ವೈದಿಕ ಜ್ಯೋತಿಷ್ಯದ ಪ್ರಕಾರ, ಕೆಲವು ಜಾತಕದಲ್ಲಿ ಈ ಒಂದು ಯೋಗವಿದ್ದರೆ ಇದರಿಂದಾಗಿ ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಹೋರಾಡಬೇಕಾಗುತ್ತದೆ. ಅಲ್ಲದೆ, ಅದೃಷ್ಟದ ಬೆಂಬಲವೂ ಅವನಿಗೆ ಸಿಗುವುದಿಲ್ಲ. ಅಂತಹ ಯೋಗದ ಬಗ್ಗೆ ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ವ್ಯಕ್ತಿಯ ಜಾತಕದಲ್ಲೂ ಶುಭ ಮತ್ತು ಅಶುಭ ಯೋಗಗಳು ಇರುತ್ತವೆ. ಶುಭ ಯೋಗಗಳು ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ, ಆದರೆ ಅಶುಭ ಯೋಗಗಳು ಜಾತಕದಲ್ಲಿ ನೆಲೆಗೊಂಡಿದ್ದರೆ, ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಹೋರಾಡಬೇಕಾಗುತ್ತದೆ. ಅಲ್ಲದೆ, ವ್ಯಕ್ತಿಗೆ ಅದೃಷ್ಟದ ಬೆಂಬಲ ಎಂದಿಗೂ ದೊರಕುವುದಿಲ್ಲ. ಈಗ ನಾವೊಂದು ಅಶುಭ ಯೋಗದ ಬಗ್ಗೆ ಹೇಳಲಿದ್ದೇವೆ, ಅದರ ಹೆಸರೇ ವಿಷ ಯೋಗ. ಇದು ಹುಟ್ಟಿನಿಂದ ಪ್ರಾರಂಭವಾಗುತ್ತದೆ ಮತ್ತು ಸಾಯುವವರೆಗೂ ಅದರ ದುಷ್ಪರಿಣಾಮಗಳನ್ನು ನೀಡುತ್ತಲೇ ಇರುತ್ತದೆ. ಈ ವಿಷ ಯೋಗದ ಜಾತಕ ಹೊಂದಿರುವವನು ತನ್ನ ಸ್ವಂತ ಸ್ನೇಹಿತರು ಮತ್ತು ಸಂಬಂಧಿಕರಿಂದ ಮೋಸ ಹೋಗುತ್ತಾನೆ . ವ್ಯಕ್ತಿಯ ಜಾತಕದಲ್ಲಿ ಈ ಯೋಗವು ರೂಪುಗೊಂಡಿದ್ದರೆ, ವ್ಯಕ್ತಿಯು ಸಾವಿನಂಥ ದುಃಖವನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹುಟ್ಟಿನಿಂದ ಸಾವಿನವರೆಗೆ ಸಮಸ್ಯೆಗಳ ಸುಳಿಯಲ್ಲೇ ಮುಳುಗುವ ದುರದೃಷ್ಟ ಇವರದಾಗಿರುತ್ತದೆ. ಜಾತಕದಲ್ಲಿ ಈ ಯೋಗವು ಹೇಗೆ ರೂಪುಗೊಳ್ಳುತ್ತದೆ ಮತ್ತು ಅದರ ದುಷ್ಪರಿಣಾಮವನ್ನು ತಪ್ಪಿಸುವ ಕ್ರಮಗಳೇನು ತಿಳಿಯೋಣ.
ಜಾತಕದಲ್ಲಿ ವಿಷಯೋಗ(Vish Yog in Kundli)
ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕರ್ಕಾಟಕದಲ್ಲಿ ಪುಷ್ಯ ನಕ್ಷತ್ರದಲ್ಲಿದ್ದಾಗ ಮತ್ತು ಚಂದ್ರನು ಮಕರ ರಾಶಿಯಲ್ಲಿ ಶ್ರವಣ ನಕ್ಷತ್ರದಲ್ಲಿದ್ದಾಗ ಅಥವಾ ಚಂದ್ರ ಮತ್ತು ಶನಿ ವಿರುದ್ಧ ಸ್ಥಾನಗಳಲ್ಲಿದ್ದಾಗ ವಿಷಯೋಗ ರೂಪುಗೊಳ್ಳುತ್ತದೆ. ಅಂದರೆ ಚಂದ್ರ ಮತ್ತು ಶನಿ ಇಬ್ಬರೂ ಒಬ್ಬರನ್ನೊಬ್ಬರು ಆಯಾ ಭಾವದಿಂದ ನೋಡುತ್ತಿದ್ದರೆ ವಿಷಯೋಗವಾಗುತ್ತದೆ. ಇದರೊಂದಿಗೆ ಎಂಟನೇ ಮನೆಯಲ್ಲಿ ರಾಹು ಇದ್ದರೆ ಮತ್ತು ಶನಿಯು (ಮೇಷ, ಕರ್ಕ, ಸಿಂಹ, ವೃಶ್ಚಿಕ) ಲಗ್ನದಲ್ಲಿದ್ದಾಗ ಕೂಡಾ ಈ ಯೋಗ ರೂಪುಗೊಳ್ಳುತ್ತದೆ. ಇಷ್ಟೇ ಅಲ್ಲ, ಸಾಡೇಸಾತಿ ಶಿಖರದಲ್ಲಿ ಹುಟ್ಟುವ ಎಲ್ಲ ಮಕ್ಕಳಿಗೂ ವಿಷ ಯೋಗ ಇರುತ್ತದೆ.
ಈ ರಾಶಿಗಳಿಗಿದೆ ಪ್ರೇಮವಿವಾಹವಾಗೋ ಭಾಗ್ಯ, ನಿಮ್ಮದ್ಯಾವ ರಾಶಿ?
ವ್ಯಕ್ತಿಯ ಮೇಲೆ ವಿಷ ಯೋಗದ ಪರಿಣಾಮ(Effects of Vish Yog)
ವಿಷ ಯೋಗದಿಂದಾಗಿ, ವ್ಯಕ್ತಿಯು ಅದೃಷ್ಟದ ಬೆಂಬಲ ಪಡೆಯುವುದಿಲ್ಲ. ಕೆಲವೊಮ್ಮೆ ಅವನು ವ್ಯವಹಾರವನ್ನು ಬದಲಾಯಿಸಬೇಕಾಗುತ್ತದೆ. ಕೆಲಸಗಳು ಕೆಟ್ಟದಾಗುತ್ತವೆ. ಅದೇ ಸಮಯದಲ್ಲಿ, ಶನಿ-ಚಂದ್ರನ ಈ ವಿಷ ಯೋಗದಿಂದಾಗಿ, ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಖಿನ್ನತೆ ಉಂಟಾಗುತ್ತದೆ. ಇದಲ್ಲದೆ, ವ್ಯಕ್ತಿಯು ಸಾವು, ಭಯ, ದುಃಖ, ವೈಫಲ್ಯ, ರೋಗ, ಬಡತನ, ಸೋಮಾರಿತನ ಮತ್ತು ಸಾಲವನ್ನು ಎದುರಿಸಬೇಕಾಗುತ್ತದೆ.
Tarot Readings: ತಪ್ಪುಗ್ರಹಿಕೆಯಿಂದ ಸಂಬಂಧ ಹಾಳು ಮಾಡಿಕೊಳ್ಳುವ ಮಿಥುನ
ವಿಷ ಯೋಗದ ಪರಿಣಾಮಗಳನ್ನು ತಪ್ಪಿಸಲು ಪರಿಹಾರಗಳು(Vishyog remedies)
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.