
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಇದಾಗಲೇ 55 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು, ವಿವಿಧ ಪಕ್ಷಗಳ ರಾಜಕಾರಣಿಗಳು ಪುಣ್ಯಸ್ನಾನದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ, ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು, ತಮ್ಮ ಅತ್ತೆ ವೀಣಾ ಕೌಶಲ್ ಜೊತೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇದರ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಪತಿ ವಿಕ್ಕಿ ಕೌಶಲ್ ತಾಯಿ ವೀಣಾ ಅವರ ಜೊತೆ ಕಾಣಿಸಿಕೊಂಡಿರುವ ಕತ್ರಿನಾ ಅವರಿಗೆ, ಸಾಧುಗಳು ಕೊರಳಲ್ಲಿ ಹಾರ ಹಾಕಿ ಸ್ವಾಗತಿಸಿದ್ದಾರೆ. ಬಳಿಕ, ನಟಿ ಮತ್ತು ಅತ್ತೆ ಸಾಧುಗಳ ಜೊತೆ ಕೆಲ ಕಾಲ ಮಾತುಕತೆ ಕೂಡ ನಡೆಸಿದ್ದಾರೆ.
ಈ ಭೇಟಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನಿಸಿಕೆ ಶೇರ್ ಮಾಡಿರುವ ನಟಿ, ಪರಮಾರ್ಥ ನಿಕೇತನ್ ಶಿಬಿರಕ್ಕೆ ಭೇಟಿಕೊಟ್ಟು ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಪರಮಾರ್ಥ ನಿಕೇತನ್ ಶಿಬಿರದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಹಾಗೂ ಸಾಧ್ವಿ ಭಗವತಿ ಸರಸ್ವತಿ ಇವರನ್ನು ಭೇಟಿ ಮಾಡಿ, ಅವರ ಆಶೀರ್ವಾದವನ್ನು ಪಡೆದಿರುವ ವಿಡಿಯೋಗಳು ವೈರಲ್ ಆಗಿವೆ. ನನಗೆ ಈ ಪುಣ್ಯಕ್ಷೇತ್ರಕ್ಕೆ ಬರಲು ಸಾಧ್ಯವಾಗಿದ್ದು ನಿಜಕ್ಕೂ ನನ್ನ ಅದೃಷ್ಟ. ನಾನು ಇಲ್ಲಿಗೆ ಬಂದಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ. ಸ್ವಾಮಿ ಚಿದಾನಂದ ಸರಸ್ವತಿ ಅವರ ಜೊತೆ ಇದ್ದೇನೆ. ಅವರೊಂದಿಗೆ ಸಂವಾದ ನಡೆಸಿದ್ದೇನೆ. ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಇಲ್ಲಿ ಇರುವುದಕ್ಕೆ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ ಎಂದು ಕತ್ರೀನಾ ಹೇಳಿಕೊಂಡಿದ್ದಾರೆ.
ಗಂಡನ ಕೈಗೆ ತಾಳಿ ಇಟ್ಟು, ಪತಿಯನ್ನು ಲವರ್ಗೆ ಬಿಟ್ಟುಕೊಟ್ಟು ಕುಂಭಮೇಳಕ್ಕೆ ಹೊರಟ ಭಾಗ್ಯ: ನಟಿ ಹೇಳಿದ್ದೇನು ಕೇಳಿ..
ಇದೇ ವೇಳೆ, ನಟ ಅಕ್ಷಯ್ ಕುಮಾರ್ ಕೂಡ ಪುಣ್ಯಸ್ನಾನ ಮಾಡಿದ್ದಾರೆ. 'ಕುಂಭಮೇಳದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ಇಲ್ಲಿನ ವ್ಯವಸ್ಥೆಗಳು ತುಂಬಾ ಚೆನ್ನಾಗಿವೆ; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತುಂಬಾ ಚೆನ್ನಾಗಿ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇಂತಹ ಉತ್ತಮ ವ್ಯವಸ್ಥೆಗಳನ್ನು ಮಾಡಿದ ಸಿಎಂ ಯೋಗಿ ಸಾಹಬ್ ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.
'ನನಗೆ ಇನ್ನೂ ನೆನಪಿದೆ, 2019 ರಲ್ಲಿ ಕೊನೆಯ ಕುಂಭ ನಡೆದಾಗ ಸಾಮಾನ್ಯ ಜನರು ಮಾತ್ರ ತಮ್ಮ ಲಗೇಜ್‌ಗಳೊಂದಿಗೆ ಇಲ್ಲಿಗೆ ಬರುತ್ತಿದ್ದರು, ಆದರೆ ಈ ಬಾರಿ ಎಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಿದ್ದಾರೆ. ಅಂಬಾನಿಗಳು, ಅದಾನಿಗಳು ಮತ್ತು ದೊಡ್ಡ ನಟರೆಲ್ಲರೂ ಮಹಾಕುಂಭ ಮೇಳಕ್ಕೆ ಬರುತ್ತಿದ್ದಾರೆ' ಎಂದು ಹೇಳಿದರು.
ಕುಂಭಮೇಳದಲ್ಲಿ ಕಾಲ್ತುಳಿತಕ್ಕೊಳಗಾದವರು ಯಾರೂ ಸತ್ತಿಲ್ಲ... ಅವರಿಗೆ... ಬಾಬಾ ಬಾಗೇಶ್ವರ್ ಸ್ಫೋಟಕ ಹೇಳಿಕೆ