಚು ಗಂಭೀರ (serious) ವಾಗಿ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ. ಹಾಗೂ ಇದು ಜನರಿಗೆ ವಿಷಯದ ಬಗ್ಗೆ ಆಳವಾದ ತಿಳುವಳಿಕೆ (understanding) ಯನ್ನು ನೀಡುತ್ತದೆ.
ಕಠಿಣ ಪರಿಶ್ರಮದಿಂದ ಫಲ
ಈ ಸಮಯದಲ್ಲಿ ಜನರು ಸುಲಭವಾಗಿ ಯಶಸ್ಸನ್ನು ಪಡೆಯುವುದಿಲ್ಲ. ವಿದ್ಯಾರ್ಥಿ (student) ಗಳು ತಮ್ಮ ಗುರಿಗಳನ್ನು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆದಾಗ್ಯೂ ಕಠಿಣ ಪರಿಶ್ರಮವು ದೀರ್ಘಾವಧಿ (long term) ಯಲ್ಲಿ ಖಂಡಿತವಾಗಿಯೂ ಫಲ ನೀಡುತ್ತದೆ. ಶನಿಯು ಸಾಡೇ ಸಾತಿ ಸಮಯವು ವಿದ್ಯಾರ್ಥಿಗಳಿಗೆ ತಮ್ಮ ತಪ್ಪುಗಳಿಂದ ಕಲಿಯಲು ಮತ್ತು ಕಷ್ಟಕರ ಸಂದರ್ಭಗಳಲ್ಲಿ ಬಲವಾಗಿ ಹೋರಾಡಲು ಶಕ್ತಿಯನ್ನು ನೀಡುತ್ತದೆ.
ಬುಧ ಹಿಮ್ಮೆಟ್ಟುವಿಕೆ; ಈ ಮೂರು ರಾಶಿಗಳಿಗೆ ಹೊಡೆಯುತ್ತೆ ಜಾಕ್‌ಪಾಟ್..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.