Zodiac Sign: ಮಾನಸಿಕವಾಗಿ ಯಾವಾಗ್ಲೂ ದೂರವೇ ಇರ್ತಾರೆ; ಇವ್ರಿಗೆ ಸೊಕ್ಕಾ? ಇವರು ಯಾಕ್ಹಿಂಗೆ?

By Suvarna News  |  First Published Mar 9, 2024, 5:07 PM IST

ಕೆಲವು ರಾಶಿಗಳ ಜನರಲ್ಲಿ ಇತರರೊಂದಿಗೆ ಅಂತರ ಕಾದುಕೊಳ್ಳುವ ಗುಣ ಕಂಡುಬರುತ್ತದೆ. ಒಂದು ರೀತಿಯ ವಿರಕ್ತ ಧೋರಣೆಯಿಂದ ವರ್ತಿಸುತ್ತಾರೆ. ಇದಕ್ಕೆ ಅವರ ರಾಶಿಚಕ್ರವೇ ಕಾರಣವಾಗಿದ್ದು, ಎಲ್ಲರಲ್ಲೂ ಇರುವ ವಿಶಿಷ್ಟ ಗುಣವೇ ಇದಕ್ಕೆ ಕಾರಣವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
 


ಕೆಲವು ಜನರಿಗೆ ಎಲ್ಲದರ ಬಗೆಗೂ ವಿಪರೀತ ಎನ್ನುವಷ್ಟು ಭಾವನೆಗಳಿರುತ್ತವೆ. ತಮ್ಮ ಜನರು, ಮನೆಯವರಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಹೆಚ್ಚು ಭಾವುಕರಾಗಿ ವಿಚಾರ ಮಾಡುತ್ತಾರೆ. ಭಾವನಾತ್ಮಕವಾಗಿ ಚಾರ್ಜ್‌ ಆಗಿರುತ್ತಾರೆ. ಆದರೆ, ಕೆಲ ಜನರನ್ನು ನೋಡಿ, ಎಂಥದ್ದೇ ಭಾವನಾತ್ಮಕ ಸನ್ನಿವೇಶಗಳಲ್ಲೂ ಅಂತರ ಕಾದುಕೊಂಡಂತೆ  ವರ್ತಿಸುತ್ತಾರೆ. ಹೆಚ್ಚಿನ ದುಃಖ, ನೋವುಗಳು ಇವರನ್ನು ಬಾಧಿಸುವುದಿಲ್ಲ ಎನಿಸುತ್ತದೆ. ಅವುಗಳಿಂದ ಅತೀತವಾದವರಂತೆ ವರ್ತಿಸುತ್ತಾರೆ. ತಂದೆ-ತಾಯಿ, ಒಡಹುಟ್ಟಿದವರು, ಪತಿ-ಪತ್ನಿ, ಮಕ್ಕಳಿಗೆ ಸಂಬಂಧಿಸಿದ ಸನ್ನಿವೇಶಗಳಲ್ಲೂ ಇವರು ತೀವ್ರವಾದ ಭಾವನೆಗಳಿಗೆ ತುತ್ತಾಗುವುದಿಲ್ಲ. ಯಾವತ್ತೂ ಸಮಚಿತ್ತದಲ್ಲಿರುತ್ತಾರೆ. ಕೆಲವೊಮ್ಮೆ ಇವರನ್ನು ನೋಡಿದರೆ, ಒಂದು ರೀತಿಯ ವಿರಕ್ತಿ ಧೋರಣೆಯನ್ನು ರೂಢಿಸಿಕೊಂಡವರಂತೆ ಕಂಡುಬರುತ್ತಾರೆ.  ಕಣ್ಣೀರು ಹಾಕುತ್ತ ಮಾತನಾಡುವುದು, ಎಲ್ಲರೆದುರು ಕಣ್ಣೀರು ಸುರಿಸುವ ಅಭ್ಯಾಸ ಇವರಿಗೆ ಇರುವುದಿಲ್ಲ. ಇವರ ಈ ವರ್ತನೆಗೆ ಇವರ ರಾಶಿಚಕ್ರಗಳೇ ಕಾರಣವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳ ಜನರಲ್ಲಿ ಇಂಥದ್ದೊಂದು ವಿರಕ್ತಿಯನ್ನು ನೋಡಬಹುದು.

•    ಕುಂಭ (Aquarius)
ಅನ್ವೇಷಣಾತ್ಮಕ (Innovative) ಚಿಂತನೆಯ ಕುಂಭ ರಾಶಿಯ ಜನ ಮುಂದುವರಿದ ವಿಚಾರಧಾರೆಗೆ (Progressive Thoughts) ಹೆಸರು. ಜೀವನದ ಕುರಿತು ಇವರ ದೃಷ್ಟಿಕೋನ (Approach) ವಿಭಿನ್ನವಾಗಿರುತ್ತದೆ. ಭಾವನಾತ್ಮಕ ಕ್ಷಣಗಳಿಗಿಂತ ವಿಶಾಲವಾದ ಜೀವನದ ಕುರಿತು ಇವರ ಗಮನ ಕೇಂದ್ರೀಕೃತವಾಗಿರುತ್ತದೆ. ನೀವು ಕುಂಭ ರಾಶಿಯ (Zodiac Sign) ಜನರ ಒಡನಾಟದಲ್ಲಿದ್ದರೆ ಗಮನಿಸಿ ನೋಡಿ, ಎಂಥದ್ದೇ ಭಾವನಾತ್ಮಕ (Emotional) ಕ್ಷಣದಲ್ಲೂ ಅವರು ತಮ್ಮದೇ ಹಿಡಿತದಲ್ಲಿರುತ್ತಾರೆ. ಇದರಿಂದಾಗಿ ಅವರು ವಿಚಿತ್ರವೆಂಬಂತೆ ಬೇರೆಯವರಿಗೆ ಕಂಡುಬರಬಹುದು. ಆದರೆ, ಅವರಲ್ಲಿ ಅಂತರ (Detach) ಕಾದುಕೊಳ್ಳುವ ಗುಣ, ವಿರಕ್ತ ಧೋರಣೆ ಹೆಚ್ಚಿರುತ್ತದೆ. ಬೌದ್ಧಿಕ ಅನ್ವೇಷಣೆಗೆ ಇದು ಮಹತ್ವದ ಗುಣವಾಗಿದೆ. 

Tap to resize

Latest Videos

ಮುಂದಿನ ವಾರ, ಈ 5 ರಾಶಿಯವರಿಗೆ ಮಂಗಳ ಶನಿಯ ಸಂಯೋಗದಿಂದ ಸಂಪತ್ತು ಮತ್ತು ಆಸ್ತಿಯಲ್ಲಿ ಲಾಭ

•    ಮಿಥುನ (Gemini)
ಬುಧ ಗ್ರಹದ ಅಧಿಪತ್ಯ ಹೊಂದಿದೆ ಮಿಥುನ ರಾಶಿ. ಇಡೀ ರಾಶಿಚಕ್ರದ ಪೈಕಿ ಹೆಚ್ಚು ಚೆನ್ನಾಗಿ ಸಂವಹನ (Communication) ನಡೆಸುವ ರಾಶಿಯೆಂದರೆ ಇದೇ ಆಗಿದೆ. ಇವರೂ ಇತರರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ನಿರಂತರವಾಗಿ ಮಾನಸಿಕ ಸ್ಫೂರ್ತಿ ಹಾಗೂ ವಿಭಿನ್ನತೆಯನ್ನು ಬಯಸುವ ಇವರ ಗುಣದಿಂದಾಗಿ ಇಂಥದ್ದೊಂದು ವಿರಕ್ತಿ ಮೂಡುತ್ತದೆ. ಮಿಥುನ ರಾಶಿಯ ಜನರನ್ನು ಸೋಷಿಯಲ್‌ ಬಟರ್‌ ಫ್ಲೈ ಎಂದೇ ಕರೆಯುತ್ತಾರೆ. ಆದರೆ, ಜನರಿಂದ ಭಾವನಾತ್ಮಕವಾಗಿ ಅಂತರ (Distance) ಕಾಯ್ದುಕೊಳ್ಳುವ ಇವರ ಗುಣದಿಂದಾಗಿ ಸಾಮಾಜಿಕ (Social) ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಲು ಇವರಿಗೆ ಸಾಧ್ಯ. ಈ ಗುಣದಿಂದಾಗಿ, ಸಾಮಾಜಿಕವಾಗಿ ಎಷ್ಟೇ ಒಡನಾಡಿದರೂ ತಮ್ಮ ಸ್ವಾತಂತ್ರ್ಯ (Freedom) ಕಾಪಾಡಿಕೊಳ್ಳುವ ಹಾಗೂ ವಿಭಿನ್ನ ಸ್ತರದ ಕಾರ್ಯಕ್ಷೇತ್ರದಲ್ಲಿ ಭಾಗಿಯಾಗಲು ಇವರಿಗೆ ಸಾಧ್ಯವಾಗುತ್ತದೆ. 

•    ಕನ್ಯಾ (Virgo)
ಅತ್ಯಂತ ವಿಶ್ಲೇಷಣಾತ್ಮಕ (Analytical) ಮನಸ್ಥಿತಿಯ ಕನ್ಯಾ ರಾಶಿಯ ಜನ ಜೀವನದ (Life) ಕುರಿತು ಹೆಚ್ಚು ಪ್ರಾಯೋಗಿಕ (Practical) ಮತ್ತು ವಿಸ್ತೃತ ರೀತಿಯ ದೃಷ್ಟಿಕೋನ ಹೊಂದಿರುತ್ತಾರೆ. ಇವರಲ್ಲಿಯೂ ಎಲ್ಲರಿಂದ ಅಂತರ ಕಾಯ್ದುಕೊಳ್ಳುವ ಗುಣ ಕಂಡುಬರುತ್ತದೆ. ಈ ಗುಣವು ಪರಿಪೂರ್ಣತೆಯನ್ನು (Perfection) ಬಯಸುವ ಇವರ ಧೋರಣೆಯಲ್ಲಿಯೇ ಅಡಗಿರುತ್ತದೆ. ಕನ್ಯಾ ರಾಶಿಯ ಜನ ಹೆಚ್ಚು ರಿಸರ್ವ್‌ (Reserve) ಆಗಿರುವಂತೆ ಕಂಡುಬರುವುದಕ್ಕೆ ಇದೇ ಕಾರಣ. ಅವರು ಈ ಮೂಲಕ ತಮ್ಮ ಭಾವನಾತ್ಮಕ ನಿಯಂತ್ರಣವನ್ನು ಕಾಪಾಡಿಕೊಳ್ಳುತ್ತಾರೆ. ನಿರ್ಧಾರಗಳನ್ನು ವೈಚಾರಿಕ ದೃಷ್ಟಿಕೋನ ಹಾಗೂ ಅತ್ಯಂತ ವಿಮರ್ಶೆ ಮಾಡಿದ ಬಳಿಕ ತೆಗೆದುಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ಸ್ಪಷ್ಟವಾದ ಚಿಂತನೆಗಳೊಂದಿಗೆ ಸವಾಲು ಎದುರಿಸಲು ಈ ಗುಣದಿಂದಾಗಿ ಸಾಧ್ಯವಾಗುತ್ತದೆ.

Women's Day: ಈ ಮಹಿಳೆಯರಿಗೆ ತುಂಬಾ ಧೈರ್ಯ, ಯಾರನ್ನು ಬೇಕಾದರೂ ಆಳುವ ಛಲ ಹೊಂದಿರುತ್ತಾರೆ!

•    ಮಕರ (Capricorn)
ಮಹತ್ವಾಕಾಂಕ್ಷೆ (Ambition) ಮತ್ತು ಯಶಸ್ಸಿನ ಬಗ್ಗೆ ತೀವ್ರವಾದ ಭಾವನೆಗಳನ್ನು ಹೊಂದಿರುವ ಮಕರ ರಾಶಿಯ ಜನರಿದೆ ಇವುಗಳ ಮುಂದೆ ಬೇರೆಲ್ಲ ಗೌಣ. ಜೀವನದ ಕುರಿತು ಕಾರ್ಯತಂತ್ರದ ನಿಲುವು ಹೊಂದಿರುವುದರಿಂದ ಅಂತರ ಕಾದುಕೊಳ್ಳುವ ಗುಣ ಸಹಜವಾಗಿ ಕಂಡುಬರುತ್ತದೆ. ಪ್ರಾಯೋಗಿಕತೆ ಮತ್ತು ಶಿಸ್ತಿಗೆ ಇವರು ಆದ್ಯತೆ ನೀಡುತ್ತಾರೆ. ಯಶಸ್ಸು ಸಾಧಿಸಬೇಕು ಎನ್ನುವ ಹಂಬಲದಿಂದಾಗಿ ಇತರರಿಂದ ದೂರವುಳಿಯಲು ಇವರಿಗೆ ಸಾಧ್ಯವಾಗುತ್ತದೆ.
 

click me!