Astrology Tips in Kannada: ಗ್ರಹಗಳು ಬಲವಾಗಿದ್ದು, ಶುಭ ಪ್ರಭಾವವನ್ನು ಬೀರುತ್ತಿದ್ದರೆ ಮಾತ್ರ ವ್ಯಕ್ತಿಯ ಜೀವನದಲ್ಲಿ ಒಳಿತಾಗುತ್ತದೆ. ಹಾಗಾಗಿ ಆಯಾ ರಾಶಿಯ ಅಧಿಪತಿ ಗ್ರಹವನ್ನು ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯಕವಾಗುತ್ತದೆ. ಆಯಾ ರಾಶಿಯ ಅಧಿಪತಿ ಗ್ರಹ ಯಾವುದು ಮತ್ತು ಅವುಗಳ ಆರಾಧನೆಯನ್ನು ಮಾಡುವ ಬಗೆ ಹೇಗೆ ಎಂಬುದನ್ನು ತಿಳಿಯೋಣ...
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ (Planet), ನಕ್ಷತ್ರ (Star) ಮತ್ತು ರಾಶಿಗಳು ವ್ಯಕ್ತಿಯ ಭವಿಷ್ಯದ (Future) ಬಗ್ಗೆ ಅನೇಕ ವಿಚಾರವನ್ನು ತಿಳಿಸುವಲ್ಲಿ ಸಹಾಯಕವಾಗಿದೆ. ಹಾಗೆಯೇ ಪ್ರತಿ ರಾಶಿಗಳಿಗೆ ಒಂದೊಂದು ಅಧಿಪತಿ ಗ್ರಹಗಳು ಇರುತ್ತವೆ. ಆಯಾ ರಾಶಿಯ ವ್ಯಕ್ತಿಗಳು ಅದಕ್ಕಿರುವ ಅಧಿಪತಿ ಗ್ರಹವನ್ನು (Planet lord) ಆರಾಧಿಸಿದಲ್ಲಿ ಜೀವನದಲ್ಲಿ ಸುಖ – ಸಮೃದ್ಧಿಯನ್ನು ಪಡೆಯುತ್ತಾರೆ. ಗ್ರಹಗಳಿಗೆ ಸಂಬಂಧಿಸಿದ ದೋಷವಿದ್ದಲ್ಲಿ ಅವುಗಳ ಸಹ ನಿವಾರಣೆಯಾಗಿ ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ.
ಮೇಷ ರಾಶಿ (Aries)
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳು ಮತ್ತು ಹನ್ನೆರಡು ರಾಶಿಗಳಿವೆ. ಅವುಗಳಲ್ಲಿ ಮೇಷ ರಾಶಿಯು ಮೊದಲನೇ ರಾಶಿಯಾಗಿದೆ. ಮೇಷ ರಾಶಿಯ ಅಧಿಪತಿ ಗ್ರಹ ಮಂಗಳ (Mars) ಗ್ರಹವಾಗಿದೆ. ಒಂಭತ್ತು ಗ್ರಹಗಳಿಗೆ ಮಂಗಳ ಗ್ರಹವೇ ಸೇನಾಪತಿಯಾಗಿದೆ. ಈ ರಾಶಿಯವರು ಮಂಗಳವಾರದಂದು ಶಿವಲಿಂಗಕ್ಕೆ ಕೆಂಪು ಹೂವನ್ನು ಅರ್ಪಿಸುವುದರ ಜೊತೆಗೆ ಆಂಜನೇಯನ ಆರಾಧನೆ ಮಾಡುವುದರಿಂದ ವಿಶೇಷ ಲಾಭವನ್ನು ಪಡೆಯಬಹುದಾಗಿದೆ.
ಇದನ್ನು ಓದಿ: ಶನಿ ಬರೀ ಕೆಟ್ಟದ್ದೇ ಮಾಡೋಲ್ಲ, ಈ ಶುಭ ಸಂಕೇತಗಳನ್ನೂ ಕೊಡುತ್ತಾನೆ!
ವೃಷಭ ರಾಶಿ (Taurus)
ಅಸುರರ ಗುರುವು ಶುಕ್ರ ದೇವನಾಗಿದ್ದಾನೆ. ವೃಷಭ ರಾಶಿಯ ಅಧಿಪತಿಯು ಸಹ ಶುಕ್ರ (Venus) ಗ್ರಹವಾಗಿದೆ. ಶುಕ್ರ ಗ್ರಹದ ಕೃಪೆ ಪಡೆಯಲು ಶುಕ್ರವಾರದಂದು ಶಿವಲಿಂಗಕ್ಕೆ ಹಾಲನ್ನು ಅರ್ಪಿಸಬೇಕು. ಶುಕ್ರದೇವನನ್ನು ಶುಕ್ರವಾರದ ದಿನ ವಿಶೇಷ ಪೂಜೆ ಮಾಡುವ ಮೂಲಕ ಆರಾಧಿಸುವುದರಿಂದ ಒಳಿತಾಗುತ್ತದೆ.
ಮಿಥುನ ರಾಶಿ (Gemini)
ಬುಧ ಗ್ರಹವು ಮಿಥುನ ರಾಶಿಯ ಅಧಿಪತಿ ಗ್ರಹವಾಗಿದೆ. ಬುಧ (Mercury) ಗ್ರಹವನ್ನು ಪ್ರಸನ್ನಗೊಳಿಸಲು ಬುಧವಾರದಂದು ದನ ಕರುಗಳಿಗೆ ಹಸಿರು ಹುಲ್ಲನ್ನು ನೀಡಬೇಕು. ಅಲ್ಲದೇ ಬುಧವಾರವು ಗಣೇಶನ ವಾರ ಸಹ ಆಗಿರುವುದರಿಂದ ಈ ದಿನ ಗಣೇಶನನ್ನು ಪೂಜಿಸಿದರೆ ಉತ್ತಮವಾದ ಫಲ ದೊರಕುತ್ತದೆ.
ಕರ್ಕಾಟಕ ರಾಶಿ (cancer)
ಕರ್ಕಾಟಕ ರಾಶಿಯ ಅಧಿಪತಿ ಚಂದ್ರದೇವನಾಗಿದ್ದಾನೆ. ಸೋಮವಾರವು (Monday) ಚಂದ್ರನಿಗೆ (Moon) ಪ್ರಿಯವಾದ ವಾರವಾಗಿದೆ. ಈ ರಾಶಿಯವರು ಸೋಮವಾರದ ದಿನ ಈಶ್ವರನಿಗೆ ಜಲವನ್ನು ಅರ್ಪಿಸಬೇಕು. ಇದರಿಂದ ವಿಶೇಷ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು.
ಸಿಂಹ ರಾಶಿ (Leo)
ಸೂರ್ಯ (Sun) ಗ್ರಹವು ಸಿಂಹ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಸೂರ್ಯ ದೇವನನ್ನು ಆರಾಧಿಸಬೇಕು ಮತ್ತು ಸೂರ್ಯನಿಗೆ ಪ್ರತಿದಿನ ಪ್ರಾತಃಕಾಲದಲ್ಲಿ ಅರ್ಘ್ಯವನ್ನು ನೀಡಬೇಕು. ಇದರಿಂದ ಇಷ್ಟಾರ್ಥಗಳೆಲ್ಲ ಸಿದ್ಧಿಸುತ್ತವೆ.
ಕನ್ಯಾ ರಾಶಿ (Virgo)
ಬುಧ (Mercury) ಗ್ರಹವು ಕನ್ಯಾರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಬುಧವಾರದಂದು ಗಣಪತಿಯನ್ನು ಆರಾಧಿಸುವುದರಿಂದ ಒಳಿತಾಗುತ್ತದೆ. ದೂರ್ವೆಯನ್ನು ಗಣೇಶನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಕೆಡುಕು ದೂರವಾಗುತ್ತದೆ.
ತುಲಾ ರಾಶಿ (Libra)
ಶುಕ್ರ (Venus) ಗ್ರಹವು ತುಲಾ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಶುಕ್ರಗ್ರಹದ ಮಂತ್ರವನ್ನು ಹೆಚ್ಚು ಜಪಿಸಿದರೆ ಒಳ್ಳೆಯದಾಗುತ್ತದೆ. ತುಲಾ ರಾಶಿಯ ವ್ಯಕ್ತಿಗಳು ಶುಕ್ರವಾರದಂದು ನಿರ್ಗತಿಕರಿಗೆ ವಸ್ತ್ರವನ್ನು ದಾನವಾಗಿ ನೀಡಬೇಕು.
ವೃಶ್ಚಿಕ ರಾಶಿ (Scorpio)
ಮಂಗಳ (Mars) ಗ್ರಹವು ವೃಶ್ಚಿಕ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಮಂಗಳ ಗ್ರಹವದ ಕೃಪೆ ಪಡೆಯಲು ಮಂಗಳವಾರದಂದು ಹನುಮಂತನನ್ನು ಪೂಜಿಸಿ, ಮಲ್ಲಿಗೆ ಎಣ್ಣೆಯನ್ನು ದಾನ ಮಾಡಬೇಕು. ಇದರಿಂದ ಒಳಿತಾಗುತ್ತದೆ.
ಧನಸ್ಸು ರಾಶಿ (Sagittarius)
ದೇವತೆಗಳ ಗುರುವಾದ ಗುರು (Jupiter) ಬೃಹಸ್ಪತಿಯು ಧನು ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಪ್ರತಿ ಗುರುವಾರ ದಾನ ಮಾಡುವುದು, ನಿರ್ಗತಿಕರಿಗೆ ಊಟ ನೀಡುವುದರಿಂದ ಗುರುವಿನ ಕೃಪೆಯನ್ನು ಪಡೆಯಬಹುದಾಗಿದೆ. ಶಿವನಿಗೆ ಹಿಟ್ಟಿನ ಉಂಡೆಯನ್ನು ನೈವೇದ್ಯ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಮಕರ ರಾಶಿ (Capricorn)
ಶನಿ (Saturn) ದೇವನು ಮಕರ ರಾಶಿಯ ಅಧಿಪತಿ ಗ್ರಹವಾಗಿದ್ದಾನೆ. ಈ ರಾಶಿಯವರು ಶನಿಯನ್ನು ಪೂಜಿಸಬೇಕು. ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು ಮತ್ತು ಕಪ್ಪು ಉದ್ದನ್ನು ದಾನ ಮಾಡಬೇಕು.
ಇದನ್ನು ಓದಿ: ಹಸ್ತ ರೇಖೆಯಿಂದ ತಿಳಿಯಿರಿ ವಿದೇಶ ಪ್ರಯಾಣ ಯೋಗ..
ಕುಂಭ ರಾಶಿ (Aquarius)
ಶನಿದೇವನು (Saturn) ಕುಂಭ ರಾಶಿಯ ಅಧಿಪತಿ ಗ್ರಹವಾಗಿದೆ. ಶನಿದೇವರ ಕೃಪೆ ಪಡೆಯುವುದು ತುಂಬಾ ಕಠಿಣ. ಪ್ರತಿ ಶನಿವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಒಳಿತಾಗುತ್ತದೆ. ಬಡವರಿಗೆ ಛತ್ರಿಯನ್ನು ದಾನವಾಗಿ ನೀಡುವುದರಿಂದ ಶನಿ ದೇವರ ಕೃಪೆಯನ್ನು ಪಡೆಯಬಹುದಾಗಿದೆ.
ಮೀನ ರಾಶಿಗೆ (Pisces)
ಮೀನ ರಾಶಿಯವರಿಗೆ ಅಧಿಪತಿ ಗ್ರಹ ಗುರು (Jupiter). ಉತ್ತಮ ಫಲಪ್ರಾಪ್ತಿಗೆ ಗುರುರಾಯರ ಆರಾಧನೆ ಮಾಡಬೇಕು. ಜೊತೆಗೆ ಶಿವನಿಗೆ ಹಿಟ್ಟಿನ ಉಂಡೆಯನ್ನು ನೇವೇದ್ಯ ಮಾಡಿದರೆ ಉತ್ತಮವೆಂದು ಹೇಳಲಾಗುತ್ತದೆ.