ಕರ್ನಾಟಕ ಕಾಂಗ್ರೆಸ್‌ಗೆ 122-133 ಸೀಟ್ ಸಿಗುತ್ತದೆ ಎಂದು ಮಾರ್ಚ್‌ನಲ್ಲೇ ಹೇಳಿದ್ದ ಜ್ಯೋತಿಷಿ!

By Suvarna NewsFirst Published May 14, 2023, 10:55 AM IST
Highlights

ಚಂಡೀಗಢದ ವೇದ ಜ್ಯೋತಿಷಿ ರುದ್ರಕರಣ ಪ್ರತಾಪ್ ಮಾರ್ಚ್‌ನಲ್ಲಿಯೇ ಕರ್ನಾಟಕ ಚುನಾವಣಾ ಫಲಿತಾಂಶದ ಬಗ್ಗೆ ನಿಖರವಾಗಿ ಹೇಳಿದ್ದರು. 

ಕರ್ನಾಟಕ ಚುನಾವಣಾ ಫಲಿತಾಂಶ ಹೊರ ಬಿದ್ದು ಕಾಂಗ್ರೆಸ್ ಬಹುಮತದ ಏಕೈಕ ಪಕ್ಷವಾಗಿ ಹೊರ ಹೊಮ್ಮಿದ್ದು ಬಹಳಷ್ಟು ಜನರಿಗೆ ಅಚ್ಚರಿ ತಂದಿರಬಹುದು. ಕರ್ನಾಟಕ ಚುನಾವಣಾ ಫಲಿತಾಂಶದ ಬಗ್ಗೆ ಹಲವಾರು ಜ್ಯೋತಿಷಿಗಳು ಈ ಮುಂಚೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಭವಿಷ್ಯ ನುಡಿದಿದ್ದರು. ಅದರಲ್ಲಿ ಬಬಲಾದಿ ಮಠದ ಕಾರಣಿಕ ನಿಜವಾಗಿದೆ. ಅಲ್ಲದೆ, ಚಂಡೀಗಢದ ವೇದ ಜ್ಯೋತಿಷಿ ರುದ್ರಕರಣ ಪ್ರತಾಪ್(@Rudrá Karan Pártaap) ಮಾರ್ಚ್‌ನಲ್ಲಿಯೇ ಈ ಬಗ್ಗೆ ನಿಖರವಾಗಿ ಹೇಳಿದ್ದರು ಎಂಬುದು ವಿಶೇಷವಾಗಿದೆ. 

ಹೌದು, ರುದ್ರಕರಣ ಪ್ರತಾಪ್ ಎಂಬ ಯುವ ಜ್ಯೋತಿಷಿ ಟ್ವಿಟ್ಟರ್‌ನಲ್ಲಿ ಕರ್ನಾಟಕ ಚುನಾವಣಾ ಭವಿಷ್ಯವನ್ನು ನಿಖರವಾಗಿ ಊಹಿಸಿದ್ದರು. ಅವರು ಮಾರ್ಚ್‌ನಲ್ಲಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ 122-133 ಸೀಟ್‌ಗಳನ್ನು ಪಡೆದು ಬಹುಮತದಿಂದ ಸರ್ಕಾರ ರಚಿಸಲಿದೆ ಎಂದು ಊಹಿಸಿದ್ದರು. ಇದೀಗ ತಮ್ಮ ಹಳೆಯ ಟ್ವೀಟ್‌ಗಳನ್ನು ಹಂಚಿಕೊಂಡಿರುವ ಅವರು, 'ಮಾರ್ಚ್‌ನಲ್ಲಿ ಊಹಿಸಿದ್ದು ನಿಖರವಾಗಿದೆ. ನಕ್ಷತ್ರಗಳು ಸರಿಯಾಗಿ ಫಲಿತಾಂಶ ನೀಡಿವೆ. ಊಹಿಸಿದಂತೆ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಿಜೆಪಿ ಸರ್ಕಾರಕ್ಕೆ ಬಾಗಿಲು ಹಾಕಿದೆ,' ಎಂದವರು ಹೇಳಿದ್ದಾರೆ. 

ಅಷ್ಟಕ್ಕೇ ನಿಲ್ಲದೆ, 'ಆದರೆ, ಕರ್ನಾಟಕದ ಸೋಲು ಬಿಜೆಪಿಗೆ ಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ನಿರ್ಧಾರಗಳ ಮೂಲಕ ಬಿಜೆಪಿಯು ತನ್ನತ್ತ ಜನರನ್ನು ತಿರುಗಿಸಲು ಕಾರಣವಾಗುತ್ತದೆ,' ಎಂದೂ ಅವರು ಊಹಿಸಿದ್ದಾರೆ. 

Weekly Love Horoscope: ಈ ರಾಶಿಯ ಪ್ರೇಮ ಸಂಬಂಧದಿಂದ ಕುಟುಂಬದಲ್ಲಿ ಉದ್ವಿಗ್ನತೆ

ಏಪ್ರಿಲ್‌ನಲ್ಲಿ ಕೂಡಾ ರುದ್ರ ಪ್ರತಾಪ್ ಅವರು, 'ಮೇ ತಿಂಗಳು ಬಿಜೆಪಿಗೆ ಅಷ್ಟು ಅನುಕೂಲಕರವಾಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಮತ್ತು ಸರ್ಕಾರ ರಚನೆಯ ಸಂಭವನೀಯತೆ ಬಿಜೆಪಿಗಿಂತ ಹೆಚ್ಚು. ಬಸವರಾಜ್ ಬೊಮ್ಮಾಯಿ ಅವರಿಗೆ ಹೋಲಿಸಿದರೆ ಡಿಕೆ ಶಿವಕುಮಾರ್ ಅವರು ಯೋಗಿನಿ ದಶವನ್ನು ಎದುರಿಸುತ್ತಿದ್ದಾರೆ,' ಎಂದಿದ್ದರು. ಜೊತೆಗೆ, ಡಿಕೆಶಿ ಹಾಗೂ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಅಧಿಕೃತ ಮೂಲದಿಂದ ಜನ್ಮ ವಿವರಗಳನ್ನು ಪಡೆದುಕೊಂಡಿದ್ದೇನೆ ಎಂದೂ ತಿಳಿಸಿದ್ದರು. 

 

Predicted in March 2023 & The Stars have their say. Congress, as predicted, emerges as the single largest party showing doors to the BJP government. But that said, don't think that the stage for 2024 is now witnessing a battle. Karnataka's defeat will only lead to the BJP turning… pic.twitter.com/VU1ZjsI6dw

— Rudrá Karan Pártaap🇮🇳 (@Karanpartap01)

ನಿಖರ ಭವಿಷ್ಯಕ್ಕೆ ಹೆಸರುವಾಸಿ
ರುದ್ರಕರಣ ಪ್ರತಾಪ್ ಅವರು ಈ ಹಿಂದೆಯೂ ಉಕ್ರೇನ್- ರಷ್ಯಾ ಕ್ರೈಸಿಸ್, ರಿಸೆಶನ್, ಉತ್ತರ ಪ್ರದೇಶ ಚುನಾವಣೆ ಫಲಿತಾಂಶ, ಪ್ರಧಾನಿ ಮೋದಿಯವರ ಕಠಿಣ ಸಮಯದ ಬಗ್ಗೆ ಸಾಕಷ್ಟು ಮುಂಚಿತವಾಗಿ ನಿಖರ ಭವಿಷ್ಯ ನುಡಿದಿದ್ದರು. ಇದರಿಂದ ಇವರ ಭವಿಷ್ಯದ ಬಗ್ಗೆ ಜನರಿಗೆ ನಂಬಿಕೆ ಹೆಚ್ಚಿದ್ದು, ಇವರಿಗೆ ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಇತ್ಯಾದಿ ದೇಶದ ಹಲವು ರಾಜ್ಯಗಳ ರಾಜಕಾರಣಿಗಳೇ ಟ್ವೀಟ್‌ನಲ್ಲಿ ಅಲ್ಲಿಯ ರಾಜಕೀಯ ಭವಿಷ್ಯ ಕೇಳುತ್ತಾರೆ. ಈ ಬಾರಿಯ ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕವಂತೂ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 

Karnataka Election Result 2023: ನಿಜವಾಯ್ತು ರಾಜಕಾರಣದ ಕುರಿತ ಬಬಲಾದಿ ಭವಿಷ್ಯ!

ತಮಿಳುನಾಡಲ್ಲಿ ಬಿಜೆಪಿ?
ಇನ್ನು, ಮುಂದಿನ ದಿನಗಳ ಬಗ್ಗೆಯೂ ಟ್ವಿಟ್ಟರ್‌ನಲ್ಲಿ ಹಲವು ಭವಿಷ್ಯ ಊಹಿಸಿರುವ ಅವರು, '2026 ರಲ್ಲಿ ಅಣ್ಣಾಮಲೈ_ಕೆ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅತಿ ದೊಡ್ಡ ಪ್ರತಿಪಕ್ಷವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. ನಿರೀಕ್ಷೆಗೂ ಮೀರಿದ ಅದ್ಭುತ ಪ್ರದರ್ಶನ ತರಲಿದ್ದಾರೆ. ರಾಜ್ಯಕ್ಕೆ ಬಿಜೆಪಿಯ ಆಗಮನದ ಬಿರುಗಾಳಿಯಾಗಲಿದೆ. 2029 - 2031 ರ ಕೊನೆಯವರೆಗೂ, ಅಣ್ಣಾಮಲೈ ಜಿ ಅವರು ತಮಿಳುನಾಡು ಬಿಜೆಪಿಯಿಂದ ಆಳಿಸಿಕೊಳ್ಳುವ ಪ್ರದೇಶವನ್ನು ಮಾಡುತ್ತಾರೆ,' ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. 
ಇದಲ್ಲದೆ, 024 ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದಿರುವ ಅವರು, ಭಾರತದ ಗೃಹ ಮಂತ್ರಿ ಅಮಿತ್ ಶಾ ಏಪ್ರಿಲ್ 25 ರಿಂದ ಆಗಸ್ಟ್, 2023 ರ ಮಧ್ಯದವರೆಗೆ ಬೆಸ ಅವಧಿಯನ್ನು ಹೊಂದಿರುತ್ತಾರೆ. ಆದರೆ ಆಗಸ್ಟ್ 28, 2023 ರಿಂದ ಅಮಿತ್ ಶಾ ಅವರು 2024 ರ ಲೋಕಸಭಾ ಚುನಾವಣೆಯ ವರೆಗೆ ಬಿಜೆಪಿಯನ್ನು ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಮತ್ತು ವಿಜಯವನ್ನು ಸಾಧಿಸುತ್ತಾರೆ ಎಂದಿದ್ದಾರೆ. 

ಇದು ಭಾರತದ ಮಿಲೇನಿಯಂ ಆಗಿದ್ದು, 2048 ರ ವೇಳೆಗೆ ಭಾರತವು ಪ್ರಮುಖ ಸೂಪರ್ ಪವರ್ ಆಗಲಿದೆ ಎಂಬುದು ರುದ್ರಕರಣ ಪ್ರತಾಪ್ ಅವರ ಭವಿಷ್ಯವಾಗಿದೆ. 
 

click me!