Karnika: ಮುಳ್ಳುಗದ್ದುಗೆ ಮೇಲೆ ರಾಮಲಿಂಗೇಶ್ವರ ಸ್ವಾಮಿ ನುಡಿದ ಕಾರ್ಣಿಕ ಏನು ಗೊತ್ತಾ?

By Govindaraj S  |  First Published Mar 9, 2024, 6:33 PM IST

ಅದು  ಪವಾಡಕ್ಕೆ ಹೆಸರು ವಾಸಿಯಾದ ಗ್ರಾಮ, ಅಪರೂಪವೆಂಬಂತೆ ಸರ್ವ ಧರ್ಮೀಯರು ಸೇರಿ ಅಲ್ಲಿ ವಿಶೇಷವಾದ ಮುಳ್ಳು ಗದ್ದಿಗೆ ಉತ್ಸವ ಆಚರಿಸುತ್ತಾರೆ. ಪಲ್ಲಕ್ಕಿಯಲ್ಲಿ ನಿರ್ಮಾಣ ಮಾಡಿದ ಮುಳ್ಳಿನ ಗದ್ದುಗೆ ಮೇಲೆ ಕುಳಿತು ಕುಪ್ಪಳಿಸುವ ಸ್ವಾಮೀಜಿ  ವಿಶೇಷ ನರ್ತನ ಮಾಡುತ್ತಲೇ ಕಾರ್ಣಿಕದ ಮೂಲಕ ಮುಂದಜನ ಭವಿಷ್ಯ ನುಡಿಯುತ್ತಾರೆ. 


ರಿಪೋರ್ಟರ್: ವರದರಾಜ್, ದಾವಣಗೆರೆ

ದಾವಣಗೆರೆ (ಮಾ.09): ಅದು  ಪವಾಡಕ್ಕೆ ಹೆಸರು ವಾಸಿಯಾದ ಗ್ರಾಮ, ಅಪರೂಪವೆಂಬಂತೆ ಸರ್ವ ಧರ್ಮೀಯರು ಸೇರಿ ಅಲ್ಲಿ ವಿಶೇಷವಾದ ಮುಳ್ಳು ಗದ್ದಿಗೆ ಉತ್ಸವ ಆಚರಿಸುತ್ತಾರೆ. ಪಲ್ಲಕ್ಕಿಯಲ್ಲಿ ನಿರ್ಮಾಣ ಮಾಡಿದ ಮುಳ್ಳಿನ ಗದ್ದುಗೆ ಮೇಲೆ ಕುಳಿತು ಕುಪ್ಪಳಿಸುವ ಸ್ವಾಮೀಜಿ  ವಿಶೇಷ ನರ್ತನ ಮಾಡುತ್ತಲೇ ಕಾರ್ಣಿಕದ ಮೂಲಕ ಮುಂದಜನ ಭವಿಷ್ಯ ನುಡಿಯುತ್ತಾರೆ. ಈ ಮುಳ್ಳು ಗದ್ದುಗೆ ಕಾರ್ಣಿಕ  ಸದ್ಯ ವಿಜ್ಞಾನಕ್ಕೂ ಸವಾಲು ಆಗಿದೆ.  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ-ಕೆಂಗಾಪುರದ ರಾಮಲಿಂಗೇಶ್ವರ ಪುಣ್ಯಕ್ಷೇತ್ರ. ಪವಾಡಗಳಿಂದಲೇ ನಾಡಿಗೆ ಚಿರಪರಿಚಿತವಾದ ಕ್ಷೇತ್ರವದು. 

Tap to resize

Latest Videos

undefined

ವರ್ಷಕ್ಕೊಮ್ಮೆ  ನಡೆಯುವ ಈ ಉತ್ಸವಕ್ಕೆ  ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಪಲ್ಲಕ್ಕಿ ಮೇಲೆ ನಿರ್ಮಾಣ ಮಾಡಿದ ಮುಳ್ಳಿನ ಗದ್ದುಗೆ ಮೇಲೆ ರಾಮಲಿಂಗೇಶ್ವರ ಸ್ವಾಮೀಜಿ ಕುಪ್ಪಳಿಸುವ ಜಿಗಿತದಂತ ವಿಶೇಷ ನರ್ತನ ಮಾಡುವ ಮೂಲಕ ಪವಾಡ ಮಾಡುತ್ತಾರೆ, ಒಂದು ಕಿಲೋ ಮೀಟರ್ ಈ ಮುಳ್ಳಿನ ಗದ್ದುಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯುತ್ತದೆ ಈ ವೇಳೆ ನಿರಂತರವಾಗಿ ಸ್ವಾಮೀಜಿ ವಿಶೇಷ ನರ್ತನ ಮಾಡುತ್ತಾರೆ, ಈ  ಉತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗುತ್ತಾರೆ, ರಾಮಲಿಂಗೇಶ್ವರ ಸ್ವಾಮೀಜಿ ಪವಾಡಗಳು ಹಲವಾರು ವರ್ಷಗಳಿಂದ ವೈಜ್ಞಾನಿಕ ಲೋಕಕ್ಕೆ ಸವಾಲಾಗಿವೆ.

ದೇಶದ ಜನರನ್ನು ಹುಚ್ಚರನ್ನಾಗಿ ಕಾಂಗ್ರೆಸ್ ಮಾಡುತ್ತಿದೆ: ಸಿದ್ದು ವಿರುದ್ಧ ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ

ಮೇಲಾಗಿ ಮುಳ್ಳು ಗದ್ದಿಗೆ ಉತ್ಸವದ ವೇಳೆ  ಸ್ವಾಮೀಜಿ ನುಡಿಯುವ ಕಾರ್ಣಿಕ್, ಆ ಭಾಗದ ಭವಿಷ್ಯವಾಣಿ ಎಂಬುವುದು ಭಕ್ತರ ನಂಬಿಕೆ, ಪವಾಡ ಮತ್ತು ಕಾರ್ಣಿಕ್ ದ ಮೂಲಕ ಸ್ವಾಮೀಜಿ ಭಕ್ತರ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಮುಳ್ಳಿನ ಗದ್ದುಗೆ ಮೇಲೆ ಮೆರವಣೆಗೆ ಹೊರಟರೆ ಭಕ್ತರ ಪಾಪಗಳು ಕಳೆಯುತ್ತವೆ ಎನ್ನುವ ನಂಬಿಕೆ ಇದೆ. ಭಕ್ತರ ಕಷ್ಟ ನನಗಿರಲಿ, ಜಗದ ಸುಖ-ಶಾಂತಿ ಭಕ್ತರಿಗಿರಲಿ ಎಂಬ ಸಂಕೇತದ ಪ್ರತೀಕ ಈ ಮುಳ್ಳು ಗದ್ದುಗೆ ಪವಾಡ ಅನ್ನೋ ನಂಬಿಕೆ ಇದೆ, ಮುಳ್ಳು ಗದ್ದುಗೆ ಮೇಲೆ ರಾಮಲಿಂಗೇಶ್ವರ ಸ್ವಾಮಿ ಮೆರವಣಿಗೆ ನಂತರ ಕಾರ್ಣಿಕ ನುಡಿ ನುಡಿಯುತ್ತಾರೆ ಅದರಂತೆ ಈ ವರ್ಷ ಕಾರ್ಮೋಡ ಕವಿದಿತು ಕೆರೆ ಕೋಡಿ ಒಡೆದೀತ ಲೇ ಪರಾಕ ಅನ್ನೋ ಧೈವವಾಣಿಯಾಗಿದೆ, ಇನ್ನೂ ಈ ಕಾರ್ಣಿಕ ವಾಣಿ  ಕೇಳಿದ ಭಕ್ತರಲ್ಲಿ ಸಾಕಷ್ಟು ಸಂತೋಷ ಮನೆ ಮಾಡಿದೆ 

ಐತಿಹಾಸಿಕ ಜಾತ್ರೆಯಲ್ಲಿ ಕಾರ್ಣಿಕ ನುಡಿಯ ತಾತ್ಪರ್ಯ: ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳಕಲಿದೆ ಭಕ್ತರು ವಿವರಣೆ ಮಾಡುತ್ತಾರೆ, ಇನ್ನೂ ರಾಜ್ಯದ 18  ಕಡೆ  ರಾಮಲಿಂಗೇಶ್ವರ ಮಠಗಳಿವೆ ಅದರಲ್ಲಿ  ಮೊದಲಿನ ಗುರುಗಳು ಇಲ್ಲಿ ಐಕ್ಯವಾದ ಕಾರಣಕ್ಕೆ ಇದು  ಮೂಲ ಕ್ಷೇತ್ರವಾಗಿದೆ , ಇನ್ನೂ ಈ ಕ್ಷೇತ್ರಕ್ಕೆ ಭಕ್ತಲ ಸಂಖ್ಯೆ ಸಹ ಜಾಸ್ತಿ  ಈ ಕ್ಷೇತ್ರಕ್ಕೆ ಜನರು ಬಂದು ಹೋದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆ ಸಹ ಇದೆ, ಸುಮಾರು ದಶಕಗಳ ಕಾಲದಿಂದ ಇಲ್ಲಿ ಭಕ್ತರು ಬಂದು ಶೃದ್ಧಾ ಭಕ್ತಿಯಿಂದ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ 

ಅಷ್ಟೇ ಅಲ್ಲದೇ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಸಂಪ್ರದಾಯ ಎಂಬಂತೆ ಈ ಮುಳ್ಳು ಗದ್ದುಗೆ ಪವಾಡಕ್ಕೆ ಆಗಮಿಸುತ್ತಾರೆ‌. ಅಧಿಕಾರದಲ್ಲಿ ಇರಲಿ ಬಿಡಲಿ ಸ್ವಾಮೀಜಿ ಜೊತೆ ಅವಿನಾಭಾವ ಸಂಬಂಧಹೊಂದಿರುವ ವಿ ಎಸ್ ಉಗ್ರಪ್ಪ ಈ ಕಾರ್ಣಿಕ ಜಾತ್ರಾ ಮಹೋತ್ಸವ ತಪ್ಪಿಸಿರುವುದು ಬಹಳ ಕಡಿಮೆ. ಈ ಭಾಗದ ಐಕ್ಯತೆ ಸಾಮರಸ್ಯತೆ  ಬೆಳೆಸಲು ಸಾಂಸ್ಕೃತಿಕ ಪರಂಪರೆ ಉಳಿಯಲು ಸ್ವಾಮೀಜಿ ಕಾರಣರಾಗಿದ್ದಾರೆ.ಸ್ವತಃ ಉಗ್ರಪ್ಪ ಹೇಳಿದಂತೆ ಮುಳ್ಳುಗದ್ದುಗೆ ವಿಸ್ಮಯಕಾರಿಯಾದ್ದದ್ದು.48ವರ್ಷಗಳಿಂದ ಆಚರಣೆ ನಡೆದುಕೊಂಡು ಬಂದಿದ್ದು ಇದೊಂದು ಮೂಢನಂಬಿಕೆಯಾದ್ರು ವೈಜ್ನಾನಿಕತೆ ಇದೆ ಎನ್ನುತ್ತಾರೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಿ: ಸಚಿವ ತಿಮ್ಮಾಪುರ

ನುಡಿದಂತೆ ನಡೆ ಇದೇ ಜನ್ಮ ಕಡೆ  ಎಂಬ ವಾಣಿಯಂತೆ   ಸ್ವಾಮೀಜಿಗಳ ಕೇವಲ ಪವಾಡ ಮತ್ತು ಮುಳ್ಳು ಗದ್ದಿಗೆ ಸೀಮಿತವಾಗಿಲ್ಲ. ಬದಲಾಗಿ  ಎಂಟು  ಶಿಕ್ಷಣ ಸಂಸ್ಥೆಗಳನ್ನ  ಸ್ಥಾಪನೆ ಮಾಡಿದ್ದಾರೆ.  ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು  ಅಧ್ಯಯನ ಮಾಡುತ್ತಿದ್ದಾರೆ. ವಿಶೇಷವೆಂದರೆ  ಇದರಲ್ಲಿ ಶೇಖಡಾ 80ರಷ್ಟು ಶೋಷಿತ ಸಮುದಾಯಗಳ ಜನ. ಪ್ರತಿ ವರ್ಷ ನೂರಾರು ಜೋಡಿಗಳಿಗೆ ಇಲ್ಲಿ  ಉಚಿತ ಸಾಮೂಹಿಕ ವಿವಾಹ ಸಹ ನಡೆಯುತ್ತದೆ. ಹೀಗಾಗಿ  ಪ್ರಗತಿಪರರು ಮತ್ತು ದೈವ ಭಕ್ತರು  ಇಲ್ಲಿಗೆ ಬರುವುದು ಇದೇ ಕಾರಣವಾಗಿದೆ.

click me!