Astrology Tips: ದೇವಸ್ಥಾನದಲ್ಲಿ ಕದ್ದು ಮುಚ್ಚಿ ಇವನ್ನಿಟ್ರೆ ಯಶಸ್ಸು ನಿಶ್ಚಿತ

By Suvarna News  |  First Published Jul 5, 2022, 1:30 PM IST

ಕಷ್ಟಗಳನ್ನು ಪರಿಹರಿಸುವಂತೆ ಪ್ರಾರ್ಥಿಸಲು ಜನರು ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನದಲ್ಲಿ ಯಶಸ್ಸಿನ ಗುಟ್ಟಿದೆ. ದೇವರಿಗೆ ಹೂ, ಹಣ್ಣು ಅರ್ಪಣೆ ಮಾತ್ರವಲ್ಲ, ಕೆಲ ವಸ್ತುಗಳನ್ನು ದೇವಸ್ಥಾನದಲ್ಲಿಟ್ರೆ ಶೀಘ್ರ ಫಲ ಪ್ರಾಪ್ತಿಯಾಗುತ್ತದೆ.  
 


ಯಶಸ್ಸು (Success) ಪಡೆಯಲು ಸತತ ಪರಿಶ್ರಮ ಅತ್ಯಗತ್ಯ. ಅನೇಕ ಬಾರಿ ನಿರಂತರ ಶ್ರಮದ ನಂತ್ರವೂ ಯಶಸ್ಸು ಲಭಿಸುವುದಿಲ್ಲ. ಮಾಡಿದ ಕೆಲಸಕ್ಕೆ ಮನ್ನಣೆ ಸಿಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲೂ ಯಶಸ್ಸಿನ ಬಗ್ಗೆ ಹೇಳಲಾಗಿದೆ. ಪರಿಶ್ರಮದ ನಂತ್ರವೂ ಫಲ ಸಿಗಲಿಲ್ಲ ಎಂದಾದರೆ ಏನು ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ನಾವು ಕಷ್ಟ ಬಂದಾಗ ದೇವರ ಮೊರೆ ಹೋಗ್ತೇವೆ. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ (Prayer) ಸಲ್ಲಿಸ್ತೇವೆ. ದೇವರಿಗೆ ಹರಕೆ ಕಟ್ಟಿಕೊಳ್ತೇವೆ. ದೇವಸ್ಥಾನ (Temple) ದಲ್ಲಿಯೇ ನಿಮ್ಮ ಯಶಸ್ಸಿನ ಗುಟ್ಟಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ದೇವಸ್ಥಾನಕ್ಕೆ ಹೋಗಿ, ಯಾರಿಗೂ ತಿಳಿಯದೆ ಕೆಲ ವಸ್ತುಗಳನ್ನು ಇಟ್ಟು ಬಂದರೆ ಬಂದ ಸಮಸ್ಯೆ ದೂರವಾಗುತ್ತದೆ. ಎಲ್ಲ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಯಶಸ್ಸು ನಿಮ್ಮದಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ವಸ್ತುವನ್ನು ದೇವಸ್ಥಾನದಲ್ಲಿ ಇಟ್ಟು ಬಂದರೆ ಯಶಸ್ಸು ಲಭಿಸುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.

ಅಕ್ಕಿ (Rice) ಯಿಂದ ತುಂಬಿದ ಕಲಶ:  ಈ ಚಿಕ್ಕ ಪರಿಹಾರವು ತುಂಬಾ ಪರಿಣಾಮಕಾರಿ ಎಂದು ಶಾಸ್ತ್ರದಲ್ಲಿ ಹೇಳಲಾಗದೆ. ಚಿಕ್ಕದಾದ ತಾಮ್ರದ ಕಲಶವನ್ನು ತೆಗೆದುಕೊಂಡು ಅದಕ್ಕೆ ಅಕ್ಕಿಯನ್ನು ಹಾಕಿ. ಕಲಶ ಅಕ್ಕಿಯಿಂದ ತುಂಬಬೇಕು. ನಂತ್ರ ಯಾವುದಾದರೂ ದೇವಸ್ಥಾನದಲ್ಲಿ ಇದನ್ನು ಇಟ್ಟು ಬರಬೇಕು. ಈ ಕೆಲಸ ಮಾಡುವ ಸಮಯದಲ್ಲಿ  ಹೊಸ ಕಲಶವನ್ನು ಬಳಸಬೇಕು. ಮನೆಯಲ್ಲಿರುವ, ಈಗಾಗಲೇ ಬಳಕೆ ಮಾಡಿದ ಕಲಶವನ್ನು ಬಳಸಬಾರದು ಎಂಬ ವಿಷ್ಯ ನೆನಪಿನಲ್ಲಿರಬೇಕು.  ದೇವಸ್ಥಾನದಲ್ಲಿ ಕಲಶವನ್ನಿಟ್ಟು ಬರುವುದ್ರಿಂದ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ಕಾಣಬಹುದು. ಮಾಡಿದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಪಡೆಯಬಹುದು. 

Tap to resize

Latest Videos

ಇದನ್ನೂ ಓದಿ: ಬೆಳ್ಳಿ ತಟ್ಟೆಯಲ್ಲಿ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ!

ಹತ್ತಿ (Cotton) : ನೀವು ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಲು ಬಯಸಿದರೆ, ದೇವಸ್ಥಾನದಲ್ಲಿ (Temple) ಅಕ್ಕಿಯೊಂದಿಗೆ (Rice) ಹತ್ತಿಯನ್ನು ಇಟ್ಟು ಬರಬೇಕು. ಇದರ ಜೊತೆ ಸಕ್ಕರೆಯನ್ನು ಕೂಡ ಇಡಬಹುದು. ಯಾವುದೇ ದೇವಸ್ಥಾನದಲ್ಲಿ ಅಕ್ಕಿ, ಹತ್ತಿ ಅಥವಾ ಸಕ್ಕರೆಯನ್ನು   ಸದ್ದಿಲ್ಲದೆ ತೆಗೆದುಕೊಂಡು ಇರಿಸಿ. ಹೀಗೆ ಮಾಡಿದ್ರೆ  ವ್ಯಕ್ತಿಯ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.   

ಒಂದು ರೂಪಾಯಿ ನಾಣ್ಯ : ಒಂದು ರೂಪಾಯಿ ನಾಣ್ಯವನ್ನು ದೇವಸ್ಥಾನದಲ್ಲಿ ಅರ್ಪಿಸಿದರೆ ಯಾವುದೇ ತೊಂದರೆಯಿಂದ ಮುಕ್ತಿ ಪಡೆಯಬಹುದು. ಇದಕ್ಕಾಗಿ ಒಂದು ರೂಪಾಯಿ ನಾಣ್ಯವನ್ನು ಒಂದು ಹಿಡಿ ಅಕ್ಕಿಯನ್ನು ಕೈನಲ್ಲಿ ಹಿಡಿದು, ನಿಮ್ಮ ಸಮಸ್ಯೆಯನ್ನು ದೇವರಿಗೆ ಹೇಳಬೇಕು. ನಂತ್ರ ದೇವಸ್ಥಾನದ ಯಾವುದೋ ಮೂಲೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಸುರಕ್ಷಿತವಾಗಿ ಇರಿಸಿ. ನಿಮ್ಮ ದೇವರ ಮನೆಯಲ್ಲೂ ಇದನ್ನು ಇಡಬಹುದು. ಇದ್ರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಕೆಲಸದಲ್ಲಿ ಉನ್ನತಿ ಪ್ರಾಪ್ತಿಯಾಗುತ್ತದೆ.

ಅಡಿಕೆ : ಅಡಿಕೆಯನ್ನು ಮಂಗಳ ಕಾರ್ಯಗಳಿಗೆ ಬಳಸಲಾಗುತ್ತದೆ. ಪೂಜೆಗಳಲ್ಲಿ ಇದ್ರ ಮಹತ್ವ ಹೆಚ್ಚು. ಹಿಂದೂ ಧರ್ಮದಲ್ಲಿ ಹೆಚ್ಚು ಮಹತ್ವ ಪಡೆದಿರುವ ಅಡಿಕೆಯನ್ನು ನಿಮ್ಮ ಅದೃಷ್ಟ ಬದಲಿಸಿಕೊಳ್ಳಲು ಬಳಸಬಹುದು. ಅಡಿಕೆಯನ್ನು ಪೂಜೆ ಮತ್ತು ಶುಭ ಕಾರ್ಯಗಳಿಗೆ ಬಳಸಲಾಗುತ್ತದೆ. ಅಡಿಕೆ ಹಾಗೂ ಅಕ್ಕಿಯನ್ನು ಕರವಸ್ತ್ರದಲ್ಲಿ ಸುತ್ತಿ ವೀಳ್ಯದೆಲೆ ಇಟ್ಟು ಯಾರಿಗೂ ತಿಳಿಯದೆ ದೇವಸ್ಥಾನದಲ್ಲಿ ಇಟ್ಟು ಬರಬೇಕು. 

ಇದನ್ನೂ ಓದಿ: ಮನೆಯ ವಾಸ್ತು ದೋಷಕ್ಕೆ ಹೆಚ್ಚು ಖರ್ಚಿಲ್ಲದ ಪರಿಹಾರಗಳು..

ಬೆಳ್ಳಿ ತುಂಡು : ವೃತ್ತಿ ಜೀವನದಲ್ಲಿ ಯಶಸ್ಸ ಸಿಗಬೇಕು ಎನ್ನುವವರು ಬೆಳ್ಳಿ ತುಂಡಿನ ಉಪಾಯ ಪಾಲನೆ ಮಾಡಬಹುದು. ಸಣ್ಣ ಬೆಳ್ಳಿ ತುಂಡನ್ನು ತೆಗೆದುಕೊಳ್ಳಿ. ಅದನ್ನು ಅಕ್ಕಿ ಹಾಗೂ ಹೂವಿನ ಮಧ್ಯೆ ಇರಿಸಿ, ಅದನ್ನು ಸಮೀಪದ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇಟ್ಟು ಬನ್ನಿ.  ದೇವಸ್ಥಾನದಲ್ಲಿ ಇಡಲು ಸಾಧ್ಯವಾಗದಿದ್ದರೆ ನಿಮ್ಮ ದೇವರ ಮನೆಯಲ್ಲೂ  ನೀವು ಇದನ್ನು ಇಡಬಹುದು.  


 

click me!