ನಾಯಿ ಸಾಕುವುದು ಎಲ್ಲರಿಗೂ ಶುಭವಲ್ಲ, ಜ್ಯೋತಿಷ್ಯ ಏನನ್ನುತ್ತೆ ಕೇಳಿ!

Published : Oct 09, 2022, 04:08 PM IST
ನಾಯಿ ಸಾಕುವುದು ಎಲ್ಲರಿಗೂ ಶುಭವಲ್ಲ, ಜ್ಯೋತಿಷ್ಯ ಏನನ್ನುತ್ತೆ ಕೇಳಿ!

ಸಾರಾಂಶ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿಯನ್ನು ಸಾಕುವುದಕ್ಕೂ ಗ್ರಹಗಳಿಗೂ ಸಂಬಂಧವಿದೆ. ಯಾವ ಜನರು ನಾಯಿಯನ್ನು ಸಾಕಬೇಕು ಮತ್ತು ಯಾರು ಸಾಕಬಾರದು ಎಂದು ತಿಳಿಯಿರಿ. 

ನಾಯಿ ಬಹಳ ನಿಷ್ಠಾವಂತ ಪ್ರಾಣಿ. ಅನ್ನ ಹಾಕಿದವರಿಗೆ ಕಡೆವರೆಗೂ ಋಣಿಯಾಗಿರುತ್ತದೆ ನಾಯಿ. ನಾಯಿಗಳನ್ನು ಸಾಕುವುದೆಂದರೆ ಮನೆಯಲ್ಲಿ ಮುದ್ದಾದ ಮಗುವೊಂದಿದ್ದಂತೆ. ಮನೆಯಲ್ಲ ಎಲ್ಲರನ್ನೂ ಸಂತೋಷವಾಗಿಡುತ್ತದೆ. ಎಲ್ಲರ ಒತ್ತಡ ಮರೆಸುವ ತಾಕತ್ತು ನಾಯಿಗಿರುತ್ತದೆ. ನಾಯಿ ಮನೆಯಲ್ಲಿದ್ದರೆ ಕುಟುಂಬದ ಸದಸ್ಯನಾಗಿಯೇ ಬಿಡುತ್ತದೆ. ಆದ ಕಾರಣ ನಾಯಿಯನ್ನು ಸಾಕುವುದೆಂದರೆ ಬಹಳಷ್ಟು ಜನರಿಗಿಷ್ಟ. ಆದರೆ ನಾಯಿಯನ್ನು ಯಾರು ಬೇಕೆಂದರವರು ಸಾಕಲಾಗುವುದಿಲ್ಲ. ಇದಕ್ಕೆ ಕಾರಣ ಜ್ಯೋತಿಷ್ಯದಲ್ಲಿ ಗ್ರಹಗಳಿಗೂ ನಾಯಿಗಳಿಗೂ ಇರುವ ಸಂಬಂಧ. 

ಹೌದು, ನಾಯಿಗೂ  ಗ್ರಹಗಳಿಗೂ ಸಂಬಂಧವಿದೆ. ಜ್ಯೋತಿಷ್ಯದಲ್ಲಿ ನಾಯಿಯ ಸಂಬಂಧವು ಕೇತು ಗ್ರಹದೊಂದಿಗೆ ಇದೆ ಎಂದು ನಂಬಲಾಗಿದೆ. ಹಾಗಾಗಿ ಇದನ್ನು ಎಲ್ಲರೂ ಸಾಕಬಾರದು. ಕೆಲವರಿಗೆ ನಾಯಿ ಆಗಿ ಬರುವುದಿಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು, ಹಣದ ನಷ್ಟವಾಗಬಹುದು ಅಥವಾ ಅಪಘಾತ ಸಂಭವಿಸಬಹುದು. ಯಾವ ವ್ಯಕ್ತಿಗಳಿಗೆ ನಾಯಿ ಸಾಕುವುದು ಶುಭ ಮತ್ತು ಯಾವುದು ಅಶುಭ ಎಂಬುದನ್ನು ತಿಳಿಯೋಣ.

30 ವರ್ಷಗಳ ನಂತರ ಮಕರದಲ್ಲಿ ಶನಿ ಮಾರ್ಗಿ; ಈ 3 ರಾಶಿಗಳಿಗೆ ಧನಬಲ

ಈ ಜನರು ನಾಯಿಗಳನ್ನು ಸಾಕಬಹುದು
ಜ್ಯೋತಿಷ್ಯದ ಪ್ರಕಾರ, ನಾಯಿಯು ಕೇತು ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ ನಿಮ್ಮ ಜಾತಕದಲ್ಲಿ ಕೇತು ಗ್ರಹವು ಧನಾತ್ಮಕ ಸ್ಥಾನದಲ್ಲಿದ್ದರೆ ಜಾತಕದಲ್ಲಿ ಅವನು ತನ್ನ ಸ್ನೇಹಿತ ಗ್ರಹದೊಂದಿಗೆ ಸ್ಥಿತನಾಗಿದ್ದಾನೆ ಎಂದರ್ಥ. ಆದ್ದರಿಂದ ನೀವು ನಾಯಿಯನ್ನು ಸಾಕಬಹುದು. ಹೀಗೆ ಮಾಡುವುದರಿಂದ ಕೇತು ಗ್ರಹದ ಆಶೀರ್ವಾದ ಸಿಗುತ್ತದೆ. ಅಲ್ಲದೆ, ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯ ಪ್ರಾಪ್ತಿಯಾಗಲಿದೆ. ಅದೇ ಸಮಯದಲ್ಲಿ, ನಾಯಿಯನ್ನು ಭೈರವ ದೇವತಾ ಸೇವಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಭೈರವ ಮಹಾರಾಜನು ನಾಯಿಗೆ ಆಹಾರವನ್ನು ನೀಡುವ ಮೂಲಕ ಸಂತಸಗೊಂಡು ಭಕ್ತರನ್ನು ತೊಂದರೆಗಳಿಂದ ರಕ್ಷಿಸುತ್ತಾನೆ.

ಕಪ್ಪು ನಾಯಿಗೆ ಬ್ರೆಡ್ ತಿನ್ನಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯೂ ಇದೆ. ಇದರೊಂದಿಗೆ, ಕಪ್ಪು ಬಣ್ಣದ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ಶನಿ ಗ್ರಹವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ನಾಯಿ ಸಾಕುವುದರಿಂದ ರಾಹು-ಕೇತುಗಳಿಂದ ಉಂಟಾಗುವ ಅಶುಭ ಯೋಗಗಳೂ ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಹಸುವಿಗೆ ಕೊಡಬೇಕು ಮತ್ತು ಕೊನೆಯದನ್ನು ನಾಯಿಗೆ ನೀಡಬೇಕು ಎಂದು ಹೇಳಲಾಗುತ್ತದೆ. ಇದು ಗ್ರಹ ದೋಷಗಳನ್ನು ನಿವಾರಿಸುತ್ತದೆ ಮತ್ತು ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಈ ಯೋಗ ಜಾತಕದಲ್ಲಿದ್ದರೆ ವ್ಯಕ್ತಿಗೆ ಜೀವನದುದ್ದಕ್ಕೂ ಕಷ್ಟ ತಪ್ಪಿದ್ದಲ್ಲ, ಪರಿಹಾರ ತಿಳಿಯಿರಿ

ಈ ಜನರು ನಾಯಿಯನ್ನು ಸಾಕಲು ಸಾಧ್ಯವಿಲ್ಲ
ನಿಮ್ಮ ಜನ್ಮ ಕುಂಡಲಿಯಲ್ಲಿ ಕೇತು ಗ್ರಹವು ಲಗ್ನದಲ್ಲಿ ಸ್ಥಿತರಿದ್ದರೆ ಅಥವಾ ಜಾತಕದಲ್ಲಿ ಕೇತು ಗ್ರಹವು ಅಶುಭ ಸ್ಥಾನದಲ್ಲಿದ್ದರೆ, ನೀವು ನಾಯಿಯನ್ನು ಸಾಕಬಾರದು. ಮತ್ತೊಂದೆಡೆ, ನೀವು ಇನ್ನೂ ನಾಯಿಯನ್ನು ಸಾಕಿದರೆ, ಜ್ಯೋತಿಷ್ಯದ ಪ್ರಕಾರ, ನೀವು ಅನೇಕ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಕೊರತೆ ಇರುತ್ತದೆ. ಹಣಕಾಸಿನ ಅಡಚಣೆಗಳಿರಬಹುದು. ಅಲ್ಲದೆ, ಮನೆಯಲ್ಲಿ ಸಣ್ಣ ವಿಷಯಗಳಿಗೆ ತೊಂದರೆ ಉಂಟಾಗಬಹುದು. ಸದಸ್ಯರ ನಡುವೆ ವೈಮನಸ್ಸು ಉಂಟಾಗಬಹುದು.

PREV
Read more Articles on
click me!

Recommended Stories

2026 ರಲ್ಲಿ ಶನಿಯ ಧನ ರಾಜಯೋಗ, ಈ 40 ದಿನ ಈ 3 ರಾಶಿಗೆ ಕರೆನ್ಸಿ, ನೋಟು ಮಳೆ
ಈ ರಾಶಿಗೆ ತೊಂದರೆ ಹೆಚ್ಚಾಗಬಹುದು, ರಾಹು ಕಾಟದಿಂದ ಉದ್ಯೋಗ, ವ್ಯವಹಾರದ ಮೇಲೆ ಪರಿಣಾಮ