ಕಾರ್ತಿಕ ಮಾಸದಿಂದ ಯುಗಾದಿವರೆಗೆ ರಾಜ್ಯದಲ್ಲಿ ಸಾವು, ನೋವುಗಳು ಹೆಚ್ಚಾಗಲಿವೆ!
ರಾಜಕೀಯದಲ್ಲಿ ಪಕ್ಷಗಳು ವಿಭಾಗಗಳಾಗ್ತಾವೆ..
ಮತ್ತೆ ಧಾರವಾಡದಲ್ಲಿ ಭವಿಷ್ಯ ನುಡಿದ ಕೂಡಿಶ್ರಿಗಳು!
ಶೀಘ್ರದಲ್ಲಿ ಭೂಕಂಪ ಆಗುತ್ತೆ ಎಂದ ಸ್ವಾಮೀಜಿ!
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ರಾಜ್ಯದಲ್ಲಿ ಕಾರ್ತಿಕ ಮಾಸದಿಂದ ಯುಗಾದಿವರೆಗೆ ಸಾವು ನೋವುಗಳು ಹೆಚ್ಚಾಗಲಿವೆ ಎಂದು ಧಾರವಾಡದಲ್ಲಿ ಕೋಡಿ ಶ್ರೀಗಳು ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಕೋಡಿ ಶ್ರೀಗಳು ಕಾರ್ತಿಕ ಮಾಸದಿಂದ ಯುಗಾದಿಯವರೆಗೆ ಜನರಿಗೆ ತೊಂದರೆಯಾಗಲಿದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.
ಜನರಿಗೆ ನೋವನ್ನ ಕೊಡುತ್ತೆ ಕಾರ್ತಿಕ ಮಾಸ, ಭಾರತೀಯ ಸಂಸ್ಕಾರದಲ್ಲಿ ಸಂವತ್ಸರಗಳು ಒಂದೊಂದು ವರ್ಷದ ಫಲಾಫಲಗಳನ್ನು ನಿರ್ಧರಿಸುತ್ತವೆ. ಅದೆ ರೀತಿ ಕೆಡಕು ಆಗುತ್ತಲೇ ಬಂದಿದೆ. ಆದರೆ ಸದ್ಯ ಯಾವುದು ಒಳ್ಳೆಯದು ಆಗ್ತಿಲ್ಲ, ಕೇವಲ ಕೆಟ್ಟದಾಗುತ್ತಾ ಬಂದಿದೆ. ಆದರೆ ಜನರು ಇದಕ್ಕೆಲ್ಲಾ ಗಟ್ಟಿಯಾಗಿರಬೇಕು. ಇದು ಶುಭಕೃತನಾಮ ಸಂವತ್ಸರ. ಆದರೆ ಈ ವರ್ಷ ಕಡೆಯವರೆಗೆ ಅಶುಭವನ್ನು ಕೊಡುತ್ತಾ ಬಂದಿದೆ. ಮುಂದೆನೂ ಅಶುಭವನ್ನೇ ಕೊಡುತ್ತೆ ಎಂದು ಹೇಳಿದರು.
Navratri 2022: ಬಾಗಲಕೋಟೆಯ ಅಂಬಾಭವಾನಿಗೆ 150 ಬಗೆಯ ನೈವೇದ್ಯ!
'ಶುಭವನ್ನ ಕೊಡುತ್ತಿಲ್ಲ, ಮಳೆ ಗಾಳಿ, ಭೂಕಂಪಗಳು, ಮತಾಂಧತೆಗಳು, ಸಾವು ನೋವುಗಳು, ಇವಲ್ಲವೂ ಹೆಚ್ಚಾಗ್ತಿವೆ. ಭೂಕಂಪ ಆಗುತ್ತೆ, ಮಳೆ, ಬೆಂಕಿಯಿಂದ ಅನಾಹುತ ರೋಗರುಜಿನಗಳು ಹೆಚ್ಚಾಗುತ್ತೆ, ಪ್ರಾಣಿ ಪಕ್ಷಗಳು ಸಾಯುತ್ತವೆ ಎಂದು ಭವಿಷ್ಯ ನುಡಿದರು. ಈ ಬಾರಿ ಇನ್ನೂ ಹಾನಿಯಾಗೋದೇ ಹೆಚ್ಷಿದೆ, ಸಾವು ನೋವು ಆಗೋ ಲಕ್ಷಣಗಳಿವೆ' ಎಂದು ಸ್ವಾಮೀಜಿ ಹೇಳಿದರು.
'ರಾಜಕೀಯ ಅಸ್ಥಿರತೆ ಇದೆ, ಎಲ್ಲವೂ ವಿಭಾಗ ಆಗುವ ಲಕ್ಷಣಗಳು ಇವೆ, ಮೂರು ಪಕ್ಷದಲ್ಲಿ ವಿಭಾಗಗಳು ಆಗುತ್ತವೆ. ಎಲ್ಲ ಪಕ್ಷದಲ್ಲಿ ವಿಭಾಗಗಳು ಆಗುತ್ತವೆ, ರಾಜಕೀಯದಲ್ಲಿ ಯಾರನ್ನೂ ತೃಪ್ತಿ ಪಡಿಸಲು ಆಗಲ್ಲ. ನಾನು ಯಾವುದೆ ವ್ಯಕ್ತಿ ಬಗ್ಗೆ ಹೇಳಲ್ಲ. ನಾನು ಸನ್ಯಾಸಿ ಇದೇನಿ, ಯಾವ ವ್ಯಕ್ತಿ ಬಗ್ಗೆ ಮಾತನಾಡಲ್ಲ. ಮಳೆಗಾಲ ಹೀಗೆ ಮುಂದುವರೆಯುತ್ತೆ , ಹಿಂಗಾರು ಬೆಳೆ ಅನ್ನದಾತರ ಕೈಗೆ ಸೇರುತ್ತೆ. ಯಾರಿಗೂ ನೂವಾಗುವಂತ ಪ್ರಸಂಗ ಏನೆಂದು ನಾನು ಹೇಳಲ್ಲ. ಆದರೆ ಕಾರ್ತಿಕ ಮಾಸದಿಂದ ಈ ಬಾರಿನೂ ಯುಗಾದಿವರೆಗೆ ರಾಜ್ಯಕ್ಕೆ ಕಂಟಕ ಕಾದಿದೆ' ಎಂದು ಧಾರವಾಡದಲ್ಲಿ ಕೋಡಿಶ್ರಿ ಭವಿಷ್ಯ ನುಡಿದರು.