ಚಾಣಕ್ಯ ನೀತಿಯ ಪ್ರಕಾರ, ಗಂಡ ಹೆಂಡತಿ ಪರಸ್ಪರ ಯಾವಾಗ 'ಬೇಡ' ಎನ್ನಬೇಕು ಎಂಬುದನ್ನು ತಿಳಿದಿರಬೇಕು. ಗಂಡನ ಆ ದುರಬ್ಯಾಸಕ್ಕಂತೂ ಬೇಡ ಅನ್ನಲೇಬೇಕು!
ಚಾಣಕ್ಯ ನೀತಿ ಹೇಳುವಂತೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಅತ್ಯಂತ ವಿಶೇಷ ಮತ್ತು ಮಹತ್ವದ್ದು. ಅವರಿಬ್ಬರ ಸಂಬಂಧ ಏಳು ಹೆಜ್ಜೆಗಳಿಂದ ಆರಂಭಗೊಳ್ಳುತ್ತದೆ. ನಂತರ ಅವರು ಪರಸ್ಪರರ ಸಂತೋಷ ಮತ್ತು ದುಃಖದ ಸಹಚರರಾಗುತ್ತಾರೆ. ಪರಸ್ಪರ ಹೊಂದಾಣಿಕೆಯ ಕೊರತೆಯಿದ್ದರೆ, ಪತಿ-ಪತ್ನಿಯರ ನಡುವಿನ ಸಂಬಂಧ ನೆಟ್ಟಗಿರಲು ಸಾಧ್ಯವಿಲ್ಲ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ ಮಾತ್ರ ಪತಿ-ಪತ್ನಿಯ ಸಂಬಂಧ ಆಹ್ಲಾದಕರವಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾನೆ. ಇದರ ಕೊರತೆಯಿರುವ ಮನೆಗಳಲ್ಲಿ ಅಶಾಂತಿ ಮತ್ತು ದುಃಖದ ವಾತಾವರಣ ಉಂಟಾಗುತ್ತದೆ. ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಹೇಳುವಂತೆ, ಪತಿ- ಪತ್ನಿಗೆ ಪರಸ್ಪರ ಯಾವಾಗ ʼನೋʼ ಎಂದು ಹೇಳಬೇಕು ಎಂಬುದು ಕೂಡ ಗೊತ್ತಿರಬೇಕು. ಹಾಗಿದ್ದರೆ ಅದು ಯಾವಾಗ?
ಪತಿ- ಪತ್ನಿಗೆ ಇಂಥ ಸಂದರ್ಭಗಳಲ್ಲಿ ʼನೋʼ ಎನ್ನಬೇಕು
undefined
1) ಅನ್ಯರ ಕೈಕೆಳಗೆ ಕೆಲಸ ಮಾಡಲು ಹೊರಟರೆ ಓಕೆ. ಆದರೆ ನಿಮಗಿಂತ ಗುಣ, ಸ್ವಭಾವ, ಸಂಸ್ಕಾರ, ಶ್ರೀಮಂತಿಕೆ ಇತ್ಯಾದಿಗಳಲ್ಲಿ ಕೆಳಗಿರುವವರ ಬಳಿ ಕೆಲಸ ಮಾಡಲು ನೋ ಎನ್ನಬೇಕು. ಇದರಿಂದ ನಿತ್ಯ ಗೋಳು ತಪ್ಪಿದ್ದಲ್ಲ.
2) ಗಂಡನಿಗೆ ಗೊತ್ತಾಗದಂತೆ ಕೈ ಖರ್ಚಿಗೆ ಅವರಿವರ ಬಳಿ ಸಾಲ ಮಾಡುವ ಸ್ವಭಾವಕ್ಕೆ ʼನೋʼ ಎನ್ನಬೇಕು. ತನಗೆ ಅರಿಯದಂತೆ ಶಾಪಿಂಗ್ ಮಾಡುವ, ತನ್ನ ಸಂಬಳವನ್ನು ಸಂಸಾರಕ್ಕೆ ಹೊರತುಪಡಿಸಿದ ಖರ್ಚಿಗೆ ವಿನಿಯೋಗಿಸುವ ಸ್ವಭಾವಕ್ಕೆ ಕತ್ತರಿ ಹಾಕಬೇಕು.
3) ಗಾಸಿಪ್ ಮಾಡುವ ಸ್ವಭಾವಕ್ಕೆ ನೋ ಎನ್ನಬೇಕು. ಗಾಸಿಪ್‌ಗಳೇ ವಿಸ್ತರಿಸಿ ಮುಂದೆ ಚಾಡಿಕೋರತನ ಆಗುತ್ತದೆ. ಅದು ಸಂಸಾರದಲ್ಲೂ ಅದರಾಚೆಗೂ ಅನಾಹುತಕ್ಕೆ ಕಾರಣವಾಗುತ್ತದೆ.
4) ಪತ್ನಿಯ ದುರಾಸೆಗೆ ಬೇಡವೆನ್ನಬೇಕು. ಅಂತಹವಳು ಹಣದಲ್ಲಿ ಆಸ್ತಿಯಲ್ಲಿ ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಯನ್ನು ಇಟ್ಟುಕೊಳ್ಳುತ್ತಾಳೆ. ಈ ಜನ ಮನೆಗೆ ಹಣ ಕೇಳುವ ವ್ಯಕ್ತಿ ಬಂದರೆ, ಅವರನ್ನು ಶತ್ರುಗಳಂತೆ ನೋಡುತ್ತಾಳೆ. ಅವಳು ದಾನ ಧರ್ಮ ಮಾಡುವುದಿಲ್ಲ.
ಪತ್ನಿಯು- ಪತಿಗೆ ಯಾವಾಗ ನೋ ಹೇಳಬೇಕು?
1) ಕೆಲಸದಲ್ಲಿ ಮೈಮರೆತು ಮಕ್ಕಳನ್ನು ಗಮನಿಸದೇ ಹೋದರೆ, ಉದ್ಯೋಗದಲ್ಲಿ ಮೈಮರೆತು ಸಂಸಾರದ ಕಡೆಗೆ ಗಮನ ಕೊಡದೇ ಇದ್ದರೆ ಅದನ್ನು ಬೇಡವೆಂದು ಹೇಳಬೇಕು. ಕೆಲಸದ ಜೊತೆಗೆ ಸಂಸಾರ ತೂಗಿಸಿಕೊಂಡು ಹೋಗುವುದು ಗಂಡಸಿನ ಜವಾಬ್ದಾರಿ.
ಈ ರಾಶಿಯ ಮಹಿಳೆಯರನ್ನು ಗಂಡಸ್ರು ಮದ್ವೆಯಾದ್ರೆ ಭೂಮಿ ಮೇಲೆಯೇ ಸ್ವರ್ಗ
2) ಪತಿಯ ಅನಗತ್ಯ ಲೈಂಗಿಕ ಚೇಷ್ಟೆಗಳಿಗೆ, ಲೈಂಗಿಕ ವಿಕೃತಿಗಳಿಗೆ ನೋ ಹೇಳಬೇಕು. ಆದರೆ ಆರೋಗ್ಯಕರ ಲೈಂಗಿಕ ಮಿಲನವನ್ನು ನಿರಾಕರಿಸಬಾರದು. ಇದರಿಂದ ಪತಿಯು ಪತ್ನಿಯಲ್ಲಿ ಆಸಕ್ತಿ ಕಳೆದುಕೊಂಡು ಅನ್ಯ ನಾರಿಯರಲ್ಲಿ ಆಸಕ್ತನಾಗಬಹುದು.
3) ಪತಿಯ ದುಡಿಮೆಯನ್ನು ಪ್ರೋತ್ಸಾಹಿಸಬೇಕು, ಆದರೆ ಸೋಮಾರಿತನವನ್ನು ಖಂಡಿಸಬೇಕು. ಪತಿಯನ್ನು ದುಡಿಯಲು ಉತ್ಸಾಹ ಹೊಂದುವಂತೆ ಮಾಡಬೇಕು. ಸೋಮಾರಿ ಗೆಳೆಯರೊಂದಿಗೆ ಇರುವುದನ್ನು ಪ್ರೋತ್ಸಾಹಿಸಬಾರದು.
4) ಕುಡಿತ ಮುಂತಾದ ದುಶ್ಚಟಗಳಿಗೆ ನೋ ಹೇಳಬೇಕು. ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ದುಷ್ಟರಿಂದ ಸುತ್ತುವರೆದರೆ, ಇನ್ನೊಬ್ಬರು ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪತಿ ತಪ್ಪು ಮಾಡಿದರೆ ಅದು ಹೆಂಡತಿಯ ಮೇಲೆ ಪರಿಣಾಮ ಬೀರುತ್ತದೆ.
Chanakya Niti: ಇಂಥವರನ್ನು ನಿಮ್ಮ ಮನೆಯ ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ ಅಂತಾನೆ ಚಾಣಕ್ಯ